Breaking Newsಪ್ರಚಲಿತರಾಜ್ಯ
ಕಿತ್ತಾಟ ಬಿಟ್ಟು ರಾಜ್ಯದ ಅಭಿವೃದ್ಧಿ ಮಾಡಿ, ಇಲ್ಲವೇ ರಾಜೀನಾಮೆ ನೀಡಿ: ಜಗದೀಶ ಶೆಟ್ಟರ್

ಹುಬ್ಬಳ್ಳಿ: ಕಾಂಗ್ರೆಸ್ನ ಮನೆ ಜಗಳದಿಂದ ರಾಜ್ಯದ ಮಾನ ಮರ್ಯಾದೆ ಹರಾಜಾಗುತ್ತಿದೆ. ಕಿತ್ತಾಟ ಬಿಟ್ಟು ರಾಜ್ಯದ ಅಭಿವೃದ್ಧಿ ಮಾಡಲಿ ಇಲ್ಲವೇ ರಾಜೀನಾಮೆ ನೀಡಿ ಮನೆಗೆ ಹೋಗಲಿ ಎಂದು ಜಗದೀಶ ಶೆಟ್ಟರ್ ಹೇಳಿದರು.
ಮಾಧ್ಯಮದೊಂದಿಗೆ ಮಾತನಾಡಿ, ಜನಾದೇಶವನ್ನು ಧಿಕ್ಕಿರಿಸಿ ಸರಕಾರ ರಚಿಸಿದ ಕಾಂಗ್ರೆಸ್-ಜೆಡಿಎಸ್ ಸರಕಾರ ಇಂದು ಅಧಿಕಾರಕ್ಕಾಗಿ ಕಿತ್ತಾಟ ನಡೆಸುವ ಮೂಲಕ ರಾಜ್ಯದ ಅಭಿವೃದ್ಧಿಗೆ ತೊಡಕಾಗುತ್ತಿದೆ. ದಿನವಿಡೀ ಮಾಧ್ಯಮಗಳಲ್ಲಿ ಇವರ ಕಿತ್ತಾಟದ ಸುದ್ದಿಯೇ ನೋಡುವಂತಾಗಿದೆ. ಇವರ ನಡುವಿನ ಜಗಳದಲ್ಲಿ ರಾಜ್ಯ ಅಭಿವೃದ್ಧಿಯಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಸಹೋದರರು ಒಂದೇ ಪಕ್ಷದವರಾಗಿದ್ದು, ಅಧಿಕಾರಕ್ಕಾಗಿ ಪರಸ್ಪರ ಕಿತ್ತಾಟ ನಡೆಸಿ ಎರಡು ಬಣಗಳಾಗಿರುವುದು ವಿಪರ್ಯಾಸ. ಅವರ ಮನೆ ಜಗಳವನ್ನು ಬೀದಿಗೆ ತಂದು, ಸಾರ್ವಜನಿಕ ಸಂಸ್ಥೆಯ ಮರ್ಯಾದೆ ಹಾಳು ಮಾಡುತ್ತಿರುವುದು ಸರಿಯಲ್ಲ. ಇವರಿಗೆ ಹೇಳುವವರು, ಕೇಳುವವರು ಯಾರೂ ಇಲ್ಲವಾಗಿದ್ದಾರೆ. ತಾವು ಮಾಡಿದ್ದೇ ಅಂತಿಮ ಎಂದು ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ ಶೆಟ್ಟರ್, ಒಂದು ಇಲಾಖೆಗೆ ಬಿಡುಗಡೆಗೊಂಡ ಅನುದಾನ ಸರಕಾರ ಯಾರಿಗೂ ಗೊತ್ತಾಗದೆ ಮತ್ತೊಂದು ಇಲಾಖೆಗೆ ಮಾಡುತ್ತಿರುವುದು ಖಂಡನೀಯ ಎಂದರು.