About Us Advertise with us Be a Reporter E-Paper

Breaking NewsUncategorizedಪ್ರಚಲಿತಸಿನಿಮಾಸ್

ಇರುವ ಸಿದ್ಧಸೂತ್ರಗಳನ್ನು ಬಿಟ್ಟು… ಕಾಡುವ ಚಿತ್ರ

ಚಿತ್ರ: ಇರುವುದೆಲ್ಲವ ಬಿಟ್ಟು
ರಚನೆ – ನಿರ್ದೇಶನ: ಕಾಂತ ಕನ್ನಲ್ಲಿ
ನಿರ್ಮಾಣ: ದೇವರಾಜ್ ದಾವಣಗೆರೆ (ಬಿಲ್ವ ಕ್ರಿಯೇಷನ್ಸ್)
ಶ್ರೀಧರ್ ವಿ. ಸಂಭ್ರಮ್
ಛಾಯಾಗ್ರಹಣ: ಡೇವಿಡ್ ವಿಲಿಯಂ,
ಸಂಕಲನ: ಕೆ.ಎಂ ಪ್ರಕಾಶ್,
ತಾರಾಗಣ: ಮೇಘನಾ ರಾಜ್, ತಿಲಕ್, ಶ್ರೀ ಮಹದೇವ್, ಅಚ್ಯುತ ಕುಮಾರ್, ಅರುಣಾ ಬಾಲರಾಜ್ ಮತ್ತು ಇತರರು.
ಬಿಡುಗಡೆ: 21 ಸೆಪ್ಟೆಂಬರ್ 2018

ಕೆಲ ದಿನಗಳಿಂದ ತನ್ನ ಟೈಟಲ್ ಮತ್ತು ಟ್ರೇಲರ್‌ಗಳ ಮೂಲಕ ಸುದ್ದಿಯಲ್ಲಿದ್ದ ಇರುವುದೆಲ್ಲವ ಬಿಟ್ಟು ಚಿತ್ರ ಈ ವಾರ ತೆರೆಗೆ ಬಂದಿದೆ. ಮಧ್ಯಮ ವರ್ಗದ ಕುಟುಂಬದಿಂದ ಬಂದ ಪೂರ್ವಿ (ಮೇಘನಾ ರಾಜ್) ದೊಡ್ಡ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುತ್ತಾಳೆ. ರಾಯಲ್ ಲೈಫ್ ಲೀಡ್ ಮಾಡಬೇಕು ಎಂಬ ಏಕೈಕ ಗುರಿ ಹೊಂದಿರುವ ಪೂರ್ವಿ ಸದಾ ಕೆಲಸ, ಹಣ, ಹೆಸರಿನ ಹಿಂದೆಯೇ ಓಡುತ್ತಿರುತ್ತಾಳೆ.

ವರ್ಕೋಹಾಲಿಕ್ ಆಗಿರುವ ಪೂರ್ವಿ ಕೆಲಸದಿಂದಾಗಿ, ತಾನು ಅಂದುಕೊಂಡಂತೆ ಕಂಪೆನಿಯಲ್ಲಿ ದೊಡ್ಡ ಸ್ಥಾನ ಪಡೆದುಕೊಳ್ಳುತ್ತಾಳೆ. ಇದರ ನಡುವೆಯೇ ಆಫೀಸ್‌ನಲ್ಲಿ ತನ್ನ ಜೊತೆ ಕೆಲಸ ಮಾಡುವ ದೇವ್ (ತಿಲಕ್) ಜೊತೆ ಪೂರ್ವಿ ಪ್ರೀತಿಯಲ್ಲಿ ಬೀಳುತ್ತಾಳೆ. ದೇವ್-ಪೂರ್ವಿ ಪ್ರೀತಿಯನ್ನು ಒಪ್ಪದ ಪೂರ್ವಿಯ ತಂದೆ ಮಗಳು ದೂರವಾಗುತ್ತಾರೆ. ನಂತರ ಪ್ರೀತಿಸಿದ ದೇವ್ ಕೂಡ ದೂರವಾಗುತ್ತಾನೆ. ತನ್ನ ಪ್ರೊಫೇಷನ್ ಲೈಫ್‌ನಲ್ಲಿ ದೊಡ್ಡ ಸ್ಥಾನಕ್ಕೆ ಹೋಗುವ ಪೂರ್ವಿ, ಪರ್ಸನಲ್ ಲೈಫ್‌ನಲ್ಲಿ ನಿಧಾನವಾಗಿ ಒಂದೊಂದೇ ಸಂಬಂಧಗಳನ್ನು ಕಳೆದುಕೊಳ್ಳುತ್ತಾ ಹೋಗುತ್ತಾಳೆ.

 

ಇಂತಹ ಸಂದರ್ಭದಲ್ಲಿ ಪೂರ್ವಿಗೆ ಆಕಾಶ್ (ಶ್ರೀ ಮಹದೇವ್) ಪರಿಚಯವಾಗುತ್ತದೆ. ಸದಾ ಗೊಂಬೆಗಳ ಜೊತೆಗಿರುವ ಭಾವನಾತ್ಮಕ ಜೀವಿ ಆಕಾಶ್ ಮತ್ತೊಮ್ಮೆ ಪೂರ್ವಿಯ ಬದುಕಿನಲ್ಲಿ ಹೊಸ ಖುಷಿಯನ್ನು ತರುತ್ತಾನೆ. ಬದುಕಿನಲ್ಲಿ ಕೆಲಸ, ಹಣ, ಹೆಸರು, ಗುರಿಗಿಂತ ಸಂಬಂಧಗಳು ಮುಖ್ಯ ಎಂಬ ವಾಸ್ತವ ಒಂದೊಂದಾಗಿ ಅರ್ಥವಾಗುತ್ತ ಹೋಗುತ್ತದೆ.

ಅಂತಿಮವಾಗಿ ಪೂರ್ವಿ ಯಾರ ಜೊತೆ ಒಂದಾಗುತ್ತಾಳೆ ಎಂಬುದೇ ಚಿತ್ರದ ಕ್ಲೈಮ್ಯಾಕ್ಸ್. ತಮ್ಮ ಇಗೋ ಬದಿಗಿಟ್ಟು ಎಲ್ಲರೂ ಒಂದಾಗುತ್ತಾರಾ.., ಇಲ್ಲವಾ ಎಂಬುದನ್ನ ಚಿತ್ರಮಂದಿರದಲ್ಲೆ ನೋಡಬೇಕು. ಚಿತ್ರದಲ್ಲಿ ಮೇಘನಾ ರಾಜ್, ತಿಲಕ್, ಮಹದೇವ್, ಅಚ್ಯುತಕುಮಾರ್ ಪ್ರತಿಯೊಬ್ಬರೂ ತಮ್ಮ ಪಾತ್ರಗಳನ್ನು ಅಚ್ಚುಕಟಾಗಿ ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಬರುವ ಭಾವನಾತ್ಮಕ ಅಂಶಗಳು ಪ್ರೇಕ್ಷಕರನ್ನು ಹಿಡಿದು ಕೂರಿಸುತ್ತವೆ. ಚಿತ್ರದ ಸಂಗೀತ, ಛಾಯಾಗ್ರಹಣ, ಸಂಕಲನ, ಸಂಭಾಷಣೆ ಎಲ್ಲವೂ ಚಿತ್ರಕ್ಕೆ ಪೂರಕವಾಗಿ ಮೂಡಿಬಂದಿವೆ. ಆ್ಯಕ್ಷನ್, ಐಟಂ ಸಾಂಗ್, ಅತಿಯಾದ ಕಾಮಿಡಿ, ಓವರ್ ಬಿಲ್ಡಪ್, ಹೀಗೆ ಕಮರ್ಷಿಯಲ್ ಸಿನಿಮಾಗಳ ಮೂಲ ಅಂಶಗಳು ಯಾವುದೂ ಇಲ್ಲದೆ ಇರುವುದೆಲ್ಲವ ಬಿಟ್ಟು ನೋಡುಗರ ಗಮನ ಸೆಳೆಯುತ್ತದೆ.

ಒಟ್ಟಾರೆ ಟೈಟಲ್ ಮತ್ತು ಟ್ರೇಲರ್ ಮೇಲೆ ಒಂದಷ್ಟು ನಿರೀಕ್ಷೆಗಳನ್ನು ಥಿಯೇಟರ್‌ಗೆ ಹೋದವರಿಗೆ ಚಿತ್ರ ನಿರೀಕ್ಷೆಗಳನ್ನು ಹುಸಿ ಮಾಡುವುದಿಲ್ಲ. ವಾರಾಂತ್ಯದಲ್ಲಿ ಒಮ್ಮೆ ಇರುವುದೆಲ್ಲವ ಬಿಟ್ಟು ಬದಿಗಿಟ್ಟು ಸಿನಿಮಾ ನೋಡಿಬರಲು ಅಡ್ಡಿ ಇಲ್ಲ.

Tags

Related Articles

Leave a Reply

Your email address will not be published. Required fields are marked *

Language
Close