About Us Advertise with us Be a Reporter E-Paper

Breaking Newsಪ್ರಚಲಿತವಿದೇಶ

ಇದು ವಿಶ್ವದಲ್ಲಿಯೇ ಅತ್ಯಂತ ದುಬಾರಿ ವಿಚ್ಛೇದನ…!

ವಿಶ್ವದ ಒನ್ ಶ್ರೀಮಂತ ಅಮೇಜಾನ್ ಸಿಇಒ ಜೆಫ್ ಬೆಜೋಸ್ ತಮ್ಮ ಪತ್ನಿ ಮೆಕೆಂಜಿ ಬೆಜೋಸ್‌ಗೆ ವಿಚ್ಛೇದನ ನೀಡಿದ್ದು, ಇದು ವಿಶ್ವದಲ್ಲಿಯೇ ಅತ್ಯಂತ ದುಬಾರಿ ವಿಚ್ಛೇದನವಾಗಿದೆ. ಕಾರಣ ಜೆಫ್ ತಮ್ಮ ಪತ್ನಿಗೆ ಪರಿಹಾರವಾಗಿ ನೀಡಿರುವ ಪರಿಹಾರ ಮೊತ್ತ ಬರೋಬ್ಬರಿ 4.85 ಲಕ್ಷ ಕೋಟಿ ರು.!

ಹೌದು, 25 ವರ್ಷಗಳ ವೈವಾಹಿಕ ಜೀವನಕ್ಕೆ ವಿದಾಯ ಹೇಳುತ್ತಿರುವ ಜೆಫ್ ಇದಕ್ಕಾಗಿ 4.2 ಲಕ್ಷ ಕೋಟಿ ರು. ಬೆಲೆ ತೆರಬೇಕಾಗಿದೆ. ವಿಚ್ಛೇದನ ಪಡೆಯುವ ಮೆಕೆಂಜಿ ವಿಶ್ವದ ಶ್ರೀಮಂತ ಮಹಿಳೆ ಎಂಬ ಪಟ್ಟ ಅಲಂಕರಿಸಲಿದ್ದಾರೆ. ಬ್ಲೂಂಬರ್ಗ್‌ನ ಪ್ರಕಾರ ಫ್ರಾಂಕೊಯೀಸ್ ಬೆಟ್ಟೆನ್‌ಕೋರ್ಟ್ ಮೇಯೇರ್ಸ್ ಸದ್ಯ ವಿಶ್ವದ ಶ್ರೀಮಂತ ಮಹಿಳೆಯಾಗಿದ್ದು, 3.20 ಲಕ್ಷ ಕೋಟಿ ರು. ಆಸ್ತಿಯ ಒಡತಿಯಾಗಿದ್ದಾರೆ.

ವಾಷಿಂಗ್ಟನ್ ಸ್ಟೇಟ್ ಕಾನೂನಿನ ಪ್ರಕಾರ ಯಾವುದೇ ದಂಪತಿ ತಮ್ಮ ಆಸ್ತಿಯನ್ನು ಹಂಚಿಕೊಳ್ಳದಿದ್ದರೆ ಅವರು ವಿಚ್ಛೇದನವಾಗುವ ಸಂದರ್ಭದಲ್ಲಿ ಅವರ ಆಸ್ತಿಯನ್ನು ಇಬ್ಭಾಗ ಮಾಡಲಾಗುತ್ತದೆ. ಹೀಗಾಗಿ ಮೆಕೆಂಜಿ ಅವರು ಜೆಫ್‌ನ ಆಸ್ತಿಯಲ್ಲಿ ಅರ್ಧ ಭಾಗವನ್ನು ಪಡೆಯಲಿದ್ದಾರೆ.

ಯಾರ ಪಾಲು ಎಷ್ಟು?
ಜೆಫ್ ಆಸ್ತಿ ಎಷ್ಟು?: ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಜೆಫ್ ಬಳಿ ಇರುವ ಆಸ್ತಿ ಮೌಲ್ಯ 9.64 ಲಕ್ಷ ಕೋಟಿ ರು..

ವಿವಾಹಪೂರ್ವ ಒಪ್ಪಂದವಿಲ್ಲ: ಜೆಫ್ ಹಾಗೂ ಮೆಕೆಂಜಿ ನಡುವೆ ವಿವಾಹಕ್ಕೂ ಮುನ್ನ ಆಸ್ತಿ ಹಂಚಿಕೆ ಕುರಿತಾಗಿ ಯಾವುದೇ ಒಪ್ಪಂದ ಮಾಡಿಕೊಂಡಿರಲಿಲ್ಲ. ಅಲ್ಲದೆ ಇವರ ವಿವಾಹದ ನಂತರ ಅಮೇಜಾನ್ ಕಂಪನಿ ಸ್ಥಾಪನೆಯಾಗಿದ್ದು, ಮುಂದಿನ ದಿನಗಳಲ್ಲಿ ಮೆಕೆಂಜಿ ಅಮೇಜಾನ್ ಕಂಪನಿಯ ಬಹುಪಾಲು ಷೇರು ಪಡೆಯುವ ಸಾಧ್ಯತೆ ಇದೆ.

ಆಸ್ತಿ ಸಮ: ಇವರಿಬ್ಬರ ಆಸ್ತಿಯನ್ನು ಸಮನಾಗಿ ಹಂಚಿದರೆ ಮೆಕೆಂಜಿ 4.85 ಲಕ್ಷ ಕೋಟಿ ರು.ಗಳಷ್ಟು ಮೌಲ್ಯದ ಆಸ್ತಿ ಪಡೆಯಲಿದ್ದಾರೆ. ಇದರಿಂದ ಸಹಜವಾಗಿಯೇ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಲ್ಲಟವಾಗಲಿದೆ. ಶ್ರೀಮಂತರ ಪಟ್ಟಿಯಲ್ಲಿ ಜೆಫ್ ಸ್ಥಾನ ಕುಸಿಯಲಿದ್ದು, ಮೈಕ್ರೋಸಾಫ್‌ಟ್ ಸಹಸಂಸ್ಥಾಪಕ ಬಿಲ್ ಗೇಟ್‌ಸ್ ಅವರು ಮತ್ತೆ ಅಗ್ರಸ್ಥಾನಕ್ಕೇರಲಿದ್ದಾರೆ.

ಇಬ್ಬರ ಹೆಸರಿನಲ್ಲಿರುವ ಆಸ್ತಿಗಳು: ಕಳೆದ ವರ್ಷ ಜೆಫ್ ವಾಷಿಂಗ್ಟನ್ ಡಿಸಿಯಲ್ಲಿ 161 ಕೋಟಿ ರು. ಮೌಲ್ಯದ ಬಂಗಲೆಯನ್ನು ಖರೀದಿಸಿದ್ದಾರೆ. ಇದು ಇವರಿಬ್ಬರ ಹೆಸರಿನಲ್ಲಿದೆ. ಇನ್ನು ನಂತರ ಆರಂಭವಾದ ಅಮೇಜಾನ್ ಕಂಪನಿಯಲ್ಲಿ ಜೆಫ್ ಶೇ.16ರಷ್ಟು ಷೇರು ಹೊಂದಿದ್ದು, ಮೆಕೆಂಜಿ ಯಾವುದೇ ನೇರ ಷೇರುಗಳನ್ನು ಹೊಂದಿಲ್ಲ. ಆದರೆ ಕಾನೂನಿನ ಪ್ರಕಾರ ಮದುವೆ ನಂತರ ಆರಂಭವಾದ ಕಂಪನಿ ಷೇರುಗಳ ಮೇಲೆ ಇಬ್ಬರಿಗೂ ಅಧಿಕಾರವಿರುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close