About Us Advertise with us Be a Reporter E-Paper

ವಿವಾಹ್

ಅಯ್ಯೋ ಏನೇನೋ ಇದೆ ಗುರುವೇ ಜೀವನದಲ್ಲಿ.

- ನಿಖಿಲ್ ಹೆಗಡೆ.

ಒಂದದ್ಭುತವಾದ ನೀವ್ ಮರೆತಿರೋ ಲೋಕವನ್ನ ಮತ್ತೆ ಸ್ಪರ್ಶಿಸಲು ಪ್ರಯತ್ನಿಸಿ. ಕಾಕನ ಟೀ ಅಂಗಡಿಯ ಬನ್ನು ಚಹಾ ಸವಿದು ಅದೆಷ್ಟು ದಿನವಾಗಿರಬಹುದು, ಜಯನಗರದ ಕಾಂಪ್ಲೆಕ್ಸಿನ ಹೊರಗಡೆ ಕೂತು ಕೈಗೆ ಗೋರಂಟಿ ಹಾಕಿಸಿ ಅದೆಷ್ಟು ಸಮಯ ಕಳೆದಿರಬಹುದು, ಮಲ್ಲೇಶ್ವರಂ ನಲ್ಲಿ ಶಾಪಿಂಗ್ ಮಾಡಿ ವರುಷಗಳೆಷ್ಟು ಕಳೆದುವೋ, ಪಕ್ಕದ ಮನೆಯ ತಾತನ ಬಹಳ ದಿನಗಳಾಗಿರಬೇಕಲ್ಲ. ಹಳೆಯ ಕ್ಲಾಸ್ ಮೇಟ್ ಗೆ ಒಂದು ಹಾಯ್ ಹೇಳಬಹುದಲ್ಲ, ರಾಗಿಗುಡ್ಡದ ಆಂಜನೆಯನಿಗೆ ಅಡ್ಡ ಬೀಳಬಹುದಲ್ಲ

ಅದೆಷ್ಟೂ ಅಂತ ನಿಮಗಿಷ್ಟವಾದವರು ಫೇಸ್ಬುಕ್ ವಾಟ್ಸ್ಯಾಪ್ ನಲ್ಲಿ ಆನ್ಲೈನ್ ಇರೋದು ನೋಡಿ ಕಾದು ಕುಳಿತುಕೊಳ್ತೀರಾ. ಅದೆಷ್ಟು ಅಂತ ಕಾಯ್ತಿರಾ ಅವರ ಬರುವಿಕೆಗೆ ನಿಮ್ಮ ಮೆಸೆಂಜರಿನ ಕಿಟಕಿಯೊಳಗೆ, ಹಾ.. ಅದೇ ಅವರಿಗೆ ಅದ್ಯಾರೋ ಇನ್ಯಾರೋ ಇಷ್ಟವಾಗಿಬಿಟ್ಟಿದ್ದಾರೆ ಅನ್ನುವುದ ಮನಸು ಒಪ್ಪಿಕೊಳ್ಳಲ್ಲ ಅಲ್ವೇ.. ನಿನ್ನೆಯ ಹೊಸತು ನಾಳೆಗೆ ಹಳತಾಗುವುದು, ಇಂದು ಅವರಿಗೆ ಹಳಬ. ಇಂದು ಮತ್ಯಾರೋ ಹೊಸ ಮಿಕಕ್ಕೆ ಕಿಕ್ಕು ಹೊಡೆಸುತ್ತಾ ಮತ್ತಿನ ಗುಂಗಲ್ಲಿ ನಮ್ಮನ್ನ ಮರೆತಿರುವುದು ನಮಗೆ ತಪ್ಪಾಗಿ ಕಂಡರು ಅವರಿಗೆ ಇದು ಒಂಥರಾ ಥ್ರಿಲ್. ಬಹು ಬೇಗ ನಾವು ಬೋರ್ ಆಗಿ ಬಿಡುತ್ತೇವೆ ಇದೂ ಒಂಥರಾ ಸಂಕಷ್ಟವೇ.

ಮೊದ ಮೊದಲೆಲ್ಲ ಅದೆಷ್ಟು ಚೆನ್ನಾಗಿ ಮಾತು ಕಥೆ ಇತ್ತು ಇವಾಗ ಯಾಕೆ ಹೀಗೆ ಮುದ್ದು ಚಿನ್ನಾ, ಸ್ವೀಟಿ, ನಾಟಿ, ಪಾಪು ಪುಟ್ಟಿ ಎಲ್ಲ ಕಾಟಾಚಾರಕ್ಕೆ ಮಾತ್ರ ಬಂದ ಪ್ರೀತಿಯ ನಾ ಏನಾದರು ತಪ್ಪು ಮಾತಾಡಿದೆನಾ, ನನ್ನಿಂದ ಅಪರಾಧವೇನಾದರೂ ಆಯ್ತಾ, ಮುಂಚೆ ಹೀಗಿರಲಿಲ್ಲ ನೀನು ಯಾಕೆ ಹೀಗೆ ಅಂತ ನೂರೆಂಟು ಬಾರಿ ಕೇಳಿರುತ್ತೀರಿ, ತಪ್ಪಾಯ್ತು ಮಾತಾಡು ಅಂತ ಬೇಡಿರುತ್ತೀರಿ. ಅಯ್ಯೋ ಹಾಗೇನಿಲ್ಲಪ್ಪ, ಮಾತಾಡ್ತಾ ಇದ್ದಿನಲ್ಲ, ನಾ ಚೇಂಜ್ ಆಗಿಲ್ಲ ನೀ ಜಾಸ್ತಿ ಪೊಸೆಸಿವ್ ಆಗಿದ್ದೀಯ, ನನ್ನ ಕಂಟ್ರೋಲ್ ಮಾಡೋಕೆ ಟ್ರೈ ಮಾಡ್ಬೇಡ ಅನ್ನೋ ಉತ್ತರ ಬರೋದು ನಿಮ್ಮಿಂದ ಅವರಿಗೆ ಏನು ಬೇಕೋ ಅದು ಸಿಕ್ಕಿದಾಗ ಮಾತ್ರ. ಹಸಿದ ದೇಹದ ತೆವಲು ಒಂದೆರಡು ಬಾರಿ ಸುಮ್ಮನಾಗಿ ಸಂತೃಪ್ತವಾದಾಗ ಮಾತ್ರ, ಗಿಫ್ಟು, ಲಾಂಗ್ ಡ್ರೈವ್, ಮಬ್ಬು ಪಬ್ಬುಗಳ ಮಧ್ಯೆ ಮೈ ಕೈ ಅದುಮಿ ಸುಖ ಉಂಡಾಗ ಮಾತ್ರ, ದುಡ್ಡು ಕಾಸು ನಿಮ್ಮ ಖಾತೆಯಿಂದ ಹರಿದು ಅವರ ಜೇಬಿಗೆ ಸೇರಿ ನೀವು ಸೋತಾಗ ಮಾತ್ರ.

ಅದೇನೇ ಇರಲಿ ಆದರೂ ಒಂದು ಮೆಸೇಜ್ ಬಂದ್ರೆ ಸಾಕು ಅಂತ ಮನಸ್ಸು ಹಪ ಹಪಿಸುತ್ತದೆ ಅಲ್ಲವೇ. ಅದಕ್ಕಾಗಿ ಏನೇ ತೊಂದರೆ ಬಂದರೂ ಸಹಿಸಿಕೊಂಡು ಕಾಯ್ತಿರಾ ಏಕೆಂದ್ರೆ ಅವರೆಂದರೆ ನಿಮಗಿಷ್ಟ, ನಿಮಗೆ ಎಲ್ಲಿ ಕೋಪ ಮಾಡ್ಕೋತಾರೋ, ಜಗಳ ಆಗತ್ತೋ ಮಾತು ಬಿಟ್ ಬಿಡ್ತಾರೋ, ಬ್ಲಾಕ್ ಮಾಡಿದ್ರೆ ಕಷ್ಟ ಎಂಬಿತ್ಯಾದಿ ಕಿರಿ ಕಿರಿ ಕಷ್ಟಗಳಿದ್ರೂ ಅವರ ಮೆಸೇಜ್‌ಗಾಗಿ ಕಾಯ್ತಿರಾ. ಮುಂದೊಂದ್ ದಿನ ಮುಂಚಿನ ಹಾಗೆ ಮಾತಾಡ್ತಾರೆ, ಒಂದೊಮ್ಮೆ ಜಗಳವಾದರೂ ನೀವೇ ಸಾವಿರ ಬಾರಿ ಸಾರಿ ಕ್ಷಮಿಸಿ ತಪ್ಪಾಯ್ತು ಅಂತಲೇ ಅಂದು ಸಮಾಧಾನಿಸಿರುತ್ತೀರ. ಎಲ್ಲ ಸರಿ ಹೋಗುತ್ತೆ ಅನ್ನೋ ನಿರೀಕ್ಷೆ ತಪ್ಪಲ್ಲ ಬಿಡಿ. ಆದರೆ ಆ ಸದಾ ಆನ್‌ಲೈನ್ ಇರೋ ಆ ವ್ಯಕ್ತಿ ಬ್ಯುಸಿ. ಏನ್ಮಾಡ್ತೀರಾ ಹೇಳಿ. ಅದೆಷ್ಟು ತಾಳ್ಮೆ ಇದೆ ನಿಮ್ಮಲ್ಲಿ. ಅದೆಷ್ಟು ಕಣ್ಣೀರುಸುರಿಸ್ತಿರಾ ಬೇಕಾ ಇದೆಲ್ಲ ಅನ್ನೋ ನಿಮ್ಮ ಪ್ರಶ್ನೆಗೆ ನಿಮ್ಮ ಬಳಿಯೇ ಉತ್ತರವಿರಲ್ಲ ಬೇಕಾದರೆ ನಿಮ್ಮನ್ನ ನೀವೇ ಒಮ್ಮೆ ಪ್ರಶ್ನಿಸಿ ನೋಡಿ

ನೆನಪಿರಲಿ….
ಏನು ಮಾಡಿದ್ರು ಅವರಿಗದು ಅರ್ಥವಾಗದು. ಒಂದೊಮ್ಮೆ ಆರ್ಥವಾಗಿ ಅವರು ಮತ್ತೆ ನಿಮ್ಮ ಜೊತೆ ಸಂಭಾಷಣೆಗಿಳಿದ್ರೆ ಮುಂಚಿನಷ್ಟು ಸೊಗಸಾಗಿ ಸಲೀಸಾಗಿ ಗೆಳೆತನಮಾತು ಕಥೆ ಹರಟೆ ಇರೋಕೆ ಸಾಧ್ಯವೇ ಇಲ್ಲ ಬಿಡಿ. ನಿಮ್ಮದೂ ಒಂದು ವ್ಯಕ್ತಿತ್ವ ತಾನೇ. ಒಳ್ಳೆ ಮನಸಿರೋ ವ್ಯಕ್ತಿಯೇ ತಾನೇ. ಮತ್ತಿನ್ಯಾಕೆ ಕಾಯೋದು. ಅದೆಷ್ಟು ದುಃಖ ಪಡ್ತೀರಾ? ನೀವು ಅರ್ಹರೇ ಈ ನೋವಿಗೆ ಅನ್ನೋದನ್ನ ಯೋಚಿಸಿ ನೋಡಿ, ತಡವಿನ್ಯಾಕೆ? ಗುಜರಿಯಾದ ನಿಮ್ಮ ಹಳೆ ಹಾಳು ಪ್ರೇಮಕಥೆ ಯಾರಿಗೂ ಬೇಕಿಲ್ಲ ಇಲ್ಲಿ. ಪ್ರೇಮ ಕಾಮ ಪುರಾಣ ಮನೆ ಮನೆಯ ನೂರೆಂಟು ಮೊಬೈಲ್ನಲ್ಲಿರುತ್ತೆ ಇವಾಗ.

ನಿಮಗಾಗೆ ಅಲ್ಲಿ ಯಾರೋ ಕಾಯ್ತಿದ್ದಾರೆ ನೋಡಿ. ಸುತ್ತ ಮುತ್ತ ಆಸು ಪಾಸು ಗಮನಿಸಿ. ಫೇಸ್ಬುಕ್ಕಿನ ಮೆಸೆಂಜರ್ ನಡುವೆ ಸಣ್ಣದಾಗೊಂದು ಹಾಯ್ ಹೇಳಿ ನಕ್ಕ ಗೆಳೆಯನ/ ಗೆಳತಿಯ ಮೆಸೇಜ್ ನಿಮ್ಮ ಕಣ್ಣಿಗೆ ಕಾಣದ ಹಾಗೇ ಅದೆಲ್ಲೋ ಅಡಗಿರುವುದು ನಿಮ್ಮ ಕಣ್ಣಿಗೆ ಬಿದ್ದೀತು. ವಾಟ್ಸ್ಯಾಪಿನ ಚ್ಯಾಟ್ ಲಿಸ್ಟನ್ನ ಸ್ಕ್ರಾಲ್ ಮಾಡಿ. ಅದ್ಯಾರೋ ಹಳೆಯ ಸ್ನೇಹಿತ ಕಳುಹಿಸಿದ ಸೆಲ್ಫಿ, ಅದ್ಯಾರೋ ಸ್ನೇಹಿತೆ ಕಳುಹಿಸಿದ ಸಂದೇಶ, ಫ್ಯಾಮಿಲಿ ಗ್ರೂಪಿನಲ್ಲಿ ಬಂದ ಓದದೇ ಉಳಿದ ನೂರು ಮೆಸೇಜ್, ಬಾ ಮಗಾ ಪಾರ್ಟಿ ಮಾಡುವಾ ಅನ್ನೋ ಗೆಳೆಯನ ಅಕ್ಕರೆಯ ಕರೆ, ಲೋ ಶಿ ಇಸ್ ಗುಡ್ ಕಣೋ ಅಂತ ಕಿಕ್ ಗಾಸಿಪ್ ಇನ್ನೂ ಏನೇನೋ ಕಾಣ ಸಿಗಬಹುದು.

ರಿಲ್ಯಾಕ್ಸ್
ಜೀವನ ಅದ್ಯಾವುದೋ ಒಂದು ಅಡ್ಡಕಸುಬಿ ಆನ್ಲೈನ್ ನಲ್ಲಿದ್ದು ಮೆಸೇಜ್ ಮಾಡದೇ ಉಳಿದ ಸೋ ಕಾಲ್ಡ್ ವ್ಯಕ್ತಿಯ ನಡುವೆ ಉಳಿದು ಹೋಗುವಂಥದ್ದಲ್ಲ. ನಗಲು ನಗಿಸಲು ಬಹಳಷ್ಟು ವಿಷಯ ವಸ್ತುಗಳು ನಿಮ್ಮ ಅಕ್ಕ ಪಕ್ಕದಲ್ಲೇ ಇವೆ. ಸೋಷಿಯಲ್ ಮೀಡಿಯಾ ಮಾತ್ರ ನಿಮ್ಮ ಸಂತೋಷದ ಜೊತೆಗಾರ ಅನ್ನೋ ಆಲದಮರಕ್ಕೆ ನೇಣು ಹಾಕ್ಕೊಳ್ಳೋದು ಬಿಟ್ಟು ಹೊರಗೆ ಬಂದು ಬದುಕಿ ನೋಡಿ. ಒಂದದ್ಭುತವಾದ ನೀವ್ ಮರೆತಿರೋ ಲೋಕವನ್ನ ಸ್ಪರ್ಶಿಸಲು ಪ್ರಯತ್ನಿಸಿ. ಕಾಕನ ಟೀ ಅಂಗಡಿಯ ಬನ್ನು ಚಹಾ ಸವಿದು ಅದೆಷ್ಟು ದಿನವಾಗಿರಬಹುದು, ಜಯನಗರದ ಕಾಂಪ್ಲೆಕ್ಸಿನ ಹೊರಗಡೆ ಕೂತು ಕೈಗೆ ಗೋರಂಟಿ ಹಾಕಿಸಿ ಅದೆಷ್ಟು ಸಮಯ ಕಳೆದಿರಬಹುದು, ಮಲ್ಲೇಶ್ವರಂ ನಲ್ಲಿ ಶಾಪಿಂಗ್ ಮಾಡಿ ವರುಷಗಳೆಷ್ಟು ಕಳೆದುವೋ, ಪಕ್ಕದ ಮನೆಯ ತಾತನ ಕಂಡು ಬಹಳ ದಿನಗಳಾಗಿರಬೇಕಲ್ಲ. ಹಳೆಯ ಕ್ಲಾಸ್ ಮೇಟ್ ಗೆ ಒಂದು ಹಾಯ್ ಹೇಳಬಹುದಲ್ಲ, ರಾಗಿಗುಡ್ಡದ ಆಂಜನೆಯನಿಗೆ ಅಡ್ಡ ಬೀಳಬಹುದಲ್ಲ, ಕೊರಮಂಗಲದ ಗಲ್ಲಿ ಗಲ್ಲಿಯ ಹಾಟ್ ಹಾಟ್ ಹುಡುಗಿಯ ಬಿನ್ನಾಣ ಮರೆತಿರಬೇಕಲ್ಲ. ಅಯ್ಯೋ ಏನೇನೋ ಇದೆ ಗುರುವೇ ಜೀವನದಲ್ಲಿ. ಖುಷಿಯಾಗಿರಲು ಕಾರಣ ಬೇಕಾದಷ್ಟಿವೆ. ಹುಡುಕಿ ಆರಿಸಿ ಬಾಚಿ ತಬ್ಬಿಕೊಳ್ಳಬೇಕಷ್ಟೇ. ಮತ್ಯಾಕೆ ತಡ? ತಯಾರಾಗಿ, ಖುಷಿಯಾಗಿರಿ. ಗೆಲುವು ನಿಮ್ಮದಾಗಲಿ. ಹತಾಶೆ ದೂರವಾಗಲಿ. ಹೊಸ ಸಂಗಾತಿ ಬೇಗ ತೋಳ ತೆಕ್ಕೆಯಲ್ಲಿರಲಿ. ಇಷ್ಟಾದರೂ ಮತ್ತೆ ಗೊಂದಲವಿದ್ರೆ ಮೆಸೇಜ್ ಮಾಡಿ. ಮಾತಾಡೋಣ. ಅಳೋಣ, ಜತೆ ಜತೆಗೆ ನಗೋಣ.

Tags

Related Articles

Leave a Reply

Your email address will not be published. Required fields are marked *

Language
Close