About Us Advertise with us Be a Reporter E-Paper

ಅಂಕಣಗಳು

ಭಾರತ್ ಬಂದ್ ಕರೆಯಲ್ಲಿ ಹುರುಳಿದೆಯೇ?

ಇಂದು ಕಾಂಗ್ರೆಸ್, ಎಡಪಕ್ಷಗಳು ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಹೆಚ್ಚುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆಗೆ ವಿರೋಧ ವ್ಯಕ್ತಪಡಿಸಿ ಕೇಂದ್ರ ಸರಕಾರದ ವಿರುದ್ಧ ‘ಭಾರತ್ ಬಂದ್’ಗೆ ಕರೆಕೊಟ್ಟಿವೆ. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಒಂದಿಲ್ಲೊಂದು ರೀತಿಯಲ್ಲಿ ಕೇಂದ್ರ ಸರಕಾರ ಹಾಗೂ ಮೋದಿಯನ್ನು ಇಕ್ಕಟ್ಟಲ್ಲಿ ಸಿಲುಕಿಸಿ ಅವರ ಜನಪ್ರಿಯತೆ ಕುಗ್ಗಿಸಲು ಶತ ಪ್ರಯತ್ನ ಮಾಡುತ್ತಿವೆ. ಮೋದಿ ಸರಕಾರ ಅಸಹಿಷ್ಣುತೆಗೆ ಇಂಬು ಕೊಟ್ಟು ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ದೂರಿದ್ದಾಯ್ತು. ನೋಟ್ಯಂತರದಿಂದ ಗಣನೀಯವಾಗಿ ಕಪ್ಪು ಹಣ, ರಿಯಲ್ ಎಸ್ಟೇಟ್ ದಂಧೆ, ನಕಲಿ ನೋಟಿನ ಚಲಾವಣೆ ನಿಯಂತ್ರಣಕ್ಕೆ ಬಂದಿದ್ದರೂ ಬಡವರಿಗೆ ತೊಂದರೆ ಆಯಿತು, ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಕುಸಿದು ಬಿತ್ತು ಎಂದು ಬೊಬ್ಬೆ ಹೊಡೆಯಲಾಯಿತು. ಎ-ಆರ್‌ಡಿಐ ಮೂಲಕ ಮೋದಿ ನಾಗರಿಕರ ಬ್ಯಾಂಕ್ ಠೇವಣಿ ಏಮಾರಿಸುತ್ತಾರೆ ಎಂದು ಗುಲ್ಲೆಬ್ಬಿಸಿದ್ದಾಯ್ತು. ವಿಜ್ಞಾನ ಕೇಂದ್ರಗಳಿಗೆ ಮತ್ತು ಅಧ್ಯಯನ ಸಂಸ್ಥೆಗೆ ಅನುದಾನ ನೀಡುತ್ತಿಲ್ಲ ಎಂದು ಧರಣಿ ಮಾಡಿದ್ದಾಯ್ತು. ಮೋದಿ ಕೋಟ್ಯಂತರ ರುಪಾಯಿ ಜನರ ದುಡ್ಡನ್ನು ಜಾಹೀರಾತಿಗೆ ವ್ಯಯಿಸಿ ದೇಶ ದ್ರೋಹ ಮಾಡಿದ್ದಾರೆ ಎಂದು ಅಪಪ್ರಚಾರ ಮಾಡಿದ್ದಾಯ್ತು…ಈಗ ಇಂಧನ ಬೆಲೆ. ತಮ್ಮ ಹಲವು ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವ ಸಲುವಾಗಿ ಪ್ರಜ್ಞಾವಂತರು, ಬುದ್ಧಿಜೀವಿಗಳೂ ಈ ಅಪಪ್ರಚಾರಕ್ಕೆ ಕೈ ಜೋಡಿಸುತ್ತಿದ್ದಾರೆ. ಮತ್ತೂ ಹಲವರು ವಾಸ್ತವ ಸಂಗತಿಗಳ ಅರಿವಿದ್ದೂ ಮೌನವಾಗಿದ್ದಾರೆ.

ಸದ್ಯ, ಜಾಗತಿಕ ಮಟ್ಟದಲ್ಲಿ ಡಾಲರ್ ಎದುರು ಹಲವು ಕಾರಣಗಳಿಂದ ರುಪಾಯಿ ಮೌಲ್ಯ ಕುಸಿದಿದೆ. ಇದು ಹೊಸದೇನಲ್ಲ. ಸಿಂಗ್, ಪಿ.ವಿ. ನರಸಿಂಹರಾಯರ ಕಾಲದಲ್ಲೂ ರುಪಾಯಿ, ಡಾಲರ್ ಎದುರು ಈ ರೀತಿ ಕುಸಿತ ಕಂಡಿತ್ತು. ಹಾಗೆ ನೋಡಿದರೆ ಡಾಲರ್ ಎದುರು ಸ್ವಾತಂತ್ಯ್ರಾ ನಂತರ ನಮ್ಮ ಕರೆನ್ಸಿ ನಿರಂತರವಾಗಿ ಕುಸಿಯುತ್ತಲೇ ಹೋಗಿದೆ. 2007ರಲ್ಲಿ ಡಾಲರ್ ಎದುರು ೩೯ ರೂಪಾಯಿ ಇದ್ದ ಬೆಲೆ ಒಂದೇ ವರುಷದಲ್ಲಿ ೫೧ಕ್ಕೆ ಕುಸಿಯಿತು. 2012ರಲ್ಲಿ ಅದು ೫೬ಕ್ಕೆ ಕುಸಿಯಿತು. ಸುಮಾರು ಇದೇ ಸಮಯದಲ್ಲಿ ಐದು ವರ್ಷದ ಹಿಂದೆ ಆಗಸ್ಟ್ ೨೦೧೩ರಲ್ಲಿ ರುಪಾಯಿ ಬೆಲೆ ಅಂದಿನ ಅತಿ ಗರಿಷ್ಠ ಕುಸಿತ ಕಂಡು ೬೮.೮೫ಕ್ಕೆ ಮುಟ್ಟಿತ್ತು. ಒಂದೇ ದಿನ ವಿದೇಶಿ ಹೂಡಿಕೆದಾರರು ಒಂದು ಶತಕೋಟಿ ಡಾಲರ್‌ಗೂ ಹೆಚ್ಚು ಹೂಡಿಕೆಯನ್ನು ಶೇರು ಮಾರುಕಟ್ಟೆಯಿಂದ ಹಿಂದೆ ತೆಗೆದಿದ್ದರು. ಎಂಟು ತಿಂಗಳ ಅವಽಯಲ್ಲಿ ೪.೬ ಶತಕೋಟಿ ಡಾಲರ್‌ಗೂ ಹೆಚ್ಚು ಪ್ರಮಾಣದ ಭಾರತೀಯ ಶೇರುಗಳನ್ನು ವಿದೇಶಿ ಬಂಡವಾಳಗಾರರು ಮಾರಿದ್ದರು. ಆಗ ಪ್ರಧಾನಿಗಳಾಗಿದ್ದವರು ಯಾರು? ಕಾಂಗ್ರೆಸ್‌ನ ಖ್ಯಾತ ಅರ್ಥಶಾಸಜ್ಞರೂ, ರಿಸರ್ವ್ ಬ್ಯಾಂಕ್ ಮಾಜಿ ಗವನರ್ರ್‍ ಸಹ ಆಗಿದ್ದ ಮನಮೋಹನ್ ಸಿಂಗ್ ಅವರೇ ಅಲ್ಲವೇ? ಆಗ ಅವರೇ ‘ಎಲ್ಲಾ ಒಂದಾಗಿ ಸಂಕಷ್ಟದ ಸಮಯದಿಂದ ಭಾರತವನ್ನು ಹೊರತರೋಣ’ ಎಂದು ಕರೆ ನೀಡಿರಲಿಲ್ಲವೇ?

ಇದೇ ರೀತಿಯಲ್ಲಿ ಕಳೆದ ೧೦ ವರ್ಷಗಳಲ್ಲಿ ಬದಲಾಗಿರುವ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನೂ ತುಲನೆ ಮಾಡಿ ನೋಡಿ. ೨೦೦೪-೦೯ರ ಯುಪಿಎ ಆಡಳಿತಾವಽಯ ಮೊದಲ ಅವಽಯಲ್ಲಿ ಒಂದು ಲೀಟರ್ ಪೆಟ್ರೋಲ್ ದರ ರು. ೩೫ರಿಂದ ೪೪ಕ್ಕೆ ಏರಿತು. ಒಂದು ಲೀಟರ್ ಡೀಸೆಲ್ ದರ ರು.೨೨ರಿಂದ ರೂ.೩೧ಕ್ಕೆ ಏರಿತು. ೨೦೦೯-೧೪ರ ಎರಡನೇ ಅವಽಯಲ್ಲಿ ಪೆಟ್ರೋಲ್ ದರ ರು. ೪೪ ರಿಂದ ರು. ೭೨ಕ್ಕೆ ಏರಿತು. ಡೀಸೆಲ್ ದರ ರು.೩೧ ರಿಂದ ರು.೫೬ಕ್ಕೇರಿತು. ಮೋದಿ ಅಽಕಾರಾವಽಯ ನಾಲ್ಕು ವರ್ಷಗಳಲ್ಲಿ ವಾಸ್ತವವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಮುಖವಾಗಿಯೇ ಇತ್ತು. ಪೆಟ್ರೋಲ್ ದರ ಲೀಟರೊಂದಕ್ಕೆ ರು.೭೨ರಿಂದ ೫೯ಕ್ಕೆ ಇಳಿದಿತ್ತು. ಹಾಗೆಯೇ ಡೀಸೆಲ್ ದರ ಕೂಡ ಲೀಟರ್‌ಗೆ ರು.೫೬ ರಿಂದ ರು.೪೯ಕ್ಕೆ ಇಳಿದಿತ್ತು. ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಗಣನೀಯ ಏರಿಕೆ ಉಂಟಾಗಿದೆ. ಸಹಜವಾಗಿ ಅದರ ಪರಿಣಾಮ ಗ್ರಾಹಕರ ಮೇಲೂ ಆಗಿದೆ. ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಅಡುಗೆ ಅನಿಲದ ದರ ಹೆಚ್ಚಾದಂತೆ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಾಗುತ್ತದೆ. ಹಣದುಬ್ಬರವನ್ನು ತಡೆಗಟ್ಟಲು ಆರ್‌ಬಿಐ ಸಾಲದ ಮೇಲಿನ ಬಡ್ಡಿಯನ್ನು ಹೆಚ್ಚಳ ಮಾಡುವ ಒತ್ತಡಕ್ಕೆ ಸಿಲುಕುತ್ತದೆ. ಇದರಿಂದ ಸಾಲ ಪಡೆಯುವುದು ದುಬಾರಿಯಾಗಿ ಬಂಡವಾಳ ಹೂಡಿಕೆ ಕುಂಠಿತಗೊಳ್ಳುತ್ತದೆ. ಇದೆಲ್ಲಾ ಒಪ್ಪಬೇಕಾದ್ದೇ! ಜಾಗತಿಕ ವಿದ್ಯಮಾನಗಳು, ಆರ್ಥಿಕ ಏರಿಳಿತಗಳು, ಟ್ರಂಪ್ ನಿರ್ಬಂಧ, ಚೀನಾ ಹಸ್ತಕ್ಷೇಪ ಇವೆಲ್ಲದರ ಅರಿವಿದ್ದೂ ಇದಕ್ಕೆಲ್ಲಾ ನೇರವಾಗಿ ಮೋದಿಯೇ ಹೊಣೆ ಎನ್ನುವುದರಲ್ಲಿ ಯಾವ ಅರ್ಥವಿದೆ?

ಇದರ ಜೊತೆಗೆ ಕೆಲವು ಸುದ್ದಿ ವಾಹಿನಿಗಳಲ್ಲಿ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಮೋದಿ ಅವರ ಸರಕಾರ ದೇಶದ ಜನರಿಗೆ ಮಾರುತ್ತಿರುವ ದುಬಾರಿ ಬೆಲೆಯ ಅರ್ಧದಷ್ಟು ಬೆಲೆಗೆ ಸಂಸ್ಕರಿತ ಪೆಟ್ರೋಲಿಯಂ ಉತ್ಪನ್ನಗಳನ್ನು ಹೊರದೇಶಕ್ಕೆ ಮಾರಿ ದೇಶವಾಸಿಗಳಿಗೆ ದ್ರೋಹ ಬಗೆಯುತ್ತಿದೆ ಎಂದು ವ್ಯಾಪಕ ಅಪಪ್ರಚಾರ ಮಾಡಲಾಗುತ್ತಿದೆ. ಇದಕ್ಕೆ ಮಾಹಿತಿ ಹಕ್ಕು ಕಾಯಿದೆಯಡಿ ಪಡೆದ ದಾಖಲೆಯೊಂದನ್ನು ಆಧಾರವಾಗಿ ನೀಡಲಾಗುತ್ತಿದೆ. ಸರಕಾರಿ ಸ್ವಾಮ್ಯದ ‘ಮಂಗಳೂರು ಪೆಟ್ರೋಕೆಮಿಕಲ್ಸ್ ಮತ್ತು ರಿ-ನರಿ’ ನೀಡಿರುವ ಆ ಮಾಹಿತಿ ಪ್ರಕಾರ ಸರಕಾರ ಜನವರಿಯಿಂದ ಜೂನ್ ೨೦೧೮ರವರೆಗೆ ಹಾಂಗ್‌ಕಾಂಗ್, ಮಲೇಶಿಯಾ, ಸಿಂಗಪುರ, ಮಾರಿಶಸ್ ಮತ್ತು ಯುಎಇಗಳಿಗೆ ಸಂಸ್ಕರಿತ ಪೆಟ್ರೋಲ್ ಮತ್ತು ಡೀಸೆಲನ್ನು ಕ್ರಮವಾಗಿ ಲೀಟರ್‌ಗೆ ರು. ೩೨-೩೪ ದರದಂತೆ ಮತ್ತು ಡೀಸೆಲ್‌ನನ್ನು ರು.೩೪-೩೬ ದರದಲ್ಲಿ ಮಾರಾಟ ಮಾಡಲಾಗಿದೆ. ಇದೇ ಅವಽಯಲ್ಲಿ ಪೆಟ್ರೋಲ್ ಬೆಲೆ ೬೯-೭೫ ಮತ್ತು ಡೀಸೆಲ್ ಬೆಲೆ ೫೯-೬೭ರುಪಾಯಿಗಳ ದರದಲ್ಲಿ ದೇಶವಾಸಿಗಳು ಪೆಟ್ರೋಲ್, ಡೀಸೆಲ್ ಕೊಂಡಿದ್ದಾರೆ. ಹೀಗಾಗಿ ದೇಶದ ನಾಗರಿಕರಿಗೆ ದುಬಾರಿ ದರದಲ್ಲಿ ಪೆಟ್ರೋಲ್, ಡೀಸೆಲ್ ನೀಡಿ, ಅರ್ಧ ಬೆಲೆಗೆ ಹೊರದೇಶಗಳಿಗೆ ಸರಕಾರ ಪೆಟ್ರೋಲಿಯಂ ಉತ್ಪನ್ನಗಳನ್ನು ಮಾರಿಕೊಳ್ಳುತ್ತಿದೆ ಎಂದು ಕೆಲವು ಪ್ರಜ್ಞಾವಂತರೇ ಬೊಬ್ಬೆ ಹೊಡೆಯುತ್ತಿದ್ದಾರೆ.

ವಾಸ್ತವವಾಗಿ ಭಾರತ ಪೆಟ್ರೋಲ್ ಮತ್ತು ಡೀಸೆಲ್‌ನ್ನು ಹೊರದೇಶದಿಂದ ಅಮದು ಮಾಡಿಕೊಂಡರೂ ಸಹ ಆ ಕಚ್ಚಾತೈಲವನ್ನು ಸಂಸ್ಕರಿಸುವ ಪ್ರತಿಷ್ಠಿತ ತಂತ್ರಜ್ಞಾನವನ್ನು ಹೊಂದಿದೆ. ಸುಮಾರು ೧೫ಕ್ಕೂ ಹೆಚ್ಚು ಸಂಸ್ಕರಣ ಘಟಕಗಳು ಭಾರತದಲ್ಲಿವೆ. ಗುಜರಾತ್‌ನ ‘ಜಾಮ್‌ನಗರ್ ರಿ-ನರೀಸ್’ ಪ್ರಪಂಚದ ಅತ್ಯುತ್ತಮ ಸಂಸ್ಕರಣ ಘಟಕಗಳಲ್ಲಿ ಒಂದು ಎಂದು ಹೆಸರು ಪಡೆದಿದೆ. ಹಾಗಾಗಿ ಸಂಸ್ಕರಿತ ತೈಲ ಭಾರತದ ಪ್ರಮುಖ ರ-ಗಳಲ್ಲಿ ಒಂದಾಗಿದೆ. ಕಚ್ಚಾತೈಲವನ್ನು ರ- ಮಾಡುವ ಇರಾಕ್, ಯುಎಇಗೇ ಭಾರತ ಸಂಸ್ಕರಿತ ತೈಲವನ್ನು ವಾಪಸ್ ರ- ಮಾಡುತ್ತದೆ. ಕಳೆದ ವರ್ಷ ಭಾರತ, ಯುಕೆ, ಆಸ್ಟ್ರೇಲಿಯ, ಅಮೆರಿಕ ಸೇರಿದಂತೆ ಹೊರದೇಶಗಳಿಗೆ ೨೪.೧ ಶತಕೋಟಿ ಡಾಲರ್‌ನಷ್ಟು ಸಂಸ್ಕರಿತ ತೈಲವನ್ನು ರ- ಮಾಡಿದೆ. ಈಗ ವಾಪಸ್ ಲೆಕ್ಕಾಚಾರಕ್ಕೆ ಬರೋಣ. ಒಂದು ಬ್ಯಾರೆಲ್ ಕಚ್ಚಾ ತೈಲ ೧೫೯ ಲೀಟರ್ ತೈಲಕ್ಕೆ ಸಮ. ಆಗಸ್ಟ್ ೨೦ ರಂದು ಇದ್ದ ದರದಂತೆ ಲೆಕ್ಕ ಹಾಕಿದರೆ ( ಸಾಗರ ಸಾಗಣೆ, ತೆರಿಗೆ ಎಲ್ಲಾ ಸೇರಿ) ಒಂದು ಲೀಟರ್ ಕಚ್ಚಾತೈಲದ ಬೆಲೆ ರು. ೩೫.೯೦ ಹಾಗೂ ಕಚ್ಚಾ ಡೀಸೆಲ್ ಬೆಲೆ ರು. ೩೮.೨೫ ಆಗುತ್ತದೆ. ಸಂಸ್ಕರಣೆಯ ನಂತರ ಆ ವೆಚ್ಚವನ್ನು ಸೇರಿ ಇಂಡಿಯನ್ ಆಯಿಲ್ ಕಂಪನಿ ಸರಬರಾಜುದಾರರಿಗೆ ಬೆಲೆ ರು. ೩೭.೯೩ ಮತ್ತು ರೂ. ೪೧.೦೪ಕ್ಕೆ ಕ್ರಮವಾಗಿ ಪೆಟ್ರೋಲ್, ಡೀಸೆಲನ್ನು ವಿತರಿಸುತ್ತದೆ. ಆದರೆ ದೆಹಲಿಯಲ್ಲಿ ಎಕ್ಸೈಸ್ ಸುಂಕ ( ೧೯.೪೮), ಡೀಲರ್ ಕಮಿಶನ್ (ರು. ೩.೬೧), ವ್ಯಾಟ್ (ರು. ೧೧೬.೪೭) ಸೇರಿ ಲೀಟರ್ ಪೆಟ್ರೋಲ್ ಬೆಲೆ ರು. ೭೭.೪೯ ಆದರೆ ಡೀಸೆಲ್ ಬೆಲೆ ಲೀಟರ್‌ಗೆ ರು. ೬೯.೦೪ ಆಗುತ್ತದೆ. ಈ ಭಾರೀ ತೆರಿಗೆಗಳಿಲ್ಲದೆ ಸಾಗಣೆ ವೆಚ್ಚದೊಂದಿಗೆ ಹೊರದೇಶಗಳಿಗೆ ರ-ಗುವ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಸಹಜವಾಗಿ ಸುಮಾರು ಅರ್ಧದಷ್ಟು ಕಡಿಮೆಯೇ ಇರುತ್ತದೆ.

ಈ ಸಾಮಾನ್ಯ ಪ್ರeಯೂ ಇಲ್ಲದೆ ಮೋದಿ, ನಾಗರಿಕರಿಗೆ ವಿತರಿಸುತ್ತಿರುವ ಅರ್ಧ ಬೆಲೆಗೆ ಪೆಟ್ರೋಲ್ ಮತ್ತು ಡೀಸೆಲನ್ನು ಹೊರದೇಶಗಳಿಗೆ ಮಾರಿಕೊಳ್ಳುತ್ತಿದ್ದಾರೆ ಎಂದು ಬೊಬ್ಬೆ ಹೊಡೆಯುವುದಲ್ಲಿ ಯಾವ ಅರ್ಥವಿದೆ? ಇಂತಹ ಸತ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಾದ್ದು ಪ್ರಜ್ಞಾವಂತರ ಮತ್ತು ಸುದ್ದಿ ವಾಹಿನಿಗಳ ಕರ್ತವ್ಯವಲ್ಲವೇ? ತಮ್ಮ ಅಸ್ತಿತ್ವಕ್ಕೆ, ಟಿಆರ್‌ಪಿಗೆ ಏನು ಬೇಕಾದರೂ ವದರಿ ದೇಶದ ಜನರ ಕಣ್ಣಿಗೆ ಮಣ್ಣೆರೆಚಬಹುದಾ? ಇದೂ ದೇಶದ್ರೋಹವೇ ಅಲ್ಲವಾ? ಈಗ ಹೇಳಿ ಯಾರ ವಿರುದ್ಧ ಬಂದ್ ಮಾಡಬೇಕು? ಯಾರ ಬಾಯಿ ಬಂದ್ ಆಗಬೇಕು? ಈಗ ವಿನಾಕಾರಣ ಬಂದ್ ಮಾಡಿ ಜನರನ್ನು ತೊಂದರೆಗೆ ಸಿಲುಕಿಸುವಲ್ಲಿ ಯಾವ ಅರ್ಥವಿದೆ? ಪೆಟ್ರೋಲ್ ಡೀಸೆಲ್ ಬೆಲೆ ನಿಯಂತ್ರಣ ನಿಜವಾಗಿಯೂ ರಾಜ್ಯ ಸರಕಾರಗಳ ಕೈಲಿಲ್ಲವಾ? ತೆರಿಗೆ ಅವರೇ ಕಡಿಮೆ ಮಾಡಬಹುದಲ್ಲವೇ? ಭಾರತ ಬಂದ್ ಮಾಡಿ ಜನಜೀವನ ಅಸ್ತವ್ಯಸ್ತಗೊಳಿಸುವ ಬದಲು ಒಂದಷ್ಟು ದಿನ ಮಂತ್ರಿಗಳು, ಅಽಕಾರಿಗಳು, ಸಿರಿವಂತರು ಖಾಸಗಿ ವಾಹನ ಬಂದ್ ಮಾಡಿ ಸಾರ್ವಜನಿಕ ವಾಹನಗಳನ್ನು ಬಳಸಬಹುದಲ್ಲವೇ? ದೇಶದ ಸಂಕಷ್ಟದ ಸ್ಥಿತಿಯಲ್ಲಿ ಪರಸ್ಪರ ದೂರುತ್ತಾ ಬಂದ್ ಮಾಡುತ್ತಾ ದೇಶದ ಆರ್ಥಿಕತೆಯನ್ನು ಮತ್ತಷ್ಟು ಹದಗೆಡಿಸಿಯಾದರೂ ರಾಜಕೀಯ ಮಾಡಲೇಬೇಕು ಎನ್ನುವ ಕೆಟ್ಟ ಹಂಬಲವಾದರೂ ಯಾಕೆ?

Tags

Related Articles

Leave a Reply

Your email address will not be published. Required fields are marked *

Language
Close