About Us Advertise with us Be a Reporter E-Paper

ಅಂಕಣಗಳು

ಏಳಕ್ಷರದ ಆ ಮಂತ್ರದ ಬಗ್ಗೆ ಹೇಳುವುದು ಬಹಳಷ್ಟಿದೆ!

ವ್ಯಕ್ತಿತ್ವದ ಗಟ್ಟಿತನವನ್ನು ಹೇಳುವುದಕ್ಕೆ ಉದ್ದುದ್ದ ಗ್ರಂಥಗಳನ್ನು ಬರೆಯಬೇಕಾಗಿಲ್ಲ. ಒಂದೆರಡು ದೃಷ್ಟಾಂತಗಳಲ್ಲೇ ಅವರ ವ್ಯಕ್ತಿತ್ವ ಎಂಥದ್ದಿತ್ತೆಂಬುದನ್ನು ತೋರಿಸಿಬಿಬಹುದು. ಉದಾಹರಣೆಗೆ ಥಾಮಸ್ ಆಲ್ವ ಎಡಿಸನ್‌ನ ಬಳಿ ಕೆಲಸ ಕೇಳಿಕೊಂಡು ಬಂದಾಗ ನಿಕೋಲಾ ಟೆಸ್ಲಾ ತನ್ನಲ್ಲಿದ್ದ ಶಿಫಾರಸು ಪತ್ರವನ್ನು ಎಡಿಸನ್‌ಗೆ ಕೊಟ್ಟನಂತೆ. ಶಿಫಾರಸು ಕೊಟ್ಟಿದ್ದವನು ಒಂದು ಕಾಲದಲ್ಲಿ ಎಡಿಸನ್‌ಗೆ ಕೆಲಸ ಕೊಟ್ಟಿದ್ದ ಮತ್ತು ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗಿದ್ದ ಚಾರ್ಲ್‌ಸ್ ಬ್ಯಾಚಲರ್. ಪತ್ರ ದೀರ್ಘವಾಗೇನೂ ಇರಲಿಲ್ಲ. ಇದ್ದದ್ದು ಎರಡೇ ಎರಡು ಸಾಲು. ಅದರಲ್ಲಿ  ಏನೆಂದರೆ, ಪ್ರಿಯ ಎಡಿಸನ್! ನನಗೆ ಜಗತ್ತಿನ ಇಬ್ಬರು ಅದ್ಭುತ ವ್ಯಕ್ತಿಗಳು ಗೊತ್ತು. ಒಬ್ಬ ನೀನು. ಇನ್ನೊಬ್ಬ ಈ ಶಿಫಾರಸು ಪತ್ರ ಹಿಡಿದು ನಿನ್ನ ಮುಂದೆ ನಿಂತಿರುವ ತರುಣ! – ಅಷ್ಟೆ!

ಹಾಗೆ, ಅದೊಂದು ದಿನ ಕನ್ನಡದ ಒಬ್ಬರು ಪ್ರಕಾಂಡ ಪಂಡಿತರಿಗೆ ಒಂದು ಪತ್ರ ಬಂತು. ಪತ್ರ ಬರೆದವರು ಧಾರವಾಡದವರು. ಆ ಊರಲ್ಲಿ ಕೆಲವು ದಿನಗಳ ಹಿಂದಷ್ಟೇ ಈ ಪಂಡಿತರು ಒಂದು ಉದ್ಭೋದಕ ಭಾಷಣ ಮಾಡಿ ಬಂದಿದ್ದರು. ಕನ್ನಡ ನಾಡು-ನುಡಿಗಳ  ಪ್ರೇಕ್ಷಕರೆಲ್ಲರಿಗೂ ರೋಮಾಂಚನವಾಗುವಂತೆ, ವಿದ್ಯುತ್ಸಂಚಾರವಾಗುವಂತೆ ಮಾತಾಡಿದ್ದರು. ತನ್ನನ್ನು ಧಾರವಾಡದಲ್ಲಿ ಭಾಷಣ ಮಾಡಲು ಯಾವ ಸಂಸ್ಥೆ ಕರೆದಿತ್ತೋ ಅದರ ಕೆಲಸಕಾರ್ಯಗಳನ್ನು ಮೆಚ್ಚಿ ನಾಲ್ಕು ನುಡಿಯನ್ನು ಆ ವಿದ್ವಾಂಸರು ಆ ಸಂಸ್ಥೆಯ ಸಂದರ್ಶಕರ ದಫ್ತರದಲ್ಲಿಯೂ ಬರೆದಿದ್ದರು. ಅವರ ಭಾಷಣ ಹೇಗೆ ಅಲ್ಲಿದ್ದವರೆಲ್ಲರಿಗೂ ಮೆಚ್ಚಿಕೆಯಾಗಿತ್ತೋ ಹಾಗೆಯೇ ಅವರು ಸಂಸ್ಥೆಯ ಬಗ್ಗೆ ಮೆಚ್ಚಿ ಬರೆದ ಸಾಲುಗಳ ಬಗ್ಗೆಯೂ ಒಳ್ಳೆಯ ಪ್ರಶಂಸೆಯೇ ಬಂದಿತ್ತು. ಈ ಪತ್ರವೂ ಅಂಥ ಪ್ರಶಂಸೆಯ ವಿಸ್ತರಣ ರೂಪವಿದ್ದೀತೇನೋ ಎಂದು ಭಾವಿಸುತ್ತ ಪತ್ರ ಒಡೆದು  ಪಂಡಿತರಿಗೆ ಹೃದಯ ಒಡೆಯುವಂಥ ಸಾಲುಗಳು ಅಲ್ಲಿದ್ದವು! ಶ್ರೀಯುತರೆ, ನೀವು ಕನ್ನಡದ ಬಗ್ಗೆ ಅಭಿಮಾನದ ಮಾತು ಹೇಳಿ ಉದ್ದುದ್ದ ಭಾಷಣ ಮಾಡುತ್ತೀರಿ. ನಿಮ್ಮ ಅಭಿಮಾನವನ್ನು ಕೃತಿಯಲ್ಲೂ ತೋರಿಸಬೇಕಲ್ಲ? ಕನ್ನಡ ಮಧುರವಾದ ಭಾಷೆ ಎಂದು ಹೇಳುವ ನೀವು ಸಂದರ್ಶಕರ ಪುಸ್ತಕದಲ್ಲಿ ಇಂಗ್ಲೀಷ್‌ನಲ್ಲೇಕೆ ಬರೆದಿದ್ದೀರಿ? – ಕೆನ್ನೆಗೆ ಬೀಸಿಹೊಡೆದಂತೆ ಆ ಸಾಲುಗಳು ಆ ಹಿರಿಯರನ್ನು ಚುಚ್ಚಿದವು. ಹೌದಲ್ಲ! ಎಂಥ ದೊಡ್ಡ ತಪ್ಪು ಮಾಡಿಬಿಟ್ಟೆ! ಉಳಿದವರಿಗೆಲ್ಲ ಬಿಟ್ಟಿ ಉಪದೇಶ ಕೊಟ್ಟ ಮೇಲೆ ಅದನ್ನು ನಾನೇ  ಹೋದೆನಲ್ಲ ಎಂದು ಆ ಹಿರಿಯರು ವೇದನೆ ಪಟ್ಟುಕೊಂಡರಂತೆ. ಹಾಗೆ ಪತ್ರದ ಮೂಲಕ ಪ್ರಾಮಾಣಿಕತೆಯ ಪಾಠ ಹೇಳಿಸಿಕೊಂಡವರು ಕನ್ನಡದ ಕಣ್ವ ಎಂದೇ ಬಿರುದಾಂಕಿತರಾದ ಬಿ.ಎಂ. ಶ್ರೀಕಂಠಯ್ಯನವರು. ಅವರನ್ನು ತರಾಟೆಗೆ ತೆಗೆದುಕೊಂಡವರು ರಾವ್ ಬಹದ್ದೂರ್ ರಾ.ಹ. ದೇಶಪಾಂಡೆಯವರು. ರಾ.ಹ.? ದೇಶಪಾಂಡೆ? ಯಾರಿವರು? ಕೇಳೇ ಇಲ್ಲವಲ್ಲ ಈ ಹೆಸರನ್ನು – ಎನ್ನುವ ಈ ರಾಜ್ಯದ ನವಪೀಳಿಗೆಯ ಲಕ್ಷಾಂತರ ಮಂದಿಯಲ್ಲಿ ನೀವೂ ಒಬ್ಬರಾಗಿದ್ದರೆ ಈಗಿಂದೀಗ ನಿಮ್ಮ ಕೆನ್ನೆಗೆ ನೀವೇ ಹೊಡೆದುಕೊಳ್ಳಿ. ಯಾಕೆಂದರೆ ನಾವು ನೀವು  ಕಂಡಕಂಡಲ್ಲೆಲ್ಲ ಕೇಳುವ ಓದುವ ನೋಡುವ ಸಿರಿಗನ್ನಡಂ ಗೆಲ್ಗೆ ಎಂಬ ಮಂತ್ರವನ್ನು ಕನ್ನಡಿಗನ ಹೃದಯಸಾಮ್ರಾಜ್ಯದಲ್ಲಿ ಕೆತ್ತಿದ ಮಹಾತ್ಮರೇ ಇವರು! ಸಿರಿಗನ್ನಡಂ ಗೆಲ್ಗೆ ಎಂಬ ಕನ್ನಡದ ಮಂತ್ರಕ್ಕೆ ಇದೀಗ 125 ವರ್ಷ.

ಕಾಲ ಎಲ್ಲವನ್ನೂ ಮರೆಸುತ್ತದೆ ಎನ್ನುತ್ತಾರೆ. ಸರಿಯೇ. ಆದರೆ ಕನ್ನಡದ ನೆಲ ಜಲಕ್ಕಾಗಿ ಆಜೀವಪರ್ಯಂತ ಹೋರಾಡಿದ, ದುಡಿದ, ಬೆವರಿನ ಹನಿಹನಿಗಳನ್ನೂ ಬಸಿದ ಓರ್ವ ಹೋರಾಟಗಾರನನ್ನು ಕನ್ನಡನಾಡು ಇಷ್ಟು ಬೇಗ ಮರೆಯುವುದು ಸರಿಯೇ? ರಾಮಚಂದ್ರ ಹಣಮಂತರಾವ ದೇಶಪಾಂಡೆ 1861ರ ಮಾರ್ಚ್ 20ರಂದು  ತಾಲೂಕಿನ ನರೇಂದ್ರ ಎಂಬ ಹಳ್ಳಿಯಲ್ಲಿ ಹುಟ್ಟಿದರು. ತಂದೆ ಹಣಮಂತರಾಯರು. ಹುಡುಗನ ಪ್ರಾರಂಭಿಕ ಶಿಕ್ಷಣ ನರೇಂದ್ರದಲ್ಲಾಯಿತು. ನಂತರ ಧಾರವಾಡದ ಬಾಸೆಲ್ ಮಿಷನ್ ಸ್ಕೂಲು, ನಂತರ ಸರಕಾರೀ ಶಾಲೆಯಲ್ಲಿ ಓದು ಮುಂದುವರೆಸಿದ್ದಾಯಿತು. ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಮುಂಬೈ ಪ್ರಾಂತ್ಯಕ್ಕೆ 21ನೆಯವರಾಗಿ, ಧಾರವಾಡ ಪ್ರಾಂತ್ಯಕ್ಕೆ ಮೊದಲಿಗರಾಗಿ ಬಂದ ದೇಶಪಾಂಡೆ ಪುಣೆಯ ಡೆಕ್ಕನ್ ಕಾಲೇಜು ಸೇರಿದರು. ಇಂಟರ್‌ಮೀಡಿಯೆಟ್ ಪಾಸು ಮಾಡಿಕೊಂಡ ಮೇಲೆ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಬಿಎ ಪೂರೈಸಿದರು. ಅದಾಗಿ ಎರಡು ವರ್ಷಗಳಲ್ಲಿ ಎಂಎ ಪರೀಕ್ಷೆಯಲ್ಲೂ ಹೆಚ್ಚಿನ  ಉತ್ತೀರ್ಣರಾಗಿ ಬಂಗಾರದ ಪದಕವನ್ನು ಕೊರಳಿಗೆ ಹಾಕಿಸಿಕೊಂಡರು. ತಮ್ಮ ಶಿಕ್ಷಣದ ದಾರಿಯುದ್ದಕ್ಕೂ ಒಂದಿಲ್ಲೊಂದು ಶಿಷ್ಯವೇತನ ಸಂಪಾದಿಸುತ್ತಿದ್ದ ಈ ಬುದ್ಧಿವಂತ ಹುಡುಗ, ಧಾರವಾಡದ ಇಡೀ ಪ್ರಾಂತ್ಯಕ್ಕೆ – ಅಂದರೆ ಈಗಿನ ಇಡೀ ಉತ್ತರ ಕರ್ನಾಟಕಕ್ಕೇ ಮೊದಲ ಎಂಎ! ಹಾಗಾಗಿ 22 ವರ್ಷದ ತರುಣ ತನ್ನ ವಿದ್ಯಾಭ್ಯಾಸವೆಲ್ಲ ಪೂರೈಸಿ ಜಟಕಾ ಬಂಡಿಯಲ್ಲಿ ಧಾರವಾಡಕ್ಕೆ ಬಂದಿಳಿದರೆ ಅಲ್ಲಿ ಆತನನ್ನು ಹೊತ್ತೊಯ್ಯಲು ಜನರೇ ಆನೆಯ ವ್ಯವಸ್ಥೆ ಮಾಡಿದ್ದರಂತೆ!

ದೇಶಪಾಂಡೆಯವರು ಎಂಎ ಪರೀಕ್ಷೆ ಪಾಸಾದಮೇಲೆ ವಕೀಲಿ ವೃತ್ತಿ  ಬಯಸಿದ್ದರಂತೆ. ಆದರೆ ಬ್ರಿಟಿಷ್ ಅಧಿಕಾರಿಯೊಬ್ಬನಿಗೆ ಇದ್ದ ಕನ್ನಡ ಪ್ರೀತಿ ಅವರನ್ನು ಕನ್ನಡನಾಡಿಗೆ ಕಟ್ಟಿಹಾಕಿತು! ಅವರು ಪದವಿಯ ಕಿರೀಟ ಧರಿಸಿ ಧಾರವಾಡಕ್ಕೆ ಬಂದಿಳಿಯುವ ಹೊತ್ತಿಗೆ ಆ ಪ್ರಾಂತ್ಯದಲ್ಲಿ ಕನ್ನಡದ ಪರಿಸ್ಥಿತಿ ಶೋಚನೀಯವಾಗಿತ್ತು. ಅಸಲಿಗೆ ಕನ್ನಡನಾಡು ಎಂಬ ಹೆಸರಿನ ಭೂಭಾಗವೇ ಇರಲಿಲ್ಲ. ಕರ್ನಾಟಕವೆಂಬ ರಾಜ್ಯವಲ್ಲದ ರಾಜ್ಯ ಆರು ಭಾಗಗಳಲ್ಲಿ ಹರಿದುಹೋಗಿತ್ತು. ಧಾರವಾಡ, ಬೆಳಗಾವಿ, ಉತ್ತರ ಕನ್ನಡ (ಕಾರವಾರ) ಮತ್ತು ಬಿಜಾಪುರ ಜಿಲ್ಲೆಗಳನ್ನು ಮುಂಬೈ ಪ್ರಾಂತ್ಯಕ್ಕೆ ಸೇರಿಸಲಾಗಿತ್ತು. ಉಳಿದಂತೆ ಹೈದ್ರಾಬಾದ್ ಪ್ರಾಂತ್ಯ, ಮದ್ರಾಸ್  ಮೈಸೂರು ರಾಜ್ಯ, ಕೊಡಗು ಅಸ್ತಿತ್ವದಲ್ಲಿದ್ದವು. ಈ ಐದು ಭಾಗಗಳ ನಡುವಲ್ಲಿ ಅಲ್ಲಲ್ಲಿ ಸವಣೂರು, ಮುಧೋಳ, ಜಮಖಂಡಿಯಂಥ ಪ್ರತ್ಯೇಕ ಮತ್ತು ಸ್ವತಂತ್ರ ಸಂಸ್ಥಾನಳಿದ್ದವು. ಉತ್ತರ ಕರ್ನಾಟಕದ ಭೌಗೋಳಿಕ ಮತ್ತು ಸಾಮಾಜಿಕ ಪರಿಸ್ಥಿತಿಯ ತಲೆಬುಡ ತಿಳಿಯದ ಬ್ರಿಟಿಷ್ ಅಧಿಕಾರಿಗಳು ಅದಷ್ಟೂ ಭಾಗವನ್ನು ಮುಂಬೈ ಸರಕಾರಕ್ಕೆ ಜೋಡಿಸಿಬಿಟ್ಟಿದ್ದರು. ಉತ್ತರ ಕರ್ನಾಟಕದ ಶಾಲೆಗಳಲ್ಲೆಲ್ಲ ಮರಾಠಿಯದ್ದೇ ಅನುರಣನ! ಧಾರವಾಡದ ಡೆಪ್ಯುಟಿ ಕಲೆಕ್ಟರ್ ಆಗಿ ಬಂದ ವಾಲ್ಟರ್ ಎಲಿಯಟ್‌ನಿಗೆ ಈ ಮಂದಿ ಮನೆಯಲ್ಲಿ, ಬೀದಿಯಲ್ಲಿ, ವ್ಯವಹಾರಕ್ಕೆ ಬಳಸುವುದೆಲ್ಲ  ಆದರೆ ಶಾಲೆಯಲ್ಲಿ ಕಲಿಯುವುದು ಮಾತ್ರ ಮರಾಠಿ! ವಿಚಿತ್ರವಾಗಿದೆಯೆಲ್ಲ! ಅನ್ನಿಸಿತಂತೆ. ಈ ಭಾಗದ ಜನರ ಆಡುಭಾಷೆ ಕನ್ನಡ; ಅವರ ಮೇಲೆ ಮರಾಠಿ ಹೇರಿಕೆ ಏಕೆ ಎಂದು ಎಲಿಯಟ್ ಸರಕಾರಕ್ಕೆ ಖಾರವಾದ ಪತ್ರ ಬರೆದ ಮೇಲೆ ಕನ್ನಡ ಶಾಲೆಗಳ ಮಂಜೂರಾಯಿತು! ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಪ್ರೊಫೆರ್ ಆಗಿದ್ದ ಡಬ್ಲ್ಯು.ಎ. ರಸೆಲ್ ಎಂಬವರು ಈ ಎಲ್ಲ ಬೆಳಣಿಗೆಗಳನ್ನು ಹತ್ತಿರದಿಂದ ಗಮನಿಸಿ, ತನ್ನ ವಿದ್ಯಾರ್ಥಿಯಾಗಿದ್ದ ದೇಶಪಾಂಡೆಗೆ ಎಜ್ಯುಕೇಶನ್ ಡಿಪಾರ್ಟ್‌ಮೆಂಟ್ ಸೇರುವಂತೆ ಒತ್ತಾಯಪೂರ್ವಕ ವಿನಂತಿಸಿಕೊಂಡರು. ನಿನ್ನ  ನಿನ್ನ ಸಂಸ್ಕೃತಿ. ನೀನು ಉಳಿಸದೆ ಹೋದರೆ ಇನ್ನಾರು? ಧಾರವಾಡದಲ್ಲಿ ಮರಾಠಿಯ ಪ್ರಾಬಲ್ಯ ತಗ್ಗದೆ ಹೋದರೆ ಕನ್ನಡವನ್ನು ಶಿಲಾಶಾಸನಗಳಲ್ಲಷ್ಟೇ ನೋಡಬೇಕಾದೀತು ಎಂಬ ರಸೆಲ್ ಮಾತು ದೇಶಪಾಂಡೆಯವರ ಹೃದಯವನ್ನು ಈಟಿಯಂತೆ ಚುಚ್ಚಿತು. ದೊಡ್ಡ ಪದವಿ ಗಳಿಸಬೇಕು, ದುಡ್ಡು-ಹೆಸರು ಮಾಡಬೇಕು ಎಂದು ಕಟ್ಟಿಕೊಂಡಿದ್ದ ಆಶೋತ್ತರಗಳನ್ನೆಲ್ಲ ಗಂಟುಕಟ್ಟಿ ಅಟ್ಟಕ್ಕೆಸೆದ ದೇಶಪಾಂಡೆ ಕನ್ನಡಕ್ಕಾಗಿ ಕಚ್ಚೆ ಕಟ್ಟಿದರು. ಮುಂದಿನ 20 ವರ್ಷ ಅವರ ಬದುಕಿನಲ್ಲಿ ಅಗ್ನಿದಿವ್ಯ. ವಿದ್ಯಾ ಇಲಾಖೆಯ ವಿವಿಧ ವಿಭಾಗಗಳಲ್ಲಿ ನೌಕರಿ-ಚಾಕರಿ ಮಾಡಿ, ಎಲ್ಲೆಲ್ಲೂ ಕನ್ನಡಕ್ಕಾಗಿ  ಮತ್ತು ಅದಕ್ಕಾಗಿ ಎಲ್ಲ ನೋವು-ಅವಮಾನಗಳನ್ನು ಅವಡುಗಚ್ಚಿ ಸಹಿಸಿಕೊಂಡ ಗಟ್ಟಿಪಿಂಡ ಅವರದ್ದು. ಉನ್ನತಾಧಿಕಾರಿಗಳ ಜಾಗದಲ್ಲಿ ಕೂತಿದ್ದ ಮರಾಠಿಗರು ಎರಡು ದಶಕಗಳಲ್ಲಿ ಅವರನ್ನು ದಾಖಲೆಯ 22 ಕಡೆಗಳಿಗೆ ವರ್ಗ ಮಾಡಿ ಹಗೆ ಸಾಧಿಸಿದರು. ಅಂಥ ಪರಿಸ್ಥಿತಿಯಲ್ಲೂ ರಾಮಚಂದ್ರ ದೇಶಪಾಂಡೆಯವರು ಪ್ರವಾಹಕ್ಕೆ ಎದೆಸೆಟೆಸಿ ನಿಂತ ಅಣೆಕಟ್ಟಿನಂತೆ ಧಾರವಾಡದಲ್ಲಿ ನಿಂತು ಮರಾಠಿಗಳ ಆಕ್ರಮಣವನ್ನು ಎದುರಿಸಿದರು, ಹಿಮ್ಮೆಟ್ಟಿಸಿದರು.

ಸರಕಾರೀ ಉದ್ಯೋಗಿಯಾಗಿದ್ದುಕೊಂಡು ಕನ್ನಡದ ಕೆಲಸ ಮಾಡಲಾಗುತ್ತಿಲ್ಲ; ಅನ್ಯಭಾಷಿಕರ ಆಕ್ರಮಣಕ್ಕೆ ತಕ್ಕ ಉತ್ತರ ಕೊಡಲಾಗುತ್ತಿಲ್ಲ; ಬೀದಿಹೋರಾಟ ರೂಪಿಸಲಾಗದೆ ಕೈ  ಕೂರುವಂಥ ಅನಿವಾರ್ಯತೆ ಎದುರಾಗಿದೆ ಅನ್ನಿಸಿದಾಗ ಅವರು ತನ್ನ ಉನ್ನತ ಹುದ್ದೆಗೂ ರಾಜೀನಾಮೆ ಎಸೆದರು. 1890ರ ಜುಲೈ 20ರಂದು ಧಾರವಾಡದಲ್ಲಿ ಒಂದಷ್ಟು ಸಮಾನಮನಸ್ಕರನ್ನು ಸೇರಿಸಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪಿಸಿದರು. ಕನ್ನಡದ ಪರಿಸ್ಥಿತಿ ಆಗಂತೂ ಶೋಚನೀಯವಾಗಿತ್ತು. ಇಡೀ ಕರ್ನಾಟಕದಲ್ಲಿ ವರ್ಷಕ್ಕೆ ಸರಾಸರಿ 8 ಕನ್ನಡ ಪುಸ್ತಕಗಳು ಪ್ರಕಟವಾದರೇ ಹೆಚ್ಚು ಎಂಬಂಥ ಸ್ಥಿತಿ ಇತ್ತು. ಓದಲು ಕನ್ನಡ ಕಾಣಸಿಗದೇ ಇರುವಾಗ ಈ ಭಾಷೆಯ ಅಭಿವೃದ್ಧಿಯಾಗುವುದಾದರೂ ಹೇಗೆ ಎಂದು ಯೋಚಿಸಿದ ದೇಶಪಾಂಡೆ, ವಾಗ್ಭೂಷಣ  ಕನ್ನಡ ಪತ್ರಿಕೆ ಪ್ರಾರಂಭಿಸಿದರು. ಪುಸ್ತಕ ಪ್ರಕಟಿಸಿದ ಲೇಖಕರು ಅಲ್ಪಸಂಖ್ಯಾತರಿದ್ದಾಗ, ಧಾರವಾಡದಲ್ಲಿ 1905ರಲ್ಲಿ ಅಖಿಲ ಕರ್ನಾಟಕ ಗ್ರಂಥಕರ್ತರ ಸಮ್ಮೇಳನ ಆಯೋಜಿಸಿದರು. ಮೈಸೂರು ಒಡೆಯರ ಆರ್ಥಿಕ ಬೆಂಬಲದಿಂದ ಧಾರವಾಡದಲ್ಲಿ ಕನ್ನಡ ಪರೀಕ್ಷೆಗಳನ್ನು ನಡೆಸಿದರು. ಪರೀಕ್ಷೆಗಳಲ್ಲಿ ಉತ್ತೀರ್ಣರಾದವರನ್ನು ರಾಜ್ಯದ ಮೂಲೆಮೂೆಗಳಲ್ಲಿ ತೆರೆಯುತ್ತಿದ್ದ ಶಾಲೆಗಳಲ್ಲಿ ಮಾಸ್ತರರಾಗಿ ಭರ್ತಿ ಮಾಡಿದರು. ವಿದ್ಯಾವರ್ಧಕ ಸಂಘಕ್ಕೊಂದು ಗಟ್ಟಿಯಾದ ಕಚೇರಿ ಕಟ್ಟಿದರು. ಚಾಮರಾಜ ಮಂದಿರವೆಂಬ ಕಟ್ಟಡ ಎಬ್ಬಿಸಿದರು. ಕನ್ನಡಿಗರು ಅಸ್ಪಶ್ಯರಂತೆ ಅಡಗಿಕೊಳ್ಳಬೇಕಿದ್ದ ಸಮಯದಲ್ಲಿ ಅರನ್ನು ಎದುರು ಸೆಳೆದು ಅವರ ಕೈಗೆ  ಕೊಟ್ಟರು, ಮೈಕು ಕೊಟ್ಟರು. ಬೀದಿಹೋರಾಟಗಳನ್ನು ರೂಪಿಸಿದರು. ಕನ್ನಡ ಮಾತಾಡುವ ಎಲ್ಲ ಪ್ರಾಂತ್ಯಗಳೂ ಒಂದೇ ಛತ್ರಿಯಡಿ ಬರಬೇಕು; ಕನ್ನಡದ ಎಲ್ಲ ಪ್ರಾಂತ್ಯಗಳ ಏಕೀಕರಣವಾಗಬೇಕು ಎಂದು ಗಟ್ಟಿದನಿಯಲ್ಲಿ ಘೋಷಣೆ ಮೊಳಗಿಸಿದವರು ರಾಮಚಂದ್ರ ದೇಶಪಾಂಡೆಯವರು. ಕರ್ನಾಟಕ ಏಕೀಕರಣದ ಮೊದಲ ಕಿಡಿ ಹೊತ್ತಿಸಿದ್ದೇ ಇವರು. ಇವರನ್ನು ಮರೆತಿರುವ ನಮ್ಮನ್ನು ತಾಯಿ ಭುವನೇಶ್ವರಿ ಕ್ಷಮಿಸಿಯಾಳೆ?

ಆನೆ ನಡೆದದ್ದೇ ದಾರಿ ಎಂಬಂತೆ ದೇಶಪಾಂಡೆಯವರು ಇಟ್ಟ ಒಂದೊಂದು ದಿಟ್ಟ ಹೆಜ್ಜೆಯೂ ಕನ್ನಡನಾಡೆಂಬ ಕಟ್ಟೋಣದ ಇಟ್ಟಿಗೆಯಾಯಿತು. ಧಾರವಾಡದಲ್ಲಿ ಎದ್ದುನಿಂತ ವಿದ್ಯಾವರ್ಧಕ  ಮುಂದೆ ಬೆಂಗಳೂರಲ್ಲಿ ಕನ್ನಡ ಸಾಹಿತ್ಯ ಪರಿಷತ್ತೆಂಬ ಸಂಸ್ಥೆ ಉದಯವಾಗಲು ಕಾರಣವಾದದ್ದು. ಧಾರವಾಡದಲ್ಲಿ ಎರು ಬಾರಿ ಗ್ರಂಥಕರ್ತರ ಸಮ್ಮೇಳನ ಆಯೋಜಿಸಿದ ಮೇಲೆ ಮೂನೆಯದನ್ನು ಬೆಂಗಳೂರಲ್ಲಿ ನಡೆಸಬೇಕು ಎಂದು ಬಯಸಿದ್ದು, ಅದಕ್ಕಾಗಿ ಮೈಸೂರಿನ ದಿವಾನರಾಗಿದ್ದ ವಿಶ್ವೇಶ್ವರಯ್ಯನವರಿಗೆ ಪತ್ರ ಬರೆದದ್ದು ಇದೇ ದೇಶಪಾಂಡೆಯವರೇ. ಅದರ ಪರಿಣಾಮ ಎಲ್ಲರಿಗೂ ಗೊತ್ತಿದೆ – ಕನ್ನಡ ಸಾಹಿತ್ಯ ಸಮ್ಮೇಳನ ಎಂಬ ವಾರ್ಷಿಕ ಉತ್ಸವಕ್ಕೆ 1915ರಲ್ಲಿ ಚಾಲನೆ ಸಿಕ್ಕಿತು. ಕರ್ನಾಟಕದ ಹುಡುಗರು – ಅದರಲ್ಲೂ ಮುಖ್ಯವಾಗಿ ಉತ್ತರ ಭಾಗದ  ತರುಣರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪುಣೆಗೋ ಮುಂಬೈಗೋ ಹೋಗಬೇಕಾದ ಅನಿವಾರ್ಯತೆ ಇದ್ದಾಗ ಅವರು ದೂರವೆಲ್ಲೂ ಹೋಗದೆ ನಮ್ಮಲ್ಲೇ ಕಾಲೇಜು ಶಿಕ್ಷಣ ಪೆಯುವಂತಾಗಬೇಕು ಎಂದು ಬಯಸಿದ ದೇಶಪಾಂಡೆ, ಕರ್ನಾಟಕ ಕಾಲೇಜು ಸ್ಥಾಪಿಸಲು ನಿರ್ಧರಿಸಿ ಮನೆಮನೆಗೆ ಹೋಗಿ ವಂತಿಗೆ ಎತ್ತಿದರು. ಪುಣೆ, ಮುಂಬೈಗಳಿಗೆ ಹೋದ ತರುಣರು ಅಲ್ಲಿ ಮರಾಠಿ, ಹಿಂದಿ, ಇಂಗ್ಲೀಷ್ ಕಲಿತು ಕನ್ನಡವನ್ನು ಮರೆತೇಬಿಡುತ್ತಾರೆಂಬ ಆತಂಕವೂ ಅವರಿಗಿತ್ತು. ಸ್ವತಃ ತಾನೇ ಅಂಥ ಸುಳಿಯಲ್ಲಿ ಸಿಕ್ಕಿ ಕನ್ನಡದಿಂದ ಬಹುದೂರ ಹೋಗಲು ನಿರ್ಧರಿಸಿದ್ದ ದಿನಗಳನ್ನು  ಅವರಿಗೇ ಭಯವಾಗುತ್ತಿತ್ತು. ರಸೆಲ್‌ರಂಥ ಗುರುಗಳು ತನ್ನನ್ನು ಇಂಗ್ಲೀಷ್ ಸುಳಿಯಿಂದ ಬಚಾವು ಮಾಡದಿದ್ದರೆ ಕನ್ನಡಮ್ಮನಿಂದ ಪ್ರತ್ಯೇಕಗೊಂಡು ಜೀವನಪೂರ್ತಿ ಪರಕೀಯ ಅನಾಥನಾಗಿ ಬಾಳುತ್ತಿದ್ದೆನಲ್ಲ ಎಂದು ನಿಡುಸುಯ್ಯುತ್ತಿದ್ದರು.

ದೇಶಪಾಂಡೆಯವರು, ವಿದ್ಯಾವರ್ಧಕ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತ ಪ್ರತಿನಿತ್ಯ ಹತ್ತಾರು ಜನ ಅಥವಾ ಇಲಾಖೆಗಳೊಂದಿಗೆ ಪತ್ರವ್ಯವಹಾರ ಮಾಡಬೇಕಾಗಿ ಬರುತ್ತಿತ್ತು. ಆಗ, ಆ ಪತ್ರಗಳು ಬ್ರಿಟಿಷ್ ಸರಕಾರಕ್ಕೆ ಹೋಗಲಿ, ಇಲ್ಲವೇ ಕನ್ನಡದ ಲೇಖಕರಿಗೆ ಹೋಗಲಿ, ಅವುಗಳ ಮೇಲೆ ಅವರು ಕನ್ನಡ ಬೆಳೆಯಲಿ ಎಂಬ ಧ್ಯೇಯವಾಕ್ಯ  ಮಾತ್ರ ಮರೆಯುತ್ತಲೇ ಇರಲಿಲ್ಲ. ಹಾಗೆಂದು ಅವರೇನೂ ಚಳವಳಿ ಮಾಡಲಿಲ್ಲ; ಆದರೆ ತನ್ನ ಪ್ರತಿ ಪತ್ರದಲ್ಲೂ ಅದೊಂದು ವಾಕ್ಯವನ್ನು ಏಕನಿಷ್ಠೆಯಿಂದ ಬರೆಯುವುದನ್ನು ಬಿಡಲಿಲ್ಲ. ತಾನು ಬರೆದದ್ದನ್ನು ಗಮನಿಸಿ ಕನ್ನಡಿಗರು ಅದನ್ನು ಅನುರಿಸುವಂತಾಗಬೇಕು; ಆ ಮಾತು ಕನ್ನಡಿಗರ ಎದೆಯೊಳಗೆ ಇಳಿದು ಗಟ್ಟಿಯಾಗಬೇಕು ಎಂಬುದೇ ಅವರ ಯೋಚನೆಯಾಗಿದ್ದಿರಬೇಕು! 1893ರ ಸೆಪ್ಟೆಂಬರ್ – ಅಕ್ಟೋಬರ್ ಸಮಯದಲ್ಲಿ ಅವರು ಸಿರಿಗನ್ನಡಂ ಗೆಲ್ಗೆ ಎಂಬ ಮಾತನ್ನು ಬರೆಯತೊಡಗಿದರು. ಮುಂದಿನ ಅವರ ಎಲ್ಲ ಪತ್ರವ್ಯವಹಾರದಲ್ಲೂ ಆ ಮಾತು ಮಾತ್ರ  ಕಾಣಿಸಿಕೊಂಡಿತು. ದೇಶಪಾಂಡೆಯವರಿಂದ ಸ್ಫೂರ್ತಿ ಪಡೆದ ಬಿಎಂಶ್ರೀ ತಾನೂ ಆ ಸಪ್ತಾಕ್ಷರಿ ಮಂತ್ರವನ್ನು ಬಿಡದೆ ಜಪಿಸತೊಡಗಿದರು. ದೇಶಪಾಂಡೆಯವರು ಬಯಸಿದ್ದಂತೆಯೇ, ಯಾವುದೇ ಬೀದಿಹೋರಾಟಗಳಿಲ್ಲದೇ ಕ್ರಾಂತಿ-ಆಂದೋಲನಗಳಿಲ್ಲದೇ ಸಿರಿಗನ್ನಡಂ ಗೆಲ್ಗೆ ಎಂಬುದು ಕನ್ನಡಿಗರ ಧ್ವನಿಯಾಯಿತು, ಉಸಿರಾಯಿತು, ಆಶಯವಾಯಿತು. ಚಿದಾನಂದಮೂರ್ತಿಗಳು ಹೇಳುವಂತೆ ಬಂಕಿಮ ಚಂದ್ರ ಚಟರ್ಜಿಯವರ ವಂದೇ ಮಾತರಂ ಘೋಷ ಅದೆಂಥ ಶಕ್ತಿಸಂಚಾರವನ್ನು ದೇಶಭಕ್ತರಲ್ಲಿ ಉಂಟುಮಾಡಿತೋ ಈ ಮಂತ್ರವೂ ಕನ್ನಡಿಗರ ಆತ್ಮಾಭಿಮಾನವನ್ನು ಬಡಿದೆಬ್ಬಿಸುವ ಯಕ್ಷಿಣಿ ಮಾಡಿತು.

ರಾ.ಹ. ದೇಶಪಾಂಡೆ ತೀರಿಕೊಂಡದ್ದು ಸ್ವಾತಂತ್ರ್ಯ ಸಿಗುವುದಕ್ಕೂ 16 ವರ್ಷಗಳ  – 1931ರ ಏಪ್ರಿಲ್ 26ರಂದು. ಕನ್ನಡ ನುಡಿಯನ್ನಾಡುವ ಎಲ್ಲ ಪ್ರಾಂತ್ಯಗಳೂ ಒಂದು ರಾಜ್ಯವೆಂದು ಒಗ್ಗೂಡಬೇಕಾದರೆ ದೇಶಪಾಂಡೆಯವರ ಮರಣದ ನಂವೂ 25 ವರ್ಷಗಳಷ್ಟು ದೀರ್ಘಕಾಲ ನಾವು ಕಾಯಬೇಕಾಯಿತು. ಬಹುಶಃ ಇತಿಹಾಸದಲ್ಲಿ ದೇಶಪಾಂಡೆಯವರು ಜನ್ಮವೆತ್ತದೇ ಇರುತ್ತಿದ್ದರೆ ಏನಾಗುತ್ತಿತ್ತು? ಅವರು ಮಾಡಿದ ಕೆಲಸವನ್ನು ಬೇರೆಯವರು ಮಾಡುತ್ತಿದ್ದರೋ ಇಲ್ಲವೋ ಹೇಳಲಾಗದು. ಕನ್ನಡಿಗರನ್ನು ಒಗ್ಗೂಡಿಸುವ ಕೆಲಸ ಮತ್ತ್ಯಾರಾದರೂ ವ್ಯಕ್ತಿಗಳಿಂದ ನಡೆಯುತ್ತಿತ್ತೆಂದೇ ಭಾವಿಸೋಣ. ಆದರೆ ರಾಜ್ಯವೊಂದರ ಏಕೀಕರಣದ ಕನಸನ್ನು ದೇಶವು ಸ್ವಾತಂತ್ರ್ಯ ಗಳಿಸುವುದಕ್ಕೂ ಐವತ್ತು ವರ್ಷಗಳ ಹಿಂದೆಯೇ  ಕಾಣುವುದು ಸಾಧ್ಯವಿತ್ತೆ? ಅಷ್ಟೊಂದು ದೂರದೃಷ್ಟಿಯುಳ್ಳ ವ್ಯಕ್ತಿ, ನಾಯಕ ನಮ್ಮಲ್ಲಿ ಹುಟ್ಟಿಬರುತ್ತಿದ್ದನೇ? ಸಂಶಯ. ಬಹುಶಃ ದೇಶಪಾಂಡೆಯವರು 19ನೇ ಶತಮಾನದ ಉತ್ತರಾರ್ಧದಲ್ಲಿ ಧಾರವಾಡ ಪ್ರಾಂತ್ಯದಲ್ಲಿ ಕನ್ನಡಕ್ಕಾಗಿ ದೊಡ್ಡ ದನಿ ಎತ್ತದೇ ಹೋಗಿದ್ದರೆ, ವಿದ್ಯಾ ಇಲಾಖೆಯಲ್ಲಿ ಕನ್ನಡಕ್ಕಾಗಿ ಹಗಲಿರುಳು ಕೆಲಸ ಮಾಡದೇ ಹೋಗಿದ್ದರೆ, ಮರಾಠಿಗಳ ಮೇಲ್ದಬ್ಬಾಳಿಕೆಯನ್ನು ಎದುರಿಸಿಯೂ ಉಕ್ಕಿನ ಕಂಬದಂತೆ ತನ್ನ ಆಶಯಕ್ಕೆ ಬದ್ಧನಾಗದೇ ಹೋಗಿದ್ದರೆ, ನೂರಾರು – ಸಾವಿರಾರು ಮಂದಿಯನ್ನು ಕನ್ನಡ ಪರೀಕ್ಷೆಗಳ ಮೂಲಕ ಆರಿಸಿ ಶಾಲೆಗಳಲ್ಲಿ ಭರ್ತಿಗೊಳಿಸದೇ ಹೋಗಿದ್ದರೆ ಕನ್ನಡನಾಡು  ರೂಪದಲ್ಲಿ ಇರುತ್ತಿತ್ತೆ? ಅದೆಲ್ಲೋ ಪುಟ್ಟ ಗೋವೆಯಂತೆ, ನಾಲ್ಕು ಜನ ನಾಲ್ಕು ಕಡೆಗಳಲ್ಲಿ ಹರಿದುಮುಕ್ಕಿದಮೇಲೆ ಉಳಿದ ಕೌಪೀನವಾಗುತ್ತಿತ್ತೇನೋ!

ರಾ.ಹ. ದೇಶಪಾಂಡೆಯವರು ಉತ್ತರ ಧ್ರುವವಾದರೆ ದಕ್ಷಿಣ ಧ್ರುವದಲ್ಲಿ ನಮ್ಮ ಈಗಿನ ರಾಜಕೀಯ ನಾಯಕರು ನಿಂತಿದ್ದಾರೆ! ನೀವು ನಮಗೆ ವೋಟು ಕೊಟ್ಟಿಲ್ಲ; ಹಾಗಾಗಿ ಯಾವುದೇ ಅಭಿವೃದ್ಧಿಯ ಬೇಡಿಕೆಯನ್ನು ಸಲ್ಲಿಸುವ ಹಕ್ಕು ನಿಮಗಿಲ್ಲ ಎಂದು ಹೇಳುವ ಅದ್ಭುತ ಪ್ರಭೃತಿಗಳು ಇಂದು ನಮ್ಮನ್ನಾಳುತ್ತಿದ್ದಾರೆ! ಈ ರಾಜ್ಯ ರಾಜ್ಯದ ಸ್ವರೂಪಕ್ಕೆ ಬರಬೇಕಾದರೆ ರಾ.ಹ. ದೇಶಪಾಂಡೆಯವರಂಥ ಅದೆಷ್ಟು ಧೀಮಂತ  ರಾಜ್ಯದ ಎಲ್ಲ ಮೂಲೆಗಳಿಂದ ಹೋರಾಡಿದ್ದಾರೆ; ತಮ್ಮ ಇಡೀ ಜೀವನವನ್ನೇ ಗಂಧದಂತೆ ತೇಯ್ದಿದ್ದಾರೆ ಎಂಬ ಮಾಹಿತಿ ಇರುವ ಯಾರೂ ಉತ್ತರ ಕರ್ನಾಟಕವನ್ನಾಗಲೀ ಕರಾವಳಿಯನ್ನಾಗಲೀ ಹೈದರಾಬಾದ್ ಕರ್ನಾಟಕ ಪ್ರಾಂತ್ಯವನ್ನಾಗಲೀ ಕಡೆಗಣಿಸಲಾರರು. ಏಕೀಕರಣ ಚಳವಳಿ, ಗೋಕಾಕ ಚಳವಳಿ ಹುಟ್ಟಿದ್ದೇ ಉತ್ತರ ಕರ್ನಾಟಕದಲ್ಲಿ. ಪೇಶ್ವೆಗಳ ಮರಾಠಿ, ಆದಿಲ್‌ಶಾಹಿ ಬಹಮನಿಶಾಹಿಗಳ ಉರ್ದು ತಮ್ಮನ್ನು ಶತಮಾನದುದ್ದಕ್ಕೂ ಬೆಂಬಿಡದೆ ಕಾಡಿದರೂ ಮನಸ್ಸಿನಲ್ಲಿ ಮಾತಿನಲ್ಲಿ ಬರಹದಲ್ಲಿ ಕೃತಿಯಲ್ಲಿ ಕನ್ನಡ ಕನ್ನಡ ಎಂದ ಈ ಭಾಗದ ಜನರಿಗೆ ಕರ್ನಾಟಕ ಕೊನೆಗೂ ಕೊಟ್ಟಿದ್ದೇನು?  ಬಂದು ಎಪ್ಪತ್ತು ವರ್ಷಗಳಾದ ಮೇಲೂ ಉತ್ತರ ಕರ್ನಾಟಕದ ಮಂದಿ ನಾವೂ ಕರ್ನಾಟಕದೊಳಗಿದ್ದೇವೆ, ನಾವೂ ಕನ್ನಡಿಗರು ಎಂದು ಸಾಬೀತುಪಡಿಸಿ ನಂತರ ಸಹಾಯ ಕೇಳುವ ದುರ್ಗತಿ ಬಂದದ್ದೇಕೆ? ಈ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯಾಗಬೇಕಾದರೆ ನಮ್ಮನ್ನಾಳುವವರ ದೃಷ್ಟಿ ಮತ್ತು ಮನಸ್ಸಿಗೆ ಹಿಡಿದಿರುವ ಗ್ರಹಣ ಮೊದಲು ಕಳೆಯಬೇಕಿದೆ. ಕಣ್ಣಿನ ದಿಟ್ಟಿ ವಿಶಾಲವಾಗಬೇಕಿದೆ. ಮೈಸೂರು, ಮಂಡ್ಯ ಮತ್ತು ಹಾಸನದ ಮೂರುಮುಕ್ಕಾಲು ವಿಧಾನಸಭಾ ಕ್ಷೇತ್ರಗಳಷ್ಟೇ ಕರ್ನಾಟಕ ಅಲ್ಲ; ಅದಕ್ಕಿಂತ ಹೊರಗೆಯೂ ಬಹಳಷ್ಟು ಇದೆ ಎಂಬುದು ನಮ್ಮನ್ನಾಳುವ ಮಂದಿಗೆ  ಅಧಿಕಾರದ ಸಮಸ್ತ ಪಾದಗಳೂ ಬೆಂಗಳೂರನ್ನೇ ವೃತ್ತಾಕಾರ ಸುತ್ತುವ ಪ್ರವೃತ್ತಿ ಕಡಿಮೆಯಾಗದೆ ಈ ರಾಜ್ಯ ಉದ್ಧಾರವಾಗದು. ಬೆಂಗಳೂರಂತೆಯೇ, ಬೆಳಗಾವಿ/ಧಾರವಾಡ ಮತ್ತು ಮಂಗಳೂರು ಈ ರಾಜ್ಯದ ಎರಡನೇ ರಾಜಧಾನಿಗಳಾಗಬೇಕು. ಹೆಸರಿಗಷ್ಟೇ ಅಲ್ಲ, ಅವು ನಿಜಕ್ಕೂ ರಾಜಧಾನಿಗಳಾಗಿ ಬೆಳೆಯಬೇಕು. ಅಭಿವೃದ್ಧಿಯ ವರ್ತುಲಗಳು ಆ ಪ್ರದೇಶಗಳಲ್ಲೂ ಹುಟ್ಟಿ ವಿಸ್ತರಿಸಬೇಕು. ಬಹುಶಃ ದೇಶಪಾಂಡೆಯವರು ಈಗ ಇದ್ದಿದ್ದರೆ ಅಂಥದೊಂದು ಕನಸನ್ನು ಖಂಡಿತ ಕಾಣುತ್ತಿದ್ದರು!

Tags

Related Articles

Leave a Reply

Your email address will not be published. Required fields are marked *

Language
Close