ವಿಶ್ವವಾಣಿ

ನಮ್ಮಲ್ಲಿ ಓಡದೇ ನಿಂತಿರುವುದು ಸಮಯ ಮಾತ್ರ!

ಸಮಯ, ಶಿಸ್ತು ಹಾಗೂ ದೇಶಪ್ರೇಮ ಅನ್ನುವುದು ನನ್ನ ಬಹು ಮುಖ್ಯ ವಿಷಯಗಳು. ಈ ವಿಚಾರವಾಗಿ ಹಲವರ ಬಳಿ ಸಾಕಷ್ಟು ಚಚಿರ್ಸಿದ್ದೇನೆ. ನನ್ನ ಸ್ಫೂರ್ತಿ ಹಾಗೂ ನಾನು ಫಾಲೋ ಮಾಡುವ  ಭಟ್ ಅವರು ಉದಾಹರಿಸಿರುವ ಆ ಲೇಖನ ನನಗೆ ಈ ಸಂದರ್ಭದಲ್ಲಿ ತುಂಬ ನೆನಪಾಗುತ್ತಿದೆ.

ಖ್ಯಾತ ಬ್ರಿಟಿಷ್ ಲೇಖಕ ಹಾಗೂ ಇತಿಹಾಸಕಾರ ಪ್ಯಾಟ್ರಿಕ್ ಫ್ರೆಂಚ್ ಭಾರತದ ಕುರಿತು ಒಂದು ಸೊಗಸಾದ ಪುಸ್ತಕ ಬರೆದಿದ್ದಾರೆ. ಅದರ ಹೆಸರು India: A Portrait ಇದನ್ನು ಲೇಖಕರು 1.2 ಶತಕೋಟಿ ಜನರ ಆಪ್ತ (An intimate biography of 1.2 billion people) ಜೀವನ ಚರಿತ್ರೆ ಎಂದು ಬಣ್ಣಿಸಿದ್ದಾರೆ. ಈ ಪುಸ್ತಕ ಬರೆಯುವ ಸಂದರ್ಭದಲ್ಲಿ  ಅವರು ಕರ್ನಾಟಕದ ಕೆಲ ಭಾಗಗಳಲ್ಲಿ ಸಂಚರಿಸಿದ್ದರು.A quarry near by Mysore ಎಂಬ ಅಧ್ಯಾಯವೂ ಈ ಕೃತಿಯಲ್ಲಿದೆ. ಪ್ಯಾಟ್ರಿಕ್ ಫ್ರೆಂಚ್ ಅವರು ಕೆಲದಿನಗಳ ಹಿಂದೆ ‘ನ್ಯೂಯಾರ್ಕರ್’ ಮ್ಯಾಗಜಿನ್‌ನಲ್ಲಿ ಬರೆದ ಲೇಖನ ಸಿಕ್ಕಿತ್ತು. A country when time stands still ಅಂತ ಅದರ ಶೀರ್ಷಿಕೆ. ಭಾರತದ ಕುರಿತು ಪುಸ್ತ ಬರೆಯುವಾಗ ಸಮಯ ಪರಿಪಾಲನೆ ಕುರಿತು ತಮಗಾದ ಅನುಭವವನ್ನು ಅವರು ಆಪ್ತವಾಗಿ ವಿವರಿಸಿದ್ದಾರೆ. ‘ಭಾರತ ನಿಜಕ್ಕೂ ಬಡದೇಶ, ಯಾಕೆಂದರೆ  ಯಾರ ಬಳಿಯೂ ಸಮಯವಿಲ್ಲ. ಹೀಗಾಗಿ ಯಾರೂ ಸಮಯವನ್ನು ಪಾಲಿಸುವುದಿಲ್ಲ. ಸಮಯವನ್ನು ಉಲ್ಲಂಘಿಸುವುದು ರಾಷ್ಟ್ರೀಯ ಹವ್ಯಾಸ. ಇದನ್ನು ಮಾತ್ರ ಎಲ್ಲರೂ ಅಚ್ಚುಕಟ್ಟಾಗಿ ಪಾಲಿಸುತ್ತಾರೆ. ಸಮಯಪಾಲನೆ ಮಾಡದಿದ್ದಾಗ ಯಾರಿಗೂ ಬೇಸರವಾಗುವುದಿಲ್ಲ. ವಿಚಿತ್ರವೆಂದರೆ ಸಮಯಪಾಲನೆ ಮಾಡಲು ಆಗದಿರುವುದಕ್ಕೆ ಎಲ್ಲರೂ ಟ್ರಾಫಿಕ್ ಜಾಮ್‌ನ್ನೇ ಪ್ರಮುಖ ಆರೋಪಿಯನ್ನಾಗಿ ಮಾಡುತ್ತಾರೆ. ಹೀಗಾಗಿ ಭಾರತದಲ್ಲಿ ಸಮಯವೆಂಬುದು ಟ್ರಾಫಿಕ್‌ನ ಹಾಗೆ ಚಲಿಸುವುದಿಲ್ಲ. ನಿಂತಲ್ಲಿಯೇ(Stands still) ನಿಂತಿರುತ್ತದೆ ಎಂದು ನವಿರಾಗಿ ಲೇವಡಿ ಮಾಡಿದ್ದಾರೆ.

ಪ್ರಾಯಶಃ ಪ್ಯಾಟ್ರಿಕ್ ಫ್ರೆಂಚ್ ಅವರನ್ನು ಯಾರೂ  ಸಮಯಪಾಲನೆ ವಿಷಯದಲ್ಲಿ ನಾವು ಬಹಳ ಖಡಕ್ಕು. ಕಟ್ಟಕಡೆಯ ವ್ಯಕ್ತಿಯಿಂದ ಹಿಡಿದು ದೇಶದ ಪ್ರಥಮ ಪ್ರಜೆ ತನಕ ಎಲ್ಲರೂ ಒಂದೇ. ಉಲ್ಲಂಘನೆಯಲ್ಲೇ ಆಚರಣೆ! ಭ್ರಷ್ಟಾಚಾರಕ್ಕಿಂತ ಸರ್ವವ್ಯಾಪಿಯೆಂದರೆ ಸಮಯಪಾಲನೆ ಮಾಡದಿರುವುದು. ಇಡೀ ದೇಶವನ್ನು ಬಾಧಿಸುತ್ತಿರುವ ದೊಡ್ಡ ರೋಗವೆಂದರೆ ಅದೇ. ಈ ವಿಷಯದಲ್ಲಿ ಎಲ್ಲರೂ ರೋಗಪೀಡಿತರೇ ಎಂದು ಫ್ರೆಂಚ್ ಬರೆಯುತ್ತಾರೆ. ಇಡೀ ದೇಶಕ್ಕೆ ದೇಶವೇ ಒಕ್ಕೊರಲಿನಿಂದ ಈ ನಿಯಮವನ್ನು ಒಂದು ವ್ರತದಂತೆ ಪಾಲಿಸುತ್ತಿರುವುದೇಕೆ? ಸಮಯಪಾಲನೆಯನ್ನು ಒಂದು ಶಿಸ್ತು ಎಂದೇಕೆ ನಾವು ಭಾವಿಸುತ್ತಿಲ್ಲ? ನಮ್ಮ  ನಾವು ಪದೇಪದೆ ಮುರಿಯುತ್ತೇವೆ ಏಕೆ? ಸಮಯಕ್ಕೆ ಸರಿಯಾಗಿ ಹೋಗದಿದ್ದರೆ, ಬರ್ತೀವಿ ಅಂತ ಹೇಳಿದ ಸಮಯದಲ್ಲಿ ಇಲ್ಲದಿದ್ದರೆ ನಮಗೇಕೆ ಬೇಸರವಾಗುವುದಿಲ್ಲ? ಒಂದು ಕೆಲಸವನ್ನು ನಾವು ಪದೇಪದೆ ಏಕೆ ಮುಂದೂಡುತ್ತೇವೆ? ಇಂದು ಮಾಡಬಹುದಾಗಿದ್ದನ್ನು ನಾಳೆ, ನಾಳೆ ಎಂದು ಏಕೆ ಹೇಳುತ್ತೇವೆ? ಸಮಯದ ವಿಷಯದಲ್ಲಿ ನಾವು ಸದಾ ಅಶಿಸ್ತು, ಅವ್ಯವಸ್ಥಿತ ಏಕೆ? ಸಮಯಪಾಲನೆ ವಿಷಯದಲ್ಲಿ ಚಲ್ತಾ ಹೈ ಮನೋಭಾವವೇಕೆ? ಯಾವತ್ತೂ ನಾವು ತಡವಾಗಿ ಹೋಗಿ, ಬೇರೊಬ್ಬರನ್ನು ಕಾಯುವಂತೆ ಮಾಡಿ, ಕೊನೆಗೆ ಕ್ಷಣ ಯಾಚಿಸುವ  ನಿರ್ಲಜ್ಜರಾಗಿ ನಾವೇಕೆ ತಂದುಕೊಳ್ಳುತ್ತೇವೆ?

ಸುಮಾರು 8 ವರ್ಷ ಹಿಂದೆ ಕರ್ನಾಟಕ ಹೈಕೋರ್ಟಿನ ನ್ಯಾಯಾಧೀಶರನ್ನು ಭೇಟಿ ಮಾಡಲು ಅವರ ಮನೆಗೆ ಹೋಗಿದ್ದೆ. ಬೆಳಗ್ಗೆ ಒಂಬತ್ತು ಗಂಟೆಗೆ ನಾನು ಅವರನ್ನು ಭೇಟಿ ಮಾಡಬೇಕಿತ್ತು. ಸಮಯಪಾಲನೆಯ ದೃಷ್ಟಿಯಲ್ಲಿ ನಾನು ಕಟ್ಟುನಿಟ್ಟು. ಈ ವಿಷಯದಲ್ಲಿ ನಾನು ಶೇ.98ರಷ್ಟು ಯಶಸ್ಸನ್ನು ಕಂಡಿದ್ದೇನೆ. ಬಾಕಿ ಶೇ.2ರಷ್ಟಕ್ಕಾಗಿ ನಿರಂತರ ಹೋರಾಟ ನಡೆಸುತ್ತೇನೆ. ಯಶಸ್ವಿಯಾಗುತ್ತೇನೆಂಬ ಭರವಸೆ ಇದೆ. ಅಂದು ನನ್ನ ಕಾರಿನ ಚಾಲಕನ  ವಿಳಂಬದಿಂದಾಗಿ ನ್ಯಾಯಾಧೀಶರ ನಿವಾಸ ತಲುಪಲು ಆರು  ತಡವಾಯಿತು. ಆ ದೃಶ್ಯ ಕಣ್ಣಿಗೆ ಕಟ್ಟುವಂತೆ ನೆನಪಿದೆ. ನ್ಯಾಯಾಧೀಶರು ನಿರ್ದಾಕ್ಷಿಣ್ಯವಾಗಿ ‘ನಿಮಗಾಗಿ ಆರು ನಿಮಿಷದಿಂದ ಕಾಯುತ್ತಿದ್ದೇನೆ. ಜೀವನದಲ್ಲಿ ಯಾರಿಗೆ ಸಮಯದ ಮಹತ್ವ ಗೊತ್ತಿರುವುದಿಲ್ಲವೋ ಅವರು ಬೇರೆ ಯಾವುದಕ್ಕೂ ಮಹತ್ವ ಕೊಡುವುದಿಲ್ಲ. ನಿಮಗೆ ಎಷ್ಟೇ ಪ್ರಮುಖ ಕೆಲಸ ಬಂದಿರಬಹುದು. ನನ್ನ ಸಮಯ ಅಮೂಲ್ಯ. ನಿಮಗಾಗಿ ಕಾದ ಐದು ನಿಮಿಷ ನನಗೆಂದೂ ವಾಪಸು ಬರುವುದಿಲ್ಲ. ಇನ್ನೊಮ್ಮೆ ಭೇಟಿ ಮಾಡೋಣ. ಇಂದು ಸಾಧ್ಯವಿಲ್ಲ’ ಎಂದು ಮುಖಕ್ಕೆ ಹೊಡೆದವರಂತೆ ಖಡಾಖಡಿ ಹೇಳಿದರು.

ನನಗೆ ಬೇಸರವೇನೂ  ಹಾಗೆ ನೋಡಿದರೆ ಅವರು ನನಗೆ ಜೀವನದಲ್ಲೊಂದು ಉತ್ತಮ ಪಾಠವನ್ನು ಕಲಿಸಿದ್ದರು. ಸಮಯಪಾಲನೆ ಬಗ್ಗೆ ಅಷ್ಟು ಒಳ್ಳೆಯ ಪಾಠವನ್ನು ಯಾರೂ ಮಾಡಿರಲಿಲ್ಲ. ಅದೇ ಕೊನೆ. ಅಂದಿನಿಂದ ಇಲ್ಲಿಯ ತನಕ ನಾನು ಕರಾರುವಾಕುತನವನ್ನು ಕಾಪಾಡಿಕೊಂಡಿದ್ದೇನೆ. ಈ ಸಮಯಕ್ಕೆ ಬರುತ್ತೇನೆಂದು ಹೇಳಿ, ತುಸು ತಡವಾದರೆ ಆ ನ್ಯಾಯಾಧೀಶರೇ ಕಣ್ಮುಂದೆ ಬರುತ್ತಾರೆ. ನಿಗದಿತ ಸಮಯಕ್ಕೆ ಸಲುಪಲು ಒಮ್ಮೊಮ್ಮೆ ಸಾಧ್ಯವಾಗದಿದ್ದಾಗ ಫೋನ್ ಮಾಡಿ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳುತ್ತೇನೆ. ಹೇಳಿದ ಸಮಯಕ್ಕೆ ಹೋಗಲು ಐದು ನಿಮಿಷ ತಡವಾದರೂ  ಹಿಮ್ಮಡಕ್ಕೆ ಹೊಸಲು ಹತ್ತಿದ ಅನುಭವ!

ಆದರೂ ಸಮಯಪಾಲನೆ ವಿಷಯದಲ್ಲಿ ಮಾದರಿಯೆಂದರೆ ‘ವಿಜಯ ಕರ್ನಾಟಕ’ ಪತ್ರಿಕೆಯ ಮಾಲೀಕರಾಗಿದ್ದ ವಿಜಯ ಸಂಕೇಶ್ವರ ಅವರು. ನಾನು ಆ ಪತ್ರಿಕೆಯ ಪ್ರಧಾನ ಸಂಪಾದಕನಾಗಿದ್ದಾಗ ಅವರೊಂದಿಗೆ ಐದು ವರ್ಷಗಳಕಾಲ ಆತ್ಮೀಯವಾಗಿ ಒಡನಾಡುವ, ಅವರು ಪತ್ರಿಕೆ ಮಾರಾಟ ಮಾಡಿದ ನಂತರದಿಂದ ಇಂದಿನವರೆಗೂ ಅವರೊಂದಿಗೆ ವ್ಯವಹರಿಸುವ ಅಸಂಖ್ಯ ಅವಕಾಶಗಳು ಸಿಕ್ಕಿವೆ. ಅವರು ಸಮಯಕ್ಕೆ ಕೊಡುವ ಮಹತ್ವ ಕಂಡು ದಂಗಾಗಿದ್ದೇನೆ. ನನಗೆ ಅವರ ಈ ಗುಣ ಅದಮ್ಯ ಪ್ರೇರಣೆ ನೀಡಿದೆ.

 ನಿಮಗೆ ಟೈಮ್ ಕೊಟ್ಟಿದ್ದಾರೆ ಅಂದ್ರೆ ಮುಗಿಯಿತು. ಅವರು ಏನೇ ಆಗಲಿ ಅಲ್ಲಿರುತ್ತಾರೆ. ನೀವು ಎಷ್ಟೇ ಸಣ್ಣವರಾಗಿರಬಹುದು ಅಥವಾ ದೊಡ್ಡವರಾಗಿರಬಹುದು ಅವರು ಹೇಳಿದ ಸಮಯಕ್ಕೆ ‘ಢಣ್’ ಎಂದು ಗಂಟೆ ಬಾರಿಸುವುದಕ್ಕಿಂತ ಒಂದು ನಿಮಿಷ ಮೊದಲು ಹಾಜರಿರದಿದ್ದರೆ ಕೇಳಿ.

ಒಮ್ಮೆ ನಾನು ಅವರಿಗೆ ಫೋನ್ ಮಾಡಿ ‘ಬಾಬಾ ರಾಮದೇವ ಶಿಬಿರದ ಐದು ಪಾಸುಗಳು ಬೇಕಾಗಿವೆ ಸಾರ್’ ಎಂದು ಕೇಳಿದ್ದೆ. ಆ ಶಿಬಿರದ ಮುಖ್ಯ ಸಂಘಟಕರು ಅವರೇ ಆಗಿದ್ದರು. ನಾನು ಫೋನ್ ಮಾಡಿದಾಗ  ಬರೋಡಾದಲ್ಲಿದ್ದರು. ಶಿಬಿರಕ್ಕೆ ಇನ್ನೂ ಒಂದೂವರೆ ತಿಂಗಳಿತ್ತು. ಸಂಕೇಶ್ವರರು ಹೇಳಿದರು – ‘ಇಂದಿಗೆ ಸರಿಯಾಗಿ ಮೂವತ್ತೆಂಟನೆ ದಿನಕ್ಕೆ ನಾನು ಬೆಂಗಳೂರಿನಲ್ಲಿರುತ್ತೇನೆ. ಅಂದು ಮಧ್ಯಾಹ್ನ ಮೂರು ಗಂಟೆಗೆ ನಿಮ್ಮ ಕಚೇರಿಗೆ ಬಂದು ಪಾಸ್‌ಗಳನ್ನು ಕೊಡುತ್ತೇನೆ.’

ಮೂವತ್ತೆಂಟು ದಿನಗಳಾದವು ಸಂಕೇಶ್ವರರು ಹೇಳಿದ ಮಾತುಗಳನ್ನು ನಾನು ಮರೆತು ಬಿಟ್ಟಿದ್ದೆ. ಅಂದು ಮಧ್ಯಾಹ್ನ ಖಡಕ್ ಮೂರು ಗಂಟೆಗೆ ಸಂಕೇಶ್ವರ ಬಂದಿದ್ದರು. ಕೈಯಲ್ಲಿ ಐದು ಪಾಸುಗಳಿದ್ದವು!

ವರ್ಷಕ್ಕೆ ಸಾವಿರಾರು ಕೋಟಿ ರು. ವ್ಯವಹಾರ ನಡೆಸುವ, ಹತ್ತಾರು ಸಾವಿರ  ನಾಲ್ಕೈದು ಸಾವಿರ ವಾಹನಗಳನ್ನು ನಿಭಾಯಿಸುವ ಸಂಕೇಶ್ವರರು ಸಮಯದ ವಿಷಯದಲ್ಲಿ ವಹಿಸುವ ಎಚ್ಚರ ಎಂಥವರಿಗೂ ಮಾದರಿ. ಮೂರು ಸಲ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಕ್ರಿಯ ರಾಜಕಾರಣಿ ಆಗದಿದ್ದಾಗಲೂ ಸಮಯಪಾಲನೆಯಲ್ಲಿ ಇದೇ ಶಿಸ್ತು. ಅವರನ್ನು ಯಾವುದಾದರೂ ಕಾರ‌್ಯಕ್ರಮಕ್ಕೆ ಆಹ್ವಾನಿಸಿದರೆ ಸಂಘಟಕರು ಬರದಿದ್ದರೇನಂತೆ, ಸಂಕೇಶ್ವರರು ಮಾತ್ರ ಹಾಜರ್!

ಬಹಳ ಜನರಿಗೆ ಗೊತ್ತಿಲ್ಲ. ಸಂಕೇಶ್ವರರು ಯಾಕೆ ಜೆಡಿ(ಎಸ್) ತೊರೆದರೆಂಬುದು. ಸಂಕೇಶ್ವರರು ಬಿಜೆಪಿ ಬಿಟ್ಟು, ತಮ್ಮದೇ ಕನ್ನಡನಾಡು ಪಕ್ಷ ಕಟ್ಟಿ, ಅನಂತರ ಜೆಡಿ(ಎಸ್) ಸೇರಿದ್ದರು. ಅವರು  ತೊರೆಯಲು, ಸಮಯಪಾಲನೆ ವಿಷಯದಲ್ಲಿ ಅವರಿಗಾದ ತೀವ್ರ ಕಿರಿಕಿರಿ ಕೂಡಾ ಪ್ರಮುಖ ಕಾರಣಗಳಲ್ಲೊಂದು ಎಂಬ ಅಂಶ ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಒಮ್ಮೆ ದೇವೇಗೌಡರ ಮನೆಯಲ್ಲಿ ಪ್ರಮುಖ ನಾಯಕರ ಸಭೆಯನ್ನು ಕರೆಯಲಾಗಿತ್ತು. ಸಂಕೇಶ್ವರರಿಗೆ ಆಹ್ವಾನವಿತ್ತು. ಬೆಳಗಿನ ಒಂಬತ್ತಕ್ಕೆ ಸಭೆ ನಿಗದಿಯಾಗಿತ್ತು. ಸರಿ, ಸಂಕೇಶ್ವರರು ಒಂಬತ್ತಕ್ಕೆ ದೇವೇಗೌಡರ ಮನೆಗೆ ಹೋದರೆ ಅಲ್ಲಿ ಭಣಭಣ. ದೇವೇಗೌಡರೂ ಇರಲಿಲ್ಲ. ಅಲ್ಲಿಯೇ ಇದ್ದ ಗನ್‌ಮ್ಯಾನ್‌ನ್ನು ಕೇಳಿದರೆ ‘ಸಾರ್ ಮಧ್ಯಾಹ್ನ ಹನ್ನೊಂದೋ, ಹನ್ನೆರಡಕ್ಕೋ ಶುರುವಾಗಬಹುದು, ನೀವು ಇಷ್ಟು ಬೇಗ ಬಂದುಬಿಟ್ರಲ್ಲ  ಎಂದು ಹೇಳಿದ.

ಅಷ್ಟರೊಳಗೆ ಅವರು ಅರ್ಧಗಂಟೆ ಕಾದಿದ್ದರು. ಗನ್‌ಮ್ಯಾನ್ ಮಾತು ಕೇಳಿದ್ದೇ ತಡ ಅಲ್ಲಿಂದ ಹೊರಟು, ನೇರವಾಗಿ ‘ವಿಜಯ ಕರ್ನಾಟಕ ಪತ್ರಿಕಾಲಯದಲ್ಲಿರುವ ನನ್ನ ಕೋಣೆಗೆ ಬಂದು ರಾಜೀನಾಮೆ ಪತ್ರ ಬರೆದರು. ಇದಕ್ಕೂ ಮೊದಲು ಜೆಡಿ(ಎಸ್) ಪಕ್ಷದಲ್ಲಿ ಸಮಯಪಾಲನೆ ವಿಚಾರವಾಗಿ ಅವರಿಗೆ ಇಂಥದೇ ಅನುಭವವಾಗಿತ್ತು. ಯಾರಿಗೆ ಸಮಯದ ಬಗ್ಗೆ ಗೌರವವಿರು ವುದಿಲ್ಲವೋ, ಅವರಿಗೆ ಉಳಿದ ಸಂಗತಿಗಳ ಬಗ್ಗೆ ಗೌರವವಿರುವುದು ಹೇಗೆ ಸಾಧ್ಯ ಎಂಬುದು ಅವರ ವಾದವಾಗಿತ್ತು. ‘ಸಾರ್ ನಿಮಗೆ ಗೊತ್ತಲ್ಲ,  ನಾಯಕರು, ರಾಜಕೀಯ ಪಕ್ಷಗಳು ನಡೆದುಕೊಳ್ಳುವುದೇ ಹೀಗೆ. ಸಮಯಪಾಲನೆ ಬಗ್ಗೆ ಎಲ್ಲ ಪಕ್ಷಗಳಲ್ಲೂ ಇರುವ ಶಿಸ್ತು ಇದೇ ತಾನೆ?’ ಎಂದು ನಾನು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದೆ. ಆದರೆ ಅವರು ಕೇಳುವ ಮನಸ್ಥಿತಿಯಲ್ಲಿ ಇರಲಿಲ್ಲ. ರಾಜೀನಾಮೆ ಪತ್ರ ಕಳಿಸಿಬಿಟ್ಟರು!

ಅವರು ಬಿಜೆಪಿಯಲ್ಲಿದ್ದಾಗಲೂ ಇಂಥ ಅನುಭವವಾಗಿತ್ತು. ಎಷ್ಟೋ ಸಂದರ್ಭಗಳಲ್ಲಿ ಕಾರ‌್ಯಕ್ರಮದ ಸಂಘಟಕರು ಬ್ಯಾನರ್ ಕಟ್ಟುತ್ತಿದ್ದುದನ್ನು ನೋಡಿ ಅವರು ಹೊರಟು ಹೋಗುತ್ತಿದ್ದರು. ಇವೆಲ್ಲಾ ಗೊತ್ತಿದ್ದೂ, ರಾಜಕೀಯ ಪಕ್ಷಗಳೇ ಹೀಗೆ ಎಂಬುದು ಗೊತ್ತಿದ್ದರೂ ಅವರು ಮಾತ್ರ  ಸಮಯಪಾಲನೆ ಗುಣವನ್ನು ಬಿಲ್‌ಕುಲ್ ಬಿಡಲಿಲ್ಲ. ಇಂದಿಗೂ ಅದೇ ಸಂಕೇಶ್ವರ! ಈ ವಿಷಯದಲ್ಲಿ ಅವರಿಗೆ ಪೈಪೋಟಿ ನೀಡುವ ಮತ್ತೊಬ್ಬರಿದ್ದರೆ ಅದು ಅವರ ಮಗ ಆನಂದ ಸಂಕೇಶ್ವರ! ಸಮಯಪಾಲನೆ ವಿಚಾರದಲ್ಲಿ ನನಗೆ ಇಂದಿಗೂ ಸ್ಫೂರ್ತಿಯಾಗಬಲ್ಲವರು ಸರ್ದಾರ್ ಖುಷವಂತ್‌ಸಿಂಗ್ ಹಾಗೂ ಪತ್ರಕರ್ತ ವೈಯೆನ್ಕೆ. ಖುಷವಂತಸಿಂಗ್ ಅವರ ಅಪಾಯಿಂಟ್‌ಮೆಂಟ್ ತೆಗೆದು ಕೊಂಡವರು ಅವರ ಮನೆಗೆ ಐದು ನಿಮಿಷ ಮೊದಲೇ ಹೋಗಿ, ವಾಹನದಲ್ಲಿಯೇ ಕುಳಿರುತ್ತಾರೆ. ನಿಗದಿತ ಸಮಯಕ್ಕೆ ಇನ್ನೂ ಎರಡು ನಿಮಿಷವಿದೆಯೆನ್ನುವಾಗ ಅವರ ಮನೆಯ ಬಾಗಿಲ  ನಿಂತಿರುತ್ತಾರೆ. ‘ಢಣ್’ ಎಂದಾಗಲೇ ಬೆಲ್‌ನ್ನು ಅದುಮುತ್ತಾರೆ. ಆಗಲೇ ಅಜ್ಜ ಪ್ರತ್ಯಕ್ಷನಾಗುತ್ತಾರೆ.

ಅದೊಂದು ಪಾರ್ಟಿ. ಮತ್ತ್ಯಾರದೋ ಅಲ್ಲ, ಸ್ವತಃ ಖುಷವಂತ್‌ಸಿಂಗ್ ಅವರ ಬರ್ಥ್‌ಡೇ ಪಾರ್ಟಿ. ಅನೇಕ ಗಣ್ಯರನ್ನು ಆಹ್ವಾನಿಸಿದ್ದರು. ಆದರೆ ಸಮಯ ಜಾರುವಂತಿ ರಲಿಲ್ಲ. ಆಗ ರಾಜೀವಗಾಂಧಿ ಪ್ರಧಾನಿ. ಅವರನ್ನೂ ಪಾರ್ಟಿಗೆ ಆಹ್ವಾನಿಸಲಾಗಿತ್ತು. ಹರಿಹರ ಬ್ರಹ್ಮ, ಬಂದರೂ ಸರ್ದಾರ್‌ಜೀ ರಾತ್ರಿ ಒಂಬತ್ತರ ಮೇಲೆ ಕುಳಿತುಕೊಳ್ಳುವುದಿಲ್ಲ. ಶರೀರ ಅಡ್ಡ ಆಗಲೇ ಬೇಕು. ರಾಜೀವ್‌ಗಾಂಧಿ ಪಾರ್ಟಿಗೆ ಬಂದೇ ಬರುತ್ತಾರೆ, ಆದರೆ ತುಸು ತಡವಾಗಬಹುದು  ಸೂಚನೆ ಬಂತು. ಈ ವಿಷಯವನ್ನು ಖುಷವಂತ್‌ಸಿಂಗ್‌ಗೆ ತಿಳಿಸಲಾಯಿತು. ಆದರೆ ಸಿಂಗ್ ಟೈಮ್ ವಿಷಯದಲ್ಲಿ ಭಲೇ ಕಟ್ಟುನಿಟ್ಟು. ‘ಒಂಬತ್ತರೊಳಗೆ ಬರದಿದ್ದರೆ ಬರುವ ಅಗತ್ಯ ಇಲ್ಲ. ಒಂದು ವೇಳೆ ಬಂದರೆ, ನಾನು ಇರುವುದಿಲ್ಲ. ರಾತ್ರಿ ಒಂಬತ್ತಕ್ಕೆ ನನ್ನ ದಿನ ಮುಗಿದಂತೆ’ ಎಂದು ಎದ್ದುಬಿಟ್ಟರು. ರಾಜೀವ್ ಪಾರ್ಟಿಗೆ ಬರುವ ವೇಳೆ ಹತ್ತು ಗಂಟೆಯಾಗಿತ್ತು. ಅಷ್ಟರೊಳಗೆ ಅಜ್ಜ ನಿದ್ದೆಯಲ್ಲಿ ಎರಡು ಸಲ ಮಗ್ಗಲು ಬದಲಿಸಿದ್ದರು.

ಕಳೆದ ವಾರದ ‘ದಿ ಟೆಲಿಗ್ರಾಫ್’ ಪತ್ರಿಕೆಯಲ್ಲಿ ಖುಷವಂತ್‌ಸಿಂಗ್ ತಮ್ಮ  ಎಂಬ ಚಟದ ಬಗ್ಗೆ ಬರೆದುಕೊಂಡಿದ್ದಾರೆ. ‘ನನಗೆ ವಯಸ್ಸಾಗುತ್ತಿದ್ದಂತೆ, ದಿನದಿಂದ ದಿನಕ್ಕೆ, ಯಾರಾದರೂ ಸಮಯ ಪಾಲಿಸದಿದ್ದರೆ ವಿಪರೀತ ಅಸಹಿಷ್ಣುವಾಗುತ್ತಿದ್ದೇನೆ’ಎಂದು ಅನಿಸಲಾರಂಭಿಸಿದೆ. ನನ್ನನ್ನು ಭೇಟಿಯಾಗಲು ಬರುವವರು ಕೊಂಚ ತಡ ಮಾಡಿದರೂ ಅವರನ್ನು ಭೇಟಿ ಮಾಡಲು ನಿರಾಕರಿಸುತ್ತೇನೆ. ಅಂಥವರೊಂದಿಗೆ ತೀರಾ ಒರಟಾಗಿ ವರ್ತಿಸುತ್ತೇನೆ. ಬೇರೆಯವರ ಪಾರ್ಟಿಗೇ ಇರಬಹುದು, ತಡವಾಗಿ ಬರುವವರ ತಲೆ ಕಂಡರೆ ಆಗದು. ನಾನು ಈ ವಿಷಯದಲ್ಲಿ ನನ್ನಷ್ಟಕ್ಕೆ ನಾನಿರುವ ಬದಲು ಬೇರೆಯವರ ಉಸಾಬರಿಗೂ ಹೋಗಿ, ಒಂದು ಕಾಲದ ಒಳ್ಳೆಯ ಸ್ನೇಹಿತರನ್ನೆಲ್ಲಾ  ಮಾಡಿಕೊಳ್ಳುತ್ತಿದ್ದೇನಾ ಎಂದು ಅನಿಸಲಾರಂಭಿಸಿದೆ. ಸಮಯಪಾಲನೆ ನನಗೆ ವಿಪರೀತ ಚಟವಾಗಿ, ಪ್ರವೃತ್ತಿಯಾಗಿ, ಕನವರಿಕೆಯಾಗಿ ಮಾರ್ಪಟ್ಟಿದೆ. ಈ ಕಾರಣಕ್ಕಾಗಿಯೇ ಅನೇಕರು ನನ್ನನ್ನು ದೂರವಿಟ್ಟಿದ್ದಾರೆ. ಕೆಲವರು ನನ್ನನ್ನು ಭೇಟಿಯಾಗಲು ಮನೆತನಕ ಬಂದವರು, ಹತ್ತು ನಿಮಿಷ ತಡವಾಗಿದ್ದನ್ನು ಕಂಡು, ಎಲ್ಲಿ ಈ ಮುದುಕ ಸಿಡುಕುತ್ತಾನೋ ಎಂದು ಹಾಗೇ ಹಿಂತಿರುಗಿ ಹೋಗಿದ್ದಾರೆ.

ಅನೇಕರಿದ್ದಾರೆ, ಅವರು ಅಚ್ಚುಕಟ್ಟಾಗಿ ಸಮಯಪಾಲನೆ ಮಾಡುತ್ತಾರೆ. ಆದರೆ ಅದರ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವುದಿಲ್ಲ. ಈ ಸಾಲಿನಲ್ಲಿ ಎದ್ದು ನಿಲ್ಲುವ ಪ್ರಸಿದ್ಧ ವ್ಯಕ್ತಿಯೆಂದರೆ ಮಹಾತ್ಮ  ಅವರು ಸದಾ ಸೊಂಟಕ್ಕೆ ಪಾಕೆಟ್ ವಾಚ್/ಸ್ಟಾಪ್ ವಾಚನ್ನು ಕಟ್ಟಿಕೊಂಡಿರುತ್ತಿದ್ದರು. ಈಗ ಬದುಕಿರುವವರ ಪೈಕಿ ಟೈಮಿಗೆ ಬಹಳ ಮಹತ್ವ ಕೊಡುವವರೆಂದರೆ ಲಾರ್ಡ್ ಸ್ವರಾಜ್ ಪಾಲ್. ಅವರು ನನ್ನ ಭೇಟಿಗೆ ತಡವಾಗಿ ಬಂದಿದ್ದೇ ಇಲ್ಲ. ಮುಂಚಿತವಾಗಿ ಬಂದು ಕಾರಿನಲ್ಲಿಯೇ ಕುಳಿತಿರುತ್ತಾರೆ. ನನ್ನ ಸಮಯ ಪಾಲನೆಯ ಕಲ್ಪನೆಯನ್ನು ಬೇರೆಯವರ ಮೇಲೆ ಹೇರುತ್ತಿದ್ದೇನೆಯೇ? ಇದು ಅನೇಕರಿಗೆ ಹಿಡಿಸೋಲ್ಲ. ಅಂಥವರು ನನ್ನ ಸಂಗ ಬಿಟ್ಟಿದ್ದಾರೆ. ಪರವಾಗಿಲ್ಲ, ನಾನು ಸಮಯ ಪಾಲನೆಯ ಸಂಗವನ್ನು ಬಿಟ್ಟಿಲ್ಲ. ನನ್ನನ್ನು ಕೆಲವರು  ಕಾ ಪಬಂದ್ ಸಿಂಗ್ ಅರ್ಥಾತ್ The bonded slave of the time ಅರ್ಥಾತ್ ಸಮಯದ ಜೀತದಾಳು ಎಂದು ಕರೆಯುವುದುಂಟು. ಇದು ಕಾಂಪ್ಲಿಮೆಂಟ್ ಆಗಿರಲು ಸಾಧ್ಯವೇ ಇಲ್ಲ. ಅದೇನೇ ಇರಲಿ, ನಾನು ಮಾತ್ರ ಕಾಂಪ್ಲಿಮೆಂಟ್ ಎಂದೇ ಸ್ವೀಕರಿಸಿದ್ದೇನೆ.

ಸಮಯ ಪಾಲನೆಯೆಂಬುದು Obsession ಆಗಿ ಹೋದ್ರೆ, ನೀವು ಒಂದು ನಿಮಿಷ ವಿಳಂಬವನ್ನು ಸಹಿಸಿಕೊಳ್ಳುವುದಿಲ್ಲ. ಆದರೆ ಸಮಯ ಪಾಲನೆಗಿಂತ ದೊಡ್ಡ ಶಿಸ್ತು ಇನ್ನೊಂದಿಲ್ಲ.