About Us Advertise with us Be a Reporter E-Paper

ಅಂಕಣಗಳು

ಇದೊಂದು ವೈಚಾರಿಕ ಕಾಯಿಲೆಯೇ ಹೊರತು ಬೇರೇನಲ್ಲ!

ಟಿ. ದೇವಿದಾಸ್

Me too urban naxal  ಎಂಬ ಫಲಕವನ್ನು ತೂಗು ಹಾಕಿಕೊಂಡ ಕಾರ್ನಾಡರ ವರ್ತನೆಯಲ್ಲಿ ತಪ್ಪಿಲ್ಲವೆಂದೇ ನನಗನಿಸುವುದು. ಇದೊಂದು ವೈಚಾರಿಕ ಇಂಥ ಕಾಯಿಲೆ ಹಲವು ಪ್ರಗತಿಪರರಲ್ಲಿ, ಬುದ್ಧಿಜೀವಿಗಳಲ್ಲಿ ಮನೆಮಾಡಿಕೊಂಡಿದೆ. ರಾಜ್ಯದ, ದೇಶದ ರೈತರು ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ತಾನೂ ಒಬ್ಬ ರೈತ ಎಂದಾಗಲೀ, ನಮ್ಮ ಯೋಧರು ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ಸಂದರ್ಭದಲ್ಲಿ, ತಾನೂ ಒಬ್ಬ ಯೋಧ ಎಂದಾಗಲೀ, ಫಲಕವನ್ನು ತೂಗಿಹಾಕಿಕೊಂಡು ಕಾರ್ನಾಡರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಚುರಪಡಿಸಿದ್ದರೆ, ಎಲ್ಲರಿಗೂ ಮೆಚ್ಚುಗೆಯ ಜತೆಗೆ ಅಚ್ಚರಿಯೂ ಆಗುತ್ತಿತ್ತೇನೋ! ಆದರೆ ಅವರು ಅಂಥದ್ದನ್ನೆಲ್ಲಾ ಮಾಡಿಯಾರು ಎಂದು, ಅವರ ಬಗ್ಗೆ ಗೊತ್ತಿರುವವರಿಗೆ ನಿರೀಕ್ಷೆಯಾಗಲೀ ನಂಬಿಕೆಯಾಗಲೀ ಬರಲು ಸಾಧ್ಯವೇ ಎಂಬಷ್ಟು ಅವರು ಬೌದ್ಧಿಕವಾಗಿ, ವೈಚಾರಿಕವಾಗಿ ಬೆಳೆದುನಿಂತಿದ್ದಾರೆ! ಅಷ್ಟಕ್ಕೂ ಇವರು ಮತ್ತು ಇವರಂಥವರಿಂದ ಅಂಥದ್ದನ್ನೆಲ್ಲಾ ನಿರೀಕ್ಷೆ ಮಾಡುವುದೇ ಶತಮೂರ್ಖತನ. ಅವರು ಹಾಗೆ ಮಾಡಬೇಕೆಂದು ನಾವಂದುಕೊಳ್ಳುವುದೂ ಶುದ್ಧಾತಿಶುದ್ಧ ತಪ್ಪು. ಒಬ್ಬರ ಸ್ವಭಾವವನ್ನು ಬದಲಾಯಿಸಲಾಗಲೀ, ತಿದ್ದಲಾಗಲೀ ಯಾರಿಂದಲೂ ಸಾಧ್ಯವಿಲ್ಲ. ಹಾಗೆ ತಿದ್ದಕೂಡದು ಕೂಡ. ಅದರಲ್ಲೂ ಇವರು ಜ್ಞಾನಪೀಠಿಗಳು. ದೊಡ್ಡವರು. ಬುದ್ಧಿಯಿರುವ ಜೀವಿಗಳು. ಹಲವು ನಾಟಕಗಳನ್ನು ಬರೆದವರು. ಅಭಿನಯ ಚತುರರು. ಇವರನ್ನು ನಮ್ಮ ಮಕ್ಕಳು ತರಗತಿಯಲ್ಲಿ ಓದುತ್ತಾರೆ.

ಹಿಂದೊಮ್ಮೆ ಇಂಗ್ಲಿಷ್ ಪುಸ್ತಕವೊಂದರ ಲೋಕಾರ್ಪಣೆ ಕಾರ್ನಾಡರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡನ ಹೆಸರಿಡಲಾಗಿದೆ. ಯಾರೀ ಕೆಂಪೇಗೌಡ? ಅವನೊಬ್ಬ ಅವಿವೇಕಿ, ಕ್ಷುದ್ರವ್ಯಕ್ತಿ. ಅದರ ಬದಲಿಗೆ, ಅತ್ಯಂತ ಶ್ರೇಷ್ಠ ಕನ್ನಡಿಗ ರಾಜಕಾರಣಿಗಳಲ್ಲೊಬ್ಬನಾದ ಟಿಪ್ಪುಸುಲ್ತಾನನ ಹೆಸರನ್ನು, ವಿಮಾನ ನಿಲ್ದಾಣಕ್ಕಿಡಬೇಕಾಗಿತ್ತು ಎಂದು ಗರ್ಜಿಸಿದ್ದರು. ಇದನ್ನು ಪತ್ರಿಕೆಗಳು ಪ್ರಕಟಿಸಲಿ ಎಂದೂ ಹೇಳಿದ್ದರು. ಆಗಲೇ ನಾಡಿನ ಜನರು ಇವರ ಬುದ್ಧಿಯಲ್ಲಿರುವ ವಿವೇಕದ ಪ್ರಮಾಣವನ್ನು ಗೊತ್ತುಮಾಡಿಕೊಂಡಿದ್ದಾರೆ. ಕೆಂಪೇಗೌಡರನ್ನು ಅವಿವೇಕಿ, ಕ್ಷುದ್ರವ್ಯಕ್ತಿ ಎಂದೆಲ್ಲಾ ಸಂಬೋಧಿಸಿದಾಗಲೇ ಇವರ ಜ್ಞಾನಪೀಠಕ್ಕೆ ಹೊಸ ಮೆರುಗು, ಹೊಸ ಬಂದಿತ್ತು ಅಥವಾ ಹಾಗೆ ಹೇಳುವ ಮೂಲಕ ಹೊಸ ಹೊಳಪನ್ನು ಇವರು ತಂದುಕೊಂಡಿದ್ದರು. ಬಹುಜನರಿಂದ ಖಂಡನಾರ್ಹವಾದ ಅವರ ಮಾತುಗಳಿಗೆ ಇಂದಿಗೂ ಮುಕ್ತಿ ಸಿಕ್ಕಿಲ್ಲ. ಟಿಪ್ಪುವನ್ನು ಕುರಿತು ಶ್ರೀಯುತರಾದ ಭೈರಪ್ಪ, ಚಿದಾನಂದ ಮೂರ್ತಿಗಳು ಸಾದರಪಡಿಸಿದ ದಾಖಲೆಗಳಿಗೆ, ವಾದಗಳಿಗೆ ಪ್ರತ್ಯುತ್ತರ ಕೊಡಲಾಗದೆ ಕಾರ್ನಾಡರು ಎಲ್ಲೋ ಮರೆಯಲಾಗಿದ್ದರು. ಭೈರಪ್ಪರ ವಂಶವೃಕ್ಷ ಮತ್ತು ತಬ್ಬಲಿಯು ನೀನಾದೆ ಮಗನೆ, ತಮ್ಮ ಪ್ರಕಾರ ಬಲಹೀನ ಕಾದಂಬರಿಗಳೆಂದು ಹಿಂದೊಮ್ಮೆ ಇವರೇ ಹೇಳಿದ್ದರು. ಜ್ಞಾನಪೀಠ ಪ್ರಶಸ್ತಿಯನ್ನು ಲಾಭಿ ಮಾಡಿ ಪಡೆದದ್ದೆಂದು ಒಪ್ಪಿಕೊಂಡವರಿವರು. ಇವರ ಬಗ್ಗೆ ಇರುವ ಇಂಥ ಕೆಲ ಪ್ರತೀತಿಗಳು ನೆನಪಾಗುತ್ತದೆ.

ಆಡಳಿತ ಭಾಷೆಯಾದ ಕನ್ನಡವನ್ನು ತೊಲಗಿಸಿ, 1972ರಲ್ಲಿ ಪರ್ಷಿಯನ್ ಭಾಷೆಯನ್ನು ಟಿಪ್ಪು ಜಾರಿಗೆ ತಂದಿದ್ದ. ಅದಕ್ಕೆ ನಿದರ್ಶನವೆಂಬಂತೆ, ಇಂದಿಗೂ ಆಡಳಿತದಲ್ಲಿ ಅಂದಿನ ಕೆಲವು ಪದಗಳು ಹಾಗೇ ಬಳಕೆಯಾಗುತ್ತಿದೆ. ಟಿಪ್ಪುವಿನ ಖಡ್ಗದ ಮೇಲೆ ಪರ್ಷಿಯನ್ ಲಿಪಿಯಿದೆ. ‘ಕಾಫಿರರ (ಮುಸ್ಲಿಮೇತರರು) ನಾಶಕ್ಕಾಗಿಯೇ ಇರುವ ಸಿಡಿಲು ನನ್ನ ಖಡ್ಗಎಂದು ಕೆತ್ತಲಾಗಿದೆ. ನಾಡಿನ ಪಟ್ಟಣಗಳ ಹೆಸರನ್ನು ಬದಲಾಯಿಸಿದ ಮಹಾಪುರುಷನೀತ. ತನ್ನ ಆಡಳಿತದಲ್ಲಿ ಜನ ಮುಸ್ಲಿಂ ಉನ್ನತಾಧಿಕಾರಿಗಳನ್ನೇ ಇಟ್ಟುಕೊಂಡಿದ್ದ. ಮಟ್ಟಿಗೆ ಕಾರ್ನಾಡರಂತೆ ಹುಸಿ ಜಾತ್ಯತೀತತೆಯನ್ನು ಪ್ರದರ್ಶಿಸಲಿಲ್ಲವೆಂಬುದು ಟಿಪ್ಪುವಿನ ಬಗ್ಗೆ ಹೆಮ್ಮೆಪಡುಂತಹ ವಿಚಾರ. ಈತನ ಹೆಸರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಡಲು ಗಿರೀಶ್ ಕಾರ್ನಾಡ್ ಎಂಬ ಅಭಿನವ ಟಿಪ್ಪು ಸುಲ್ತಾನ್ಹೇಳುವುದರಲ್ಲಿ ಯಾವ ಉತ್ಪ್ರೇಕ್ಷೆಯೂ ನನಗೆ ಕಾಣಿಸುವುದಿಲ್ಲ. ಪಕ್ಕಾ ಇಸ್ಲಾಂ ಅನುಯಾಯಿಯಾಗಿದ್ದ ಈತ, ಕೆಂಪೇಗೌಡರಿಗಿಂತ ಗ್ರೇಟ್ ಅಂತ ಕಾರ್ನಾಡರಿಗೆ ಅನಿಸಲು ಇನ್ನಷ್ಟು ಕಾರಣಗಳನ್ನು ಊಹಿಸಬಹುದು. ಇಮ್ಮಡಿ ಕೃಷ್ಣರಾಜ ಒಡೆಯರ್‌ರವರ ಧರ್ಮಪತ್ನಿ ಮಹಾರಾಣಿ ಅಮ್ಮಣ್ಣಿದೇವಿ ಅವರಿಗೆ ದ್ರೋಹ ಮಾಡಿದ ಟಿಪ್ಪುವಿನ ಅಪ್ಪ ಹೈದರಲಿ, ಅವರಿಂದ ಅಧಿಕಾರ ಕಿತ್ತುಕೊಂಡ. ಮುಂದೆ ಟಿಪ್ಪುವಿನ ಕಾಲದಲ್ಲಿ ಮೈಸೂರಿನ ಒಡೆಯರು ಅವಮಾನ ಹಿಂಸೆಗೊಳಗಾದರು. ವಿಧವೆಯಾದ ಮಹಾರಾಣಿಯನ್ನು ಚಿಕ್ಕಮನೆಯಲ್ಲಿ ಸೆರೆಯಿಟ್ಟು ಹಿಂಸಿಸಿದ.

ಶ್ರೀರಂಗಪಟ್ಟಣದ 700 ಕುಟುಂಬಗಳನ್ನು ಕೊಲ್ಲಿಸಲಾಗಿದೆಯೆಂದೂ, ತನ್ನನ್ನೂ ಯಾವುದೇ ಕ್ಷಣದಲ್ಲೂ ಕೊಲ್ಲಿಸಬಹುದೆಂದೂ ಮಹಾರಾಣಿಯವರು 1976ರಲ್ಲಿ ತಮ್ಮ ಪ್ರತಿನಿಧಿಯಾಗಿದ್ದ ತಿರುಮಲರಾವ್‌ಗೆ ಪತ್ರ ಬರೆದಿದ್ದರು. ಟಿಪ್ಪುವಿನ ರೇಂಜಿನ ಕ್ರೌರ್ಯವನ್ನು ಮೆಚ್ಚಿಯೇ ಕಾರ್ನಾಡರು ವಿಮಾನ ನಿಲ್ದಾಣಕ್ಕೆ ಹೆಸರಿಡಲು ಹೇಳಿದ್ದಿರಬೇಕು! ಇವರ ಎಡಪಂಥೀಯ ವರಸೆಯಲ್ಲೇ ಬರೆದವು ಎಂಬುದು ಎಲ್ಲರಿಗೂ ಗೊತ್ತು. ಟಿಪ್ಪುವಿಗೊಂದು ಘನ ವ್ಯಕ್ತಿತ್ವ ಇತ್ತೆಂದು ಹೇಳಲು ಯಾವ ಅಡ್ಡಿಯೂ ಇಲ್ಲ. ಆದರೆ ಯಾವ ಸಂದರ್ಭದಲ್ಲೂ ಟಿಪ್ಪುನನ್ನು ನಾಯಕನೆಂದು ಪ್ರಾತಿನಿಧಿಕವಾಗಿ ಸ್ವೀಕರಿಸಲು ಸಾಧ್ಯವಿಲ್ಲ. ಆಕಸ್ಮಾತ್ ಸ್ವೀಕರಿಸಿಬಿಟ್ಟರೆ, ಅವನ ಒಂದು ಪ್ರಭಾವಲಯ ನಮ್ಮನ್ನು ಕಾಡುತ್ತಲೇ ಇರುತ್ತದೆ. ಟಿಪ್ಪುವಿನಂಥ ವಿವಾದಾತ್ಮಕ ವ್ಯಕ್ತಿತ್ವದ ಮನುಷ್ಯ ಕಾರ್ನಾಡರಿಗಾದಂತೆ ಉಳಿದವರಿಗೆ ಮುಖ್ಯವಾಗಬೇಕೆಂದಿಲ್ಲ. ಯಾಕೆಂದರೆ , ಮನುಷ್ಯ ಸಹಜ ನೆಲೆಯಲ್ಲೂ ವೈಚಾರಿಕತೆಗೆ ಯಾವ ಕಾಲಕ್ಕೂ ಕಿಲುಬು ಹಿಡಿಯಬಾರದು.

ಕಾರ್ನಾಡರಿಗೆ ತಾನೂ ಎಂದು ಹೇಳಿಕೊಳ್ಳುವುದು ಒಂದು ಬೌದ್ಧಿಕ ಅಥವಾ ವೈಚಾರಿಕ ಕಾಯಿಲೆಯಾಗಿ ನನಗೆ ತೋರುತ್ತದೆ. ಅದನ್ನು ಹೊರತುಪಡಿಸಿ ಬೇರೇನೂ ಕಾಣಿಸುವುದಿಲ್ಲ. ಇಂಥ ಪ್ರದರ್ಶನಗಳನ್ನು ಅವರು ಅವರಂಥ ಬುದ್ಧಿಜೀವಿಗಳು ಅಥವಾ ಪ್ರಗತಿಪರರು ಆವಾಗಾವಾಗ ಅಭಿವ್ಯಕ್ತಿಸುತ್ತಲೇ ಇರುತ್ತಾರೆ. ಮೈಸೂರಲ್ಲೂ ಇಂಥದ್ದೇ ಕೆಲವು ಮಹನೀಯರಿದ್ದಾರೆ. ಹಿಂದೆ ಶ್ರೀ ಬಸವಲಿಂಗಪ್ಪನವರು ಇಡೀ ಭಾರತೀಯ ಸಂಸ್ಕೃತಿಯನ್ನೇ ಬೂಸಾ ಎಂದಿದ್ದರು. ಸಮಾಜವಾದದ ಹಿನ್ನೆಲೆಯ ಬರಗೂರರು ಮಾನವಕುಲ ತಾನೊಂದೆ ವಲಂ ಎಂದೂ, ಪುರಾಣವನ್ನು ಒಳ್ಳೆಯ ಹಾಗೂ ಕೆಟ್ಟ ಪಾತ್ರಗಳ ಕಥೆಯೆಂದು ಹೇಳುವುದು ಹಿಂದೊಮ್ಮೆ ಹೇಳಿದ್ದರು. ಎಷ್ಟು ವಿಚಿತ್ರವಲ್ಲವೆ ಮಾತುಗಳೆಲ್ಲ ? ಭಾರತೀಯ ಪುರಾಣೇತಿಹಾಸ , ಭಗವದ್ಗೀತೆ , ಹಿಂದೂ ಪರಂಪರೆ ಮತ್ತು ಸಂಸ್ಕೃತಿಯ ಬಗ್ಗೆ ಪ್ರಗತಿಪರರು ಹಿಂದೆಯೂ ಅಪಸೊಲ್ಲುಗಳನ್ನು ಆಡಿದ್ದಿದೆ. ಅದು ಮುಂದುವರಿದೇ ಇದೆ.

ಹಾಗೆ ಮಾತಾಡುವುದು ಅಥವಾ ಅಭಿವ್ಯಕ್ತಿಸುವುದು, ಕಾರ್ನಾರಂಥವರಿಗೆ ಒಂದು ರೀತಿಯ ಷೋಕಿ ಇದ್ದ ಹಾಗೆ ತೋರುತ್ತದೆ. ತಾನು ಹಾಗೆ ಫಲಕ ಹಾಕಿಕೊಂಡು ಬಹಿರಂಗವಾಗಿ ಕಾಣಿಸಿಕೊಳ್ಳುವ ಮೊದಲು, ಅವರು ಚಿಂತನೆ ಮಾಡಿಲ್ಲವೆಂದರೆ ನಂಬುವುದು ಕಷ್ಟ. ಚಿಂತನೆ ಹಾಗೇಕೆ ಮಾಡಿದ್ದಾರೆಂದು ಯಾರೂ ವಿರೋಧಿಸಬಾರದು. ಅವರಿರುವುದೇ ಹಾಗೆ. ಹಾಗಂತ ತಾನೂ ನಕ್ಸಲ್ ಅಂತ ಹೇಳಿಕೊಳ್ಳುವ ಮೂಲಕ ಅವರು ಸಾಧಿಸುವುದಾದರೂ ಏನೆಂದು ಗೊತ್ತಿಲ್ಲ. ತನ್ನ ಕಡೆಗೆ ಎಲ್ಲರ ಗಮನವನ್ನು ಸೆಳೆಯುವ ಪ್ರಯತ್ನವಲ್ಲದೆ ಬೇರೇನೂ ಇದರಲ್ಲಿ ಕಾಣುವುದಿಲ್ಲ. ಅವರು ಅಭಿನಯ ಚತುರರೇ ಆಗಿರುವುದರಿಂದ ಅವರ ಅಭಿವ್ಯಕ್ತಿಗೆ ತೀರಾ ತಲೆಬಿಸಿ ಮಾಡಿಕೊಳ್ಳುವ ಅಗತ್ಯ ಇದೆಯೆಂದು ನನಗೆ ಅನಿಸುವುದಿಲ್ಲ. ಇದರಿಂದಾಗಿ ನಕ್ಸಲ್‌ರನ್ನು ಅವರು ಬೆಂಬಲಿಸುತ್ತಾರೆಂದು ತಿಳಿಯಲು ಸಾಧ್ಯವೆ? ಅವರ ವರ್ತನೆಯಿಂದ ನಕ್ಸಲರಿಗೆ ಪ್ರೇರಣೆಯಾಗುತ್ತದೆಯೇ? ಹಾಗೆ ಹೇಳುವುದೂ ಕಷ್ಟ ಅಥವಾ ಇವರ ಚಿಂತನೆಯನ್ನು ಯಾರಾದರೂ ಸ್ವೀಕರಿಸಿ ಹಾಗೆಯೇ ಅನುಸರಿಸುತ್ತಾರೆಂಬುದೂ ಕಷ್ಟ. ಅಂಥ ಪ್ರಭಾವವಾಗಲೀ ಪರಿಣಾಮವಾಗಲೀ ಕಾರ್ನಾಡರಿಂದ ಆಗಿಯೇ ಬಿಡುತ್ತದೆಂದು ನಂಬಲಸಾಧ್ಯ. ಹಾಗೆಯೇ ಆಗಲೆಂದು ಸ್ವತಃ ಕಾರ್ನಾಡರು ಅಂದುಕೊಂಡಿರಲಾರರು.

ಬುದ್ಧಿಜೀವಿಗಳೆನಿಸಿಕೊಂಡ ಇಂಥವರಿಗೆಲ್ಲಾ ಬುದ್ಧಿ ಬರುವುದೆಂಬುದು ಒಂದು ಭ್ರಾಂತಿಯಷ್ಟೆ! ಉದಾರವಾದ ಎಂಬುವುದು ಇವರಿಗೆ ಫ್ಯಾಷನ್ ಅಷ್ಟೇ! ಹಿಂದೂಗಳೇ ಹಿಂದೂಗಳ ವಿರೋಧಿಗಳು. ಪಳಗಿದ ಆನೆಗಳಿಂದಲೇ ಆನೆ ಹಿಡಿಸುತ್ತಾರೆಂದು ರಾವಣ, ರಾಮಾಯಣದಲ್ಲಿ ಹೇಳಿದ್ದ. ತಮ್ಮದು ಮುಕ್ತಚಿಂತನೆಯೆಂದು ಇವರು ಹೇಳಿಕೊಂಡಾರು. ‘ಮುಕ್ತಪದಕ್ಕೆ ಏನೂ ಅರ್ಥವಿರಬಹುದು: ವಿವೇಕ, ಸ್ವಂತ ಬುದ್ಧಿ, ಮಾನ, ಮರ್ಯಾದೆ, ಶೀಲ, ರಾಷ್ಟ್ರಹಿತ ಬದ್ಧತೆ, ಸಾಮಾಜಿಕ ಹೊಣೆ, ವಯಸ್ಸಿಗೆ ಸ್ಥಾನಮಾನಕ್ಕೆ ತಕ್ಕ ನಡೆ ಇರುವುದು, ಇಲ್ಲದಿರುವುದು ಇತ್ಯಾದಿಗಳಿರಬಹುದು. ಹಿನ್ನೆಲೆಯಲ್ಲೇ ಇಂತಹ ವರ್ತನೆಗಳು ಪ್ರದರ್ಶಿಸಲ್ಪಡುತ್ತದೆಂದು ತಿಳಿಯಬಹುದು.

ಅದೇ ಕೊಡಗು, ಕೇರಳದಲ್ಲಾದ ಜಲಪ್ರಳಯ ಸಂದರ್ಭದಲ್ಲಿ ಇವರು, ಇವರಂಥವರಿಂದ ಯಾವ ಅಭಿವ್ಯಕ್ತಿಯೂ ರೀತಿ ಬಹಿರಂಗವಾಗಿ ಹೊರಬರಲಿಲ್ಲ. ‘ಗೌರಿಯ ಸ್ಮರಣೆಯಲ್ಲಿ ಕಂಡ ಉತ್ಸುಕತೆ ರಾಷ್ಟ್ರಕ್ಕೆ ಗಂಡಾಂತರ ಒದಗಿದಾಗ ಅಂಥ ಸಂದರ್ಭ ಸನ್ನಿವೇಶಗಳಲ್ಲಿ ಇವರೆಲ್ಲಾ ಯಾವ ಬಗೆಯಲ್ಲಿ ಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆಂಬುದನ್ನು ಹುಡುಕಬೇಕು ಎನ್ನುವಷ್ಟು ಅವು ಅಪರೂಪವಾಗಿವೆ.

Tags

Related Articles

One Comment

  1. ಯಾರು ಹೇಗೆ ಎಷ್ಟು ಜಡಿಸಿದರು ಇವಂಗೆ ಮತ್ತು ಇವನಂತಹವರಿಗೆ ಏನು ಆಗುವುದಿಲ್ಲ. ಅಂತಹ ಭಂಡರು ಅವರು.

Leave a Reply

Your email address will not be published. Required fields are marked *

Language
Close