ಅಮೆರಿಕ ಕ್ಷಿಪಣಿ ದಾಳಿಗೆ ಇರಾನ್‌ ಅಸಮಾಧಾನ

Posted In : ವಿದೇಶ

ಟೆಹರಾನ್‌: ಸಿರಿಯಾ ಮೇಲೆ ಅಮೆರಿಕ, ಬ್ರಿಟನ್‌ ಹಾಗು ಫ್ರಾನ್ಸ್ ದಾಳಿ ಮಾಡಿರುವ ಹಿನ್ನೆಲೆಯಲ್ಲಿ ಪ್ರಾದೇಶಿಕ ಸ್ಥಿರತೆಯಲ್ಲಿ ಸಾಕಷ್ಟು ಏರುಪೇರಾಗುವ ಸಾಧ್ಯತೆ ಇದೆ ಎಂದು ಇರಾನ್‌ ಎಚ್ಚರಿಕೆ ನೀಡಿದೆ.

“ಸಿರಿಯಾದಲ್ಲಿ ರಾಸಾಯನಿಕ ಶಸ್ತ್ರಗಳಿರುವ ಕುರಿತು ಯಾವುದೇ ಸಾಕ್ಷ್ಯವಿಲ್ಲ. ಅಲ್ಲದೇ ರಾಸಾಯನಿಕ ಶಸ್ತ್ರಗಳ ನಿಷೇಧ ಒಕ್ಕೂಟದ ಅಭಿಪ್ರಾಯಕ್ಕೂ ಕಾಯದೇ ಈ ಮಿಲಿಟರಿ ದಾಳಿ ನಡೆಸಲಾಗಿದೆ. ಈ ದುಸ್ಸಾಹಸಿದಂದ ಪ್ರದೇಶದಲ್ಲಿ ಉಂಟಾಗುವ ಏರುಪೇರುಗಳಿಗೆ ಅಮೆರಿಕ ಹಾಗು ಮಿತ್ರ ಪಡೆಗಳು ಜವಾಬ್ದಾರರಾಗಲಿವೆ” ಎಂದು ಇರಾನ್‌ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಅಧ್ಯಕ್ಷ ಬಶರ್‌ ಅಲ್‌ ಅಸ್ಸದ್‌ಗೆ ಬೆಂಬಲ ನೀಡುತ್ತಿರುವ ದೇಶಗಳಲ್ಲಿ ರಷ್ಯಾ ಅಲ್ಲದೇ ಇರಾನ್‌ ಕೂಡಾ ಪ್ರಮುಖವಾದಗಿದ್ದು, ಮಿಲಿಟರಿ ಸಲಹೆ ಹಾಗು ಹೋರಾಟಗಾರರನ್ನು ಒದಗಿಸುತ್ತಿದೆ.

ಕದನಭೂಮಿಯಲ್ಲಿ ಸಿರಿಯಾ ಸರಕಾರದ ಇತ್ತೀಚಿನ ಯಶಸ್ಸನ್ನು ಮರೆಮಾಚುವ ಉದ್ದೇಶದಿಂದ ಕಳೆದ ವಾರ ನಡೆದ  ರಾಸಾಯನಿಕ ಸ್ಫೋಟವನ್ನು ನೆವವಾಗಿಟ್ಟುಕೊಂಡಿರುವ ಪಾಶ್ಚಾತ್ಯ ಶಕ್ತಿಗಳು ಈ ದಾಳಿಗೆ ಮುಂದಾಗಿವೆ ಎಂದು ಇರಾನ್ ಆಪಾದಿಸಿದೆ.

ಸಿರಿಯಾದ ಮಿಲಿಟರಿ ನೆಲೆ ಮೇಲೆ ನಡೆದ ದಾಳಿಯಲ್ಲಿ ಏಳು ಇರಾನಿಯನ್ನರು ಮೃತಪಟ್ಟಿದ್ದಾರೆ. ಈ ದಾಳಿಯನ್ನು ಇಸ್ರೇಲ್‌ ನಡೆಸಿದೆ ಎಂದು ಟೆಹರಾನ್‌ ಆಪಾದಿಸುತ್ತಿದೆ.

Leave a Reply

Your email address will not be published. Required fields are marked *

19 − 15 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

 

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

Back To Top