About Us Advertise with us Be a Reporter E-Paper

ಅಂಕಣಗಳು

ರಾಜ್ಯ ಕಟ್ಟೋದು ಅಂದ್ರೆ ಗಣಿ ದುಡ್ಡು ಎಣಿಸಿದಷ್ಟು ಸುಲಭವೆ?!

‘ಕೆಲಸವಿಲ್ಲದ ಬಡಗಿ ತನ್ನ ಮಗುವಿನ ಅಂಡನ್ನೇ ಕೆತ್ತೋಕೆ ಶುರು ಮಾಡಿದನಂತೆ’ ಎಂಬುದೊಂದು ಗಾದೆ ಮಾತು. ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡ್ತೀವಿ ಅಂತ ಹೊರಟಿರೋರ ಕತೇನೂ ಹೆಚ್ಚು ಕಮ್ಮಿ ಇದೇ ಆಗಿದೆ. ಈ ಹೋರಾಟ ಮತ್ತು ಹಾರಾಟ ಹರಿಯಲ್ಲ, ಮುರಿಯಲ್ಲ ಅಂತ ವಿಷಯ ಹಿಡಿದುಕೊಂಡು ಅಲ್ಲಾಡಿಸುತ್ತಿರುವವರಿಗೆ ಚೆನ್ನಾಗಿ ಗೊತ್ತಿದೆ. ಆದರೂ ಅಲ್ಲಾಡಿಸುತ್ತಿದ್ದಾರೆ; ತಮಗೆ ಅಷ್ಟಾದರೂ  ಎಂಬುದನ್ನು ತೋರಿಸಿಕೊಳ್ಳಲು. ಆದರೆ ಅವರಿಗೆ ಅಲ್ಲಾಡಿಸುವುದು ಬಿಟ್ಟು ಬೇರೇನೂ ಮಾಡೋದಿಕ್ಕೆ ಸಾಧ‘್ಯವಿಲ್ಲ ಅನ್ನೋದು ಬೇರೆಯವರಿಗೂ ಮನದಟ್ಟಾಗಿ ಹೋಗಿದೆ.

ಈ ಹೋರಾಟಗಾರರಲ್ಲಿ ಎರಡು ವಿಧ‘. ಒಂದು ನಾಡಿನ ಹಿತಕ್ಕಾಗಿ ಹೋರಾಟ ಮಾಡೋರು, ಮತ್ತೊಂದು ತಮ್ಮ ಹಿತಕ್ಕಾಗಿ. ಮೊದಲನೆಯವರು ಆಯಾ ಕಾಲಮಾನಕ್ಕೆ ಆವಿ‘ರ್ವಿಸಿದ ವಿಷಯ ಹಿಡಿದುಕೊಂಡರೆ, ಎರಡನೆಯವರು ವಿಷಯ ಅನ್ವೇಷಿಸಿಕೊಂಡು ಚಳವಳಿ ಹುಟ್ಟಾಕುತ್ತಾರೆ. ನಾಡಿನ ಏಳ್ಗೆ ಸುಟ್ಟಾದರೂ ಸರಿಯೇ ತಮ್ಮ ‘ವಿಷ್ಯ ಮಟ್ಟ ಮಾಡಿಕೊಳ್ಳಬೇಕು ಎಂಬ ‘ೂರ್ತ ಹವಣಿಕೆ ಇವರದು. ಈಗ  ಅದೆಯೇ. ರೆಪ್ಪೆಮಿಟುಕಿನ ಅಂತರದಲ್ಲಿ ಅಧಿಕಾರ ಕಳೆದುಕೊಂಡು ಅವಮಾನ, ಹತಾಶೆ, ನೋವಿನಿಂದ ನೆಲದ ಮೇಲೆ ಬಿದ್ದು ವಿಲಿವಿಲಿ ಒದ್ದಾಡುತ್ತಿರುವ, ಎದೆಬಡಿದುಕೊಂಡು ಗೋಳಾಡುತ್ತಿರುವ ಬಿಜೆಪಿ ಈ ಮನೆಮುರುಕ ಐಡಿಯಾಕ್ಕೆ ಬೆಂಕಿ ಹಚ್ಚಿ ತನ್ನ ಮೈ ಕಾಯಿಸಿಕೊಳ್ಳಲು ಹವಣಿಸುತ್ತಿದೆ. ಉಂಗುಷ್ಠದ ತುದಿಯಲ್ಲಿ ಜಾರಿಹೋದ ಅಧಿಕಾರವನ್ನು ಹೇಗಾದರೂ ಮಾಡಿ ಅವುಚಿ ಹಿಡಿಯುವುದರ ಜತೆಗೆ ಪ್ರತ್ಯೇಕ ರಾಜ್ಯದ ಕೂಗಿನ ಕಾವಲ್ಲೇ ಲೋಕಸ‘ೆ ಚುನಾವಣೆ ಬೇಳೆಯನ್ನೂ ಬೇಯಿಸಿಕೊಳ್ಳಬೇಕು ಎಂಬ ಹಪಾಹಪಿ ಅದರ ನೆತ್ತಿ ಜುಟ್ಟಿಡಿದು ಜಗ್ಗಾಡಿಸುತ್ತಿದೆ.

ನಿಜ,  ರಾಜಕೀಯ ಮಾಡುವುದು ಅಧಿಕಾರಕ್ಕಾಗಿಯೇ. ಅದರಲ್ಲೂ ಕೈಯಿಗೆ ಬಂದದ್ದು, ಭ‘ೋರ್ಗರೆವ ನದಿಗೆ ಜಾರಿ ಬಿದ್ದು ಕೊಚ್ಚಿಕೊಂಡು ಹೋದಾಗ ಅದೆಂಥ ಯಮಯಾತನೆ ಆಗುತ್ತದೆ ಎಂಬುದಕ್ಕೆ ಯಡಿಯೂರಪ್ಪನವರ ಮೈಮನಗಳಲ್ಲಿ ಲಾಸ್ಯವಾಡುತ್ತಿರುವ ರೋಷಾಗ್ನಿಯೇ ಸಾಕ್ಷಿ. ಅವರಿಂದ ಹೋದ ಅಧಿಕಾರ ಹಾಗೇ ಕೊಚ್ಚಿಕೊಂಡು ಹೋಗಿದ್ದರೆ ಅವರಿಗಿಷ್ಟೊಂದು ಯಾತನೆ ಆಗುತ್ತಿರಲಿಲ್ಲ. ಆದರೆ ಆ ಆಧಿಕಾರವೆಂಬ ‘ನಾಯಕಸಾನಿ’ ಹಿಂದೊಮ್ಮೆ ತಮಗೆ ‘ಗಿನಿಗೂಟ ಜಡಿದಿದ್ದ ಕುಮಾರಸ್ವಾಮಿ ತೆಕ್ಕೆಗೆ ಬಿದ್ದದ್ದು, ಅವರನ್ನು ಶರಶಯ್ಯೆಯ ಮೇಲೆ ಮಲಗಿಸಿ, ಮೇಲಿಂದ ಏಕಕಾಲಕ್ಕೆ ಸಾವಿರ ಸುತ್ತಿಗೆಯಲ್ಲಿ  ಅಧಿಕಾರದ ಬಯಕೆ ಮನಸ್ಸು ಬಿಟ್ಟು ಜರುಗಲೊಲ್ಲದು. ಆದರೆ ಅಡರುತ್ತಿರುವ ಮುಪ್ಪು ಕೀಲುಕುದುರೆಯಂತೆ ಸುತ್ತುತ್ತಿರುವ ಅಧಿಕಾರ ಸಿಗುವವರೆಗೂ ಕಾಯಲೊಲ್ಲದು. ಹೀಗಾಗಿ ಅವರು ಮಲಗಿದ್ದಲ್ಲೇ ಝಳಪಿಸುತ್ತಿರುವ ಅಸ್ತ್ರಗಳಲ್ಲಿ ಪ್ರತ್ಯೇಕ ರಾಜ್ಯದ ಕೂಗೂ ಒಂದು.

ನಿಜ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಅದರ ಚುಕ್ಕಾಣಿ ಹಿಡಿದಂತೆ ಕಾಣುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಕಾಡುತ್ತಿರುವ ರಗಳೆ ಒಂದೆರಡಲ್ಲ; ಬಹುವಿ‘ದ್ದು. ಕೆಲವು ಸ್ವಯಂಕೃತ, ಹಲವು ಪರಾಧೀನ. ಎರಡೂವರೆ ದಶಕದ ರಾಜಕೀಯ ಅನು‘ವವಿರಬಹುದು, ಎರಡು  ಸಿಎಂ ಆಗಿರಬಹುದು. ಆದರೆ ತಂದೆ ದೇವೇಗೌಡರ ರಾಜಕೀಯ ಪಟ್ಟು, ಮಟ್ಟುಗಳನ್ನು ಎಟುಕಿಸಿಕೊಳ್ಳಲು ಇನ್ನೂ ಗಂಜಿ-ನೀರು ಕುಡಿಯುತ್ತಿರುವ ಕುಮಾರಸ್ವಾಮಿ ಯೋಚಿಸಿ ಮುನ್ನಡೆವ ಬದಲು ಮುನ್ನಡೆದು ಯೋಚಿಸುವುದೇ ಹೆಚ್ಚು. ಈಗ ರಾಜ್ಯದಲ್ಲಿ ಎದ್ದಿರುವ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗಿನ ‘ಉಡಾವಣೆ ವಾಹಕ’ ಕುಮಾರಸ್ವಾಮಿ ಅವರ ಅಂಥದ್ದೇ ಒಂದು ನಡೆ. ಸಾಲಮನ್ನಾ ವಿಚಾರದಲ್ಲಿ ಅವರಾಡಿದ ಮಾತು ಮೂಲೋದ್ದೇಶ ಮತ್ತದರ ಕ್ರಿಯೆಯನ್ನೂ ಪಕ್ಕಕ್ಕಿಟ್ಟು, ಬಿಜೆಪಿ ಪ್ರತಿಕ್ರಿಯೆಯೇ ವಿಜೃಂಭಿಸುವಂತೆ ಮಾಡಿದೆ. ಸಂಪೂರ್ಣ ಸಾಲಮನ್ನಾಕ್ಕಾಗಿ ಬಿಜೆಪಿ  ಉತ್ತರ ಕರ್ನಾಟಕ ರೈತರ ಚಳವಳಿಗೆ ಉತ್ತರಿಸುತ್ತಾ, ‘ಆ ‘ಾಗದ ಮತದಾರರು ಬಿಜೆಪಿಗೆ ಮತ ಹಾಕಿ ಈಗ ಸಾಲಮನ್ನಾ ಮಾಡಿ ಎಂದು ಕೇಳುವ ನೈತಿಕ ಹಕ್ಕನ್ನೇ ಕಳೆದುಕೊಂಡಿದ್ದಾರೆ. ಜೆಡಿಎಸ್‌ಗೆ ಮತಹಾಕಿ, ಪೂರ್ಣ ಅಧಿಕಾರ ಕೊಟ್ಟಿದ್ದರೆ ಅವರ ಬೇಡಿಕೆಯನ್ನು ಪರಿಗಣಿಸಬಹುದಿತ್ತು’ ಎಂಬ ಸಲ್ಲದ ಮಾತನ್ನಾಡಿ ಬೇಡದ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಬಿಜೆಪಿ ಕೈಗೂ ಪ್ರತಿ‘ಟನೆ ಅಸ್ತ್ರ ಒದಗಿಸಿದ್ದಾರೆ. ಆದರೆ ಬಿಜೆಪಿ ಈ ಅಸ್ತ್ರವನ್ನು ನಾಡಿನ ಉದ್ಧಾರಕ್ಕೆ ಬಳಸುವ ಬದಲು ರಾಜಕೀಯ ದುರುದ್ದೇಶದೊಂದಿಗೆ  ರಾಜ್ಯ ಬೇಡಿಕೆಯ ಮನೆಮುರುಕುತನದ ಕೂಗೆಬ್ಬಿಸಿರುವುದು ವಿಕೃತಿಯ ಪರಮಾವಧಿ.

‘ಮಗು ಚಿವುಟುವುದು, ತೊಟ್ಟಿಲು ತೂಗುವುದು’ ಅನ್ನುವ ಮಾತು ಸದ್ಯದ ಸ್ಥಿ ತಿಯಲ್ಲಿ ಯಡಿಯೂರಪ್ಪನವರಿಗೆ ಬಹಳ ಚೆನ್ನಾಗಿ ಹೋಲುತ್ತದೆ. ಬಜೆಟ್ ಮಂಡನೆ ಆದ ದಿನದಿಂದ ಶುರುವಾಗಿ ಸಾಲಮನ್ನಾ ವಿಚಾರದವರೆಗೂ ಮೈತ್ರಿ ಸರಕಾರದ ಪ್ರತಿ ನಡೆಯಲ್ಲೂ ಯಡಿಯೂರಪ್ಪನವರು ಅರಸಿದ್ದು ಉತ್ತರ ಕರ್ನಾಟಕಕ್ಕೆ ‘ಾರೀ ಅನ್ಯಾಯ ಆಗಿದೆ ಎಂಬುದನ್ನೇ. ಬಜೆಟ್ ಕುರಿತು ಅವರು ಕೊಟ್ಟ ಇಂಥ ಹೇಳಿಕೆಯ ಎಳೆಯಿಡಿದು ಅವರ ಪಕ್ಷದ ಚಪ್ಪನ್ನಾರು ನಾಯಕರು  ಸಿಗಿಯಲು ಎಗ್ಗುಸಿಗ್ಗಿಲ್ಲದೆ ತಮ್ಮ ನಾಲಿಗೆಯನ್ನು ಝಳಪಿಸಿದರು. ಯಡಿಯೂರಪ್ಪನವರಂತೆ ಮತ್ತೊಬ್ಬ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಉತ್ತರ ಕರ್ನಾಟಕಕ್ಕೆ ದೇವೇಗೌಡರು, ಕುಮಾರಸ್ವಾಮಿ ಕೊಡುಗೆ ಏನೂ ಇಲ್ಲ ಎಂದರೆ, ಕಳೆದ ವಿ‘ಾನಸ‘ೆ ಚುನಾವಣೆಯಲ್ಲಿ ಬಿಜೆಪಿಯ ಉಪ ಮುಖ್ಯಮಂತ್ರಿ ಅ‘್ಯರ್ಥಿ ಎಂದೇ ಸ್ವಯಂ ಬಿಂಬಿಸಿಕೊಂಡಿದ್ದ ಮಾಜಿ ಸಚಿವ ಶ್ರೀರಾಮುಲು ಅವರಂತೂ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಿಸಲು ತೆಲಂಗಾಣ ಮಾದರಿಯಲ್ಲಿ ಹೋರಾಟ ರೂಪಿಸುವುದಾಗಿ ಗುಡುಗಿದರು. ಮತ್ತೊಬ್ಬ ಮಾಜಿ ಸಚಿವ ಉಮೇಶ್ ಕತ್ತಿ ಪ್ರತ್ಯೇಕ ರಾಜ್ಯ  ಸಿದ್ಧ ಎಂದರು. ಬಿಜೆಪಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಅವರಂತೂ ಕುಮಾರಸ್ವಾಮಿ ಅವರಪ್ಪನ ಮನೆ ದುಡ್ಡನ್ನೇನೂ ತಂದು ಕೊಡುವುದಿಲ್ಲವಲ್ಲ, ‘ಾರಾಳವಾಗಿ ಕೊಡಲಿ ಎಂದು ಗುಡುಗಿದರು. ಹೀಗೆ ಉತ್ತರ ಕರ್ನಾಟಕ ‘ಾಗದ ದೊಡ್ಡ ನಾಯಕರಿಂದ ಹಿಡಿದು ಮರಿ, ಪುಡಿ ನಾಯಕರವರೆಗೂ ಯಡಿಯೂರಪ್ಪನವರ ಆಣತಿಯನ್ನು ಹೊತ್ತು ಮೆರೆದರು.

ಕರ್ನಾಟಕದ ಒಡಲು ಬಗೆದು ತಿಮಿರನ್ನೇ ಕಿರೀಟ ಮಾಡಿಕೊಂಡಿರುವ ಶ್ರೀರಾಮುಲು ಅವರಿಗೆ ಅಖಂಡ ಆಂ‘್ರ ಪ್ರದೇಶ ಇಬ್ಭಾಗದ ನಂತರ ಎಂಥ ದುಸ್ಥಿತಿ ತಲುಪಿದೆ ಎಂಬುದರ  ಇದ್ದಂತಿಲ್ಲ. ನಾಡಿಗೆ ಬಗೆದ ದ್ರೋಹಕ್ಕಾಗಿ ತಮ್ಮ ಒಡನಾಡಿಗಳನ್ನೆಲ್ಲ ಜೈಲುಪಾಲು ಮಾಡಿ, ಕೂದಲೆಳೆ ಅಂತರದಲ್ಲಿ ಶ್ರೀಕೃಷ್ಣ ಜನ್ಮಸ್ಥಾನ ದರ್ಶನ ತಪ್ಪಿಸಿಕೊಂಡ ಶ್ರೀರಾಮುಲು ಅವರಿಗೆ ಗೊತ್ತಿಲ್ಲ ಎಂದೆನಿಸುತ್ತದೆ; ತೆಲಂಗಾಣ ಹಾಗೂ ಆಂ‘್ರ ಎರಡು ರಾಜ್ಯಗಳೂ ಶ್ರೀರಾಮುಲು ಪ್ರತಿನಿಧಿಸುತ್ತಿರುವ (ಹಿಂದೊಮ್ಮೆ ಆ ಪಕ್ಷ ಬಿಟ್ಟು ಬಿಎಸ್‌ಆರ್ ಕಾಂಗ್ರೆಸ್ ಕಟ್ಟಿದ್ದರು ಎಂಬುದು ಬೇರೆ ಮಾತು) ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಮುಂದೆ ಭಿಕ್ಷಾಪಾತ್ರೆ ಹಿಡಿದು ನಿಂತಿರುವುದು, ಆ ರಾಜ್ಯಗಳಿಗೆ ಕೊಡುತ್ತೇನೆ ಎಂದು ಹೇಳಿದ ಅನುದಾನ  ಮಾಡದೆ ಮೋದಿ ಸರಕಾರ ಆಟ ಆಡಿಸುತ್ತಿರುವುದು. ಚಂದ್ರಬಾಬು ನಾಯ್ಡು ಕೇಂದ್ರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವಷ್ಟರ ಮಟ್ಟಿಗೆ ಹತಾಶೆ ಕೂಪಕ್ಕೆ ಬಿದ್ದಿದ್ದಾರೆ. ಇದು ಕೂಡ ಪ್ರತ್ಯೇಕ ರಾಜ್ಯದ ಕೊಡುಗೆಯೇ. ಬಹುಶಃ ಉತ್ತರ ಕರ್ನಾಟಕಕ್ಕೂ ಅದೇ ದುಸ್ಥಿತಿ ತರಬೇಕೆಂಬ ಉತ್ಕಟ ಬಯಕೆ ಅವರಿಗಿರಬಹುದು. ಪಾಪ, ಪ್ರತ್ಯೇಕ ರಾಜ್ಯ ಕಟ್ಟೋದು ಅಂದ್ರೆ ಕಡ್ಲೆಪುರಿ ಪೊಟ್ಟಣ ಕಟ್ಟಿದಷ್ಟು, ಗಣಿದುಡ್ಡು ಎಣಿಸಿಕೊಂಡಷ್ಟು ಸುಲ‘ ಎಂದು ರಾಮುಲು ಬಗೆದಿರಬೇಕು. ಮೊದಲು, ರೆಡ್ಡಿಗಳ ಬಳಗದ ಜತೆಗೂಡಿ ಯಕ್ಕುಡಿಸಿಟ್ಟಿರುವ  ಸರಿಯಾಗಿ ಕಟ್ಟಲಿ, ಅಲ್ಲಿನ ಜನರನ್ನು ಕಿತ್ತುತಿನ್ನುತ್ತಿರುವ ಬಡತನದ ಬೇಗೆ, ಬವಣೆಯನ್ನು ದೂರ ಮಾಡಲಿ. ಆಮೇಲೆ ಪ್ರತ್ಯೇಕ ರಾಜ್ಯದ ಮಾತಾಡಲಿ.

ನಡಹಳ್ಳಿ ಅವರೊಬ್ಬರನ್ನು ಬಿಟ್ಟು ಬೇರೆ, ಬೇರೆ ನಾಯಕರು ಮಾತಾಡಿದ್ದು ಒಂದು ಮಟ್ಟಕ್ಕಿದ್ದರೆ ಶ್ರೀರಾಮುಲು ಮಾತಂತೂ ಥೇಟು ಮನೆಹಾಳರ ಪ್ರತಿರೂಪದಂತಿತ್ತು. ಹಿಂದೆ ಯಡಿಯೂರಪ್ಪ, ಶೆಟ್ಟರ್, ಶ್ರೀರಾಮುಲು ಅವರೆಲ್ಲರೂ ಪ್ರತಿನಿಧಿಸಿದ್ದ ಬಿಜೆಪಿ ಸರಕಾರವಿದ್ದಾಗ ಉತ್ತರ ಕರ್ನಾಟಕವನ್ನೂ ಹೊನ್ನಿನ ಹೊಳೆಯಲ್ಲಿ ಮೀಯಿಸಬಹುದಿತ್ತು. ಅದನ್ನು ನ್ಯೂಯಾರ್ಕೋ, ಸಿಂಗಾಪುರವೋ ಮಾಡಿಬಿಡಬಹುದಿತ್ತು. ಯಾಕೆ ಮಾಡಲಿಲ್ಲವೋ ಗೊತ್ತಿಲ್ಲ? ಅವರ  ಯಾರು ಕಟ್ಟಿ ಹಾಕಿದ್ದರು. ಅವರು ಉತ್ತರ ಕರ್ನಾಟಕವನ್ನು ಉದ್ಧಾರ ಮಾಡಿದ್ದರೆ ಇವತ್ತು ಆ ‘ಾಗಕ್ಕೆ ಅನ್ಯಾಯ ಆಗಿದೆ ಎಂದು ಕೂಗುವ ಪ್ರಮೇಯವೇ ಉದ್ಭವಿಸುತ್ತಿರಲಿಲ್ಲವಲ್ಲ. ಅಧಿಕಾರ ಕೈಯಸಲ್ಲಿದ್ದಾಗ ಮಾಡಬಾರದ್ದನ್ನು ಮಾಡಿ, ಆಡಬಾರದ ಆಟಗಳನ್ನು ಆಡಿ ಒಂದೇ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಕಂಡ ಬಿಜೆಪಿ ಅನ್ಯರನ್ನು ದೂಷಿಸುವ ಮೊದಲು ತಮ್ಮ ಬೆನ್ನ ಹಿಂದಿನ ಹೆಜ್ಜೆಗಳನ್ನು ಒಮ್ಮೆ ತಿರುಗಿ ನೋಡಿಕೊಳ್ಳುವುದು ಒಳಿತು. ಹಾಗೆಂದು ಕುಮಾರಸ್ವಾಮಿ ಮಾಡಿದ್ದು, ಮಾತಾಡಿದ್ದು ಸರಿಯೆಂದು ಅರ್ಥವಲ್ಲ. ಆದರೆ ಅದಕ್ಕೆ  ರಾಜ್ಯ ಕೂಗಿನ ಮೂಲಕ ಅನಾಹುತಕಾರಿ ಪರಿಹಾರ ಹುಡುಕಲು ಹೊರಟಿರುವುದು ಸರಿಯಲ್ಲ. ಇಷ್ಟಕ್ಕೂ ವಿ‘ಾನಸ‘ೆ ಚುನಾವಣೆಗೆ ಮೊದಲು ಹದಿನೈದೇ ದಿನದಲ್ಲಿ ಮಹದಾಯಿ ವಿವಾದ ಬಗೆಹರಿಸುವುದಾಗಿ ಯಡಿಯೂರಪ್ಪ ಬಡಾಯಿ ಕೊಚ್ಚಿದರಲ್ಲ ಯಾಕೆ ಅದನ್ನು ಮಾಡಲು ಸಾ‘್ಯವಾಗಲಿಲ್ಲ? ಅದೂ ಕೇಂದ್ರದಲ್ಲಿ ಹಾಗೂ ನೆರೆಯ ಗೋವಾದಲ್ಲಿ ಅವರದೇ ಬಿಜೆಪಿ ಸರಕಾರವಿದ್ದರೂ. ಮಹದಾಯಿ ಉತ್ತರ ಕರ್ನಾಟಕದ ಅನೇಕ ಸಮಸ್ಯೆಗಳ ಪೈಕಿ ಒಂದು. ಆ ಒಂದು ಸಮಸ್ಯೆಯನ್ನೇ ಬಗೆಹರಿಸಲು ಸಾ‘್ಯವಾಗದಿದ್ದವರು, ಆ ‘ಾಗದ ಜನರಿಗೆ ಕುಡಿಯುವ ನೀರು  ಮಾಡಲಾಗದಿದ್ದವರು ಇನ್ನೂ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಿ ಸ್ವರ್ಗ ಮಾಡುತ್ತಾರೆಯೇ? ‘್ರಮೆಗೂ ಒಂದು ಮಿತಿ ಇರಬೇಕು.

ಉತ್ತರ ಕರ್ನಾಟಕಕ್ಕೆ ಯಾರ್ಯಾರು, ಎಷ್ಟೆಷ್ಟು ಕೊಡುಗೆ ಕೊಟ್ಟಿದ್ದಾರೆ, ಆ ‘ಾಗದ ಬಗ್ಗೆ ಅಲ್ಲಿನವರೇ ಆದ ಜನಪ್ರತಿನಿಧಿಗಳಿಗೆ ಎಷ್ಟು ಕಾಳಜಿ ಇತ್ತು, ಉತ್ತರ ಕರ್ನಾಟಕವನ್ನು ಲಿಂಗಾಯತ ಹಾಗೂ ದಕ್ಷಿಣ ಕರ್ನಾಟಕವನ್ನುಒಕ್ಕಲಿಗ ಸಮುದಾಯದ ಪ್ರಾಬಲ್ಯದೊಡನೆ ಸಮೀಕರಿಸಿ ನೋಡುವವರು ಏನೇನು ಮಾಡಿದ್ದಾರೆ, ಬಿಜೆಪಿ ಕೊಡುಗೆ ಏನು ಎಂಬುದನ್ನು ಒರೆಗೆ ಹಚ್ಚಬೇಕಾಗುತ್ತದೆ. ಇಷ್ಟಕ್ಕೂ ಏಕೀಕರಣಕ್ಕೆ ಮೊದಲು  ಹಾಗೂ ಹೈದರಾಬಾದ್ ಕರ್ನಾಟಕ ‘ಾಗವನ್ನೊಳಗೊಂಡ ಉತ್ತರ ಕರ್ನಾಟಕ ಪ್ರತ್ಯೇಕವಾಗಿಯೇ ಇತ್ತು. 1956 ರಲ್ಲಿ ಹೊಸ ಮೈಸೂರು ರಾಜ್ಯ ಸ್ಥಾಪನೆ ಆಗುವ ಮೊದಲು ಹಳೇ ಮೈಸೂರು ಪ್ರಾಂತ್ಯಕ್ಕೆ ಸೇರ್ಪಡೆ ಮಾಡಬೇಕೆಂಬ ಕೂಗು ಉತ್ತರ ಕರ್ನಾಟಕದಿಂದಲೇ ಬಂದಿತ್ತು. ಆಗ ಒಡೆಯರ್ ಆಳ್ವಿಕೆಯಲ್ಲಿ ಸಮೃದ್ಧವಾಗಿದ್ದ ಮೈಸೂರು ಪ್ರಾಂತ್ಯದವರು ಹಿಂದುಳಿದ ಉತ್ತರ ಕರ್ನಾಟಕವನ್ನು ಜತೆಗೆ ಸೇರಿಸಿಕೊಳ್ಳಲು ವಿರೋ‘ ವ್ಯಕ್ತಪಡಿಸಿದ್ದರು. ತಮ್ಮ ಸಂಪತ್ತೆಲ್ಲಿ ಉತ್ತರ ಕರ್ನಾಟಕ ‘ಾಗದ ಅಭಿವೃದ್ಧಿಗೆ ವಿನಿಯೋಗವಾಗುತ್ತದೋ ಎಂಬ ಭೀತಿ ಜತೆಗೆ ಜಾತಿ  ಅಲ್ಲಿ ಕೆಲಸ ಮಾಡಿತ್ತು. ಹಳೇ ಮೈಸೂರು ‘ಾಗದಲ್ಲಿ ಪ್ರಬಲರಾಗಿದ್ದ ಒಕ್ಕಲಿಗರು ಉತ್ತರ ಕರ್ನಾಟಕದಲ್ಲಿ ಪ್ರಬಲರಾಗಿರುವ ಲಿಂಗಾಯತರ ಜತೆ ರಾಜಕೀಯ ಅಧಿಕಾರಕ್ಕಾಗಿ ಸೆಣೆಸಬೇಕಾಗುತ್ತದೆ ಎಂಬ ಅ‘ದ್ರತೆಗೆ ಒಳಗಾಗಿದ್ದರು. ಆದರೂ ಆಗಿನ ಮುಖ್ಯಮಂತ್ರಿ, ಒಕ್ಕಲಿಗ ಸಮುದಾಯದ ಕೆಂಗಲ್ ಹನುಮಂತಯ್ಯ ಮೈಸೂರು ರಾಜ್ಯಕ್ಕೆ ಉತ್ತರ ‘ಾಗ ಸೇರಿಸಿಕೊಳ್ಳಲು ಒಪ್ಪಿದರು. ನಂತರ ಅವರು ಅಧಿಕಾರ ಕಳೆದುಕೊಂಡರು. ಲಿಂಗಾಯತ ಸಮುದಾಯದ ನಿಜಲಿಂಗಪ್ಪ ಹೊಸ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾದರು.

ಈ ರಾಜ್ಯವನ್ನು ಅತಿಹೆಚ್ಚು ಬಾರಿ, ಹೆಚ್ಚು  ಮುಖ್ಯಮಂತ್ರಿಗಳಾಗಿ ಆಳ್ವಿಕೆ ಮಾಡಿದವರು ಲಿಂಗಾಯತ ಸಮುದಾಯದವರೇ ಆಗಿದ್ದಾರೆ. ನಿಜಲಿಂಗಪ್ಪ, ಬಿ.ಡಿ. ಜತ್ತಿ, ಎಸ್.ಆರ್. ಕಂಠಿ, ವೀರೇಂದ್ರ ಪಾಟೀಲ್, ಎಸ್.ಆರ್. ಬೊಮ್ಮಾಯಿ, ಜೆ.ಎಚ್. ಪಟೇಲ್, ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್ ಈ ಪಟ್ಟಿಯಲ್ಲಿದ್ದಾರೆ. 1956 ರಲ್ಲಿ ಕೆಂಗಲ್ ಹನುಮಂತಯ್ಯ ಅಧಿಕಾರ ಕಳೆದುಕೊಂಡ ನಂತರ ಒಕ್ಕಲಿಗ ಸಮುದಾಯದ ದೇವೇಗೌಡ ಮುಖ್ಯಮಂತ್ರಿ ಆದದ್ದು 1994 ರಲ್ಲಿ. ಅದೂ ಕೇವಲ ಒಂದೂವರೆ ವರ್ಷ ಮಾತ್ರ. ನಂತರ ಕುಮಾರಸ್ವಾಮಿ 20 ತಿಂಗಳು ಸಿಎಂ ಆಗಿದ್ದು, ಈಗ  ತಿಂಗಳು ಪೂರೈಸಿದ್ದಾರೆ. ಅಲ್ಲಿಗೆ ಉತ್ತರ ಕರ್ನಾಟಕ ಹಿಂದುಳಿದಿದ್ದರೆ ಅದಕ್ಕೆ ಯಾರು ಕಾರಣ, ಅದರ ಅಭಿವೃದ್ಧಿಗೆ ಲಿಂಗಾಯತ ಹಾಗೂ ಒಕ್ಕಲಿಗ ಮುಖ್ಯಮಂತ್ರಿಗಳ ಕೊಡುಗೆ ಏನು ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಲು ಸೂಚಿಸುವುದಾಗಿ ದೇವೇಗೌಡರು ಹೇಳಿರುವುದರಲ್ಲಿ ಅತಿರಂಜಿತವಾದದ್ದು ಏನೂ ಇಲ್ಲ.

ಹಿಂದೆ ಉತ್ತರ ಕರ್ನಾಟಕದವರ ಹೋರಾಟದ ಲವಾಗಿಯೇ ಅಖಂಡ ಕರ್ನಾಟಕಕ್ಕೆ ಆ ‘ಾಗ ಸೇರಿಕೊಂಡಿತ್ತು. ಈಗ ಆ ‘ಾಗದವರೇ ಒಡಕಲು ‘್ವನಿ ಎತ್ತಿರುವುದು ದುರಂತ. ಈಗ ಉತ್ತರ ಕರ್ನಾಟಕ ಎನ್ನುತ್ತಾರೆ, ನಾಳೆ  ಕರ್ನಾಟಕ, ಹೈದರಾಬಾದ್ ಕರ್ನಾಟಕ ಪ್ರತ್ಯೇಕತೆಗೂ ಕೂಗು ಬರುವುದಿಲ್ಲ ಎನ್ನುವ ಗ್ಯಾರಂಟಿ ಏನು? ‘ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ’ ಎಂಬಂತೆ ಕಟ್ಟುವವರ ಪಾಡು ಒಡೆಯುವವರ ತೆವಲಿಗೆ ಅರ್ಥವಾಗುವುದಿಲ್ಲ. ವಿ‘ಾನಸ‘ೆ ಚುನಾವಣೆ ಆಗಲಿ, ಲೋಕಸ‘ೆ ಚುನಾವಣೆ ಆಗಲಿ ಬರುತ್ತದೆ, ಹೋಗುತ್ತದೆ. ಆದರೆ ಮುರಿದ ಮನೆ ಒಂದು ಮಾಡಲು ಸಾ‘್ಯವಾಗುತ್ತದೆಯೇ? ಇವತ್ತು ಶ್ರೀರಾಮುಲು ಗಣಿ ಬಳಗವೇ ಚಿಂದಿ ಚಿತ್ರಾನ್ನವಾಗಿದೆ. ಜನಾ‘ರ್ನ ರೆಡ್ಡಿ ಒಂದು ಕಡೆ, ಕರುಣಾಕರರೆಡ್ಡಿ ಒಂದು ಕಡೆ, ಸೋಮಶೇಖರ ರೆಡ್ಡಿ ಮತ್ತೊಂದು  ಅವರ ಹಿಂದೆ-ಮುಂದೆ ಓಡಾಡಿಕೊಂಡಿದ್ದವರೆಲ್ಲ ಅಷ್ಟ ದಿಕ್ಕುಗಳಲ್ಲಿ ಚದುರಿ ಹೋಗಿದ್ದಾರೆ. ಹಿಂದೆ ಒಂದೇ ತಟ್ಟೆಯಲ್ಲಿ ಕೂತು ಉಣ್ಣುತ್ತಿದ್ದವರು ಈಗ ಒಬ್ಬರು ಕೂತ ಜಾಗದಲ್ಲಿ ಮತ್ತೊಬ್ಬರು ಕೂರುತ್ತಿಲ್ಲ. ಇವರ ಹಿಂದಿನ ವಿಜಯನಗರ ಸಾಮ್ರಾಜ್ಯ ಈಗಿನ ಹಾಳು ಹಂಪಿಯಂತಾಗಿದೆ. ಹೀಗೆ ಒಡೆದು ಹೋದ ಒಂದು ಯಃಕಶ್ಚಿತ್ ಬಳಗವೇ ಮತ್ತೆ ಒಂದಾಗಲು ಸಾ‘್ಯವಿಲ್ಲದಿರುವಾಗ ಅಖಂಡ ಕರ್ನಾಟಕ ಮನೆ ಒಡೆಯು ಮಾತಾಡುತ್ತಾರಲ್ಲ ಇವರನ್ನು ನಾಡಿನ ಜನ ಕ್ಷಮಿಸಲು ಸಾ‘್ಯವೇ? ವೋಟ್ ಬ್ಯಾಂಕ್ ರಾಜಕೀಯ ಮಾಡಲು ನಾನಾ  ಆದರೆ ಅದಕ್ಕಾಗಿ ಮನೆಹಾಳು ಕೆಲಸ ಮಾಡುವ ಅಗತ್ಯವಿಲ್ಲ. ಶ್ರೀರಾಮುಲು ಅವರಿಗೆ ಮತ್ತದೇ ಒಕ್ಕಲಿಗ ಸಮುದಾಯದ ಶೋ‘ಾ ಕರಂದ್ಲಾಜೆ ತಿರುಗೇಟು ನೀಡಿದ ನಂತರ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಅವರಿಗೆ ಜ್ಞಾನೋದಯವಾದಂತಿದೆ. ಉತ್ತರ ಕರ್ನಾಟಕದ ಪ್ರಗತಿಗೆ ಹೋರಾಡಬೇಕೇ ಹೊರತು ಪ್ರತ್ಯೇಕ ರಾಜ್ಯದ ಮಾತಾಡಬಾರದು ಎಂದು ‘ತಡ’ವರಿಸಿದ್ದಾರೆ. ಅಖಂಡ ಕರ್ನಾಟಕದ ಹಿತದೃಷ್ಟಿಯಿಂದ ಇವರ ಜ್ಞಾನ ಹೀಗೆಯೇ ‘ಶೋ‘ಾ’ಯಮಾನವಾಗಿರಲಿ!

ಲಗೋರಿ: ಮನೆ ಮುರುಕರಿಗೆ ಮನೆ ಕಟ್ಟುವ ಶ್ರಮ ಗೊತ್ತಿರುವುದಿಲ್ಲ.

Tags

Related Articles

One Comment

  1. P Thyagaraj is contantly targetting BJP and BSY in precise. Don’t know where & when his work ethics was blown away. Vishwshwar Bhat must stop this selective outrageous critic targetting specific pernson and an ideology.

Leave a Reply

Your email address will not be published. Required fields are marked *

Language
Close