About Us Advertise with us Be a Reporter E-Paper

Breaking Newsದೇಶಪ್ರಚಲಿತ

ಇಸ್ರೋದಿಂದ ಮತ್ತೊಂದು ಮೈಲಿಗಲ್ಲು, ಜಿಸ್ಯಾಟ್ 29 ಉಪಗ್ರಹ ಉಡಾವಣೆ ಯಶಸ್ವಿ

ಶ್ರೀಹರಿಕೋಟ: ಸಂಪರ್ಕ ಸೇವೆ ವೃದ್ಧಿಗೆ ಪೂರಕವಾಗುವ ಜಿಸ್ಯಾಟ್ 29 ಉಪಗ್ರಹವನ್ನು ಇಸ್ರೋ ಇಂದು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಈ ಉಪಗ್ರಹ ಉಡಾವಣೆಯಿಂದ ಜಿಎಸ್ಎಲ್ ವಿ ಎಂಕೆ III ವೆಹಿಕಲ್ ಪ್ರೋಗ್ರಾಂ ಸಹ ಯಶಸ್ವಿಯಾಗಿದ್ದು,  ಕಾರ್ಯಾಚರಣೆ ಪ್ರಾರಂಭವಾಗಲಿದೆ.  ಇದೇ ಮಾದರಿಯ ಉಪಗ್ರಹವನ್ನು ಚಂದ್ರಯಾನ-2 ಕ್ಕೂ ಬಳಕೆ ಮಾಡುವುದರಿಂದ ಈ ಉಪಗ್ರಹ ಉಡಾವಣೆ ಮಹತ್ವ ಪಡೆದುಕೊಂಡಿತ್ತು. 

ಸೆಟಲೈಟ್ ಲಾಂಚ್ ವೆಹಿಕಲ್ (ಜಿಎಸ್ಎಲ್ ವಿ ಎಂಕೆ III) 43.4 ಮೀಟರ್ ಎತ್ತರವಿದ್ದು, 640 ಟನ್ ಭಾರ ಹೊಂದಿದೆ. ಇದು ಹತ್ತು ವರ್ಷಗಳ ಕಾಲ ಕಾರ್ಯಾಚರಣೆ ನಡೆಸಲಿದ್ದು ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿ ಸಂಪರ್ಕ ಸೇವೆ ವೃದ್ಧಿಗೆ ಪೂರಕವಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close