About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಕಾಶ್ಮೀರ: ಭದ್ರತಾ ಪಡೆಗಳ ಗುಂಡಿಗೆ ಒಬ್ಬ ಭಯೋತ್ಪಾದಕ ಬಲಿ

ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕನೊಬ್ಬ ಸತ್ತಿದ್ದಾನೆ.

ಜಿಲ್ಲೆಯ ತ್ರಾಲ್ ಪ್ರದೇಶದಲ್ಲಿ ಅನಾಮಿಕ ಭಯೋತ್ಪಾದಕನೊಬ್ಬನ ಶವವನ್ನು ಭದ್ರತಾ ಪಡೆಗಳು ಪತ್ತೆ ಮಾಡಿವೆ. ಭಯೋತ್ಫಾದಕನ ಗುರುತು ಹಾಗು ಆತನ ಸಂಘಟನೆಯನ್ನು ಪತ್ತೆ ಮಾಡಲು ಭದ್ರತಾ ಪಡೆಗಳು ಯತ್ನಿಸುತ್ತಿವೆ.

ದಕ್ಷಿಣ ಕಾಶ್ಮೀರದ ಈ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿ ಕುಳಿತಿರುವ ಪಕ್ಕಾ ಮಾಹಿತಿ ಪಡೆದ ಭದ್ರತಾ ಪಡೆಗಳು ಭಾರೀ ಶೋಧ ಕಾರ್ಯಾಚರಣೆಗೆ ಮುಂದಾದರು. ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರು ಫೈರಿಂಗ್‌ ಆರಂಭಿಸಿದ ಕೂಡಲೇ ಎನ್‌ಕೌಂಟರ್‌ ಆರಂಭವಾಯಿತು.

ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ.

Tags

Related Articles

Leave a Reply

Your email address will not be published. Required fields are marked *

Language
Close