About Us Advertise with us Be a Reporter E-Paper

Breaking Newsಪ್ರಚಲಿತಸಿನಿಮಾಸ್
Trending

ಐಟಿ ಕಚೇರಿಗೆ ವಿಚಾರಣೆಗೆ ಹಾಜರಾದ ನಟ ಯಶ್

ಬೆಂಗಳೂರು: ತಮ್ಮ ನಿವಾಸದ ಮೇಲೆ ನಡೆದ ಐಟಿ ದಾಳಿಗೆ ಸಂಬಂಧಿಸಿದಂತೆ ನಟ ಯಶ್, ತಾಯಿ ಪುಷ್ಪಾ ಅವರೊಂದಿಗೆ ಐಟಿ ಕಚೇರಿಗೆ ವಿಚಾರಣೆಗಾಗಿ ಆಗಮಿಸಿದ್ದಾರೆ.

ಜನವರಿ 3 ರಂದು ರಾಕಿಂಗ್ ಸ್ಟಾರ್ ಯಶ್​ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಹಲವು ದಾಖಲೆಗಳನ್ನ ವಶಕ್ಕೆ ಪಡೆದಿದ್ದರು. ಈ ಸಂಬಂಧ ನಟ ಯಶ್​ಗೆ ವಿಚಾರಣೆ ಹಾಜರಾಗುವಂತೆ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಟ ಯಶ್​ ಇಂದು ಅವರ ತಾಯಿಯೊಂದಿಗೆ ಬೆಂಜ್​ ಕಾರ್​ನಲ್ಲಿ ಐಟಿ ಕಚೇರಿಗೆ ಆಗಮಿಸಿದ್ದಾರೆ.

ಇನ್ನು ಯಶ್ ಆಡಿಟರ್ ಕಚೇರಿ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಶೇಷಾದ್ರಿಪುರಂನಲ್ಲಿರುವ ಆಡಿಟರ್ ಬಸವರಾಜ್ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close