About Us Advertise with us Be a Reporter E-Paper

ಅಂಕಣಗಳು

ನಿತ್ಯ ಬದುಕಲ್ಲಿ ಅಳವಡಿಸಿಕೊಳ್ಳುವ ಶಿಕ್ಷಣ ನೀಡುವುದು ಮುಖ್ಯ

ಪ್ರಜ್ಞಾ ಸುಮ

ಇಂದು ನಾನು ಶಿಕ್ಷಣದಲ್ಲಿ ಆಗಬೇಕಾಗಿರುವ ಮಾರ್ಪಾಡನ್ನುಕುರಿತು ಮಾತನಾಡಲಿದ್ದೇನೆ. ನಿಮಗೇನನ್ನಿಸುತ್ತದೆ? ನಮ್ಮ ಶಿಕ್ಷಣ ಪದ್ಧತಿ ಬದಲಾಗಬೇಕೇ? ಓಹ್! ‘ಹೌದು’ ಎಂಬ ಉತ್ತರ ಸಾಕಷ್ಟು ಜೋರಾಗಿಯೇ ಕೇಳಿಬಂತು. ನಮ್ಮ ಸಮಾಜದ ವಿದ್ಯಾವಂತ ವರ್ಗಕ್ಕೆ ನಿಜವಾದ ಅರ್ಥದಲ್ಲಿ ಶಿಕ್ಷಿತರಾಗುವುದು ಮತ್ತು ಶಿಕ್ಷಿತರಂತೆ ವರ್ತಿಸುವುದು ಎರಡಕ್ಕೂ ಇರುವ ವ್ಯತ್ಯಾಸ ತಿಳಿಯದೇ ಇರುವುದರಿಂದ ಬದಲಾವಣೆಯ ಅಗತ್ಯ ಉಂಟಾಗಿದೆ.  ಏನು? ಶಾಲೆ-ಕಾಲೇಜುಗಳಿಗೆ ಹೋಗುವುದೇ? ಪದವಿ ಗಳಿಸುವುದೇ? ಇದೆಲ್ಲ ಮಾಡುವುದರಿಂದ ಜನ ಹಾಗೆ ನಮ್ಮನ್ನು ಗುರುತಿಸುತ್ತಾರೆ ಅಥವಾ ಹೀಗೆ ಟೆಡ್ ಟಾಕ್ ನೀಡಲು ಆಹ್ವಾನಿತರಾದೆವು ಎಂದರೆ ಶಿಕ್ಷಿತರು ಎಂದುಕೊಳ್ಳಬಹುದೇ? ಹಾಗಲ್ಲ. ನಾವು ಕಲಿತಿರುವ ಸಂಗತಿಗಳನ್ನು ವಾಸ್ತವಕ್ಕೆ ಯಶಸ್ವಿಯಾಗಿ ಅನ್ವಯಿಸಿಕೊಳ್ಳಲು ಸಾಧ್ಯವಾದಾಗ ಮಾತ್ರ ನೈಜ ಶಿಕ್ಷಣವನ್ನು ಹೊಂದಿದ್ದೇವೆ ಎಂದುಕೊಳ್ಳಬಹುದು. ಉದಾಹರಣೆಗೆ ಗಿಡಗಳಿಗೆ ನೀರು ಹಾಕುವಾಗ ಅವುಗಳ ಬೆಳವಣಿಗೆಗೆ ಅದು ಅಗತ್ಯ ಎಂಬ ಜ್ಞಾನ ಹೊಂದಿದ್ದು ಆ ಕೆಲಸ ಮಾಡುವುದು; ಸುಮ್ಮನೆ ಯಾಂತ್ರಿಕವಾಗಿ  ನಮ್ಮ ಶಿಕ್ಷಣಪದ್ಧತಿಯಲ್ಲಿ ಈ ದೃಷ್ಟಿಕೋನ ಇಲ್ಲ ಎಂಬ ಕಾರಣಕ್ಕಾಗಿ ಅದರಲ್ಲಿ ಅಗಾಧ ಬದಲಾವಣೆ ತರುವ ಅಗತ್ಯವಿದೆ.

ಮೊದಲನೆಯದಾಗಿ ಒಂದು ಸಾಮಾನ್ಯ ಪರೀಕ್ಷೆ ಒಡ್ಡಿ ಭಿನ್ನ ಸಾಮರ್ಥ್ಯದ ಜನರನ್ನು ಅಳೆಯುವುದು; ಅವರಿಗೆ ವಿವಿಧ ಶ್ರೇಣಿಗಳನ್ನು ನೀಡುವುದು. ಮರ ಏರುವ ಸಾಮರ್ಥ್ಯದ ಪರೀಕ್ಷೆಯನ್ನು ಒಂದು ನಿದರ್ಶನವಾಗಿ ತೆಗೆದುಕೊಳ್ಳೋಣ. ಒಂದು ಆನೆ, ನಾಯಿ, ಇಲಿ, ಅಥವಾ ಮೀನಿಗೆ ಈ ಪರೀಕ್ಷೆ ಒಡ್ಡಿ ಅವುಗಳ ಶಕ್ತಿಯನ್ನು ಕಡಿಮೆ, ಹೆಚ್ಚು ಎಂದು ನಿರ್ಣಯಿಸುವುದು ನ್ಯಾಯಯುತವೇ? ಯಥಾವತ್ತಾಗಿದೆ,  ಶಿಕ್ಷಣ ಪದ್ಧತಿ. ನಮ್ಮಲ್ಲಿ ಕೆಲವರಿಗೆ ಒಳ್ಳೆಯ ಭಾಷಣ ನೀಡುವುದು ಗೊತ್ತು, ಇನ್ನು ಕೆಲವರಿಗೆ ಫೋಟೊಗ್ರಫಿಯಲ್ಲಿ ಪರಿಣತಿ ಇದೆ, ಮತ್ತೆ ಯಾರೋ ಉತ್ತಮ ಕ್ರೀಡಾಪಟು ಆಗುವ ಪ್ರತಿಭೆ ಹೊಂದಿದ್ದಾರೆ. ವಿನ್ಯಾಸ ಮಾಡುವ ಸೃಜನಶೀಲತೆ ಕೆಲವರಿಗಿದ್ದರೆ ಶಿಕ್ಷಣ ರಂಗವೇ ಇನ್ನು ಕೆಲವರನ್ನು ಸೆಳೆಯುತ್ತದೆ. ಒಟ್ಟಾರೆ, ನಾವೆಲ್ಲರೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಪ್ರವೇಶ ಪಡೆಯಲು ಯೋಗ್ಯರಾಗಿದ್ದೇವೆ. ಹಾಗಿರುವಾಗ ಒಂದು ಸಾಮಾನ್ಯ ಪರೀಕ್ಷೆಯಿಂದ ಎಲ್ಲರನ್ನೂ ಅಳೆಯುವುದು ತಪ್ಪಾಗುತ್ತದೆ. ಇದು ಬದಲಾಗಬೇಕಾಗಿದೆ. ಹೇಗೆ ಎಂಬ ಕುರಿತು  ಮಾತನಾಡಲಿದ್ದೇನೆ.

ಒಂದು ಪ್ರಸಂಗದಿಂದ ಶುರುಮಾಡೋಣ. ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ತಾಯಿ-ಮಗು ನನ್ನೆದುರಿಗೆ ಸಂಭಾಷಿಸುತ್ತಿದ್ದರು. ಕಿಟಕಿಯ ಹೊರಗಡೆ ಹೊಲಗಳಲ್ಲಿ ಕಾಣುತ್ತಿದ್ದ ಕಟಾವಾದ ಭತ್ತದ ಪೈರನ್ನು ತೋರಿಸುತ್ತಾ ತಾಯಿ ಐದು ವರ್ಷದ ಮಗನಿಗೆ ವಿವರಿಸುತ್ತಿದ್ದಳು: ‘ನೀನೀಗ ನೋಡ್ತಿರುವ ರಾಶಿಯಿಂದಲೇ ರೈತರು ಅಕ್ಕಿ ಉತ್ಪಾದಿಸುತ್ತಾರೆ. ಅದನ್ನು ನಾವು ಕೊಳ್ಳುತ್ತೇವೆ…’ ಸ್ಯಾಂಡ್‌ವಿಚ್ ತಿನ್ನುತ್ತಾ ಅಮ್ಮನ ಮಾತು ಕೇಳುತ್ತಿದ್ದ ಮಗು ಕೇಳಿತು, ‘ಇದ್ಯಾಕೆ ಮಾಡಬೇಕು? ಕಂದುಬಣ್ಣದ ರಾಶಿಯಿಂದ ಅಕ್ಕಿ ಹೊರಬರುವುದೇ? ಸುಪರ್ ಮಾರ್ಕೆಟ್‌ಗೆ ಹೋದರೆ ಸಿಗುತ್ತದಲ್ಲ?’. ತಾಯಿಯ  ಮೇಲೆ ಆಗ ಮೂಡಿದ ಗೊಂದಲ, ಕಸಿವಿಸಿಯನ್ನು ನಾನು ವಿವರಿಸಲಾರೆ. ಇಲ್ಲಿ ಮಗುವನ್ನು ಅಜ್ಞಾನಿ ಎನ್ನಬೇಕೋ ಅಥವಾ ನಮ್ಮ ಶಿಕ್ಷಣ ಪದ್ಧತಿಯನ್ನು ದೂರಬೇಕೋ? ಮಗುವಿಗೆ ಏನೂ ಗೊತ್ತಿಲ್ಲ ಎಂದೇನಲ್ಲ. ಅವನಿಗೆ ಅಕ್ಕಿ ಒಂದು ಸಸ್ಯದ ಉತ್ಪನ್ನ ಎಂದು ಗೊತ್ತಿರಬಹುದು, ಆ ನಂತರ ಸುಪರ್ ಮಾರ್ಕೆಟ್‌ನಲ್ಲಿ ಅದನ್ನು ಮಾರಾಟಕ್ಕೆ ಇಡುತ್ತಾರೆ ಎಂದು ಸಹ ಅವನು ತಿಳಿದುಕೊಂಡಿರಬಹುದು…ಆದರೆ ಕಟಾವು ಮಾಡಿದ ಪೈರಿನ ರಾಶಿ ನೋಡಿದಾಗ ಈ ಎಲ್ಲ ಮಾಹಿತಿಯನ್ನು ಅವನು ಅನ್ವಯಿಸಿಕೊಳ್ಳಲಾಗದೇ ಹೋದದ್ದು  ಕಾಣುತ್ತದೆ. ಇದೇ ವಿಷಯವಾಗಿ ನಾನು ಬರೆದು ಪ್ರಕಟಿಸಿದ ಲೇಖನದ ಕ್ಲಿಪಿಂಗ್ ಇದು. ‘ಕೇವಲ ಪುಸ್ತಕದಲ್ಲಿರುವ ಮಾಹಿತಿ ಕಲಿಕೆ ಸಾಲದು; ನಮ್ಮ ವಿದ್ಯಾರ್ಥಿಗಳು ಕೆಲ ವಿಷಯಗಳನ್ನುಅನುಭವಿಸಬೇಕು’ ಎಂದು ಅದರಲ್ಲಿ ಪ್ರತಿಪಾದಿಸಲು ಯತ್ನಿಸಿದ್ದೇನೆ.

ಕಲಿತ ಜ್ಞಾನವನ್ನು ಅಳವಡಿಸಿಕೊಳ್ಳುವುದಂತೂ ಅತಿ ಮುಖ್ಯ. ಉದಾಹರಣೆಗೆ ಪ್ರತಿ ದಿನ ನಾವು ಹೊಸ ಹೊಸ ವಿಷಯ ತಿಳಿಯುತ್ತಿರುತ್ತೇವೆ. ಅವನ್ನು ನಿತ್ಯ ಜೀವನದಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂಬ ಕಡೆಯೂ ಗಮನವಿರಬೇಕು. ಫೋಟೊಗ್ರಫಿ ಕುರಿತು ಸಾದ್ಯಂತವಾಗಿ ಓದಿ ತಿಳಿದುಕೊಂಡು ಒಂದು  ತೆಗೆಯದೇ ಹೋದರೆ ಏನು ಪ್ರಯೋಜನ? ಯಾವುದೋ ತಂತ್ರವನ್ನು ಕುರಿತು ಓದಿದ ಮೇಲೆ ಆ ಅರಿವನ್ನು ಬಳಸಿ, ಯಶಸ್ವಿಯಾದಾಗಲೇ ಅದನ್ನು ನಿಜವಾಗಿ ಕಲಿತಿರಿ ಎನ್ನಬಹುದು. ಯಾವುದೇ ಕಲಿಕೆಯ ‘ಮೂಲ ಅಥವಾ ಪ್ರಥಮ ಪ್ರಕ್ರಿಯೆ’ ಇದು ಎನ್ನಬಹುದು. ನಮ್ಮ ಶಾಲಾ ಶಿಕ್ಷಣದಲ್ಲಿ ಇದು ನಾಪತ್ತೆ.  ಪ್ರತಿದಿನ ಸ್ಕೂಲಿಗೆ ಹೋಗುತ್ತೇವೆ, ಮರಳಿ ಮನೆಗೆ ಬರುತ್ತೇವೆ. ಹತ್ತನೇ ತರಗತಿ ಪಾಸಾದೆ, ಡಿಗ್ರಿ ಪಡೆದೆ ಎಂದು ಹೇಳುತ್ತೇವೆ ಆದರೆ ಏನು ಕಲಿತೆವು ಎಷ್ಟು ಕಲಿತೆವು ಸ್ಪಷ್ಟವಿರುವುದಿಲ್ಲ.

 ಭಾರತದ ಗುರುಗಳ ವಿಷಯ ನೋಡೋಣ. ಉದಾಹರಣೆಗೆ ಆದಿ ಶಂಕರ. ‘ನೀನು ಅದ್ವೈತ ವೇದಾಂತ ಪ್ರಚಾರ ಮಾಡಬೇಕು’ ಎಂದು ಅವರ ಗುರುಗಳು ಅವರಿಗೆ ಶಿಕ್ಷಣ ನೀಡಿದ್ದಷ್ಟೇ ಅಲ್ಲ ಅಗತ್ಯ ಸಲಕರಣೆಗಳನ್ನೂಕೊಟ್ಟು ಕಳುಹಿಸಿದರು. ಶಿಷ್ಯ ಸಮರ್ಥವಾಗಿ ಆ ಕೆಲಸ ಮಾಡಿಮುಗಿಸಿದರು. ಬಹಳ ಫಲಪ್ರದ ಕಲಿಕೆಗೆ ಉದಾಹರಣೆ ಎಂದು ನಾವು ಇದನ್ನು ಸ್ಮರಿಸುತ್ತೇವೆ. ಅಂತಹ ಕಲಿಕೆಯೇ ನಮಗೆ ಇಂದು ಸಹ ಬೇಕಾಗಿರುವುದು. ಅದಕ್ಕೇನು ಮಾಡಬೇಕು? ನಿಜವಾದ ಅರ್ಥದಲ್ಲಿ ಏನನ್ನಾದರೂ ಕಲಿಯಲು ಪ್ರಾರಂಭಿಸಬೇಕು. ಮನೆಯಲ್ಲಿ,  ಸುತ್ತಲಿನ ಪರಿಸರದಿಂದ, ವಾತಾವರಣದಿಂದ, ಸ್ವತಃ ನಮ್ಮಿಂದ ನಾವು ಏನನ್ನಾದರೂ ಕಲಿಯುತ್ತ ಇರಬೇಕು. ನಮ್ಮ ಕುರಿತು ನಾವು ತಿಳಿಯುವ ‘ಆತ್ಮಜ್ಞಾನ’ವಂತೂ ಬದುಕಿಡೀ ನಡೆಯಬೇಕಾದ ಕ್ರಿಯೆ.

ಈಗ ಮತ್ತೆ ವರ್ತಮಾನಕ್ಕೆ ಹೊರಳೋಣ. ಎದ್ದಕೂಡಲೇ ಮೊಬೈಲ್ ಎದುರಿಗಿಟ್ಟುಕೊಂಡು ಕೂರುವುದು ಈ ದಿನಗಳಲ್ಲಿ ನಾವು ಮಾಡುವ ಮೊದಲ ಕೆಲಸ. ನನ್ನ ಸೆಲ್ ಇಂದು ಹತ್ತು ‘ನೋಟಿಫಿಕೇಶನ್’ ತೋರಿಸುತ್ತಿದೆ ಎಂದಿಟ್ಟುಕೊಳ್ಳೋಣ. ಅವುಗಳಲ್ಲಿ ಕೆಲವು ಯಾರದೋ ಜನ್ಮದಿನ, ಇನ್ಯಾರದೋ ವಿವಾಹ ವಾರ್ಷಿಕೋತ್ಸವ ಕುರಿತಾಗಿರಬಹುದು. ಗೆಳತಿ ತನ್ನ ‘ಪ್ರೊಫೈಲ್  ಬದಲಾಯಿಸಿದ್ದಾಳೆ ಎಂದು ಮಗದೊಂದು ಹೇಳಬಹುದು. ಆದರೆ ‘ನೀವು ಜೀವನದಲ್ಲಿ ಮಾಡುತ್ತಿರುವ 21 ತಪ್ಪುಗಳು’ ಎಂಬ ಬಗ್ಗೆ ಸಹ ಒಂದು ಸೂಚನೆ ಇರುವ ಸಾಧ್ಯತೆ ಇದೆ. ಕೂಡಲೇ ತೆರೆದು ಓದಿ, ತಾಳೆ ನೋಡಿದರೆ, ‘ಹೌದು, 21ರಲ್ಲಿ ಸುಮಾರು 15 ತಪ್ಪುಗಳನ್ನು ಸದ್ಯ ಮಾಡುತ್ತಿದ್ದೇನೆ’ ಎಂಬ ಕಲಿಕೆ ಸಾಧ್ಯ! ಇನ್ನೊಂದು ಸರ್ವೇಸಾಧಾರಣ ಸಂಗತಿಯನ್ನು ಮಾದರಿಯಾಗಿ ತೆಗೆದುಕೊಳ್ಳಬಹುದಾದರೆ, ಹಣ್ಣಿನ ರಸವನ್ನು ಜ್ಯೂಸ್ ಬಾಟಲಿಯಿಂದ ಗ್ಲಾಸ್‌ಗೆ ಬಗ್ಗಿಸುತ್ತಿರುತ್ತೇವೆ. ಅದರ ‘ನಾಜಲ್’ ಕೆಳಗಿರುವಂತೆಯೇ ಬಗ್ಗಿಸಿದರೆ ಗಳಗಳ  ಉಂಟುಮಾಡುತ್ತದೆ. ನಾಜಲ್‌ನ್ನು ಮೇಲ್ಮುಖವಾಗಿ ಎತ್ತಿ ಬಗ್ಗಿಸಿದರೆ ಶಬ್ದ ಬರುವುದಿಲ್ಲ ಮತ್ತು ಅದು ಸುರಿಯುವ ಸರಿಯಾದ ರೀತಿ. ಮೊದಲಿಗೆ ನನಗಿದು ಗೊತ್ತಿರಲಿಲ್ಲ. ಆದರೆ ಗೊತ್ತಾದ ಮೇಲೆ ಪ್ರತಿ ಬಾರಿ ಅದನ್ನು ಅಳವಡಿಸಿಕೊಳ್ಳುತ್ತೇನೆ ಎಂದಾದರೆ ಅದನ್ನು ಕಲಿತಿದ್ದೇನೆ ಎಂದರ್ಥ.

ನಮ್ಮ ಆಸಕ್ತಿಯ ವೃತ್ತಿಜೀವನ, ಪ್ಯಾಶನ್‌ಗಳನ್ನು ಕಂಡುಕೊಳ್ಳುವುದೂ ಸಹ ಕಲಿಕೆಯಿಂದಲೇ ಆಗಬೇಕು. ಪ್ರತಿ ದಿನ ಅದು ಘಟಿಸುವುದಿಲ್ಲ ನಿಜ. ಕೆಲವರಿಗೆ ಅದನ್ನು ಕಂಡುಕೊಳ್ಳಲಾಗುವುದೇ ಇಲ್ಲ. ಅತಿ ಚಿಕ್ಕ ವಯಸ್ಸಿನಲ್ಲಿ ಗೊತ್ತಾಗಿರುವುದಿಲ್ಲ. ಉದಾಹರಣೆಗೆ ನಮ್ಮ  ಕಲಿಯುತ್ತಿರುವ ಒಬ್ಬ ಏಳೆಂಟು ವರ್ಷದ ಬಾಲಕನನ್ನು ಕರೆದು ‘ಏನು ನಿನ್ನ ಜೀವನದ ಗುರಿ?’ ಅಂತ ಕೇಳಿದರೆ ‘ಪಿಎಸ್-2 (ಕಂಪ್ಯೂಟರ್ ಗೇಮ್) ಆಟವಾಡುವುದು ಎಂದಾನು! ಆದರೆ ಒಮ್ಮೆ ಕಂಡುಕೊಂಡ ಬಳಿಕ ಅದು ಅಗಾಧವಾಗಿ ನಮ್ಮನ್ನು ಪ್ರೇರೇಪಿಸುತ್ತದೆ. ಕೆಲ ಸಂಗತಿಗಳನ್ನು ಕಲಿಯಬೇಕಾಗಿದೆ ಎಂಬುದನ್ನು ಸ್ವೀಕರಿಸಿ, ಕಲಿತ ನಂತರ ಅದು ಜೀವನವಿಡೀ ನಾವು ಮಾಡಬಯಸುವ ಕೆಲಸ ಎನ್ನುವುದು ಗೊತ್ತಾಗುತ್ತದೆ. ಇದನ್ನೇ ವಿದ್ಯಾರ್ಥಿಗಳಿಗೆ ಶಾಲೆಗಳು ನೀಡಬೇಕಾಗಿರುವುದು ಇದನ್ನೇ.

ನನ್ನದೇ ಉದಾಹರಣೆ ನೀಡುವುದಾದರೆ, ನನ್ನ ಕುಟುಂಬದಲ್ಲಿ  ವೈದ್ಯರು. ನನ್ನ ತಂದೆ-ತಾಯಿ, ಅಕ್ಕ-ಭಾವ ಮೊದಲುಗೊಂಡು ಒಟ್ಟು 15 ಡಾಕ್ಟರ್‌ಸ್ ಇದ್ದಾರೆ. ಆದರೆ ನಾನು ವೈದ್ಯಳಾಗದಿರಲು ನಿರ್ಧರಿಸಿದೆ. 12ನೇ ತರಗತಿ ಕಲಿಯುವಾಗಲೇ ಇದು ನನಗೆ ಹೇಳಿಸಿದ್ದಲ್ಲ ಎಂಬ ಯೋಚನೆ ಬಂತು. ವಾಸ್ತವ ಜಗತ್ತಿನಲ್ಲಿ ಯಶಸ್ವಿಯಾಗಲು ಬೇಕಾದ ಕೌಶಲಗಳಾದ ವ್ಯವಹಾರ ಚಾತುರ್ಯ,  ಸನ್ನಿವೇಶಕ್ಕೆ ತಕ್ಕಂತೆ ಬುದ್ಧಿ ಓಡಿಸುವುದು ಹೇಗೆ ಮುಂತಾದವನ್ನು ನಮ್ಮ ಶಿಕ್ಷಣ ಪದ್ಧತಿ ಕಲಿಸುವುದಿಲ್ಲ. ಯಾವಾಗ ಹೇಗೆ ವರ್ತಿಸಬೇಕು, ನಡಿಗೆ ಹೇಗಿರಬೇಕು, ಮಾತು ಹೇಗಿರಬೇಕು ಮುಂತಾದ ‘ಸಾಫ್‌ಟ್ ಸ್ಕಿಲ್‌ಸ್’ಗೆ  ದಿನಗಳಲ್ಲಿ ಬಹಳ ಮಹತ್ವವಿದೆ. ಶಾಲೆಗಳಲ್ಲಿ ಹೇಳಿಕೊಡಲಾಗುತ್ತಿದೆ. ಕಲಿತ ನಂತರ ಅವನ್ನು ಜೀವನದಲ್ಲಿ ಅನ್ವಯಿಸಿಕೊಳ್ಳುವುದಕ್ಕೂ ಅಷ್ಟೇ ಮಹತ್ವ ನೀಬೇಕು. ಸ್ವತಂತ್ರವಾಗಿ ಚಿಂತಿಸುವ ಮನೋಭಾವ ಬೆಳೆಯುವುದು ಇವನ್ನೆಲ್ಲ ಕಲಿತು, ಅನುಷ್ಠಾನ ಮಾಡಿದಾಗ.

ಭಾರತೀಯ ಶಾಲಾ ಪರಿಸರದಲ್ಲಿ, ಮಕ್ಕಳಿಗೆ ಸಮರ್ಪಕ ಲೈಂಗಿಕ ತಿಳಿವಳಿಕೆ ನೀಡುವ ‘ಸೆಕ್‌ಸ್ ಎಜುಕೇಶನ್’ ಇಲ್ಲ ಎಂಬುದನ್ನೂ ನಾನು ಇಲ್ಲಿ ಪ್ರಸ್ತಾಪಿಸಬಯಸುತ್ತೇನೆ. ಬಾಲಕ-ಬಾಲಕಿಯರಿಗೆ ಯಾವುದು ಸರಿ, ಯಾವುದು ತಪ್ಪು, ಪರಸ್ಪರರನ್ನು ಗೌರವಿಸುವುದು ಹಾಗೂ ಕೆಟ್ಟ ಸ್ಪರ್ಶ ಮತ್ತು ಒಳ್ಳೆಯ ಸ್ಪರ್ಶಗಳಿಗೆ  ವ್ಯತ್ಯಾಸ ತಿಳಿಸಿಕೊಡುವುದು ಅತ್ಯಗತ್ಯವಾಗಿದೆ. ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಹೇಗೆ ಎಂಬುದನ್ನೂ ನಮ್ಮ ಹೆಣ್ಣುಮಕ್ಕಳಿಗೆ ಶಾಲೆಗಳು ಕಲಿಸಬೇಕಿದೆ.

ಈ ಸ್ಲೈಡ್‌ನಲ್ಲಿ ‘ಲೇಗೊ ಬ್ಲಾಕ್‌ಸ್’ ಬಳಸಿ ಗಣಿತ ಕಲಿಸುವುದನ್ನು ತೋರಿಸಲಾಗಿದೆ. ಹೀಗೆ ಶಿಕ್ಷಣ ಚಟುವಟಿಕೆ ಕೇಂದ್ರಿತವಾಗಬೇಕು. ಆಸಕ್ತಿ ಕೆರಳಿಸುವಂತಿರಬೇಕು. ಆಟ-ಪಾಠಗಳೆರಡೂ ಹದವಾಗಿ ಬೆರೆಯಬೇಕು. ಬೆಳೆಯುವ ಮಕ್ಕಳಲ್ಲಿ ಪ್ರತಿ ವಿಷಯ ಕುರಿತು ರಾಶಿ ಪ್ರಶ್ನೆಗಳಿರುತ್ತವೆ. ಎಲ್ಲವನ್ನೂ ಉತ್ತರಿಸಲು ಯತ್ನಿಸಿ ಅವರ ಕುತೂಹಲ ತಣಿಸಬೇಕು. ಅದರಿಂದಾಗಿ ಅವರ ಸೃಜನಶಿಲತೆ, ಪೂರ್ಣ ಸಾಮರ್ಥ್ಯ ಹೊರ ಹೊಮ್ಮುತ್ತದೆ.  ಪೋಷಿಸುವುದು ನಮ್ಮ ಕೆಲಸ. ಯಶಸ್ಸನ್ನು ಅವರೇ ಸಾಧ್ಯವಾಗಿಸಿಕೊಳ್ಳುತ್ತಾರೆ. ಈ ಹಿರಿದಾದ ಕಾಣ್ಕೆ ಶಿಕ್ಷಕರಲ್ಲಿ ಸದಾಕಾಲ ಜಾಗೃತವಾಗಿದ್ದರೆ ನಾವು ಶಿಕ್ಷಣ ನೀಡಿದ ಮಕ್ಕಳೆಲ್ಲಾ ಬದುಕಿನಲ್ಲಿಯೂ ಯಶಸ್ಸು ಸಾಧಿಸಿದವರಾಗಲು ಸಾಧ್ಯ.

ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಕಲಿಸುವಾಗ ನಾವು ಭವಿಷ್ಯದ ಎರಡು ತಲೆಮಾರನ್ನು ರೂಪಿಸುತ್ತಿರುತ್ತೇವೆ. ಅದು ವಿಶ್ವದಲ್ಲಿ ನಮ್ಮ ದೇಶದ ಸ್ಥಾನಮಾನ ನಿರ್ಧರಿಸುತ್ತದೆ. ಅತ್ಯುತ್ತಮ ವೈದ್ಯರು, ಎಂಜಿನಿಯರ್‌ಗಳು, ಅನಿಮೇಷನ್ ತಂತ್ರಜ್ಞರನ್ನು ತಯಾರುಮಾಡಿದರೆ  ಅಂತಿಮವಾಗಿ ಅದು ನಮ್ಮ ದೇಶವನ್ನು ಮುಂಚೂಣಿಗೆ ತರುತ್ತದೆ ಎಂಬುದನ್ನುಮರೆಯಬಾರದು.

Tags

Related Articles

Leave a Reply

Your email address will not be published. Required fields are marked *

Language
Close