About Us Advertise with us Be a Reporter E-Paper

Breaking Newsಪ್ರಚಲಿತವಿದೇಶ

ಕಳೆದ ನಾಲ್ಕು ವರ್ಷದಿಂದ ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಿದೆ: ರಾಹುಲ್‌ ಗಾಂಧಿ

ದುಬೈ: ಅಧಿಕಾರದಲ್ಲಿರುವ ಜನರ ಮನೋಸ್ಥಿತಿಯಿಂದಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಅಸಹಿಷ್ಣುತೆ, ಕೋಪ ಮತ್ತು ಸಮುದಾಯಗಳ ವಿಭಜನೆ ಹೆಚ್ಚುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ.

ದುಬೈ ಪ್ರವಾಸದ ಎರಡನೇ ದಿನವಾದ ಶನಿವಾರ ರಾಹುಲ್ ಗಾಂಧಿ ಐಎಂಟಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿದರು. ಭಾರತ ಒಂದು ಸಿದ್ದಾಂತವನ್ನು ಇತರರ ಮೇಲೆ ಹೇರುವುದನ್ನು ಭಾರತ ಬಯಸುವುದಿಲ್ಲ ಬದಲಾಗಿ ಬಹು ಸಿದ್ದಾಂತಗಳನ್ನು ಆಹ್ವಾನಿಸುತ್ತದೆ. ಭಾರತ ಸಿದ್ದಂತಗಳನ್ನು ರೂಪಿಸಿದೆ. ಸಿದ್ದಾಂತಗಳು ಭಾರತವನ್ನು ರೂಪಿಸಿವೆ. ಇತರರನ್ನು ಆಲಿಸುವುದೂ ಕೂಡ ಭಾರತದ ಸಿದ್ದಾಂತ ಎಂದರು.

ಪತ್ರಕರ್ತರನ್ನು ಹತ್ಯೆ ಮಾಡುವ, ಮಾತನಾಡಿದ್ದಕ್ಕೆ ಜನರನ್ನು ಕೊಲ್ಲುವ ಭಾರತವನ್ನು ನಾವು ಬಯಸುವುದಿಲ್ಲ. ಇದನ್ನು ನಾವು ಬದಲಾಯಿಸಬೇಕಿದೆ. ಮುಂಬರುವ ಚುನಾವಣೆಗಳಲ್ಲಿ ಇದೇ ಪ್ರಮುಖ ಸವಾಲಾಗಿರುತ್ತದೆ ಎಂದರು. ಪ್ರತಿಭಾ ಪಲಾಯನ 20ನೇ ಶತಮಾನದ ಸಿದ್ದಾಂತ. 21ನೇ ಶತಮಾನದಲ್ಲಿ ಜನರು ಮೊಬೈಲ್‌ಗಳಾಗಿದ್ದು, ಅವಕಾಶಗಳಿರುವ ಕಡೆ ತೆರಳುತ್ತಾರೆ. ನಿಮ್ಮ ದೇಶ ನಿಮಗೆ ಅವಕಾಶಗಳನ್ನು ಒದಗಿಸಿದೆ ಎನ್ನುವುದಂತೂ ನಿಶ್ಚಿತ ಎಂದರು.

Tags

Related Articles

Leave a Reply

Your email address will not be published. Required fields are marked *

Language
Close