About Us Advertise with us Be a Reporter E-Paper

ಅಂಕಣಗಳುಯಾತ್ರಾಯಾತ್ರಾ panel2

ವಿದೇಶ ಪ್ರಯಾಣ ಉಳ್ಳವನ ಸ್ವತ್ತಲ್ಲ

ವಿದೇಶಕಾಲ: ವಿಶ್ವೇಶ್ವರ ಭಟ್

‘ವಿದೇಶಕ್ಕೆ ಹೋಗಬೇಕೆಂಬುದು ನನ್ನ ಬಹಳ ದಿನಗಳ ಕನಸಾಗಿತ್ತು. ಅದನ್ನು ಈಡೇರಿಸಿದೆ. ಇನ್ನು ಆರು ತಿಂಗಳಲ್ಲಿ ಇನ್ನೊಂದು ದೇಶಕ್ಕೆ ಹೋಗಬೇಕೆಂದು ನಿರ್ಧರಿಸಿದ್ದೇನೆ. ಆಗ ನನ್ನ ಹೆಂಡತಿಯನ್ನೂ ಜತೆಯಲ್ಲಿ ಕರೆದುಕೊಂಡು ಹೋಗುತ್ತೇನೆ.’

ನನ್ನ ಸ್ನೇಹಿತನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರ ಮಂಜುನಾಥ ಹೀಗೆ ಹೇಳಿದಾಗ ನನಗೆ ಬಹಳ ಕುತೂಹಲವಾಯಿತು. ‘ಯಾವ ದೇಶಕ್ಕೆ ಹೋಗಿದ್ದೆ, ಎಷ್ಟು ದಿನ ಇದ್ದೆ’ ಎಂದು  ಕೇಳಿದೆ.  ‘ಸಾರ್ ಸಿಂಗಾಪುರಕ್ಕೆ ಹೋಗಿದ್ದೆ. ಆರು ದಿನ ವಿದ್ದೇ. ಎಲ್ಲಾ ಸೇರಿ 22 ಸಾವಿರ ರೂಪಾಯಿ ಖರ್ಚಾ ಯಿತು. ಇನ್ನು ಆರು ತಿಂಗಳು ಬಿಟ್ಟು  ಶ್ರೀಲಂಕಾಕ್ಕೆ ಹೋಗೋಣ ಅಂತ ನಿರ್ಧರಿಸಿದ್ದೇನೆ, ಹೆಂಡತಿ ಯೊಂದಿಗೆ’ ಎಂದ.

ವಿದೇಶ ಪ್ರಯಾಣ ಕೇವಲ ಹಣವುಳ್ಳವರ ಹವ್ಯಾಸ ವಾಗಿ ಉಳಿದಿಲ್ಲ. ಯಾರು ಬೇಕಾದರೂ ಹೋಗ ಬಹು ದಾಗಿದೆ. ಸಾಮಾನ್ಯ ವ್ಯಕ್ತಿ ಸಹ ಅಲ್ಲಿಗೆ ಹೋಗ ಬಹುದಾ ಗಿದ್ದರಿಂದ ಇಡೀ ಜಗತ್ತೇ ಇಂದು ವಲಸೆ ಹೊರಟಂತಿದೆ.  ಇದಕ್ಕೆ ಞಛ್ಡಿಟ್ಠ ಅಂತ ಕರೆಯು ತ್ತಾರೆ. ಇದೊಂಥರಾ ಮಹಾ ವಲಸೆ. ಎಲ್ಲರೂ ದೇಶ ಪರ್ಯಟನೆಗೆ ಹೊರಟಿದ್ದಾರೆ. ಕೃಷಿ ಮತ್ತು ಕೈಗಾರಿಕೆ ನಂತರ ಅತಿ ಹೆಚ್ಚು ಜನರಿಗೆ ಉದ್ಯೋಗ ದೊರಕಿಸಿ ಕೊಡುವ ಉದ್ಯಮವೆಂದರೆ ಪ್ರವಾಸೋದ್ಯಮ.

ವಿಶ್ವದಲ್ಲಿ ಅರವತ್ತಕ್ಕೂ ಹೆಚ್ಚು ದೇಶಗಳು ಪ್ರವಾ ಸೋದ್ಯಮದಿಂದಲೇ ಬದುಕುತ್ತಿವೆ. ಆ ದೇಶಗಳು ಪ್ರವಾಸಿಗರ ಹಣದಿಂದಲೇ ಬದುಕು ಸಾಗಿಸುತ್ತಿವೆ. ಒಂದು ಜಲಪಾತ ಇದ್ದರೆ ಸಾಕು, ಅದನ್ನೇ ಪ್ರವಾಸಿಗರಿಗೆ ತೋರಿಸಿ, ಹಣ ಮಾಡುತ್ತಾರೆ. ವಿಶ್ವದ ಪ್ರತಿ ಹನ್ನೊಂದು  ಪೈಕಿ ಒಂದು ಟೂರಿಸಂ ಪಾಲಾಗಿದೆ.

ಎರಡು ವರ್ಷಗಳ ಹಿಂದೆ (2016), ವಿಶ್ವದಾದ್ಯಂತ ಒಂದು ನೂರಾ ಮೂವತ್ತು ಕೋಟಿ ಜನ ವಿದೇಶ ಪ್ರಯಾಣ ಮಾಡಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಇದು ಶೇಕಡಾ 45 ರಷ್ಟು ಏರಿಕೆಯಾಗಿದೆ. ಪ್ಯಾರಿಸ್ ನಗರದ ಜನಸಂಖ್ಯೆ ಎಪ್ಪತ್ತು ಲಕ್ಷ. ಆದರೆ ಆ ನಗರಕ್ಕೆ 2016 ರಲ್ಲಿ ಮೂರು ಕೋಟಿ ಅರವತ್ತು ಲಕ್ಷ ಮಂದಿ ಪ್ರಯಾಣಿಕರು ಭೇಟಿ ಕೊಟ್ಟಿದ್ದಾರೆ. ಸ್ಪೇನ್ ದೇಶದಲ್ಲಿ ರುವ ಬಾರ್ಸಿಲೋನಾದ ಜನಸಂಖ್ಯೆ ಕೇವಲ  ಲಕ್ಷ. ಆದರೆ ಆ ನಗರಕ್ಕೆ ಮೂರು ಕೋಟಿ ಇಪ್ಪತ್ತು ಲಕ್ಷ ಪ್ರವಾಸಿಗರು ಬಂದು ಹೋಗಿದ್ದಾರೆ !

ಉತ್ತರ ಧ್ರುವಕ್ಕೆ ಹತ್ತಿರವಿರುವ ಐಸ್‌ಲ್ಯಾಂಡ್ ಜನಸಂಖ್ಯೆ ಮೂರು ಲಕ್ಷದ ಮೂವತ್ತು ಸಾವಿರ. ಆದರೆ ಆ ಪುಟ್ಟ ದೇಶಕ್ಕೆ  ಹಿಂದಿನ ವರ್ಷ ಅಲ್ಲಿನ ಜನಸಂಖ್ಯೆಗಿಂತ ಹನ್ನೆರಡು ಪಟ್ಟು ಹೆಚ್ಚು ಪ್ರವಾಸಿಗರು ಬಂದು ಹೋಗಿ ದ್ದಾರೆ. ಈಗ ಆ ದೇಶಕ್ಕೆ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬಂದರೂ ಅವರಿಗೆ ಉತ್ತಮ ಸೌಲಭ್ಯ ಕೊಡಲು ಸಾಧ್ಯವಾಗುತ್ತಿಲ್ಲ.  ಆ ದೇಶ ಪ್ರವಾಸಿ ಗರ ಬರುವಿಕೆಗೆ ಲಗಾಮು ಹಾಕಲು ನಿರ್ಧರಿಸಿದೆ. ಅಷ್ಟಾಗಿಯೂ ಪ್ರವಾಸಿಗರು ಬರಲು ಮನಸ್ಸು ಮಾಡಿ ದರೆ ಅವರಿಗೆ ಹೆಚ್ಚಿನ ತೆರಿಗೆ ವಿಧಿಸಲು ನಿರ್ಧರಿಸಿದೆ.

ಟೂರಿಸಂ ನಿಂದಾಗಿ ಎಲ್ಲಾ ದೇಶಗಳೂ ತಮ್ಮ ದೇಶವನ್ನೇ ಪ್ರದರ್ಶನಕ್ಕಿಟ್ಟಿವೆ. ದೇಶ ತೋರಿಸಿ ಹಣ ಅಲ್ಲಿ ನಿರತವಾಗಿವೆ. ತನ್ನ ಪ್ರಜೆಗಳಿಗೆ ಅನಾಯಾಸವಾಗಿ ಉದ್ಯೋಗ ಕೊಡಲಾರಂಭಿಸಿದೆ. ಜೆರುಸಲೇಮ್, ಪ್ಯಾರಿಸ್, ಲಂಡನ್, ಇಸ್ತಾನಬುಲ್ ಮುಂತಾದ ದೇಶ ಗಳಲ್ಲಿ ಇಪ್ಪತ್ತು ಸಾವಿರ ಮಂದಿ ತಮ್ಮ ಉದ್ಯೋಗದ ಜತೆಗೆ  ಗೈಡ್‌ಗಳಾಗಿ ಹೆಚ್ಚುವರಿ ಕೆಲಸ ಮಾಡು ತ್ತಿದ್ದಾರೆ. ಕೆಲವು ಏರ್‌ಲೈನ್ ಗಳು ಹೊಸ ಹೊಸ ಉಪಾಯ, ಆಕರ್ಷಕ ಯೋಜನೆಗಳ ಮೂಲಕ ಪ್ರವಾಸಿಗರನ್ನು ಸೆಳೆಯಲು ಹುನ್ನಾರ ಹಾಕುತ್ತಿವೆ.

ದಕ್ಷಿಣ ಅಮೆರಿಕಾದ ಕೆಲವು ಏರ್‌ಲೈನ್ ಸಂಸ್ಥೆಗಳು ಪ್ರವಾಸಿಗರಿಗೆ ಕಂತಿನಲ್ಲಿ ಹಣ ಕಟ್ಟಿ ವಿದೇಶ ಪ್ರಯಾಣ ಮಾಡಿ ಎಂದು ಹೇಳುತ್ತಿವೆ. ‘ಇಂದು ಪ್ರವಾಸ ಮಾಡಿ, ನಾಳೆ ಹಣ ಪಾವತಿಸಿ’ ಎಂಬ ಆಕರ್ಷಕ ಯೋಜನೆ ಗಳೊಂದಿಗೆ ಪ್ರವಾಸಿಗರನ್ನು ಸೆಳೆಯುತ್ತಿವೆ.

ಕಳೆದ ಐದು ವರ್ಷಗಳಲ್ಲಿ ಹೊಸ ಕ್ರೇಜ್  ವಾಗಿದೆ. ಅದೇನೆಂದರೆ, ಹೆಚ್ಚು ಹೆಚ್ಚು ಯುವತಿಯರು ಒಬ್ಬೊಬ್ಬರೇ ಪ್ರವಾಸ ಮಾಡುತ್ತಿರುವುದು. ಸಿಂಗಲ್ ಟೂರಿಸ್‌ಟ್ ಪ್ಯಾಕೇಜ್ ಬಹಳ ಜನಪ್ರಿಯವಾಗುತ್ತಿದೆ. ಅವರಿಗಾಗಿಯೇ ವಿಶೇಷ ಪ್ರವಾಸ ಯೋಜನೆ ರೂಪಿತ ವಾಗುತ್ತಿದೆ. ಇದರ ಫಲವಾಗಿ ಮಹಿಳೆಯರು, ಯುವತಿಯರು ಏಕಾಂಗಿಯಾಗಿ ವಿದೇಶ ಪ್ರವಾಸ ಮಾಡುತ್ತಿದ್ದಾರೆ.

ಈ ಮಧ್ಯೆ ಹಡಗು ಪ್ರವಾಸ (ಇ್ಟ್ಠಜಿಜ್ಞಿಜ) ನಿರೀಕ್ಷೆಗೂ ಮೀರಿ ಜನಪ್ರಿಯವಾಗುತ್ತಿದೆ. ಹಡಗು ಪ್ರವಾಸೋದ್ಯಮ ಪ್ರತಿ ವರ್ಷ ಶೇಕಡಾ ನಲವತ್ತರಷ್ಟು ಬೆಳವಣಿಗೆ ಕಾಣುತ್ತಿದೆ. ಇದರಿಂದ ಪ್ರವಾಸೋದ್ಯಮದ ದೆಸೆಯೇ ಬದಲಾಗಿದೆ. ಈ ವಿಷಯದಲ್ಲಿ  ಎಲ್ಲಾ ದೇಶಗಳಿಗಿಂತ ಮುಂದಿದೆ. ಪ್ರತಿ ಹತ್ತೊಂಬತ್ತು ಆಸ್ಟ್ರೇಲಿಯನ್‌ಗಳ ಪೈಕಿ ಒಬ್ಬ ಹಡಗು ಪ್ರವಾಸ ಮಾಡಿ ಬಂದವರಾಗಿದ್ದಾರೆ.

ಅಂತಾರಾಷ್ಟ್ರೀಯ ಕರೆಗಳಲ್ಲಿ ಭಾರಿ ಕಡಿತ, ವೈ-ಫೈ ಕಾಲಿಂಗ್, ಗೂಗಲ್ ಮ್ಯಾಪಿಂಗ್ , ಸ್ಮಾರ್ಟ್ ಫೋನ್ ಡೈರೆಕ್‌ಟ್ ಬಂದ ನಂತರ ಯುವತಿಯರು ಒಬ್ಬೊಬ್ಬರಾಗಿ ವಿದೇಶ ಪ್ರಯಾಣ ಮಾಡುವುದು ಹೆಚ್ಚುತ್ತಿದೆ. ಯಾವ ದೇಶದಲ್ಲಿದ್ದರೂ ಮನೆಯವರೊಂದಿಗೆ ಸದಾ ಕನೆಕ್‌ಟ್ ಆಗಿರಬಹುದು. ಯಾವತ್ತೂ ಮಾತಾಡುತ್ತಿರಬಹುದು, ವಿಡಿಯೋ ಕಾಲ್ ಮೂಲಕ ಸಂಪರ್ಕದಲ್ಲಿರಬಹುದು. ಅಲ್ಲದೆ ಯಾರ ಸಹಾಯವಿಲ್ಲದೇ, ಯಾರನ್ನೂ ಕೇಳದೆ  ಮೂಲಕ ಹೋಗಬೇಕಾದ ಜಾಗವನ್ನು, ಊರನ್ನು ತಲುಪಬಹುದು.

ಸ್ಮಾರ್ಟ್‌ಫೋನ್‌ನಿಂದಾಗಿ ಹೋಟೆಲ್ ರೆಸ್ಟೋ ರೆಂಟ್ ಬುಕಿಂಗ್, ಟ್ರೈನ್ ಟಿಕೆಟ್ ಖರೀದಿ, ಹವಾಮಾನ ತಪಾಸಣೆ, ಹಣ ಪಾವತಿಸುವುದು, ಬ್ಯಾಂಕ್ ಬ್ಯಾಲೆನ್‌ಸ್ ಪರೀಕ್ಷಿಸುವುದು.. ಇವೆಲ್ಲ ಬಹಳ ಸುಲಭವಾಗಿದೆ. ಮೊಬೈಲ್ ಎಂಬ ಸಂಗಾತಿ ಇದ್ದರೆ ಯಾರೂ ಬೇಕಾಗಿಲ್ಲ. ನಾವು ಒಂದು ರೀತಿಯಲ್ಲಿ  ್ಚಟ್ಞ್ಞಛ್ಚಿಠಿಛಿ ವಲ್ಡರ್ ನಲ್ಲಿ ಜೀವಿಸುತ್ತಿರುವುದರಿಂದ, ವಿದೇಶ ಪ್ರವಾಸ ಹೆಚ್ಚು ಸುಲಭ ಮತ್ತು ಸರಳವಾಗಿದೆ.

ನಿಮಗೆ ಅಜ್ಟಿಚ್ಞಿಚಿ ಬಗ್ಗೆ ಗೊತ್ತಿರಬಹುದು. 2008 ರಲ್ಲಿ ಈ  ಅಸ್ತಿತ್ವಕ್ಕೆ ಬಂದ ನಂತರ, ವಿದೇಶಗಳಲ್ಲಿ ವಾಸ್ತವ್ಯದ ಕಲ್ಪನೆಯೇ ಬದಲಾಗಿದೆ. ಅಲ್ಲದೇ, ನಮ್ಮ ಪಾಕೆಟ್ ಗಾತ್ರ ನೋಡಿ, ನಮಗೆ ಬೇಕಾದ ವಾಸ್ತವ್ಯ ಹೊಂದುವುದು ಸಾಧ್ಯವಾಗಿದೆ. ಮೊದಲಾಗಿದ್ದರೆ, ವಿದೇಶಗಳಿಗೆ ಹೋದಾಗ ಹೋಟೆಲ್ಲಿನಲ್ಲಿ ಉಳಿದು ಕೊಳ್ಳಬೇಕಾಗುತ್ತಿತ್ತು. ಈಗ ಅಜ್ಟಿಚ್ಞಿಚಿ ಮೂಲಕ ನಮ್ಮ ಕೈಗೆಟಕುವ ದರದ ಮನೆಗಳಲ್ಲಿ, ಅಪಾರ್ಟ್‌ಮೆಂಟು ಗಳಲ್ಲಿ, ವಿಲ್ಲಾಗಳಲ್ಲಿ ಉಳಿದುಕೊಳ್ಳಬಹುದು.

ಲಂಡನ್, ಪ್ಯಾರಿಸ್, ವೆನೀಸ್ ಮುಂತಾದ ನಗರಗಳಲ್ಲಿ ಫೈವ್‌ಸ್ಟಾರ್ ಹೋಟೆಲ್ಲುಗಳಲ್ಲಿ ಒಂದು ರಾತ್ರಿಗೆ 350 – 400 ಡಾಲರ್ ಕೊಡುವ ಬದಲು  ಅರ್ಧಕ್ಕಿಂತ ಕಡಿಮೆ ಹಣಕ್ಕೆ ಅದೇ ಗುಣಮಟ್ಟದ ಅಪಾರ್ಟ್‌ಮೆಂಟುಗಳಲ್ಲಿ ಉಳಿದುಕೊಳ್ಳಬಹುದು. ಇದರಿಂದ ಹೋಟೆಲ್ ಉದ್ಯಮಕ್ಕೆ ಭಾರಿ ಪೆಟ್ಟುಬಿದ್ದಿದ್ದರೂ, ಇದರಿಂದ ಪ್ರವಾಸಿಗರಿಗೆ ಬಹಳ ಪ್ರಯೋಜನವಾಗಿದೆ. ಇದೂ ಸಹ ಪ್ರವಾಸೋದ್ಯಮಕ್ಕೆ ಇಂಬು ನೀಡಿದೆ. ನ್ಯೂ ಯಾರ್ಕ್ , ಆಮ್‌ಸ್ಟರ್ಡಮ್, ಸ್ಯಾನ್ ಫ್ರಾನ್ಸಿಸ್ಕೋ ಮುಂತಾದ ನಗರಗಳಲ್ಲಿ ಅಜ್ಟಿಚ್ಞಿಚಿ ಯನ್ನು ರದ್ದುಪಡಿಸಬೇಕೆಂಬ ಬೇಡಿಕೆ ಹೋಟೆಲ್ ಉದ್ಯಮದಿಂದ ಅಧಿಕವಾಗುತ್ತಿದ್ದರೂ ಅದರ ವಿರುದ್ಧವೂ ಅಷ್ಟೇ ಬಲವಾದ ಕೂಗು ಕೇಳಿ ಬರುತ್ತಿವೆ.

ವಿಶ್ವದ ಎಪ್ಪತ್ತಕ್ಕೂ ಹೆಚ್ಚು ದೇಶಗಳು ವೀಸಾ ನಿಯಮ  ಸಡಿಲಗೊಳಿಸುತ್ತಿವೆ. ಆಫ್ರಿಕಾದ ಬಹುತೇಕ ದೇಶಗಳು ಆಗಮನದ ನಂತರ ವೀಸಾ ನೀಡುವ ಪದ್ಧತಿ ಜಾರಿಗೆ ತಂದಿವೆ. ವಿದೇಶಗಳಿಗೆ ಹೋರಾಡುವುದಕ್ಕಿಂತ ಮುನ್ನ ಅನುಭವಿಸುವ ಕಿರಿಕಿರಿಯನ್ನು ಕುಗ್ಗಿಸುವ ಕ್ರಮ ಗಳಿಗೆ ಮುಂದಾಗಿವೆ.

ದೇಶ ಸುತ್ತಲೂ ಭಾಷೆ ಬರಬೇಕೆಂದಿಲ್ಲ, ಅಲ್ಲಿನ ಜನ ಗೊತ್ತಿರಬೇಕೆಂದಿಲ್ಲ. ಜೇಬಿನಲ್ಲಿ ತಕ್ಕಮಟ್ಟಿಗಿನ ಹಣ, ಊರು ನೋಡುವ ಹುಮ್ಮಸ್ಸು, ಎಂಥ ಪರಿಸರಕ್ಕೂ ಒಗ್ಗಿಕೊಳ್ಳುವ, ತೆರೆದುಕೊಳ್ಳುವ ಮನಸ್ಸು ಇದ್ದರೆ ಯಾವ ದೇಶಕ್ಕಾದರೂ ಹೋಗಿಬರಬಹುದು. ಯಾವ ದೇಶಕ್ಕೆ, ಎಲ್ಲಿಗೆ, ಯಾವಾಗ ಹೋಗಿ, ಯಾವಾಗ ವಾಪಸ್  ಎಂಬುದು ಪ್ರವಾಸಿಗ ನಿಗೆ ಗೊತ್ತಿರುವುದಂತೆ. ಇದ್ಯಾವದೂ ಗೊತ್ತಿಲ್ಲದವನೇ ಪಯಣಿಗ. ಅವನಿಗೆ ಗೊತ್ತು ಗುರಿಯಿಲ್ಲದೆ ಹೋಗುವುದು ಮಾತ್ರ ಗೊತ್ತು. ಉಳಿದವುಗಳನ್ನು ಆತ ಪಯಣದುದ್ದಕ್ಕೂ ಅನುಭವಿಸು ತ್ತಾನೆ. ಇದಕ್ಕಿಂತ ರೋಚಕತೆ ಯಾವುದಿದೆ ?

Tags

Related Articles

Leave a Reply

Your email address will not be published. Required fields are marked *

Language
Close