ವಿಶ್ವವಾಣಿ

ವೇದದಲ್ಲಿ ಇದೆಯೇ? ಹಾಗಾದರೆ ವಿರೋಧಿಸಿ!

ಎರಡು ವಾರದ ಹಿಂದೆ ಒಬ್ಬರು ಶಿಕ್ಷಕರು ಮಾತಿಗೆ ಸಿಕ್ಕಿದರು. ಮಾತಿನ ಮಧ್ಯೆ ಒಂದು ಪ್ರಸಂಗವನ್ನು ಬಹಳ ದುಃಖದಿಂದ ಹೇಳಿಕೊಂಡರು. ಅವರ ಶಾಲೆಯಲ್ಲಿ ಬಿಸಿಯೂಟದ ಏರ್ಪಾಟು ಇದೆಯಂತೆ. ಎಲ್ಲ ಮಕ್ಕಳನ್ನೂ ಶಾಲೆಯ ವರಾಂಡದಲ್ಲಿ ಸಾಲಾಗಿ ಕೂರಿಸಿ ಊಟ ಬಡಿಸಲಾಗುತ್ತದಂತೆ. ಅನ್ನ ಬಡಿಸಿದ ಮೇಲೆ ವಿದ್ಯಾರ್ಥಿಗಳು ಒಕ್ಕೊರಲಿನಿಂದ

ಓಂ ಸಹನಾವವತು ಸಹನೌಭುನಕ್ತು ಸಹವೀರ್ಯಂ ಕರವಾವಹೈ

ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ ॥

ಓಂ ಶಾಂತಿಃ ಶಾಂತಿಃ ಶಾಂತಿಃ

ಎಂಬ ಶಾಂತಿ  ಹೇಳಿ ಉಣ್ಣಲು ಕೈಹಚ್ಚುವ ಕ್ರಮ ಇಟ್ಟುಕೊಂಡಿದ್ದರಂತೆ. ಎಲ್ಲವೂ ಸರಿಯಾಗಿಯೇ ನಡೆಯುತ್ತಿತ್ತು. ಅಷ್ಟರಲ್ಲಿ ಒಂದು ದಿನ ಶಾಲಾ ತಪಾಸಣೆಗೆಂದು ಶಿಕ್ಷಣ ಇಲಾಖೆಯಿಂದ ಅಧಿಕಾರಿಯೊಬ್ಬ ಬಂದ. ಬಂದವನು ಮಧ್ಯಾಹ್ನದ ಊಟದ ಸಮಯದಲ್ಲೂ ಇದ್ದ. ಎಂದಿನಂತೆ ಅಂದೂ ಹುಡುಗರು ಸಾಲಾಗಿ ಊಟಕ್ಕೆ ಕೂತು, ಉಣ್ಣುವ ಮೊದಲು ಶಾಂತಿಮಂತ್ರ ಹೇಳಿದರು. ಇದರಿಂದ ಅಧಿಕಾರಿಯ ಕಣ್ಣು ಕೆಂಪಾಯಿತು. ಏನ್ರೀ? ಇದೇನು ಉಡುಪಿ ಮಠ ಅಂತ ಮಾಡಿದ್ದೀರಾ? ಅಥವಾ ಧರ್ಮಸ್ಥಳದ ಧರ್ಮಛತ್ರ ಅಂತ ತಿಳಿದಿದ್ದೀರಾ? ಸರಕಾರದ ಅನ್ನ  ಇಲ್ಲಿ ಬ್ರಾಹ್ಮಣರ ಮಂತ್ರ ಹೇಳಿಸ್ತಾ ಇದೀರಾ? ನಿಮಗೇನು ತಲೆಯಲ್ಲಿ ಸೆಗಣಿ ತುಂಬಿದೆಯೇನ್ರೀ? ಎಂದು ಶಾಲೆಯ ಮುಖ್ಯೋಪಾಧ್ಯಾಯರಿಗೆ ಜೋರಾಗಿ ದಬಾಯಿಸಿ ಒಂದು ಮೆಮೋ ಗೀಚಿದ. ಹಾಗೆಯೇ, ಮೇಲಧಿಕಾರಿಗಳಿಗೆ ಈಗಿಂದೀಗಲೇ ಈ ಬಗ್ಗೆ ವರದಿ ಮಾಡುತ್ತೇನೆ ಎಂದು ಕಿರುಚಾಡಿ ಹಾರಾಡಿ ಹೊಟುಹೋದ. ಹೋದವನು ತಾನು ಹೇಳಿದ್ದನ್ನು ಮಾಡಿಯೇ ಮಾಡಿದ್ದ. ಒಂದು ವಾರದೊಳಗಾಗಿ ಮುಖ್ಯೋಪಾಧ್ಯಾಯರಿಗೆ ನೋಟೀಸ್ ಜಾರಿಯಾಯಿತು. ನೀವು ಬಿಸಿಯೂಟದ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಜಾತ್ಯತೀತ ವ್ಯವಸ್ಥೆಯಲ್ಲಿ ಕೋಮುವಾದಿ ವಿಷ ಹರಡುತ್ತಿದ್ದೀರಿ. ವೈದಿಕಶಾಹಿಗೆ  ಕುಮ್ಮಕ್ಕು ಕೊಡುತ್ತಿದ್ದೀರಿ. ನಿಮ್ಮ ದುರ್ವರ್ತನೆಗೆ ಶಿಕ್ಷಣ ಇಲಾಖೆ ಯಾಕೆ ಕಠಿಣ ಕ್ರಮ ಕೈಗೊಳ್ಳಬಾರದು ಎಂದು ನೀವು ಒಂದು ವಾರದೊಳಗಾಗಿ ಸಮಜಾಯಿಷಿ ಕಳಿಸಿಕೊಡತಕ್ಕದ್ದು! ಎಂದು ನೊಟೀಸ್ ಅವರಿಗೆ ಎಚ್ಚರಿಕೆ ಕೊಟ್ಟಿತು. ಅವತ್ತಿನಿಂದ ನಮ್ಮ ಶಾಲೆಯಲ್ಲಿ ಊಟದ ಪ್ರಾರ್ಥನೆ ನಿಂತಿತು ಸಾರ್ ಎಂದರು ಆ ಶಿಕ್ಷಕರು ಬಹಳ ಬೇಸರದಿಂದ.

ಎಂತಹ ದುರಂತ ನೋಡಿ! ನಮ್ಮ ದೇಶ ಸೃಷ್ಟಿಸಿದ ಸಂಸ್ಕೃತ ಸಾಹಿತ್ಯವನ್ನು ಒಟ್ಟುಹಾಕಿದರೆ ಅದು ಈ ಜಗತ್ತಿನ ಉಳಿದೆಲ್ಲ ನಾಗರಿಕತೆಗಳು ಸೃಷ್ಟಿಸಿದ ಎಲ್ಲ  ಹೆಚ್ಚು – ಗುಣಮಟ್ಟದಲ್ಲೂ ಗಾತ್ರದಲ್ಲೂ. ಒಂದಾನೊಂದು ಕಾಲದಲ್ಲಿ ಈ ದೇಶದಲ್ಲಿ ಸಂಸ್ಕೃತ ಜನಸಾಮಾನ್ಯರ ಭಾಷೆಯಾಗಿತ್ತು. ಕೇರಳದ ಶ್ರೀಸಾಮಾನ್ಯನೊಬ್ಬ ಕಾಶ್ಮೀರದ ವೈಷ್ಣೋದೇವಿಯ ದೇಗುಲದವರೆಗೂ ಯಾವ ಭಾಷಾಸಮಸ್ಯೆ ಇಲ್ಲದೆ ಪ್ರವಾಸ ಮಾಡಬಹುದಾದ ಅನುಕೂಲ ಇತ್ತು. ಯಾಕೆಂದರೆ ಇಡೀ ದೇಶವೇ ಒಂದು ಭಾಷೆಯನ್ನು ಆಡುತ್ತಿತ್ತು, ಅರ್ಥ ಮಾಡಿಕೊಳ್ಳುತ್ತಿತ್ತು. ಸಂಸ್ಕೃತದ್ದೇ ಅಪಭ್ರಂಶಗಳಾದ ಶೌರಸೇನಿ, ಪ್ರಾಕೃತ, ಮಾಗಧಿ, ಅರ್ಧಮಾಗಧಿ, ಪೈಶಾಚೀ ಮುಂತಾದ ಹಲವು ಹತ್ತು ಭಾಷೆಗಳು ಕಾಲಾಂತರದಲ್ಲಿ ಬದಲಾವಣೆ ಹೊಂದಿ ಇಂದಿನ ಭಾರತೀಯ ಭಾಷೆಗಳಾದವು. ಹಾಗಾಗಿಯೇ  ಸಂಸ್ಕೃತದ ಶಬ್ದಭಂಡಾರವನ್ನೂ ವ್ಯಾಕರಣವನ್ನೂ ಮರೆಯದೆ ಬಳಸುತ್ತಿವೆ. ಮೆಕಾಲೆ ಈ ದೇಶದಲ್ಲಿ ಹೊಸ ಶಿಕ್ಷಣ ಪದ್ಧತಿಯನ್ನು ಪ್ರಾರಂಭಿಸಬೇಕೆಂದು ಹೊರಟಾಗ ಮೊಟ್ಟಮೊದಲು ಮಾಡಿದ ಕೆಲಸ ಏನು ಎಂದರೆ ದೇಶದಲ್ಲಿ 15,000ದಷ್ಟಿದ್ದ ಗುರುಕುಲಗಳನ್ನು ಮುಚ್ಚಿಸಿದ್ದು. ಸಂಸ್ಕೃತದ ಹೆದ್ದಾರಿಯನ್ನು ಶಾಶ್ವತವಾಗಿ ಕ್ಲೋಸ್ ಮಾಡಿಸಿದ್ದು. ಇಂಗ್ಲೀಷ್ ಒಂದೇ ಅನ್ನದ ಭಾಷೆ ಎಂಬ ಅನಿವಾರ್ಯತೆಯನ್ನು ಸೃಷ್ಟಿಸಿದ್ದು. ವಿದ್ಯಾವಂತರ ಬದಲು ಕಾರಕೂನರನ್ನು ತಯಾರು ಮಾಡಿದ್ದು. ಬ್ರಿಟಿಷರು ಕಟ್ಟಿದ ಕಾಲೇಜುಗಳು, ಯೂನಿವರ್ಸಿಟಿಗಳು ಡಿಗ್ರಿ ಕೊಟ್ಟವೇ ಹೊರತು ವಿದ್ಯೆ ಕೊಡಲಿಲ್ಲ. ಸ್ವಲ್ಪ  ಸ್ವಲ್ಪ ಗಣಿತ, ಸ್ವಲ್ಪ ಇತಿಹಾಸ, ಸ್ವಲ್ಪ ಎಕನಾಮಿಕ್‌ಸ್ ಎನ್ನುತ್ತ ಎಲ್ಲವನ್ನೂ ಸ್ವಲ್ಪ ಸ್ವಲ್ಪ ಬಡಿಸಿ ಕೊಟ್ಟ ಪ್ಲೇಟ್ ಮೀಲ್‌ಸ್ನಿಂದ ರೂಪುಗೊಂಡದ್ದು ಯಾರು ಎಂದರೆ ಬ್ರಿಟಿಷರ ಸರಕಾರೀ ಇಲಾಖೆಗಳಲ್ಲಿ ದಫ್ತರಗಳಲ್ಲಿ ಸಂಖ್ಯೆಗಳನ್ನು ತುಂಬಿಸುವ ಗುಮಾಸ್ತರು ಮಾತ್ರ. ಸಂಸ್ಕೃತವನ್ನು ಗೋಣಿಯಲ್ಲಿ ಕಟ್ಟಿ ಬಿಗಿದು ಅಟ್ಟಕ್ಕೊಗೆದುಬಿಟ್ಟೆವು ನಾವೆಲ್ಲ. ಇದು ದುರಂತ ಅಲ್ಲವಾದರೆ ಇನ್ನಾವುದು?

ಊಟಕ್ಕೆ ಕೂರುವ ಮೊದಲು ಹೇಳುವ ಶಾಂತಿಮಂತ್ರದ ನಿಜವಾದ ಅರ್ಥ ಏನು? ದೇವರು ನಮ್ಮನ್ನು ಕಾಪಾಡಲಿ, ನಾವು ಕೂಡಿಯೇ ಉಣ್ಣುವಾ,  ದುಡಿಯುವಾ, ಕೂಡಿಯೇ ಬೆಳೆಯುವಾ, ನಮ್ಮಲ್ಲೆಂದೂ ದ್ವೇಷದ ವಿಷಗಾಳಿ ಸುಳಿಯದಿರಲಿ – ಇಷ್ಟೇ! ಕೃಷ್ಣ ಯಜುರ್ವೇದಕ್ಕೆ ಸೇರಿದ ತೈತ್ತಿರೀಯ ಉಪನಿಷತ್ತಿನಲ್ಲಿ ಬರುವ ಈ ಮಂತ್ರ ಗುರು-ಶಿಷ್ಯರ ನಡುವಿನ ಮಧುರ ಸಂಬಂಧಕ್ಕೊಂದು ಮಧುರ ಭಾಷ್ಯ. ಗುರು ತನ್ನ ಶಿಷ್ಯನ ಕೂಡೇ ಕೂತು ಹೇಳುತ್ತಿದ್ದಾನೆ – ನಾವಿಬ್ಬರೂ ಜೊತೆಯಾಗಿ ಜ್ಞಾನಮಾರ್ಗದಲ್ಲಿ ಸಾಗೋಣ! ನಮ್ಮಿಬ್ಬರ ನಡುವೆ ಅನ್ಯೋನ್ಯ ಇರಲಿ, ಸೌಹಾರ್ದ ಮಾಯವಾಗದಿರಲಿ! ನಮಗೆಲ್ಲ ಗೊತ್ತಿರುವಂತೆ ಪ್ರಾಚೀನ ಕಾಲದ ಗುರುಗಳು ಕೇವಲ ಗುರುಗಳಾಗಿರಲಿಲ್ಲ; ಮಹಾಋಷಿಗಳೇ ಆಗಿದ್ದರು.  ಅರೆದು ಕುಡಿದಿದ್ದರು. 64 ವಿದ್ಯೆಗಳಲ್ಲಿ ಪರಿಣಿತರಾಗಿದ್ದರು. ಅಂಥ ವೇದವಿದರೇ ತಮ್ಮ – ಏನೇನೂ ಅರಿಯದ ಶಿಷ್ಯರಲ್ಲಿ – ನಾವಿಬ್ಬರೂ ಜ್ಞಾನದ ದಾರಿಯನ್ನು ಜೊತೆಯಾಗಿ ಕ್ರಮಿಸೋಣ ಎಂದು ಹೇಳುತ್ತಾರೆಂದರೆ ಆ ವಿನಯಕ್ಕೆ ಯಾವುದು ಸಾಟಿ? ಇಂಥ ಮಹೋನ್ನತ ಆದರ್ಶವನ್ನು ಜಗತ್ತಿನ ಮತ್ಯಾವ ಭಾಗದಲ್ಲಾದರೂ ನಾವು ನೋಡಿಯೇವೆ? ಇದನ್ನು ಶಾಲೆಯಲ್ಲಿ ಹಾಡದೆ ಹೋದರೆ ಮತ್ತೇನನ್ನು ಹಾಡಬೇಕು?

ಅದೆಷ್ಟೋ ಮಂದಿ ನಮಗೆ ಸಮಾಜವಾದ, ಸಮತಾವಾದಗಳೆಲ್ಲ ಬಂದದ್ದು ಹೊರಗಿನಿಂದ; ಕಾರ್ಲ್ ಮಾರ್ಕ್‌ಸ್ ಜಗತ್ತಿಗೆ ಕಮ್ಯುನಿಸಮ್  ಇಲ್ಲಿ ಸಮಾನವಾಗಿ ಹಂಚಿ ಉಣ್ಣುವ ಪರಿಕಲ್ಪನೆಯೇ ಇದ್ದಿರಲಿಲ್ಲ ಎಂದು ಭಾವಿಸಿದ್ದಾರೆ. ಮಾರ್ಕ್‌ಸ್ ತನ್ನ ಕಮ್ಯುನಿಸಮ್ ವಾದ ಮುಂದಿಟ್ಟದ್ದು ಯುರೋಪಿನಲ್ಲಿ ಆಚರಿಸಲ್ಪಡುತ್ತಿದ್ದ ವ್ಯಾಪಕ ಅಸಮಾನತೆಯನ್ನು ನೋಡಿ. ಕೈಗಾರಿಕಾ ಕ್ರಾಂತಿ ನಡೆದ ಸಂದರ್ಭ. ದೊಡ್ಡ ಕಾರ್ಖಾನೆಗಳು ಎದ್ದುನಿಂತಿದ್ದವು. ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ದುಡಿಯುತ್ತಿದ್ದರು. ಶ್ರಮಜೀವಿಗಳ ಹೊಸ ವರ್ಗ ಸೃಷ್ಟಿಯಾಗಿತ್ತು. ಅವರ ದುಡಿಮೆಯನ್ನು ಬಳಸಿಕೊಂಡು ಕಾರ್ಖಾನೆಗಳ ಮಾಲೀಕರು ಶ್ರೀಮಂತರಾಗುವುದಕ್ಕೆ ಶ್ರೀಕಾರ ಹಾಕಿದ್ದರು. ಅಸಮಾನತೆಯ ಮೊದಲ ಮಜಲು ಕಾಣಿಸಿಕೊಂಡಿತ್ತು. ಮಾರ್ಕ್‌ಸ್ನಿಗೆ ಸಂಪತ್ತಿನ ಈ ಅಸಮಾನ  ಸರಿಪಡಿಸಬೇಕು ಎನಿಸಿತು. ಹಾಗಂತ ಆ ದೊಡ್ಡ ಬಂಡವಾಳಶಾಹಿ ಕಾರ್ಖಾನೆಗಳ ಮಾಲೀಕರನ್ನು ಎದುರು ಹಾಕಿಕೊಳ್ಳುವ ಛಾತಿ ಇರಲಿಲ್ಲ. ತಮಾಷೆ ಎಂದರೆ ಅವನ ‘ಕಮ್ಯುನಿಸ್‌ಟ್ ಮ್ಯಾನಿಫೆಸ್ಟೋ’ ಎಂಬ ಕೃತಿಯೇ ಮ್ಯಾಂಚೆಸ್ಟರಿನ ಒಂದು ಬಟ್ಟೆಯ ಗಿರಣಿಯ ಮಾಲೀಕನ ಬಂಡವಾಳದಿಂದ ಮುದ್ರಿತವಾಗಿ ಹೊರಬಂದ ಕೃತಿ! ಹಾಗೆ ಕಾರ್ಖಾನೆಗಳ ಮಾಲೀಕರ ಮುಲಾಜಿನಲ್ಲಿದ್ದ ಹಾಗೂ ಅವರನ್ನು ಎದುರು ಹಾಕಿಕೊಳ್ಳಲು ಭಯಪಡುತ್ತಿದ್ದ ಮಾರ್ಕ್‌ಸ್ ತನ್ನ ಕಾರ್ಯಸಾಧನೆಗಾಗಿ ಕಾರ್ಮಿಕರನ್ನು ಮಾಲೀಕರ ವಿರುದ್ಧ ಎತ್ತಿಕಟ್ಟುವ ಹೊಸ ದಾರಿಯನ್ನು ಕಂಡುಕೊಂಡ. ಕಾರ್ಖಾನೆಗಳ ಮಾಲೀಕರು  ಹಂಚದೇ ಹೋದರೆ ಅದನ್ನು ಕಾರ್ಮಿಕರು ತಮ್ಮ ಹಕ್ಕೆಂಬ ಹಠದಿಂದ ಕಿತ್ತು ಗಳಿಸಬೇಕು ಎಂಬ ಉಪದೇಶ ಕೊಟ್ಟ ಮಾರ್ಕ್‌ಸ್. ಅವನ ಉಪದೇಶ ಜಗತ್ತಿನಲ್ಲಿ ಏನೇನೆಲ್ಲ ಮಾಡಿಸಿತು ಎಂಬುದನ್ನು ಕಳೆದ ನೂರು ವರ್ಷಗಳಲ್ಲಿ ನೋಡಿದ್ದೇವೆ. ಕಾರ್ಖಾನೆಗಳ ಜಾಗದಲ್ಲಿ ಕಮ್ಯುನಿಸ್‌ಟ್ ಸರಕಾರಗಳು ಬಂದು ಕೂತವು! ಕಾರ್ಖಾನೆಗಳ ಮಾಲಿಕರ ಬದಲು ಈ ಸರಕಾರಗಳು ಜನರನ್ನು ಸುಲಿದು ಹದಮಾಡಿ ಒಣಗಲು ಹಾಕಿದವು, ಅಷ್ಟೆ!

ಆದರೆ ಕಮ್ಯುನಿಸಮ್ಮಿನ ದಾರಿಗೆ ಭಿನ್ನವಾಗಿ ನಮ್ಮ ಪ್ರಾಚೀನರು ಆಗಲೇ ಸಮಾನತೆಯ ಪಾಠವನ್ನು  ಮಾಡಿಯಾಗಿತ್ತು. ಋಗ್ವೇದದ ಹತ್ತನೆಯ ಮಂಡಲದಲ್ಲಿ ಬರುವ ಎರಡು ಮುತ್ತಿನಂಥ ಮಾತುಗಳನ್ನು ನೋಡಿ:

ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ

ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ ॥

ಇದರ ಅರ್ಥ: ನಿಮ್ಮ ಉದ್ದೇಶ ಒಂದೇ ಆಗಿರಲಿ. ನಿಮ್ಮ ಹೃದಯಗಳು ಒಗ್ಗೂಡಿರಲಿ. ನಿಮ್ಮ ಮನಸ್ಸುಗಳು ಒಂದಾಗಲಿ. ಇವೆಲ್ಲವೂ ಪರಸ್ಪರ ಸೌಹಾರ್ದಕ್ಕೆ ದಾರಿ ಮಾಡಲಿ.

ಹಾಗೆಯೇ,

ಸಂಗಚ್ಛದ್ವಂ ಸಂವದಧ್ವಂ ಸಂ ವೋ ಮನಾಂಸಿ ಜಾನತಾಮ್

ದೇವಾ  ಯಥಾ ಪೂರ್ವೇ ಸಂಜಾನಾನಾ ಉಪಾಸತೇ ॥

ಏನಿದರರ್ಥ? ನಾವು ಒಟ್ಟಿಗೆ ನಡೆಯೋಣ. ಒಟ್ಟಿಗೆ ಮಾತಾಡೋಣ. ನಮ್ಮ ಮನಸ್ಸುಗಳು ಒಗ್ಗೂಡಿರಲಿ. ನಾವು ಯಜ್ಞದಲ್ಲಿ ಅರ್ಪಿಸಿದ ಹವಿಸ್ಸನ್ನು ದೇವತೆಗಳು ಸಾಮರಸ್ಯದಿಂದ ಹಂಚಿಕೊಳ್ಳುವಂತೆ ನಾವೂ ನಮ್ಮ ಸಂಪತ್ತನ್ನು ಹಂಚಿಕೊಳ್ಳುವಂತಾಗಲಿ.

ಮಾರ್ಕ್‌ಸ್ನ ವಾದಕ್ಕೂ ಇಲ್ಲಿಯ ಸಾಮರಸ್ಯದ ಮಾತಿಗೂ ಇರುವ ವ್ಯತ್ಯಾಸವನ್ನು ಯಾರೂ ಗುರುತಿಸಿಯಾರು. ಒಂದು,

ಶ್ರೀಮಂತನಿಂದ ಕಿತ್ತು ತಿನ್ನು ಎನ್ನುವ ವಾದ. ಇನ್ನೊಂದು, ನಾವೆಲ್ಲರೂ ಒಟ್ಟಾಗಿ ದುಡಿಯೋಣ, ಒಟ್ಟಾಗಿ ಉಣ್ಣೋಣ, ಇರುವುದನ್ನು ಸಮಾನವಾಗಿ ಹಂಚಿಕೊಳ್ಳೋಣ  ಸೌಹಾರ್ದ. ಮೊದಲನೆಯದು ಸಂಘರ್ಷದ ದಾರಿಯಾದರೆ ಎರಡನೆಯದು ಸಾಮರಸ್ಯದ ದಾರಿ.

ಅದೇ ಋಗ್ವೇದದಲ್ಲಿ ಮತ್ತೊಂದು ಮಾತು ಬರುತ್ತದೆ:

ಮೋಘಮನ್ನಂ ವಿಂದತೇ ಅಪ್ರಚೇತಾಃ ಸತ್ಯಂ ಬ್ರವೀಮಿ ವಧ ಇತ್ಸ ತಸ್ಯ

ನಾರ‌್ಯಮಣಂ ಪುಷ್ಯತಿ ನೋ ಸಖಾಯಂ ಕೇವಲಾಘೋ ಭವತಿ ಕೇವಲಾದೀ ॥

ಅರ್ಥಾತ್, ಅನ್ಯರೊಂದಿಗೆ ಹಂಚಿಕೊಳ್ಳುವ ಮನಸ್ಸಿಲ್ಲದವನ ಅನ್ನ ಸಂಪಾದನೆ ವ್ಯರ್ಥ. ಅವನು ದೇವರನ್ನಾಗಲೀ ಸಖರನ್ನಾಗಲೀ ಪೋಷಿಸುವುದಿಲ್ಲ. ಇನ್ನೊಬ್ಬರಿಗೆ ಕೊಡದೆ ತಾನೊಬ್ಬನೇ ತಿನ್ನುವವನು ಕೇವಲ ಪಾಪಿ – ಎಂಬ ಕಟು  ಅದೇ ವೇದವೇ ಹೇಳುತ್ತದೆ. ಜಗತ್ತಿನಲ್ಲಿ ಯಾರೂ ಹಸಿವಿನಿಂದ ಸಾಯಬಾರದು. ಅಕ್ಕಿಯ ದಾಸ್ತಾನು ಮಾಡಿದವನು ನಾಲ್ಕು ಜನರೊಂದಿಗೆ ಹಂಚಿ ತಿನ್ನಬೇಕು. ಜಗತ್ತಿನ ಸಂಪತ್ತು ಇರುವುದೆಲ್ಲವೂ ತಾನೊಬ್ಬನೇ ಅನುಭೋಗಿಸುವುದಕ್ಕಾಗಿ ಎಂಬ ಭಾವನೆ ಸಲ್ಲದು – ಇದು ವೇದದ ನುಡಿ. ಸಮಾಜವಾದ, ಸಮತಾವಾದಗಳೆಲ್ಲ ಹೇಳುವುದನ್ನು ವೇದವೇ ಹೇಳಿಬಿಟ್ಟಿದೆ ಅನ್ನಿಸುವುದಿಲ್ಲವೆ? ಋಗ್ವೇದದ ಅದೇ ಹತ್ತನೆಯ ಮಂಡಲದಲ್ಲಿ ಬರುವ ಮತ್ತೊಂದು ಮಾತು,

ನ ವಾ ಉ ದೇವಾಃ ಕ್ಷುಧಮಿದ್ವಧಂ ದದುಃ ಉತಾಶಿತಮುಪಗಚ್ಛಂತಿ ಮೃತ್ಯವಃ

ಉತೋ  ಪೃಣತೋ ನೋಪದಸ್ಯತಿ ಉತಾಪೃಣನ್ ಮರ್ಡಿತಾರಂ ನ ವಿಂದತೇ ॥

ಕೂಡ ಹೇಳುವುದು ಅದೇ ಮಾತನ್ನೇ. ವಿವೇಕಿಯಾದವನು ಹಸಿದವನಿಗೆ ಅನ್ನವಿತ್ತು ರಕ್ಷಿಸಬೇಕು. ಹಸಿದವರಿಗೆ ನೀಡದೆ ತಾನೇ ತಿಂದವನನ್ನು ಸಾವು ಉಳಿಸುವುದಿಲ್ಲ. ನೀಡಿದವನ ಸಂಪತ್ತು ಎಂದಿಗೂ ಕ್ಷೀಣಿಸದು. ನೀಡದವನಿಗೆ ಯಾರೂ ಅಯ್ಯೋ ಎನ್ನುವುದಿಲ್ಲ – ಎಂಬ ಲೋಕಜ್ಞಾನವನ್ನು ವೇದ ಕೊಡುತ್ತದೆ. ಜೊತೆಯಾಗಿ ಗಳಿಸೋಣ, ಜೊತೆಯಾಗಿ ಬದುಕೋಣ – ಇದು ವೇದದ ಸಮತಾವಾದ. ವೇದಗಳು ಆಲಸ್ಯವನ್ನು ಪುರಸ್ಕರಿಸುವುದಿಲ್ಲ. ಜೊತೆಯಾಗಿ ಕೆಲಸ ಮಾಡಿ ಜೊತೆಯಾಗಿ  ಉಣ್ಣುವಾ ಎಂದು ಹೇಳುತ್ತವೆಯೇ ವಿನಾ ಯಾರೋ ಮಾಡಿಟ್ಟದ್ದನ್ನು ನಾವು ಹಂಚಿಕೊಂಡು ಖರ್ಚು ಮಾಡೋಣ ಎಂಬ ವಿಲಾಸವನ್ನು ಅವು ಒಪ್ಪುವುದೇ ಇಲ್ಲ. ಶತಹಸ್ತ ಸಮಾಹರ, ಸಹಸ್ರಹಸ್ತ ಸಂಕಿರ – ಅಂದರೆ ನೂರು ಹಸ್ತಗಳಲ್ಲಿ ಸಂಪಾದಿಸು, ಸಾವಿರ ಹಸ್ತಗಳಲ್ಲಿ ದಾನ ಮಾಡು – ಇದು ವೇದದ ಸಂದೇಶ. ದುಡಿಮೆ ಮತ್ತು ದಾನ ಇವೆರಡೂ ಜತೆಜತೆಯಾಗಿ ಇದ್ದಾಗ ಮಾತ್ರ ಸಮಾಜ ಸುಖಶಾಂತಿಗಳಿಂದ ಮುಂದುವರಿಯಲು ಸಾಧ್ಯ. ದುಡಿದು ಗಳಿಸಿದ್ದನ್ನೆಲ್ಲ ಕೂಡಿಡುತ್ತ ಹೋದರೆ ಒಂದೋ ಆ  ಕಳ್ಳರು ಅಪಹರಿಸುತ್ತಾರೆ ಅಥವಾ ವ್ಯಕ್ತಿ ಕಾಲಕ್ರಮೇಣ ದುಡಿಮೆಯಿಂದ ವಿಮುಖನಾಗಿ ಕೂತು ತಿನ್ನುವ ಪ್ರವೃತ್ತಿಗೆ ಹೊರಳಿಕೊಳ್ಳುತ್ತಾನೆ. ಇವೆರಡೂ ಆಗಬಾರದು ಎಂದಿದ್ದರೆ ದುಡಿಯಬೇಕು; ದುಡಿದದ್ದನ್ನು ಹಂಚಬೇಕು! ಋಗ್ವೇದ ಹೇಳುತ್ತದೆ: ಅಜ್ಯೇಷ್ಠಾಸೋ ಅಕನಿಷ್ಠಾಸ ಏತೇ ಭ್ರಾತರೋ ವಾವೃಧುಃ ಸೌಭಗಾಯ. ಅಂದರೆ, ಇಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಎಲ್ಲರೂ ಸೌಭಾಗ್ಯಕ್ಕಾಗಿ ಒಟ್ಟಿಗೆ ದುಡಿಯುವ ಸೋದರರಂತೆ. ಮಾರ್ಕ್‌ಸ್ ಹೇಳುವ ಸಮಾಜವಾದದಲ್ಲಿ ಇರುವವರು ಮಾಲೀಕ, ಗುಲಾಮ. ಬಂಡವಾಳಶಾಹಿ, ಶ್ರಮಜೀವಿ. ಬೂರ್ಜ್ವಾ, ನೌಕರ. ಅದರೆ ವೇದಗಳು ಕಲಿಸುವ  ಇರುವವರು ಇಬ್ಬರು ಗೆಳೆಯರು. ಇಬ್ಬರು ಸೋದರರು. ವ್ಯತ್ಯಾಸ ನೋಡಿ!

ಇಂದು ನಮ್ಮ ದೇಶ ಎಲ್ಲಿಗೆ ಬಂದು ಮುಟ್ಟಿದೆ ಎಂದರೆ ನಮ್ಮದೇ ನೆಲದಲ್ಲಿ ಸಾವಿರಾರು ವರ್ಷಗಳ ಹಿಂದೆ ತಿಳಿದವರು ಬರೆದಿಟ್ಟ ಸಾಲುಗಳ ಅರ್ಥವನ್ನು ಜರ್ಮನ್ನರೋ ಅಮೆರಿಕನ್ನರೋ ಓದಿ ಅರ್ಥ ಹೇಳಬೇಕಾಗಿದೆ. ಅವರು ಹೇಳಿದ ಮೇಲೆ ನಾವು ಹೌದು ಹೌದು, ಅಂಥದ್ದೆಲ್ಲ ನಮ್ಮಲ್ಲಿ ಹಿಂದೆ ಇತ್ತು ಎಂದು ಕತ್ತು ಆಡಿಸುವ ಮಟ್ಟಕ್ಕೆ ಬಂದಿದ್ದೇವೆ. ವೇದಗಳಲ್ಲಿ ಏನಿದೇರಿ ಮಣ್ಣು; ಅದೇ ಒಂದು ನೂರಿನ್ನೂರು  ಹೊಗಳೋದು! ಕಾಡಿನಲ್ಲಿದ್ದ ಋಷಿಗಳಿಗೆ ಮಾಡಲು ಬೇರೆ ಕೆಲಸ ಇದ್ದರೆ ತಾನೆ? ಎಂಬ ಮಾತುಗಳನ್ನು ಆಡುವವರು ಈ ಭರತಖಂಡದಲ್ಲಿ ಹೆಜ್ಜೆಗೊಬ್ಬರಂತೆ ಸಿಗುತ್ತಾರೆ. ಕಾಯಕವೇ ಕೈಲಾಸ ಎಂದು ಭಕ್ತಿಭಂಡಾರಿ ಬಸವಣ್ಣನವರು ಹೇಳುವವರೆಗೆ ಭಾರತೀಯರಿಗೆ ಕೆಲಸ ಮಾಡುವುದು ಕೂಡ ಗೊತ್ತಿರಲಿಲ್ಲ ಎಂಬ ಮಟ್ಟದ ಸಂಶೋಧನೆಯನ್ನು ಕೂಡ ಮಾಡುವವರಿದ್ದಾರೆ. ವೇದಗಳನ್ನು ಕಂಠಸ್ಥ ಮಾಡಿದ ವಿದ್ವಾಂಸರಿಗೆ ಹಾಗೆ ಋಕ್ಕುಗಳನ್ನು ಉರುಹೊಡೆಯುವುದೊಂದೇ ಕೆಲಸವಾಗಿರಲಿಲ್ಲ. ಅವರು ಹೊಲಗದ್ದೆಗಳಲ್ಲಿ ದುಡಿಯುತ್ತಲೂ ಇದ್ದರು. ಸಂಸಾರ ನಡೆಸುತ್ತಲೂ ಇದ್ದರು. ಇಲ್ಲವಾದರೆ ಪರಋಣಾ ಸಾವೀರಧ  ಮಾಹಂ ರಾಜನ್ನನ್ಯಕೃತೇನ ಭೋಜಮ್ (ಪ್ರಭುವೇ, ನನ್ನ ತಂದೆತಾಯಿಯರೂ ನಾನೂ ಮಾಡಿದ ಸಾಲಗಳನ್ನು ತೀರಿಸುವ ಶಕ್ತಿ ನೀಡು. ಅನ್ಯರ ಶ್ರಮದಿಂದ ನಾನು ಬದುಕುವಂತೆ ಆಗದಿರಲಿ) ಎಂಬ ಅವರ ಮಾತು ಆತ್ಮವಂಚನೆಯಾಗಿಬಿಡುತ್ತಿತ್ತು.

ಅನ್ಯರ ಶ್ರಮದಿಂದ ನಾನು ಬದುಕುವಂತೆ ಆಗದಿರಲಿ ಎಂದು ಹೇಳುತ್ತಿದ್ದ ಭಾರತ ಈಗ ಯಾರಾದರೂ ಕೆಲಸ ಮಾಡಿ ನನಗೆ ಹೊಟ್ಟೆಗೆ ಹಾಕಲಿ ಎಂದು ಹೇಳುವಲ್ಲಿಗೆ ಬಂದು ನಿಂತಿದೆ. ನನ್ನದು ಮಾತ್ರವಲ್ಲ, ನನ್ನ ತಂದೆತಾಯಿ ಮಾಡಿದ ಸಾಲವನ್ನೂ ತೀರಿಸುವ ಶಕ್ತಿ ನನಗೆ  ಎಂದು ಹೇಳುತ್ತಿದ್ದ ಈ ದೇಶ ಇಂದು ನನ್ನ ಸಾಲವನ್ನು ಸರಕಾರ ತೀರಿಸಲಿ ಎಂದು ಹೇಳುತ್ತಿದೆ. ವೇದಗಳ ಸಂಸ್ಕೃತದಿಂದ ಮಾತ್ರವಲ್ಲ ಅವುಗಳು ಕಲಿಸಿದ ಮೌಲ್ಯಗಳಿಂದಲೂ ನಾವು ಗಾವುದ ಗಾವುದ ದೂರ ಹಾರಿಬಿದ್ದಿದ್ದೇವೆ. ಆರು ತಿಂಗಳ ಹಿಂದೆ, ಫೆಬ್ರವರಿಯಲ್ಲಿ ಹರ್ಯಾಣಾ ಸರಕಾರ ಶಾಲೆಗಳಲ್ಲಿ ಬೆಳಗಿನ ಹೊತ್ತಿನ ಪ್ರಾರ್ಥನೆಯಲ್ಲಿ ಗಾಯತ್ರಿ ಮಂತ್ರ ಸೇರಿಸುವುದಾಗಿ ಹೇಳಿತು. ಹಾಗೆ ಹೇಳಿದ ಮೇಲೆ ಸಮಾಜದ ಹತ್ತು ಮೂಲೆಗಳಿಂದ ಏನೇನೇನು ಹೇಳಿಕೆಗಳೆಲ್ಲ ಬರುತ್ತವೆ ಎಂಬುದು ಸೆಕ್ಯುಲರ್ ಭಾರತದಲ್ಲಿ ಏಗುತ್ತಿರುವ  ಗೊತ್ತೇ ಇದೆ. ಮನುವಾದಿ ಸರ್ಕಾರದಿಂದ ಕೇಸರೀಕರಣ! ಇವರೇನು ಶಾಲೆ ನಡೆಸುತ್ತಿದ್ದಾರೋ ವೈದಿಕ ಮಠ ನಡೆಸುತ್ತಿದ್ದಾರೋ? ಇದು ಭಾರತದ ಜಾತ್ಯತೀತತೆಗೆ ಬಹುದೊಡ್ಡ ಹೊಡೆತ! ಶಾಲೆಗಳಲ್ಲಿ ಗಾಯತ್ರಿ ಮಂತ್ರ ಹೇಳಿಸುವುದರಿಂದ ನಮ್ಮ ಮಕ್ಕಳು ಹಿಂಸಾಚಾರಿಗಳಾಗುತ್ತಾರೆ! ಹೀಗೆ, ಈಟಿಗಳಂತೆ ಬಂದ ಟೀಕೆಗಳಿಗೆ ಕೊನೆಮೊದಲಿರಲಿಲ್ಲ. ದಿನಬೆಳಗಾದರೆ, ದಲಿತರ ಕಿವಿಗಳಿಗೆ ಬ್ರಾಹ್ಮಣರು ಕಾದ ಸೀಸ ಸುರಿದರೆಂಬ ಕತೆ ಹೇಳುವ ವಿಚಾರವಾದಿಗಳು ಕೂಡ ಈ ಗಾಯತ್ರಿ ಮಂತ್ರ ಹೇಳಿಸುವ ಕ್ರಮವನ್ನು ಉಗ್ರವಾಗಿ ವಿರೋಧಿಸಿದರು! ಗಾಯತ್ರಿ ಮಂತ್ರ ಯಾವುದಾದರೂ  ದೇವತೆಯನ್ನು ಸ್ತುತಿಸುತ್ತಿದೆಯೇ? ಅಲ್ಲಿ ಹಿಂದೂಗಳು ಪೂಜಿಸುವ ಯಾವ ದೇವರನ್ನದರೂ ಉಲ್ಲೇಖಿಸಲಾಗಿದೆಯೇ? ಸೂರ್ಯನಂಥ ಸೂರ್ಯನಿಗೇ ಯಾರು ಚೈತನ್ಯವನ್ನು ದಯಪಾಲಿಸುತ್ತಿದ್ದಾನೋ ಅಂಥ ಪರಮಶಕ್ತಿ ನನ್ನ ಬುದ್ಧಿಯನ್ನು ಪ್ರಚೋದಿಸಲಿ ಎಂದು ಮಕ್ಕಳು ಬೇಡಿಕೊಂಡರೆ ಅದರಲ್ಲಿ ಇವರಿಗೆ ಪುರೋಹಿತಶಾಹಿ, ಮನುವಾದ, ಸಂಘಪರಿವಾರದ ಅಜೆಂಡ ಕಾಣಿಸಿಕೊಂಡದ್ದು ಹೇಗೆ? ನಮ್ಮ ದೇಶದ ಸದ್ಯದ ಪರಿಸ್ಥಿತಿ ಹೇಗಿದೆ ಎಂದರೆ ಮನುಷ್ಯ ಬದುಕಲು ಉಸಿರಾಡುತ್ತಿರಬೇಕು ಎಂಬುದನ್ನು ಸಂಸ್ಕೃತದಲ್ಲಿ ಬರೆದು, ಇದು ವೇದದಲ್ಲಿದೆ, ಇದನ್ನು ನಾವು ಪಠ್ಯಪುಸ್ತಕಗಳಲ್ಲಿ ಸೇರಿಸುತ್ತೇವೆ ಎಂದರೆ ಈ  ಎಲ್ಲ ಜಾತ್ಯತೀತರೂ ಒಟ್ಟಾಗಿ ಮುರುಕಿಕೊಂಡು ಬಿದ್ದು ಅದು ಆಗದಂತೆ ತಡೆಯುತ್ತಾರೆ!

ಅಯ್ಯೋ ನನ್ನ ಭಾರತವೆ!