About Us Advertise with us Be a Reporter E-Paper

ಗುರು

ಪ್ರಜ್ಞೆಯ ಒಳಹರಿವಿನಿಂದ ಸಂತೋಷ ಸಾಧ್ಯ

- ಓಶೋ ರಜನೀಶ್

ಪ್ರತಿಯೊಬ್ಬ ಮನುಜನೊಳಗೂ ಆತ್ಮವೆನ್ನುವುದಿದೆ. ಆದರೆ ಆ ಆತ್ಮ ಯಾವಾಗ ಕಾರ್ಯರೂಪಗೊಳ್ಳುತ್ತದೆ ಎನ್ನುವುದು ಹಲವರ ಪ್ರಶ್ನೆ. ನಿಮ್ಮ ಪ್ರತಿಯೊಂದು ಪ್ರಶ್ನೆಗೂ ನಿಮ್ಮಲ್ಲಿಯೇ ಉತ್ತರವಿದೆ. ಅದು ನಿಮ್ಮ ಅರಿವಿಗೆ ಬರಲು ನಿಮಗೆ ಪ್ರಜ್ಞೆಯ ಅಗತ್ಯತೆ ಯಾವಾಗ ನಿಮ್ಮ ಇರುವಿಕೆ ನಿಮ್ಮ ಅರಿವಿಗೆ ಬರುತ್ತದೆಯೋ, ನಿಮ್ಮ ಬಗ್ಗೆ ನಿಮಗೆ ಒಳ್ಳೆಯ ಯೋಚನೆ ಹುಟ್ಟುತ್ತದೆಯೋ ಆಗ ನಿಮ್ಮ ಆತ್ಮ ಕಾರ್ಯರೂಪಗೊಂಡಿದೆ ಎಂದರ್ಥ. ನಿಮ್ಮ ಬಗ್ಗೆ ನಿಮಗೇ ಒಳ್ಳೆಯ ಆಲೋಚನೆಗಳು ಇಲ್ಲದಿದ್ದರೆ ಬೇರೆಯವರು ನಿಮ್ಮನ್ನು ಸ್ವೀಕರಿಸಲು ಹೇಗೆ ಸಾಧ್ಯ. ಯಾರೂ ನಿಮ್ಮನ್ನು ಸ್ವೀಕರಿಸಲು ಒಪ್ಪಲಾರರು ಎಂದಾಕ್ಷಣ ಮತ್ತೆ ನೀವೆ ಕೊರಗುತ್ತೀರಿ. ನೀವೇ ಇಷ್ಟ ಪಡದ ನಿಮ್ಮ ದೇಹವನ್ನು ನಿಮ್ಮ ಇರುವಿಕೆಯನ್ನು ಬೇರೆಯವರು ಏತಕ್ಕಾಗಿ ಪ್ರೀತಿಸುತ್ತಾರೆಂಬುದನ್ನು ಒಮ್ಮೆ ಯೋಚಿಸಿ. ಯಾವತ್ತಾದರೂ ನೀವು ಪ್ರೀತಿಯಿಂದ ಸ್ಪರ್ಶಿಸಿದ್ದೀರಾ, ಸಾಧ್ಯವೇ ಇಲ್ಲ. ಹುಟ್ಟಿದಾಗಿನಿಂದ ಇಂದಿನವರೆಗೂ ಯಾವತ್ತೂ ನಿಮ್ಮ ದೇಹ ನಿಮಗೆ ಪ್ರೀತಿಪಾತ್ರವಾಗೇ ಇಲ್ಲ. ನೀವು ಎಂದೂ ಕೂಡ ಆ ದೇವರಿಗೆ ನನ್ನಂಥ ಸುಂದರ ದೇಹವನ್ನು ಕೊಟ್ಟಿದ್ದಕ್ಕೆ ನಿನಗೆ ಧನ್ಯವಾದಗಳು ಎಂದು ಹೇಳೇ ಇಲ್ಲ.

ಧರ್ಮಗಳು ನಿಮಗೆ ಹೇಳಿಕೊಟ್ಟಿರುವುದು ನಿಮ್ಮ ಮನುಷ್ಯ ಜೀವನ ಪಾಪಗಳ ಚೀಲವೆಂದು. ಧರ್ಮಗಳು ನಿಮ್ಮನ್ನು ಕೇವಲ ಆತ್ಮಗಳಾಗಿ ಬದುಕಲು ಪ್ರೇರೇಪಿಸುತ್ತವೆ. ದೇಹಕ್ಕೂ ಆತ್ಮಕ್ಕೂ ಸಂಬಂಧವೇ ಇಲ್ಲದಂತೆ ಮಾಡುತ್ತವೆ ಮತ್ತು ಅದನ್ನೇ ಸತ್ಯವೆಂದು ಮನುಷ್ಯನಲ್ಲಿ ಜ್ಞಾನ ಮೂಡಿದಾಗ ನೀವು ಪಾಪದ ಮೂಟೆಯಲ್ಲವೆಂಬುದು ನಿಮ್ಮ ಅರಿವಿಗೆ ಬರುತ್ತದೆ. ಬದುಕಿನ ಆಳ ನಿಮಗೆ ತಿಳಿಯುತ್ತದೆ. ಧನ್ಯತೆಯ ಭಾವ ನಿಮ್ಮದಾಗುತ್ತದೆ. ಆಗ ಕೇವಲ ನೀವು ಮಾತ್ರವಲ್ಲ ಪ್ರಪಂಚದ ಪ್ರತಿಯೊಂದನ್ನೂ ನೀವು ಧನ್ಯತಾ ಭಾವದಿಂದಲೇ ನೋಡಲಾರಂಭಿಸುತ್ತೀರಿ. ಪ್ರತಿಯೊಂದರಲ್ಲೂ ಪ್ರೀತಿಯನ್ನು ಕಾಣುತ್ತೀರಿ.

ಪ್ರಜ್ಞೆ ನಿಮ್ಮ ಆತ್ಮವನ್ನಾವರಿಸಿದರೆ ನೀವು ಲೋಕಾಧಾರಿತ ಚಿಂತನೆಗಳು ಮತ್ತು ಬೌದ್ಧಿಕ ಚಿಂತನೆಗಳ ಕುರಿತು ಹೆಚ್ಚು ಯೋಚಿಸದೆ ಒಗ್ಗಟ್ಟಿನ ಬದುಕಿನ ಬಗ್ಗೆ ಯೋಚಿಸಲಾರಂಭಿಸುತ್ತೀರಿ. ಆಗ ನೀವು ಸಂತೋಷವಾಗಿರುತ್ತೀರಿ, ಬದುಕನ್ನು ಕಳೆಯುವುದನ್ನು ಕಲಿಯುತ್ತೀರಿ. ನಿಮ್ಮ ಸಂತೋಷ ಕೇವಲ ‘ನಾನು ಸಂತೋಷವಾಗಿದ್ದೇನೆ’ ಎನ್ನುವ ಮಾತುಗಳಿಗೆ ಸೀಮಿತವಾಗಿರುವುದಿಲ್ಲ. ಬದಲಾಗಿ ನಿಮ್ಮ ಸಂತೋಷವನ್ನು ವ್ಯಕ್ತ ಪಡಿಸಲು ನೀವು ನರ್ತಿಸುತ್ತೀರಿ. ನಾವು ಸಾಕಷ್ಟು ಜನರನ್ನು ನೋಡಿದ್ದೇವೆ, ಅವರೆಲ್ಲಾ ‘ನಾನು ಸಂತೋಷವಾಗಿದ್ದೇನೆ’ ಎಂದು ಬಾಯಿ ಮಾತಿನಲ್ಲಿ ಹೇಳುತ್ತಾರೆ. ಆದರೆ ಪ್ರಜ್ಞೆಯ ಒಳಹರಿವಿಲ್ಲದೆ ಸಂತೋಷ ಸಾಧ್ಯವಿಲ್ಲ. ಆ ಸಂತೋಷ ನಿಮ್ಮನ್ನಾವರಿಸಿದ ನಂತರ ಬೇರೆಯವರು ನಿಮ್ಮನ್ನು ಇಷ್ಟ ಪಡಲಿ ಎಂದು ನೀವು ಇಚ್ಛಿಸುವುದಿಲ್ಲ. ನಿಮ್ಮನ್ನು ನೀವು ಪ್ರೀತಿಸುತ್ತೀರಿ. ನಿಮ್ಮ ಬದುಕಿನ ನಿಮಗೆ ನಂಬಿಕೆ, ಪ್ರೀತಿ ಮತ್ತು ಆತ್ಮವಿಶ್ವಾಸ ಹುಟ್ಟುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close