ಮುಂದಿನ 20 ವರ್ಷ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲ್ಲ

Posted In : ಸಂಗಮ, ಸಂಪುಟ

ಸಂದರ್ಶನ : ರಂಜಿತ್ ಎಚ್ ಅಶ್ವತ್ಥ

ಕಳೆದ ಬಾರಿ ಬಿಜೆಪಿ ಅಧಿಕಾರ ನೋಡಿರುವ ರಾಜ್ಯದ ಜನರು, ಮುಂದಿನ 20 ವರ್ಷ ಅವರಿಗೆ ಅಧಿಕಾರ ನೀಡಬಾರದು ಎಂದು ತೀರ್ಮಾನಿಸಿದ್ದಾರೆ. ಆದರೆ ಕಳೆದ ನಾಲ್ಕುವರೆ ವರ್ಷದಲ್ಲಿ ಭ್ರಷ್ಟರಹಿತ ಆಡಳಿತವನ್ನು ನೀಡಿರುವ ಕಾಂಗ್ರೆಸ್ ಸರಕಾರವನ್ನು ಮತ್ತೊಮ್ಮೆ ತರಲು ಜನತೆ ತೀರ್ಮಾನಿಸಿದ್ದು, ಸ್ಪಷ್ಟ ಬಹುಮತ ನೀಡಲಿದ್ದಾರೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಐವಾನ್ ಡಿಸೋಜಾ ‘ವಿಶ್ವವಾಣಿ’ಗೆ ನೀಡಿರುವ ಸಂದರ್ಶನದಲ್ಲಿ ವಿಶ್ವಾಸವ್ಯಕ್ತಪಡಿಸಿದ್ದಾರೆ.

* ರಾಜ್ಯದಲ್ಲಿ ಚುನಾವಣಾ ರಂಗು ಹೇಗಿದೆ ?
ಪ್ರತಿಬಾರಿ ಚುನಾವಣೆಗಳು ಅಭಿವೃದ್ಧಿ ಕಾರ್ಯಗಳ ಬಗ್ಗೆ ನಡೆಯುತ್ತವೆ. ಆದರೆ ಈ ಬಾರಿ ಧರ್ಮ, ಜಾತಿ ರಾಜಕೀಯದ ಮೇಲೆ ನಡೆಯುತ್ತಿದೆ. ಇದು ನಿಜವಾಗಿಯೂ ವಿಷಾಧನೀಯ. ಈ ಬೆಳವಣಿಗೆಯಿಂದ ವೈಯಕ್ತಿವಾಗಿ ನೋವು ತಂದಿದೆ. ಧರ್ಮ, ಜಾತಿಯ ಹೆಸರಲ್ಲಿ ಜನರನ್ನು ವಿಭಜಿಸಿ ನಡೆಸುತ್ತಿರುವುದು ಉತ್ತಮ ಬೆಳವಣಿಗೆಯಲ್ಲ.

* ಕಾಂಗ್ರೆಸ್ ಸರಕಾರ ಭರವಸೆಗಳನ್ನು ಈಡೇರಿಸಿಲ್ಲ ಎನ್ನುವ ಆರೋಪವಿದೆಯಲ್ಲ?
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿರುವಂತೆ ಎಲ್ಲ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದ ಸರಕಾರವಾಗಿದೆ. ಆದರೆ ಕಳೆದ ನಾಲ್ಕುವರೆ ವರ್ಷದಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಜನರಿಗೆ ಮುಟ್ಟಿಸುವಲ್ಲಿ ಪ್ರತಿಪಕ್ಷವಾಗಿ ಬಿಜೆಪಿ ವಿಫಲವಾಗಿದೆ. ಬಿಜೆಪಿಯವರು ಸುಮ್ಮನೆ, ಪುಸ್ತಕ ಸಾಧನೆ ಎಂದು ಟೀಕಿಸುವ ಬದಲು, ಅದಕ್ಕೆ ದಾಖಲೆಗಳನ್ನು ಬಿಡುಗಡೆಗೊಳಿಸಬೇಕು. ಆದರೆ ಕಳೆದ ನಾಲ್ಕವರೆ ವರ್ಷದಲ್ಲಿ ಬಿಜೆಪಿಯವರು ‘ಹಿಟ್ ಆ್ಯಂಡ್ ರನ್’ ರೀತಿ ವರ್ತಿಸುತ್ತಿದ್ದಾರೆ. ಕೆಲಸವಾಗಿಲ್ಲ ಎನ್ನುವ ಮೊದಲು ದಾಖಲೆ ನೀಡಲಿ. ಉದಾಹರಣೆ ನೀರಾವರಿಗೆ ನಮ್ಮ ಸರಕಾರ 56 ಸಾವಿರ ಕೋಟಿ ಅನುದಾನ ನೀಡಿದ್ದು, ಅದರಲ್ಲಿ 46 ಸಾವಿರ ಅನುದಾನ ಖರ್ಚು ಮಾಡಿದೆ.

* ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವಲ್ಲಿ ಬಿಜೆಪಿ ವಿಫಲವಾಯಿತೇ?
ಖಂಡಿತವಾಗಿ ಬಿಜೆಪಿ ವಿರೋಧ ಪಕ್ಷವಾಗಿ ವಿಫಲವಾಗಿದೆ. ಪ್ರಮುಖವಾಗಿ ಬಿಜೆಪಿಯಲ್ಲಿ ನಾಯಕತ್ವದ ತೊಂದರೆಯಿದ್ದು, 2008ರಲ್ಲಿ ಸ್ವಚ್ಛ ಆಡಳಿತ, ಸ್ಥಿರ ಆಡಳಿತ ಎನ್ನುವ ಪರಿಕಲ್ಪನೆಯಲ್ಲಿ ಅಧಿಕಾರದ ಗದ್ದುಗೆಯನ್ನು ಆದರೆ, ಅಧಿಕಾರಕ್ಕೆ ಬಂದ ಬಳಿಕ ಗೊಂದಲಗೂಡಾಗಿ, ವಿರೋಧ ಪಕ್ಷವಾಗಲು ಅಗತ್ಯ ಸೀಟುಗಳನ್ನು ಗೆಲ್ಲುವಲ್ಲಿ ಬಿಜೆಪಿ ವಿಫಲವಾಯಿತು. ಇದನ್ನೆಲ್ಲ ನೋಡಿರುವ ರಾಜ್ಯದ ಜನ ಮುಂದಿನ 20 ವರ್ಷಗಳ ಕಾಲ ಅವರಿಗೆ ಅಧಿಕಾರ ನೀಡುವುದಿಲ್ಲ.

* ಕರಾವಳಿಯಲ್ಲಿ ಈ ಬಾರಿ ಹಿಂದೂ ಅಲೆ ವರ್ಕ್ ಔಟ್ ಆಗುವುದೇ?
ಹತ್ಯೆಯಾಗಿರುವುದು ಒಪ್ಪಿಕೊಳ್ಳಲೇಬೇಕು. ಯಾರೇ ಹತ್ಯೆಯಾದರೂ ಅದು ಖಂಡನೀಯ. ಆದರೆ ಬಿಜೆಪಿಯವರು ದ್ವಿಮುಖ ನೀತಿಯನ್ನು ಅನುಸರಿಸಬಾರದು. ಬ್ರಹ್ಮಾವರದಲ್ಲಿ ಹಿಂದೂ ಕಾರ್ಯಕರ್ತರಿಂದಲೇ ಹಲ್ಲೆಗೊಳ್ಳಗಾಗಿ ಮೃತಪಟ್ಟ ಹಿಂದೂ ಕೊಲೆ ಪ್ರಕರಣದಲ್ಲಿ ಬಿಜೆಪಿಯವರು ಏಕೆ ಮೌನವಾಗಿದ್ದಾರೆ. ರಾಷ್ಟ್ರೀಯ ಪಕ್ಷವಾಗಿ ಕೇವಲ ಹಿಂದೂಗಳ ಬಗ್ಗೆ ಮಾತನಾಡುತ್ತಿರುವ ಬಿಜೆಪಿ, ಇತರೆ ಸಮುದಾಯಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ. ಈ ಎಲ್ಲ ಪ್ರಕರಣಗಳು ನಡೆಯಲು ಕೇವಲ ಒಂದು ಸಂಘಟನೆ ಕಾರಣವಲ್ಲ. ಎರಡು ಸಮುದಾಯಗಳು ಕಾರಣ. ಗಲಭೆಗೆ ಕಾರಣವಾದ ಪಿಎಫ್‌ಐ ಸಂಘಟನೆ ನಿಷೇಧಿಸುವುದಾದರೆ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಕೋಮುಗಲಭೆಗೆ ಕುಮ್ಮಕ್ಕು ನೀಡುತ್ತಿರುವ ಬಲಪಂಕ್ತಿಯ ಸಂಘಟನೆಗಳನ್ನು ನಿಷೇಧಿಸಬೇಕು.

* ನಲಪಾಡ್ ಪ್ರಕರಣ ಹಾಗೂ ಲೋಕಾಯುಕ್ತರ ಮೇಲೆ ಚುನಾವಣೆಗೆ ತೊಂದರೆಯಾಗಲಿದೆಯೇ?
ಲೋಕಾಯುಕ್ತರ ಮೇಲೆ ನಡೆದಿರುವ ಪ್ರಕರಣ, ನಲಪಾಡ್ ಪ್ರಕರಣವನ್ನು ತೋರಿಸುತ್ತ ಜನರ ಮನಸ್ಸಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ ಮೂಡಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಆದರೆ ಈ ಎರಡು ಪ್ರಕರಣಗಳಿಂದ ಇಡೀ ರಾಜ್ಯದ ಕಾನೂನು ಸುವ್ಯವಸ್ಥೆಯೇ ಹಾಳಾಗಿದೆ ಎನ್ನಲು ಸಾಧ್ಯವಿಲ್ಲ. ನಲಪಾಡ್ ಪ್ರಕರಣದಲ್ಲಿ ಶಾಸಕರಾಗಿದ್ದರೂ, ಹ್ಯಾರಿಸ್ ನಲಪಾಡ್ ಅವರನ್ನು ಜೈಲಿಗೆ ಕಳುಹಿಸುವ ಕೆಲಸ ಮಾಡಿದ್ದಾರೆ. ಇದನ್ನು ಗಮನಿಸಿದರೆ ಸರಕಾರ ಕಾನೂನಿಗೆ ಎಲ್ಲರೂ ಸಮ ಎಂದು ತೋರಿಸಿದ್ದಾರೆ. ಇನ್ನು ಶೆಟ್ಟಿ ಅವರ ಮೇಲೆ ನಡೆದಿರುವ ಹಲ್ಲೆ ಖಂಡನೀಯ. ಆದರೆ ಲೋಕಾಯುಕ್ತಕ್ಕೆ ಭಿಗಿ ಭದ್ರತೆ ನೀಡಿದರೆ, ಹೆಚ್ಚು ಭದ್ರತೆ ಎನ್ನುತ್ತಾರೆ. ಇಲ್ಲವಾದರೆ ಇಂತಹ ಪ್ರಕರಣಗಳು ನಡೆಯುತ್ತವೆ. ಆದರಿಂದ ಕೆಲ ಲೋಪ ಸರಿಪಡಿಸಿಕೊಳ್ಳಬೇಕೆ ಹೊರೆತು, ರಾಜಕೀಯ ಬಣ ಹಚ್ಚುವುದು ಸರಿಯಲ್ಲ.

* ರಾಜ್ಯದಲ್ಲಿ ಮೋದಿ- ರಾಹುಲ್ ಅಲೆ ಹೇಗಿದೆ?
ಕರ್ನಾಟಕಕ್ಕೂ ಇತರೆ ರಾಜ್ಯಗಳಿಗೂ ಬಹಳ ವ್ಯತ್ಯಾಸವಿದೆ. ಬೇರೆ ರಾಜ್ಯದಂತೆ ಇಲ್ಲಿ ಮಾತಿನಿಂದ ಮರುಳು ಮಾಡಲು ಸಾಧ್ಯವಿಲ್ಲ. ಕಳೆದ ಐದು ವರ್ಷದಲ್ಲಿ ಮುಖ್ಯಮಂತ್ರಿ ಸ್ಥಿರ ಸರಕಾರವನ್ನು ನೀಡಿದ್ದಾರೆ. ಆದರಿಂದ ದೇಶ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಬಂದು ಎಷ್ಟೇ ರ್ಯಾಲಿ ನಡೆಸಿದರೂ ಪ್ರಯೋಜನವಿಲ್ಲ. ಇನ್ನು ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅಧಿಕಾರ ಸ್ವೀಕರಿಸಿದ ಬಳಿಕ ದೇಶದಲ್ಲಿ ನಡೆದ ಬಹುತೇಕ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ. ಅದೇ ರೀತಿ ರಾಜ್ಯದಲ್ಲಿಯೂ ರಾಹುಲ್ ಗಾಂಧಿ ಅವರು ಯುವ ಮತದಾರರ ಮೇಲೆ ಪ್ರಭಾವ ಬೀರುವ ವಿಶ್ವಾಸವಿದೆ.

* ಈ ಬಾರಿ ಎಷ್ಟು ಸೀಟು ಗೆಲ್ಲುವ ವಿಶ್ವಾಸವಿದೆ?
ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಸ್ಪರ್ಧಿಸಲಿದ್ದು, 27ಕ್ಕೂ ಜಿಲ್ಲೆಗಳಲ್ಲಿ ಸ್ವತಃ ಭೇಟಿ ನೀಡಿದ್ದು, ಬಹುಮತ ಪಡೆಯುವ ವಿಶ್ವಾಸವಿದೆ. ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ 140 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಖಂಡಿತವಿದೆ. ಆದರೆ ಇನ್ನೊಂದೆಡೆ ಬಿಜೆಪಿ ಯಾವುದೇ ಅಜೆಂಡಾ ಇಲ್ಲದಿರುವುದರಿಂದ ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕುಗ್ಗುತ್ತಿದೆ. ಇದು ಬಿಜೆಪಿಯ ರಾಷ್ಟ್ರೀಯ ನಾಯಕರಿಗೂ ತಿಳಿದಿದೆ. ಇನ್ನು ಕರಾವಳಿ ಭಾಗದಲ್ಲಿ ಹಿಂದುತ್ವದ ಹೆಸರಲ್ಲಿ ಚುನಾವಣೆ ಎದುರಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಯಾವುದೇ ತೊಂದರೆಯಿಲ್ಲ. ಕರಾವಳಿ ಭಾಗದಲ್ಲಿಯೂ ಖಚಿತವಾಗಿ ಗೆಲ್ಲುತ್ತೇವೆ.

Leave a Reply

Your email address will not be published. Required fields are marked *

one × 2 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top