About Us Advertise with us Be a Reporter E-Paper

ಅಂಕಣಗಳು

ಹೆಚ್ಚು ಉಪ್ಪು ತಿನ್ನುವುದು ಸರಿಯಲ್ಲ, ಕಡಿಮೆಯೂ ಸಲ್ಲ

ಆರೋಗ್ಯ: ಎಸ್.ಜಿ.ಹೆಗಡೆ,  ಡೈರೆಕ್ಟರ್, ಲಾಸಾ

ಉಪ್ಪಿನ  ನಿಯಂತ್ರದಲ್ಲಿಡುವ ಕುರಿತಂತೆ ಹೆಚ್ಚಿನ ಅರಿವು ಸಮಾಜದಲ್ಲಿ ಮೂಡಬೇಕು. ಉಪ್ಪು ನಿಯಂತ್ರಣದ ಯುಕ್ತತೆ ಸಮಾಜದ ಆಳಕ್ಕೆ ಇಳಿದಿಲ್ಲ. ಹೆಚ್ಚು ಉಪ್ಪಿನ ರುಚಿ ನಾಲಿಗೆಗೆ ರೂಢಿಯಾಗಿದೆ. ಉಪ್ಪಿಲ್ಲದ ಅಡುಗೆಯೆಂದರೆ ನಗುವಿಲ್ಲದ ಹೆಣ್ಣಿನ ಮುಖದಂತೆ ನೀರಸ ಎನ್ನುವುದಿದೆ. ಊಟಕ್ಕೆ ಮೊದಲು ಉಪ್ಪಿನಕಾಯಿ ಬೇಕು. ಊಟದ ಬಾಳೆಯಲ್ಲಿ ಮೊಟ್ಟಮೊದಲು ಬಡಿಸುವುದೇ ಉಪ್ಪು. ಉಪ್ಪನ್ನು ಬಡಿಸಿದ ನಂತರವೇ ಬೇರೆಲ್ಲಾ ಪದಾರ್ಥಗಳನ್ನು ಬಡಿಸುವ ರಿವಾಜು ಸುಮಾರಾಗಿ ದೇಶದ ಎಲ್ಲೆಡೆ ಇದೆ. ಬಾಳೆಯ ತುದಿಯ ಸಾಲು ಬಡಿಸುವ ಬಗೆಗಳಲ್ಲಿ  ಬಗೆಬಗೆಯ ಸಂಡಿಗೆಗಳು, ಹಪ್ಪಳ ಮತ್ತು ಕರಿದ ಮೆಣಸು ಎಲ್ಲವೂ ಒಂದು ರೀತಿಯಲ್ಲಿ ಉಪ್ಪಿನ ಪದಾರ್ಥಗಳೇ. ಉಪ್ಪಿನಕಾಯಿ ತಯಾರಿಯಲ್ಲಿ ಬಳಸುವ ಮಾವಿನ ಮಿಡಿ, ನಿಂಬೆ, ನೆಲ್ಲಿ.. ಹೀಗೆ ಸಸ್ಯ ಫಲಗಳನ್ನು ಸಾಕಷ್ಟು ಸಮಯ ಉಪ್ಪಿನ ನೀರಿನಲ್ಲಿ ಮುಳುಗಿಸಿಟ್ಟು ನಂತರ ಮೆಣಸಿನ ದ್ರವ್ಯದ ಜತೆ ಸೇರಿಸುವುದು ಸಾಂಪ್ರದಾಯಿಕ ತಯಾರಿಕೆಯ ರೀತಿ. ಹಾಗೆಯೇ ಮೆಣಸು ಮತ್ತು ಸಂಡಿಗೆಗಳ ತಯಾರಿಕೆಯಲ್ಲಿಯೂ ಅತಿಯಾದ ಉಪ್ಪಿನ ಪ್ರಮಾಣವನ್ನು ಮಜ್ಜಿಗೆಯ ಜತೆ ಸೇರಿ ಬಳಸುವುದು ವಾಡಿಕೆ. ಉಪ್ಪಿನ ದ್ರವವನ್ನು  ಸಂರಕ್ಷಕ ದ್ರವದಂತೆ ಬಳಸುವುದು ರೂಢಿ ಇಂದಿಗೂ ಸಾಕಷ್ಟು ಹಳ್ಳಿಗಳಲ್ಲಿದೆ.

ನಮ್ಮ ದೇಶದ ವಿವಿಧ ಭಾಗದ ಆಹಾರದಲ್ಲಿ ಉಪ್ಪಿಗೆ ತುಂಬಾ ಮಹತ್ವವಿದೆ. ಹಾಗೆ ಪರಿಗಣಿಸಿದರೆ ದಕ್ಷಿಣ, ಪೂರ್ವ ರಾಜ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಮತ್ತು ಮಧ್ಯ ಭಾರತ ಭಾಗದ ರಾಜ್ಯಗಳು ತುಲನಾತ್ಮಕವಾಗಿ ಕಡಿಮೆ ಪ್ರಮಾಣದಲ್ಲಿ ಉಪ್ಪು ಬೆರೆತ ಆಹಾರ ಸೇವಿಸುವುದು ದಾಖಲೆಯಾಗಿದೆ. ಆಸ್ಟ್ರೇಲಿಯಾ ಮೂಲದ ‘ಜಾರ್ಜ್ ಇನ್‌ಸ್ಟಿಟ್ಯೂಟ್ ಆಫ್ ಗ್ಲೋಬಲ್ ಹೆಲ್‌ತ್’ ಎಂಬ ವಿಶ್ವಾಸಾರ್ಹ ಸಂಸ್ಥೆಯು ಇಂಡಿಯನ್ ಸ್ಪೆಂಡ್ ಅನಾಲಿಸಿಸ್ ಮೂಲಕ  ದೇಶದ 29 ರಾಜ್ಯಗಳು ಮತ್ತು 7 ಯೂನಿಯನ್ ಟೆರಿಟೆರಿಯ 2,27,214 ಜನ ವಯಸ್ಕರನ್ನು ನಿಯಮಿತವಾದ ಅಧ್ಯಯನ ಮತ್ತು ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಿ ಒಂದು ಮಿಕ್ಷೆ ನಡೆಸಿತ್ತು. ಪರಿಣಾಮದ ವಿಶ್ಲೇಷಣೆ ನಡೆಸಿ, ನಮ್ಮ ದೇಶದಲ್ಲಿ 5.22ಗ್ರಾಂ ಕಡಿಮೆ, 43.3ಗ್ರಾಂ ಹೆಚ್ಚು ಅಂದಂತೆ ಸರಾಸರಿ ಪ್ರತಿದಿನ ಒಬ್ಬ ವಯಸ್ಕನು 10.98ಗ್ರಾಂ ಉಪ್ಪು ಸೇವಿಸುತ್ತಿರುವುದಾಗಿ ವರದಿಯಲ್ಲಿ ಹೇಳಿತು. ಅಲ್ಲದೇ ಹೆಚ್ಚು ಉಪ್ಪು ಸೇವಿಸುತ್ತಿರುವವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಕ್ತದ ಒತ್ತಡ ಮತ್ತು ಕಾರ್ಡಿಯೋವಾಸ್ಕುಲರ್ ತೊಂದರೆಗೆ  ಅವರಲ್ಲಿ ಸುಮಾರು 23 ಪ್ರತಿಶತ ಸಾವಿಗೆ ಕಾರಣವೆಂಬ ವಿಷಯವನ್ನೂ ತಿಳಿಸಿತ್ತು. ಉಪ್ಪು ಸೇವನೆಯು ನಮ್ಮ ದೇಶದಲ್ಲಿ ಏ ನಿಗದಿಪಡಿಸಿದ 5ಗ್ರಾಂ ಮಿತಿಯ ದ್ವಿಗುಣವಿರುವುದು ತಿಳಿದಿದೆ. ಅಂದರೆ, ಆಹಾರದಲ್ಲಿ ಹೆಚ್ಚು ಉಪ್ಪು ನಮ್ಮ ರಾಜ್ಯದ ಕಡು ವೈರಿಯಾಗಿದೆ ಎಂಬ ನಿಜ ಸಂಗತಿ ಸ್ಪಷ್ಟವಾಗಿ ಬಯಲಾಗಿದೆ.

ಉಪ್ಪು ಸೇವನೆಯ ವಿಚಾರವು ಸಾಕಷ್ಟು ಸೂಕ್ಷ್ಮ ಇರುವುದರಿಂದ ಉಪ್ಪು ದೇಹ ಸೇರಿದಾಗ, ಅಲ್ಲಿ ನಡೆಯುವ ಜೈವಿಕ ಪ್ರಕ್ರಿಯೆಯನ್ನು ಸಂಕ್ಷಿಪ್ತವಾಗಿ ಗಮನಿಸುವುದು ಪ್ರಸ್ತುತ ಅನಿಸುತ್ತದೆ. ದೇಹದಲ್ಲಿ  ಸೇರಿದಾಗ ನೀರಿನಲ್ಲಿ ಬೆರೆತು ಧನಾತ್ಮಕ ಸೋಡಿಯಂ ಮತ್ತು ಋಣಾತ್ಮಕ ಕ್ಲೋರೈಡ್ ಆಯಾನ್‌ಗಳಾಗಿ ಒಡೆದು ಬೇರೆ ಬೇರೆ ಪ್ರಕ್ರಿಯೆಗಳಲ್ಲಿ ತೊಡಗಿಕೊಳ್ಳುತ್ತವೆ. ಸೋಡಿಯಂ ಭಾಗವು ಎಲೆಕ್ಟ್ರೋಲೈಟ್‌ನಂತೆ ವರ್ತಿಸಿ, ಜೀವಕೋಶಗಳ ಹೊರ ಮತ್ತು ಒಳ ದ್ರವದ ನಡುವೆ ಸಂತುಲನ ಕಾಯ್ದುಕೊಳ್ಳುವ ಮೂಲಕ ದೇಹದ ಶಕ್ತಿಯ ಸಮತೋಲನ ನಿಯಂತ್ರಿಸುತ್ತದೆ. ನರಗಳ ಮೂಲಕ ಮಿದುಳಿಗೆ ಸಂದೇಶ ತಲುಪಿಸುವ ಮಹತ್ವದ ಕೆಲಸ ಮಾಡುತ್ತದೆ. ಕಿಡ್ನಿಯಿಂದ ನೀರನ್ನು ಯೋಗ್ಯ ಪ್ರಮಾಣದಲ್ಲಿ ರಕ್ತಕ್ಕೆ ಕಳುಹಿಸುವ ಕಾರ್ಯದಲ್ಲಿ ಭಾಗವಹಿಸುತ್ತದೆ. ಕ್ಲೋರೈಡ್ ಭಾಗವು  ನೀರಿನ ಜತೆ ಸೇರಿ ಹೈಡ್ರೋಕ್ಲೋರಿಕ್ ಆಮ್ಲದ ರೂಪು ತೆಳೆದು ಜೀರ್ಣಕ್ರಿಯೆಯಲ್ಲಿ ಭಾಗವಹಿಸುತ್ತದೆ. ಹೀಗೆ ಶರೀರದ ಜೈವಿಕ ಕ್ರಿಯೆಗೆ ಉಪ್ಪು ಅತ್ಯಗತ್ಯವಿದ್ದು ಉಪ್ಪಿಲ್ಲದೇ ಸರಿಯಾದ ಜೈವಿಕ ಕ್ರಿಯೆ ನಡೆಸುವಂತೆಯೇ ಇಲ್ಲ. ಉಪ್ಪಿನ ಪ್ರಮಾಣ ಮಿತಿಮೀರಿದಾಗ ಅತಿಯಾದ ಪ್ರಮಾಣದಲ್ಲಿ ಮೂತ್ರಕೋಶದಿಂದ ನೀರು ರಕ್ತಕ್ಕೆ ತಳ್ಳಲ್ಪಟ್ಟು, ಒಂದು ಕಡೆ ರಕ್ತದ ಒತ್ತಡ ಹೆಚ್ಚಿ ಹೃದಯಾಘಾತಕ್ಕೆ ಕಾರಣವಾದರೆ ಅಂತಹ ಒತ್ತಡವೂ ಮೂತ್ರಕೋಶವನ್ನು ದುರ್ಬಲವಾಗಿಸುತ್ತದೆ. ಅಲ್ಲದೇ ಮಿದುಳಿಗೆ ಕಳಿಸುವ ಸಂದೇಶಗಳು ಅಕ್ರಮವಾಗುತ್ತವೆ. ಜಠದಲ್ಲಿ ಹೆಚ್ಚಿನ ಆಮ್ಲದ  ಹೊಟ್ಟೆಯ ಕ್ಯಾನ್ಸರ್‌ಗೆ ಕಾರಣವಾಗಬಹುದು. ಮಿದುಳು ಅಕ್ರಮವಾಗಿ ಕೆಲಸ ಮಾಡಬಹುದು. ಅಂದರೆ ಅತಿಯಾದ ಉಪ್ಪಿನ ಪ್ರಮಾಣವೂ ಜೀವ ಜಗತ್ತಿಗೆ ವಿಪರೀತ ಹಾನಿದಾಯಕವಾಗುತ್ತದೆ. ಅಂತಹ ಗಂಭೀರ ಪರಿಣಾಮಗಳನ್ನು ಪರಿಗಣಿಸಿ ಜಾಗತಿಕ ಆರೋಗ್ಯ ಸಂಸ್ಥೆಯು ಉಪ್ಪಿನ ಮಿತಿಯನ್ನು ದಿನಕ್ಕೆ ಐದು ಗ್ರಾಂ ಎಂದು ನಿಗದಿಪಡಿಸಿದೆ. ಅಮೆರಿಕ, ಯುರೋಪ್, ಆಸ್ಟ್ರೇಲಿಯಾ, ಕೆನಡಾ, ಯುಕೆ ಮುಂತಾದ ದೇಶಗಳಲ್ಲಿ ಉಪ್ಪಿನ ಮಿತಿಯ ಕುರಿತು ಸಾಕಷ್ಟು ಅರಿವಿದ್ದು ಅಲ್ಲಿನ ಉಪ್ಪಿನ ಬಳಕೆಯೂ ನಿಗದಿತ ಪ್ರಮಾಣಕ್ಕಿಂತ ಸರಾಸರಿ ಕಡಿಮೆಯಿದೆ. ಅಂದರೆ  ಸುಮಾರು 3500ಮಿಲಿ.ಗ್ರಾಮ್‌ನಷ್ಟು ಇದೆ.

ಯೋಗ್ಯ ಪ್ರಮಾಣದ ಉಪ್ಪಿನ ಸೇವನೆಯಿಂದಾಗುವ ಆರೋಗ್ಯ ಲಾಭವನ್ನು ತಿಳಿದುಕೊಳ್ಳುವುದು ಮಹತ್ವದ ವಿಷಯ. ಸಮೀಕ್ಷೆಯ ಪ್ರಕಾರ ಪ್ರತಿದಿನ ತಿನ್ನುವ ಉಪ್ಪಿನ ಪ್ರಮಾಣವನ್ನು ಒಂದು ಗ್ರಾಂ ಕಡಿತ ಮಾಡಿದರೆ, ಹೃದಯಾಘಾತದ ಮತ್ತು ಪೆರಾಲಿಸಿಸ್ ಸಂಭವವು 4.8 ಪ್ರತಿಶತ ಕಡಿಮೆಯಾಗುವುದೆಂದು ಹೇಳಿದೆ. ಉಪ್ಪಿನ ಸೇವನೆಯ ಮಾತ್ರೆಯನ್ನು 3ಗ್ರಾಂ ಕಡಿಮೆ ಮಾಡಿದರೆ, ವಾರ್ಷಿಕವಾಗಿ ಹೃದಯಕ್ಕೆ ಸಂಬಂಧಿತ ಪೀಡಿತರ ಸಂಖ್ಯೆಯನ್ನು 1,80,000ದಿಂದ ಕಡಿಮೆಯಾಗಿಸಿ 1,20,000ಕ್ಕೆ  ಇಳಿಸಬಹುದೆಂದು ‘ಘೆಉ ಐಘೆಎಔಅಘೆಈ ಒಖ್ಕಿಘೆಅಔ ಊ  ಉಲ್ಲೇಖವಿದೆ. ಇವೆಲ್ಲ ವಿವರಗಳು ಉಪ್ಪು ತಿನ್ನುವ ಪ್ರಮಾಣದ ನಿಯಂತ್ರಣದ ಅನಿವಾರ್ಯತೆಯನ್ನು ಒತ್ತಿ ಹೇಳುತ್ತಿವೆ. ಅಂತಹ ಸೂಕ್ಷ್ಮವನ್ನು ಗಮನದಲ್ಲಿಟ್ಟು ಯುಕೆನಲ್ಲಿ ಸೂಪರ್ ಮಾರ್ಕೆರ್ಟ್‌ಗಳಲ್ಲಿ ಸಿಗುವ ‘ತಯಾರಿಸಿದ ಆಹಾರ ಸಂಬಂಧಿತ ಪ್ಯಾಕ್’ ಮೇಲೆ ಉಪ್ಪಿನ ಪ್ರಮಾಣ ಸೂಚಿಸುವ ಕೆಂಪು ಹಳದಿ ಮತ್ತು ಹಸಿರು ಬಣ್ಣದ ಟ್ರಾಫಿಕ್ ಸಿಗ್ನಲ್ ಫ್ಲ್ಯಾಶ್ ನೀಡಲಾಗಿದೆ. ಅಮೆರಿಕದಲ್ಲಿ ಊ್ಕಉಉ, ಔ ಮತ್ತು  ್ಕಉಈಖಿಇಉಈ ಸಂಜ್ಞೆಗಳನ್ನು ಬಳಸಿದೆ. ಅಲ್ಲದೆ ತಿಂಡಿಯನ್ನು ಬಡಿಸುವಾಗ, ಒಮ್ಮೆ ಬಡಿಸುವ ಪದಾರ್ಥದಲ್ಲಿ 480ಮಿಲಿ ಗ್ರಾಮ್‌ಗಿಂತ  ಕಡ್ಡಾಯವಾಗಿ ಗ್ರಾಹಕರಿಗೆ ತಿಳಿಸಬೇಕಿದೆ. ನಮ್ಮ ದೇಶದಲ್ಲಿಯೂ ಅಂಗಡಿಗಳಲ್ಲಿ ಸಿಗುವ ಆಹಾರದಲ್ಲಿ ಮತ್ತು ತಿಂಡಿ ತಿನಿಸುಗಳಲ್ಲಿ ಉಪ್ಪಿನ ಮಟ್ಟವನ್ನು ಸಾಕಷ್ಟು ಕಡಿಮೆ ಮಾಡಬೇಕಿದ್ದು ಅವುಗಳ ಪ್ಯಾಕ್ ಮೇಲೆ ಉಪ್ಪಿನ ಪ್ರಮಾಣವನ್ನು ಸಹಿತ ಸೂಚಿಸಬೇಕಾಗಿದೆ.

ಉಪ್ಪನ್ನು ಅತಿಯಾಗಿ ತಿನ್ನುವುದರಿಂದಾಗುವ ಹಾನಿಯ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸಬೇಕಿದೆ. ಉಪ್ಪಿನ ಸೇವನೆಯ ಕುರಿತು ಸರಿಯಾದ ವಿಚಾರವನ್ನು ಗಮದಲ್ಲಿಟ್ಟುಕೊಳ್ಳುವುದೂ ಅಷ್ಟೇ ಮಹತ್ವದ್ದಾಗಿದೆ. ಆರೋಗ್ಯಶಾಸ್ತ್ರದಲ್ಲಿ ಉಪ್ಪಿನ ಅತಿಯಾದ ಸೇವನೆ ದೇಹಕ್ಕೆ ಎಷ್ಟು ವೈರಿಯೋ, ಮಿತ ಸೇವನೆಯೂ ಅಷ್ಟೇ  ಮಿತ್ರನೂ ಹೌದು. ದೇಹದ ಜೈವಿಕ ಪ್ರಕ್ರಿಯೆಗೆ ಉಪ್ಪು ಅನಿವಾರ್ಯವೆಂದು ನಮಗೆ ತಿಳಿದಿರಬೇಕು. ಉಪ್ಪು ತಿನ್ನುವುದರ ಕುರಿತಾದ ಆತಂಕ ಒಮ್ಮುಖವಲ್ಲವೇ ಅಲ್ಲ. ಉಪ್ಪಿನ ವಿವಿಧ ಅಂಶಗಳ ಕೊರತೆಯಿಂದಲೂ ಜೈವಿಕ ಕ್ರಿಯೆಯಲ್ಲಿ ಭಾರಿ ಏರುಪೇರು ಉಂಟಾಗುವುದೂ ಖಂಡಿತ. ಉಪ್ಪಿನ ಕೊರತೆಯಿಂದ ಮತ್ತು ಮನಸ್ಸಿನ ಸಮತೋಲನ ಕಳೆಯುವುದಲ್ಲದೆ ಜೀರ್ಣಶಕ್ತಿ ಮತ್ತು ಒಟ್ಟಾರೆ ಪಚನಕ್ರಿಯೆ ಅಲ್ಲೋಲ ಕಲ್ಲೋಲವಾಗುತ್ತದೆ. ಹೀಗಿರುವಾಗ ಪ್ರತಿನಿತ್ಯ ಕನಿಷ್ಠ 2.5ಗ್ರಾಂ ಉಪ್ಪು ಜೀವಕ್ಕೆ ಅವಶ್ಯ ಎಂಬ ವಿಷಯವನ್ನು ಅರಿತಿರಲೇಬೇಕು.

ಆಹಾರದಲ್ಲಿ ಉಪ್ಪು  ಗಂಭೀರತೆಯ ಕುರಿತು ಅರಿವನ್ನು ಸಮಾಜದ ಉದ್ದಕ್ಕೂ ತಲುಪಿಸುವ ನಿಟ್ಟಿನಲ್ಲಿ ಹಲವು ಪ್ರತಿಷ್ಠಿತ ವೈದ್ಯರು, ಆಹಾರ ತಜ್ಞರು ಮತ್ತು ಸಂಸ್ಥೆಗಳು ಕಳೆದ ಅಕ್ಟೋಬರ್ ಎರಡಕ್ಕೆ ಸೂರತ್‌ನಲ್ಲಿ ಸಭೆ ಸೇರಿ ಸರಿಯಾದ ಅರಿವನ್ನು ಸಮಾಜದ ಉದ್ದಗಲಕ್ಕೂ ತಲುಪಿಸಲು ನಿರ್ಧರಿಸಿದ್ದಾರೆ. ಅದರ ನಂತರದ ವಿಚಾರ ಸಭೆ ಮುಂಬೈನ ಐಐಟಿಯಲ್ಲಿ ನಡೆಯಿತು. ಇಂಗ್ಲೆಂಡಿನಲ್ಲಿ ಕಡಿಮೆ ಉಪ್ಪು ತಿನ್ನುವ ಅರಿವಿಗೆ ಕಾರಣರೆನ್ನಲಾದ ಪ್ರಸಿದ್ಧ ಹೃದಯಶಾಸ್ತ್ರ ಪ್ರಾಧ್ಯಾಪಕ ಡಾಕ್ಟರ್ ಗ್ರಹಾಮ್ ಮೆಕ್ ಗ್ರೆಗೊರ್ ಅಂತಹ ಅರಿವನ್ನು ಜನತೆಯಲ್ಲಿ  ಯಶಸ್ವಿಯಾಗಿ ಮೂಡಿಸಬೇಕೆಂದು ಮಾರ್ಗದರ್ಶನ ಮಾಡಿದರು. ಇದೇ ಸಭೆಯಲ್ಲಿ ಭಾರತ ಸರಕಾರದ ಪರವಾಗಿ ಭಾಗವಹಿಸಿದ್ದ ಡಾಕ್ಟರ್ ಜಿ.ಎಸ್.ಪೈ, ‘ಡೈರೆಕ್ಟರ್ ಫಾರ್ ನ್ಯೂಟ್ರಿಷನ್ ಅಂಡ್ ಫುಡ್’ ಅವಶ್ಯಕ ವಿಚಾರವನ್ನು ಸರಕಾರದ ಗಮನಕ್ಕೆ ತಂದು ಬಳಕೆಯ ಸೂಚನೆಗೆ ತಕ್ಕ ಶಾಸನ ಅಳವಡಿಕೆಯಾಗುವಂತೆ  ವಿಚಾರಿಸುವುದಾಗಿ ಹೇಳಿದ್ದಾರೆ. ನಂತರ ದೇಶದ ಅನೇಕ ಕಡೆ ಜಾಗ್ರತಾ ಕಾರ್ಯಕ್ರಮದ ಅಂಗವಾಗಿ ಶಿಬಿರ ಸಮಾವೇಶಗಳು ನಡೆದಿವೆ. ಅಂತಹ ಆಂದೋಲನದ ವಿಚಾರವು ನಿಜವಾಗಿ ಇನ್ನೊಂದು ಉಪ್ಪಿನ ಸತ್ಯಾಗ್ರಹವಾಗಿದೆ. ಉದ್ದೇಶವೂ ಉದಾತ್ತವಾಗಿದೆ.

ಸಾಮಾನ್ಯ  ಉಪ್ಪು ನಿಯಂತ್ರಣದ ಸರಿಯಾದ ಅರಿವು ಮೂಡುವುದು ತುಂಬಾ ಮಹ್ವವಾಗಿದೆ. ಈ ಕುರಿತು ಸರಿಯಾದ ವಿಚಾರ ಮನೆ ಮನೆಗೆ ತಲುಪಬೇಕಿದೆ. ವಿಷಯದ ಮಹತ್ವ ಅರಿತು ಸರಕಾರವೂ ಮಾರುಕಟ್ಟೆಯಲ್ಲಿ ಸಿಗುವ ತಿಂಡಿಯ ಪ್ಯಾಕ್ ಮೇಲೆ ಮತ್ತು ಹೋಟೆಲ್ ತಿಂಡಿಗಳಲ್ಲಿ ಉಪ್ಪಿನ ಪ್ರಮಾಣ ಗುರುತಿಸುವ ಕ್ರಮವನ್ನು ಬೇಗನೆ ಜಾರಿಗೊಳಿಸಲಿದೆಯೆಂದು ಈಗಲೇ ಹೇಳಲಾಗುತ್ತಿದೆ. ಆಹಾರದಲ್ಲಿ ಸೂಕ್ತ ಉಪ್ಪಿನ ಪ್ರಮಾಣದ ಅಗತ್ಯ ಮತ್ತು ಅತಿ ಸೇವನೆಯ ದುಷ್ಪರಿಣಾಮದ ಕುರಿತು ಮಾಧ್ಯಮಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಮಾಜಿಕ  ಜನತೆಗೆ ಅರಿವು ಮೂಡಿಸುವಲ್ಲಿ ಕೈಜೋಡಿಸಬೇಕಿದೆ. ಈ ಕುರಿತು ದೇಶದ ಎಲ್ಲಾ ವೈದ್ಯರುಗಳು ತಮ್ಮ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಅರಿವು ನೀಡಿದರೆ ಕ್ರಾಂತಿಕಾರಿ ಪರಿಣಾಮ ಸಿಗಬಹುದು. ಅಲ್ಲದೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಳ್ಳಿ ಹಳ್ಳಿಗಳಲ್ಲಿ ಶಿಬಿರ ಏರ್ಪಡಿಸುವ ಮೂಲಕ ಹಮ್ಮಿಕೊಳ್ಳಬಹುದು. ಅಡಿಗೆ ಮನೆಯಲ್ಲಿ ಮತ್ತು ಬಡಿಸಿದ ಬಾಳೆಯಲ್ಲಿ ಉಪ್ಪಿನ ಬಳಕೆ ಮಿತಿಯಲ್ಲಿ ಇರುವಂತೆ ಕಾಳಜಿವಹಿಸಬೇಕು. ಹೆಚ್ಚು ತಿನ್ನುವುದು ಸರಿಯಲ್ಲ, ಕಡಿಮೆಯೂ ಸಲ್ಲ ಎಂಬ ವಿಚಾರವನ್ನು ಎಲ್ಲರೂ ಸರಿಯಾಗಿ ತಿಳಿದುಕೊಳ್ಳುವುದು ಒಳ್ಳೆಯದು.

Tags

Related Articles

Leave a Reply

Your email address will not be published. Required fields are marked *

Language
Close