About Us Advertise with us Be a Reporter E-Paper

ಅಂಕಣಗಳು

ರೈಲು ಹೋದ ಮೇಲೆ ಟಿಕೆಟ್ ಖರೀದಿ ತರವೇ?

ರಾಜಕಾರಣವೇ ಅಂತಹದ್ದು. ರಾಜಕೀಯ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಯಾವುದೇ ನಿರ್ಧಾರ ಕೈಗೊಳ್ಳಲೂ ಹಿಂದೆ ಯೋಚಿಸುವುದೇ ಇಲ್ಲ. ಇವರ ನಿರ್ಧಾರಗಳಿಗೆ ಅಧಿಕಾರಿ ವರ್ಗ ಗೋಣು ಹಾಕುತ್ತದೆ. ಇದರ ಪರಿಣಾಮ ಒಂದು ವರ್ಗದ ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಬಳಿದಂತಾಗುತ್ತಿದೆ. ಪ್ರಸ್ತುತ ಏರೋ ಇಂಡಿಯಾ ಶೋ ಕತೆಯೂ ಇದೇ ರೀತಿ ಆಗಿದೆ. ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದ ವೈಮಾನಿಕ ಪ್ರದರ್ಶನವನ್ನು ಇದ್ದಕ್ಕಿದ್ದಂತೆ, ಯಾವುದೇ ಸಕಾರಣಗಳಿಲ್ಲದೇ ಉತ್ತರ ಪ್ರದೇಶದ ಲಕ್ನೋಗೆ ಸ್ಥಳಾಂತರ ಮಾಡುವ ನಿರ್ಧಾರಕ್ಕೆ ರಕ್ಷಣಾ ಇಲಾಖೆ ಬಂದಿದೆ. ಇದಕ್ಕೆ ಪೂರಕವಾಗಿ ಲಕ್ನೋದ ಏರ್ ಶೋಗೆ ಬೇಕಾದ ಸಿದ್ಧತೆಗಳೂ ಆರಂಭವಾಗಿವೆ. ಇದು ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಕಣ್ಣು ಕೆಂಪಾಗಿಸುವಂತೆ ಮಾಡಿದೆ. ರಾಜಕೀಯ ಕಾರಣಕ್ಕಾಗಿ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶದ ಜನರ ಮತಗಳನ್ನು ಸೆಳೆಯಲು ಏರ್ ಶೋವನ್ನು ಅಲ್ಲಿಗೆ ಸ್ಥಳಾಂತರ ಮಾಡುತ್ತಿದೆ ಎಂದು ದೂರಿವೆ. ಆದರೆ, ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಯಾವುದೇ ಕಾರಣಕ್ಕೂ ಲಕ್ನೋಗೆ ಸ್ಥಳಾಂತರ ಮಾಡಲು ಬಿಡುವುದಿಲ್ಲ. ಸಂಬಂಧ ಕೇಂದ್ರ ಸರಕಾರದ ಮೇಲೆ ತರುತ್ತೇವೆ ಎಂದು ರಾಜ್ಯದ ಬಿಜೆಪಿ ನಾಯಕರು ಅಡ್ಡಗೋಡೆ ಮೇಲೆ ದೀಪ ಇಡುತ್ತಿದ್ದಾರೆ. ಕೇಂದ್ರ ಸರಕಾರ ನಿರ್ಧಾರ ತೆಗೆದುಕೊಳ್ಳುವವರೆಗೆ ಮೌನಕ್ಕೆ ಶರಣಾಗಿದ್ದ ಬಿಜೆಪಿ ನಾಯಕರು ಈಗ ರಾಜ್ಯದಲ್ಲಿ ವಿರೋಧದ ಮಾತುಗಳು ಕೇಳಿಬರುತ್ತಿರುವುರಿಂದ ಸುಮ್ಮನೆ ಇದ್ದರೆ ಅಪಾರ್ಥವಾಗುತ್ತದೆ ಎಂಬ ಕಾರಣಕ್ಕೆ ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಲಕ್ನೋಗೆ ಸ್ಥಳಾಂತರ ಮಾಡುವ ಪ್ರಸ್ತಾಪವಾದಾಗಲೇ ನಾಯಕರು ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ತಪ್ಪಿಸಬಹುದಿತ್ತು. ಕೇಂದ್ರ ನಾಯಕರ ಎದುರು ನಿಂತು ಧೈರ್ಯವನ್ನು ತೋರಿಸದೇ ಎಲ್ಲಾ ಮುಗಿದು ಹೋದ ಮೇಲೆ ಒತ್ತಡ ತರುತ್ತೇವೆ ಎನ್ನುವುದು ಕ್ಲೀಷೆಯ ಮಾತಾಗುತ್ತದೆ. ಇದಲ್ಲದೇ, ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿ ರಕ್ಷಣಾ ಮಂತ್ರಿಯೂ ಆಗಿರುವ ನಿರ್ಮಲಾ ಸೀತಾರಾಮನ್ ಕನ್ನಡನಾಡಿಗೆ ಮುಕುಟಪ್ರಾಯದಂತಿದ್ದ ವೈಮಾನಿಕ ಪ್ರದರ್ಶನವನ್ನು ಉತ್ತರ ಪ್ರದೇಶದ ಬಿಜೆಪಿ ನಾಯಕರ ಮಾತಿಗೆ ಮಣಿದು ನಿರ್ಧಾರವನ್ನು ಕೈಗೊಂಡಿರುವುದು ಅವರ ಗೌರವವನ್ನು ಕಡಿಮೆ ಮಾಡಿದಂತಾಗಿದೆ. ಎಲ್ಲಾ ಬೆಳವಣಿಗೆ ನಡೆದಿದ್ದರೂ ಬಿಜೆಪಿ ನಾಯಕರು ಮನವೊಲಿಕೆಯ ಮಾತುಗಳನ್ನಾಡುತ್ತಿರುವುದು ರೈಲು ಹೋದ ಮೇಲೆ ಟಿಕೆಟ್ ಮಾಡಿದರು ಎಂಬಂತಾಗಿದೆ ಮತ್ತು ಹಾಸ್ಯಾಸ್ಪದ ಎನಿಸುತ್ತಿದೆ.

Tags

Related Articles

Leave a Reply

Your email address will not be published. Required fields are marked *

Language
Close