ವಿಶ್ವವಾಣಿ

ಇದು ಪ್ರಕೃತಿಯಲ್ಲಿನ ವೈವಿಧ್ಯದ ಮಾತು!

ಳೆದ ವಾರ ದೇಶದ ಸುಪ್ರೀಂ ಕೋರ್ಟಿನಿಂದ ಐತಿಹಾಸಿಕವೆನ್ನಬಹುದಾದ ತೀರ್ಪೊಂದು ಹೊರಬಿದ್ದಿದ್ದು, ಈವರೆಗೂ ಐಪಿಸಿ ಸೆಕ್ಷನ್ 377ರ ಅನ್ವಯ, ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲ್ಪಟ್ಟಿದ್ದಇಬ್ಬರು ಸಮಾನ ಲಿಂಗಿಗಳ ನಡುವೆ ಪರಸ್ಪರ ಸಹಮತಸಮ್ಮತಿಯಿರುವ ಕ್ರಿಯೆಯುಇನ್ನು ಮುಂದೆ ಹಾಗಲ್ಲವೆಂದು (ಅಪರಾಧವಲ್ಲವೆಂದು) ನಿರ್ಣಯಿಸಲಾಗಿದೆ. ಅಲ್ಲದೆ, ಇಂತಹ ಲಿಂಗಸಂಬಂಧದಲ್ಲಿ ತೊಡಗುವುದುಹಾಗೆ ತೊಡಗಲಿಚ್ಛಿಸುವ (ಗಂಡಿರಲಿ, ಹೆಣ್ಣಿರಲಿ) ವ್ಯಕ್ತಿಯ ಸಾಂವಿಧಾನಿಕ ಹಕ್ಕೂ ಹೌದೆಂದು ಅಭಿಮತಿಸಲಾಗಿದೆ. 1861ರಿಂದ 6ನೇ ಸೆಪ್ಟೆಂಬರ್ 2018ರವರೆಗೂ ಅನುಷ್ಠಾನದಲ್ಲಿದ್ದ ಕಾನೂನು ಅಸಂಗತವೂ, ಅಸಮಂಜಸವೂ ಇದ್ದಿತೆಂದುನ್ಯಾಯಾಲಯವೇ ಅಪ್ಪಣೆ ಕೊಟ್ಟಿದೆ.

ಸ್ವಾಭಾವಿಕವಾಗಿಯೇ ದೇಶಾದ್ಯಂತ ಇರುವ ಲೈಂಗಿಕ ಅಲ್ಪಸಂಖ್ಯಾತರೆಲ್ಲಈ ತೀರ್ಪಿನ ತಾರೀಖನ್ನು ಪರ್ವ ದಿವಸವೆಂದೂಸಾಕ್ಷಾತ್ ಹಬ್ಬವೇ ಹೌದೆಂದು ಖುಷಿ ಆಚರಿಸಿದ್ದಾರೆ. ತಮ್ಮ ಮಟ್ಟಿಗೆ, ಈಗ ನಿಜವಾದ ಸ್ವಾತಂತ್ರ್ಯ ಬಂದಿತೆಂದು ಹೇಳಿಕೊಂಡಿದ್ದಾರೆ. ಬ್ರಿಟಿಷರ ಕಾಲದ ಕಂದಾಚಾರದಿಂದ ಇದೀಗ ಮುಕ್ತಿಯಾಯಿತೆಂದು ಬೀಗಿದ್ದಾರೆ. ಈ ಮುಂದೆ, ತಂತಮ್ಮ ದೇಹಾಚಾರದ ಮರ್ಜಿ ಖುದ್ದು ತಮ್ಮದೇನೇ ಎಂದು ಮೊಳಗಿದ್ದಾರೆ. ಇದು ಒಪ್ಪತಕ್ಕದ್ದೇ ಸರಿ.

ಹಿಂದಿನ ಮಾತೇನೇ ಇರಲಿ, ಇತ್ತೀಚಿನ ದಿನಗಳಲ್ಲಿಇಡೀ ದೇಶದಲ್ಲಿ ಅಲ್ಲದಿದ್ದರೂ, ನಗರಭಾರತ (ಅರ್ಬನ್‌ಇಂಡಿಯಾ)ವಂತೂ ಈ ರೀತಿಯ ‘ಸಮ’ಲಿಂಗಸಂಬಂಧವನ್ನು ತಕ್ಕ ಮಟ್ಟಿಗೆ ಒಪ್ಪಿಕೊಂಡಿತ್ತು. ಗಂಡುಹೆಣ್ಣುಗಳ ನಡುವೆ ಸ್ವಾಭಾವಿಕ ಸಂಸರ್ಗವಿರುವ ಹಾಗೆಯೇ, ಗಂಡುಗಂಡುಗಳು (ಹಾಗೇ ಹೆಣ್ಣುಹೆಣ್ಣುಗಳೂ) ಪರಸ್ಪರ ಕಾಮಿಸಬಹುದೆಂಬುದನ್ನುನಂಬುಗೆಯೆಂದಲ್ಲದಿದ್ದರೂ ಸಾಧ್ಯ ಅಂತಂದುಕೊಂಡಿತ್ತು. ಲೈಂಗಿಕತೆಯು ಆಯಾ ವ್ಯಕ್ತಿಯ ವೈಯಕ್ತಿಕ ಆಯ್ಕೆ ಎಂದು ತಕ್ಕ ಮಟ್ಟಿಗೆ ಅನುಮೋದಿಸಿತ್ತು. ಹಾಗೇ, ಶರೀರದ ‘ಜೈವಿಕ’ಲಿಂಗವನ್ನೂ ಮೀರಿ ಮನೋ‘ಲಿಂಗ’ವೆಂದೊಂದು ಇದೆಯೆಂಬುದನ್ನು ಸಾಕಷ್ಟು ಅರಿತಿತ್ತು. ನಗರಗಳಲ್ಲಿ ಈ ಪರಿ ಅರಿವುಪರಿವೆಗಳು, ಇಪ್ಪತ್ತೊಂದನೇ ಶತಮಾನದ ಸಂವಹನ ಸಾಧ್ಯತೆಯ ಮುಖೇನವೇನೋ, ಬಹುಶಃ ಹಳ್ಳಿಯೂರಿನ ಮಂದಿ ಸಹಇಂಥದೊಂದು ವಸ್ತುಸ್ಥಿತಿಗೆ ತೆರೆದುಕೊಂಡಿದ್ದವು.

ಯಾವುದೇ ಮನುಷ್ಯನು ಪೂರ್ತಾ ಗಂಡಸಲ್ಲ, ಅಷ್ಟೇ ಪೂರ್ತಿ ಹೆಂಗಸೂ ಅಲ್ಲವೆನ್ನುವುದುಈಗ್ಗೆ, ನೂರುನೂರೈವತ್ತು ವರ್ಷಗಳಿಂದೀಚೆಗಿನ ವೈಜ್ಞಾನಿಕ ಅರಿವು. ಮನೋವಿಜ್ಞಾನವು– ‘ಫ್ರಾಯ್ಡಿಯನ್’ ಮನಶ್ಶಾಸ್ತ್ರವು ಈ ನಿಟ್ಟಿನಲ್ಲಿ ಸಾಕಷ್ಟು ಅಭಿಮತವನ್ನು ಕೊಟ್ಟಿರುವುದು ನಮಗೆ ಗೊತ್ತೇ ಇದೆ. ತಕ್ಕುದಾಗಿ, ಮನುಷ್ಯನ ‘ಲೈಂಗಿಕ’ ದೇಹಾಚಾರವನ್ನು– (ಅದೇ) ದೇಹದ ‘ವ್ಯಕ್ತ’ಲಿಂಗಕ್ಕೂ ಹೆಚ್ಚಾಗಿ, ‘ಒಳ’ರಸಾಯನವು ನಿರ್ವಹಿಸುತ್ತದೆಂದುಜೀವವಿಜ್ಞಾನವು ಈಗಾಗಲೇ ಬಗೆದಿದೆ. ಸಾಬೀತು ಮಾಡಿದೆ. ಮನುಷ್ಯನ ಮೈಯೊಳಗೆ ನಿರ್ನಾಳಗ್ರಂಥಿಗಳೆಂದು ಅಂಗೋಪಾಂಗವಲ್ಲದ ಅವಯವಗಳಿರುತ್ತವೆಂದೂ, ಇವುಗಳು ನೇರ ರಕ್ತದೊಳಕ್ಕೆ ಇಳಿಬಿಡುವ ಏನೇನೋ ರಸರಸಾಯನಗಳುವ್ಯಕ್ತಿಯ ಮನಸ್ಸಿನ ಹಾವಭಾವಗಳನ್ನೂ ಅಲ್ಲದೆ, ಕೋಪಕಾಮಾದಿ ಸುಖದುಃಖಗಳ ತೋರ್ಪಡಿಕೆಯನ್ನು ನಿರ್ವಹಿಸುತ್ತವೆಂದೂನಮಗೆ ಗೊತ್ತಿದೆ. ‘ಹಾರ್ಮೋನು’ಗಳೆನ್ನಲಾಗುವ ಈ ಗ್ರಂಥಿಗಳ ಗಂಡಸೊಬ್ಬನನ್ನು ಗಂಡಸಾಗಿಯೂ, ಹೆಣ್ಣನ್ನು ಹೆಣ್ಣಾಗಿಯೂಇಬ್ಬರ ನಡೆನುಡಿಗಳಲ್ಲಿ ಕಾಣಿಸುತ್ತದೆಂದೂ ನಮಗೆ ಗೊತ್ತಿದೆ. ಹಾಗೇ, ಗಂಡೊಂದು ‘ಹೆಣ್ಣು’ ಹೆಣ್ಣಾಗಿ ನಡೆದುಕೊಳ್ಳಲಿಕ್ಕೂ, ಹೆಣ್ಣೊಂದು ‘ಗಂಡು’ಬೀರಿಯಾಗಲಿಕ್ಕೂಹಿಂದಿರುವ ನಿಜವಾದ ಕಾರಣ, ಈ ಗಂಡುಹೆಣ್ಣುಗಳ ಮನಸ್ಸಲ್ಲವಂತೆ. ಹಾಗೆ ನೋಡಲಾಗಿ, ಮನಸ್ಸಿದ್ಧಿಯೆಂಬುದೇ ಸುಳ್ಳಂತೆ; ಇವೇನಿದ್ದರೂ ಆ ಹಾರ್ಮೋನುಗಳ ಚಮತ್ಕಾರ ಅಥವಾ ಕರಾಮತ್ತಂತೆ!

ವಿಜ್ಞಾನದ ಸಿದ್ಧಿಸಾಧನೆಗಳು ಇಷ್ಟು ಹೇಳಿದ ಮೇಲೆ, ನಮ್ಮ ನಡುವಿನ ವಾದಸಂವಾದಗಳುವೈಜ್ಞಾನಿಕವಾದವುಗಳ ಮೇಲೆ ಪೌರಾಣಿಕ (ಅಂದರೆ ನಮ್ಮ ಪುರಾಣಗಳಿಂದ ಹೆಕ್ಕಿದ) ನಿದರ್ಶ ಳನ್ನೂ ಎಲ್ಲ ಕಾಲಕ್ಕೂ, ಎಲ್ಲ ದೇಶಸಂಸ್ಕೃತಿಗಳಲ್ಲೂ– ‘ಅನಿಗದಿತ’ ಅಂದರೆ ನಿಖರ ನಿಗದಿಯಿಲ್ಲದ ಲೈಂಗಿಕತೆ ಇದ್ದೇ ಇದ್ದಿತೆಂದು ವಾದಿಸಿವೆ. ಪುರಾವೆಗೆಂಬಂತೆ, ಇಂಡಿಯಾದಲ್ಲಿನ ‘ಅರ್ಧನಾರಿ’ಯ ಪರಿಕಲ್ಪನೆಯನ್ನುಮಂಡಿಲಾಗುತ್ತದೆ. ಪರಶಿವನು ಅಷ್ಟೇ ‘ಸಮ’ಶಿವೆಯೆಂದೂ ಹೇಳಲಾಗಿದೆ. ಹಾಗೇ, ಶಿವೆಯು ಶಿವನೂ ಹೌದೆಂದು ಆಡಲಾಗಿದೆ. ಶಬರಿಮಲೆಯ ಅಯ್ಯಪ್ಪಪೂರ್ತಿ ಗಂಡಸಾದ ಮಹಾದೇವನಿಂದಲೂ, ಮೈಯಲ್ಲಿ ಹೆಚ್ಚು ಹೆಣ್ತನ ತುಯ್ದ ವಿಷ್ಣುವಿನಿಂದಲೂ ಉದ್ಭವಿಸಿದ್ದೆಂಬ ಕತೆಯನ್ನು ಮತ್ತೆ ಮತ್ತೆ ಹೇಳಲಾಗಿದೆ. ಮೋಹಿನಿಯಾಗಿ ಮೈದಾಳಿದ ವಿಷ್ಣುವನ್ನು ಮಹಾಳಸ ‘ನಾರಾಯಣಿ’ಯೆಂದು, ಇವೊತ್ತಿಗೂ ಆತನ ‘ಹೆಣ್ಣೊಡಲನ್ನು’ ಮಂದಿ ಆರಾಧಿಸುವುದಿದೆ. ಗಂಡಾಗಿ ಹುಟ್ಟಿಯೂ ಸೀರೆಯುಟ್ಟು ಬದುಕುವ ಜೋಗಿತ್ತಿಯರ ಪುರಾವೆಗಳು ನಮ್ಮ ಕಣ್ಣೆದುರಿಗಿವೆ. ಅರ್ಜುನ ಬೃಹನ್ನಳೆಯಾಗಿದ್ದನ್ನೂ, ಶಿಖಂಡಿಯು ಮೂಲತಃ ಗಂಡಸಾಗಿ ಹುಟ್ಟಿದ್ದನ್ನೂಉದಾಹರಿಸಲಾಗಿದೆ. ಇದೇ ಪರಿಯಲ್ಲಿ ಗ್ರೀಕ್ಪುರಾಣದ ಕೆಲವು ಕತೆಗಳನ್ನೂ ಆಡಬಿಡಲಾಗಿದೆ.

ಮುಂದುವರಿಯುವ ಮುನ್ನ, ಇನ್ನೂ ಒಂದು ಇಂಥದೇ ಕತೆಯನ್ನುಪ್ರಾಸಂಗಿಕವಾಗಿ ಹೇಳಿಬಿಡುತ್ತೇನೆ. ಇದು ಯಾವುದೋ ಪುರಾಣದಲ್ಲಿದೆಯಂತೆಇತ್ತೀಚೆಗೆ ನಾನು ಓದಿದ್ದು. ಹಿಂದೊಂದು ಕಾಲಕ್ಕೆ, ಸೂರ್ಯವಂಶದಲ್ಲಿ, ಸುದ್ಯುಮ್ನನೆಂಬ ದೊರೆ ಆಗಿಹೋದನಂತೆ. ಅವನಿಗೆ ಇಳ ಎಂಬ ಹೆಸರೂ ಇತ್ತು. ಮದುವೆಯೂ ಆಗಿತ್ತು. ರಾಜ್ಯಭಾರವೂ ಇತ್ತು. ಒಮ್ಮೆ ಈ ಇಳಮಹಾರಾಜ ಬೇಟೆಗೆಂದು ಕಾಡು ಹೊಕ್ಕನಂತೆ. ವಿಪರೀತ ದಣಿವಾಯಿತು. ಅಡವಿಯಲ್ಲಿ ನೀರರಸಿಕೊಂಡು ಹೋದ. ಅಲ್ಲೆಲ್ಲೋ ಒಂದು ಸರೋವರವಿತ್ತು. ಹೋಗಿ ನೀರು ಕುಡಿದ. ಕುಡಿದಿದ್ದೇ ಹೆಣ್ಣಾಗಿ ಮಾರ್ಪಟ್ಟುಹೋದ!

ವಾಸ್ತವದಲ್ಲಿ, ಅವೊತ್ತು ಶಿವಶಿವೆಯರು ಅದೇ ಅಡವಿಯಲ್ಲಿ, ಆ ಸರೋವರದ ಸುತ್ತಮುತ್ತಲೇ ಕಾಮಕೇಳಿಯಲ್ಲಿ ತೊಡಗಿದ್ದರಂತೆ. ಶಿವೆಯು ಶಿವನಿಗೆ– ‘ನಮ್ಮ ಕೇಳಿ ಮುಗಿಯು ರೆಗೆ, ನೀನಲ್ಲದೆ ಇಲ್ಲಿ ಯಾವ ಗಂಡೂ ಇರಕೂಡದು’ ಅಂದಿದ್ದಳಂತೆ. ಶಿವ ಸೈಯಂದನಂತೆ. ತಕ್ಷಣವೇ ಅಡವಿಯಲ್ಲಿನ ಗಿಡಮರಗಳೂ, ಸ್ತ್ರೀಯರಾಗಿ ಮಾರ್ಪಟ್ಟವಂತೆ!

ಇಳಮಹಾರಾಜ ಇಂತಹ ಸಂದರ್ಭದಲ್ಲಿ, ಅದೇ ಅಡವಿಯ, ಅದೇ ಸರೋವರ ನೀರು ಕುಡಿಯುವುದೆ? ಹುಹ್‌ಹ್ಹೆಣ್ಣಾಗಿಬಿಟ್ಟ. ಬಳಿಕ, ಆ ಇಳಇಳೆಯೆಂಬ ಹೆಣ್ಣು ಹೆಸರು ತಾಳಿ ತನ್ನ ರಾಜಧಾನಿಯನ್ನು ಹೊಕ್ಕ. ಹೊಕ್ಕಳು ಎಂಬುದು ಹೆಚ್ಚು ಸರಿ. ಅಂತಃಪುರದಲ್ಲಿದ್ದ ರಾಣಿಯಲ್ಲಿ ಹೋಗಿ ತನ್ನ ‘ಸ್ತ್ರೀ’ತನದ ಕತೆ ಹೇಳಿಕೊಂಡ(ಳು). ರಾಣಿ ಪಾರ್ವತಿಯನ್ನು ಕುರಿತು ಘೋರ ತಪಸ್ಸು ಮಾಡಿದಳು. ಪಾರ್ವತಿ ಇಳ(ಇಳೆ)ನಿಗೆ ಸ್ವಲ್ಪ ಪರಿಹಾರ ಹೇಳಿದಳು: ‘ಇದನ್ನು ಶಿವನೂ ತಪ್ಪಿಸಲಾರ, ರಾಣಿದಾರಿಯಿದೆ. ನಿನ್ನ ಗಂಡ ಒಂದು ತಿಂಗಳು ಗಂಡಸೂ, ತರುವಾಯದ ತಿಂಗಳು ಹೆಂಗಸೂ ಆಗಿರುತ್ತಾನೆ…’

ಹೀಗೆ ಇಳಮಹಾರಾಜನಿಗೆ ತಿಂಗಳಿಗೊಮ್ಮೆ ಲಿಂಗಾಂತರಿಯಾಗುವ ಕರ್ಮವೇರ್ಪಟ್ಟಿತು. ‘ಇಳಇಳೆ’ಗಳ ಆವರ್ತವುಂ ಟಾಯಿತು! ಅವನೊಮ್ಮೆ ಇಳೆಯಾಗಿರುವಾಗ, ಬುಧ ಆಕೆಯನ್ನು ಕಾಮಿಸಿದಂತೆ. ಇಳೆ ಮತ್ತು ಬುಧರ ನಡುವಿನ ಸಂಯೋಗದಿಂದ ಪುರೂರವ ಹುಟ್ಟಿಬಂದನಂತೆ! ನೆನಪಿಸಿಕೊಳ್ಳಿ: ಪುರೂರವ ಚಂದ್ರವಂಶದ ಆದಿಪುರುಷ. ಚಂದ್ರವಂಶವನ್ನು ಐಳವಂವೆಂದೂ ಕರೆಯುವ ಪ್ರತೀತಿಯಿದೆ.

ಇರಲಿಇಷ್ಟೆಲ್ಲ ಸಾಂಸ್ಕೃತಿಕ ಹಿನ್ನೆಲೆಯಿದ್ದೂ, ನಮ್ಮ ದೇಶವು– ‘ಅನಿಖರಲಿಂಗ’ಸ್ಥರನ್ನು ತನ್ನ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳಲಿಲ್ಲವೇಕೆ? ಈ ಉತ್ತರವಿಲ್ಲ. ತೊಡಗಿಸಿಕೊಳ್ಳಲಿಲ್ಲ, ಅಷ್ಟೆ! ಭಾಷೆಯೆಂಬ ಭಾಷೆಯೂ ಇಂಥವರನ್ನು ತನ್ನ ತೆಕ್ಕೆಯಲ್ಲಿ ಊಡಿಕೊಳ್ಳಲಿಲ್ಲ. ಕನ್ನಡವೂ ‘ಗೇಲೆಸ್ಬಿಯನ್’ಗಳನ್ನು ನಿರ್ವಿವಾದಿತವಾಗಿ ಸೂಚಿಸಬಲ್ಲ ಪದ(ಗಳ)ವನ್ನು ಹುಟ್ಟಿಸಲೇ ಇಲ್ಲ. ಇನ್ನು, ಬೃಹನ್ನಳೆಶಿಖಂಡಿ ಎಂಬ ಸಂಸ್ಕೃತ ಹಿನ್ನೆಲೆಯ ಶಬ್ದಗಳಿವೆಯಾದರೂ, ವಾಕ್ಯರಚನೆಯಲ್ಲಿ ಅವುಗಳ ‘ಲಿಂಗ’ವನ್ನೇನು ಮಾಡುವುದೆಂಬ ಸಮಸ್ಯೆಗೆ ಪರಿಹಾರವಿಲ್ಲ. ಬೃಹನ್ನಳೆಯ ಬಗ್ಗೆ ಹೇಳುವಾಗ, ಅವನೆನ್ನುವುದೆ ಇಲ್ಲಾ ಅವಳೆ? ಶಿಖಂಡಿ ‘ಬಂದಳೆ’? ಅಥವಾ ‘ಬಂದನೆ’? ಸಮಸ್ಯೆ ತಾನೇ?!

ಇನ್ನು ಗೇಲೆಸ್ಬಿಯನ್‌ಗಳಿಗೆ ಪರ್ಯಾಯವಾಗಿ ಕನ್ನಡದಲ್ಲಿ ಏನನ್ನುವುದು?

(ಇಂಗ್ಲಿಷಿನಲ್ಲೂ ಸಮಸ್ಯೆ ಇಲ್ಲದಿಲ್ಲ. ಇಂಗ್ಲಿಷಿನ ಡಿಕ್ಷ್ನರಿಗಳು ‘ಗೇ’ ಎಂಬ ಪದವನ್ನು್ಚಛಿಛ್ಟ್ಛ್ಠ್ಝಿ, ್ಜಟ್ಝ್ಝ, ್ಚಛಿಛ್ಟಿ, ಞಛ್ಟ್ಟಿ ಎಂದೆಲ್ಲ ಅರ್ಥಯಿಸುತ್ತವೆ. ಅಂದರೆ ಸಂತೋಷಯುಕ್ತ, ಆನಂದಿತ, ಮುದಪೂರಿತಅನ್ನುವ ಅರ್ಥ. ಕೆಲವೊಮ್ಮೆ, ತೀರಾ ಕ್ರೂಡ್ ಆಗಿಠ್ಠಿಜಿ ಅಥವಾ ್ಛಟಟ್ಝಜಿ ಎಂದಾಗಿಯೂ ಬಳಸುವುದಿದೆ. ನಾನು ಚಿಕ್ಕಂದಿನಲ್ಲಿ, ಅಂದರೆ ಹಳ್ಳಿಯೂರುಗಳಲ್ಲಿ ಕಲಿಯುತ್ತಿರುವಾಗ ‘ಗೇ’ ಎಂಬುದಕ್ಕೆ ಇಂಥವೇ ಅರ್ಥಗಳಿದ್ದವು. ಟ್ಞಡಿಞ ಜಿ ಜ ಅಂದರೆ ಟ್ಞಡಿಞ ಜಿ ಎಂಬ ಸೆನ್ಸೇ ಇದ್ದಿತು. ಅದೇ ಈ ಬೆಂಗಳೂರಿಗೆ ಬಂದು, ಆರ್ಕಿಟೆಕ್ಚರೆಂಬ ಕೋರ್ಸಿನಲ್ಲಿ ತೊಡಗಿದ್ದೇ ತಡ, ಅರ್ಥಪಲ್ಲಟದೊಡನೆ ಅರ್ಥಾಘಾತವೂ ಆಗಿಹೋಯಿತು! ಆಗಲೇ ಸುರುಗೊಂಡಿದ್ದು ‘ಗೇ’ ಎಂಬುದನ್ನು ಎಲ್ಲಿ ಮತ್ತು ಹೇಗೆ ಬಳಸಬೇಕೆನ್ನುವ ‘ಅಸ್ತಿತ್ವಾತ್ಮಕ’ ಸಂದಿಗ್ಧ! (ಈವರೆಗೆ ತಿಳಿದಿದ್ದಂತೆ, ‘ಸಂತೋಷಾರ್ಥ’ವಾಗಿ ಬಳಸುವುದೋ, ಅಥವಾ ಈ ರಾಜಧಾನಿಯಲ್ಲಿ ಇವೊತ್ತಿರುವ ‘ಪ್ರತಿಷ್ಠಿತ’ ಅರ್ಥದಲ್ಲೋ?!)

ಆದರೆ ಇಂಗ್ಲಿಷು ಗೊತ್ತಿರುವ ಇವೊತ್ತಿನ ತಲೆಮಾರಿಗೆ, ‘ಗೇ’ ಕುರಿತಾಗಿ ಅರ್ಥಸಂದಿಗ್ಧವೇ ಇರಲಿಕ್ಕಿಲ್ಲ! ಯಾಕೆಂದರೆ ಇವೊತ್ತು ಹಾಗಂದರೆ ಹಾ‘ಗೇ’ ಅಂತಲೇ ಅರ್ಥವಷ್ಟೆ?

ಹೀಗಿರುವಾಗ, ‘ಗೇ’ ಎಂಬುದನ್ನು ಕನ್ನಡದಲ್ಲಿ ಏನನ್ನಬೇಕು ಎಂಬ ಪ್ರಶ್ನೆ ಮಿಕ್ಕೇಬಿಡುತ್ತದೆ. ಸಲಿಂಗಕಾ(ಪ್ರೇ)ಮಿಎಂದೆಲ್ಲ ಬಳಕೆಯಿವೆಯಾದರೂಇವುಗಳು ಲಿಂಗಸೂಚಕವಲ್ಲ. ‘ಗೇ’ ಗಂಡಸಿಗೆ ಸರಿಸಮವಾಗಿ ‘ಸಲಿಂಗಿ’ ಅನ್ನಲಾಗುತ್ತದೆ. ಆದರೆ, ಲೆಸ್ಬಿಯನ್ನಿಗೆ? ‘ಸಲಿಂಗಿ ಸ್ತ್ರೀ’ ಅನ್ನುವುದೆ? ಯಾಕೋ ಸರಿ ಅನಿಸುವುದಿಲ್ಲ!

ಇನ್ನು, ಸಲಿಂಗ ಅನ್ನುವ ನಿಷ್ಪತ್ತಿಯೂ ಎಷ್ಟು ಸರಿ? ಸದೇಹ, ಸಶರೀರ, ಸಪರಿವಾರಇವುಗಳಲ್ಲಿ ಬರುವ ‘ಸ’ಕಾರವನ್ನು ಗಮನಿಸಿ. ಈ ಪ್ರಕಾರ ನೋಡಿದರೆ, ‘ಸಲಿಂಗಿ’ ಎಂದರೆ ಲಿಂಗಸಹಿತ’ವೆಂಬ ಅರ್ಥವಲ್ಲವೆ? ಇನ್ನು ಸ್ವಲಿಂಗವಿಲಿಂಗ ಅನ್ನೋಣವೆಂದರೆ ಅದೂ ಅಪಾರ್ಥವೇ ತಾನೇ? ಅಥವಾ ಅರ್ಥಪಾತ ತಾನೇ?

ನನ್ನ ಸಮಸ್ಯೆಯಿಷ್ಟೆ: ಕನ್ನಡದ ಸಮಸ್ಯೆಯೂ ಹೌದು. ನಾವು ಈಗಿಂದೀಗಲೇ ‘ಗೇ’ ಮತ್ತು ಲೆಸ್ಬಿಯನ್’ ಎಂಬ ಇಂಗ್ಲಿಷ್ ಪದಗಳಿಗೆ ತಕ್ಕುದಾಗಿ, ಹುಟ್ಟಿನಲ್ಲೇ ಲಿಂಗವಾಚಕವೂ ಆದ ಕನ್ನಡ ಶಬ್ದಗಳು ಹುಟ್ಟಿಸಿಕೊಳ್ಳಬೇಕು. ಮತ್ತು ಅವನ್ನು ಪದೇ ಪದೇ ಬಳಸಿ ಕನ್ನಡದ ಜಾಯಮಾನಕ್ಕೆ ಒಗ್ಗಿಸಿ, ರೂಢಿಗೆ ತರಬೇಕು. ಇಲ್ಲಾ, ಇವುಗಳನ್ನು ಇರುವ ಹಾಗೇ, ಕನ್ನಡದಲ್ಲಿ ಬಳಸಬೇಕು. (ಇಲ್ಲಿ ಇನ್ನೂ ಒಂದು ಸಮಸ್ಯೆಯಿದೆ.. ಇಂಗ್ಲಿಷಿನಲ್ಲಿ ‘ಗೇ’ ಎಂಬುದು ನಾಮಪದವಲ್ಲ; ವಿಶೇಷಣ. ಟ್ಞಡಿಞ ಜಿ ಜ ಇದು ತಪ್ಪು; ಜಿ ಜ ಞ್ಞ ಇದು ಸರಿ. ವ್ಯತ್ಯಾಸ ಸ್ವವೇದ್ಯವಷ್ಟೆ?)

ನಾವು ಒಂದು ಸಮುದಾಯವಾಗಿ, ಒಂದು ಜನಾಂಗವಾಗಿ, ಒಂದು ದೇಶವಾಗಿ– ‘ಇಂತಹ’ ಲಿಂಗಿಗಳನ್ನು ಒಳಗೊಳ್ಳುವುದು, ಎಷ್ಟು ಇವೊತ್ತಿನ ಜರೂರಿಯೋ, ಹಾಗೆ ಒಳಗೊಳ್ಳುವಲ್ಲಿ ಭಾಷೆಯೂ ಇದನ್ನು ಒಳಗೊಳ್ಳಬೇಕು. ಕನ್ನಡವೂ ಹೊಸತಾಗಿ ಕನ್ನಡವಾಗಬೇಕು. ‘ಗೇ’ಯನ್ನು ಈಗಲಾದರೂ ಅದನ್ನು ಮುತ್ತಿರುವ ಉದ್ಧರಣ ಚಿಹ್ನೆ (ಕೊಟೇಷನ್ ಮಾರ್ಕ್ಸ)ಗಳಿಂದ ವಿಮೋಚಿಸಿಬಿಡಬೇಕು! ಆಗ ಸಮಸ್ಯೆ ಬಗೆಹರಿಯಬಹುದು. ಆಗ ‘ಗೇತನ’ವೆಂಬ ಗೇವ್ಯಕ್ತಿತ್ವಾತ್ಮಕ ನಾಮಪದವೂ ಟಂಕಗೊಳ್ಳಬಹುದು. ಸುಪ್ರೀಂ ಕೋರ್ಟಿನ ‘ಕಟ್ಟಪ್ಪಣೆ’ಗೆ ಅರ್ಥವಾಗಬಹುದು. ತಕ್ಕುದಾಗಿ, ಯಾವುದೇ ಲಿಂಗತರತಮವಿಲ್ಲದೆ, ಈಗಿಂದೀಗಲೇ (ಸ್ತ್ರೀವಾದಿಗಳು ಎಚ್ಚೆತ್ತು ಧರಣಿ ಹೂಡುವ ಮೊದಲೇ) ಲೆಸ್ಬಿಯನ್ನಿಗೂ ತಕ್ಕ ‘ಕನ್ನಡ’ ಟಂಕಿಸಬೇಕು!

ಕೊನೆಯಲ್ಲಿ ನನ್ನದೊಂದು ಪುಕ್ಕಟೆ ಸಲಹೆ:

ಲೆಸ್ಬಿಯನ್ = ಗೇಸ್ತ್ರೀ

ಗೇಪುರುಷ= ಗೇಷ