About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಜಮ್ಮು ಕಾಶ್ಮೀರದಲ್ಲಿ ಐಸಿಸ್‌ನ ಯಾವುದೇ ಸುಳಿವಿಲ್ಲ: ಕೇಂದ್ರ ಸರಕಾರ

Islamic state fighters removing the border between Syria and Iraq (Newscom TagID: zumaglobal333109.jpg) [Photo via Newscom]
ದೆಹಲಿ: ಜಮ್ಮು ಕಾಶ್ಮಿರದಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಸಂಘಟನೆಗೆ ಸೇರಿದ ಯಾವುದೇ ಭಯೋತ್ಪಾದಕ ಇಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

“ಜಮ್ಮು ಕಾಶ್ಮೀರದಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಹಾಗು ಪಾಕಿಸ್ತಾನ ಧ್ವಜ ಹಾರಿಸುವ ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ” ಎಂದು ಗೃಹ ಖಾತೆ ರಾಜ್ಯ ಸಚಿವ ಹಂಸರಾಜ್‌ ಅಹಿರ್‌ ರಾಜ್ಯಸಭೆಗೆ ಉತ್ತರಿಸಿದ್ದಾರೆ.

ಇದೇ ವಿಚಾರವಾಗಿ 2015ರಲ್ಲಿ ಎಂಟು ಪ್ರಕರಣಗಳನ್ನು ದಾಖಲು ಮಾಡಲಾಗಿದ್ದು, 2016ರಲ್ಲಿ 31 ಪ್ರಕರಣಗಳು ಹಾಗು 2017 ಐದು ಪ್ರಕರಣಗಳು ದಾಖಲಾಗಿವೆ.

ಜೂನ್‌ 22ರಂದು ಜಮ್ಮು ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ ಒಂದರಲ್ಲಿ ಇಸ್ಲಾಮಿಕ್‌ ಸ್ಟೇಟ್‌ನ ನಾಲ್ವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು. ಇಲ್ಲಿ ಕೊಲ್ಲಲಾದ ಭಯೋತ್ಪಾದಕರ ಪೈಕಿ ದಾವೂದ್ ಅಮಹದ್‌ ಸೋಫಿ ಎಂಬವನು ಜಮ್ಮು ಕಾಶ್ಮೀರದಲ್ಲಿ ಇಸ್ಲಾಮಿಕ್‌ ಸ್ಟೇಟ್‌ನಲ್ಲಿ ಐಸಿಸ್‌ ವ್ಯವಹಾರಗಳನ್ನು ನಿಭಾಯಿಸುತ್ತಿದ್ದುದ್ದಲ್ಲದೇ, ಕಲ್ಲು ತೂರಾಟ ಹಾಗು ಕೊಲೆಗಳನ್ನು ಮಾಡಿಸುತ್ತಿದ್ದ ಎಂದು ಹೇಳಲಾಗಿದೆ.

 

Tags

Related Articles

Leave a Reply

Your email address will not be published. Required fields are marked *

Language
Close