lakshmi-electricals

ಜಲ್ಲಿಕಟ್ಟು: ಪ್ರಧಾನಿಗೆ ಶಶಿಕಲಾ ಪತ್ರ

Posted In : ದೇಶ

ಚೆನ್ನೈ: ಜಲ್ಲಿಕಟ್ಟು ನಿಷೇಧವನ್ನುತೆರವುಗೊಳಿಸಲು ತಮಿಳುನಾಡು ಮುಖ್ಯಮಂತ್ರಿ ಓ ಪನ್ನೀರ್‌ಸೆಲ್ವಂ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದ ಹಿನ್ನೆಲೆಯಲ್ಲೇ ಆಡಳಿತಾರೂಢ ಎಐಎಡಿಎಂಕೆ ಪಕ್ಷದ ಮಹಾ ಕಾರ್ಯದರ್ಶಿ ಶಶಿಕಲಾ ನಟರಾಜನ್ ಕೂಡಾ ಪತ್ರ ಬರೆದಿದ್ದಾರೆ.

ಪ್ರಧಾನ ಮಂತ್ರಿಗೆ ಬರೆದ ಪತ್ರದಲ್ಲಿ ಶಶಿಕಲಾ ”ತಮಿಳುನಾಡಿನ ಗ್ರಾಮೀಣ ಪ್ರದೇಶದಲ್ಲಿ ಗೂಳಿಗಳನ್ನು ಪೂಜ್ಯ ಭಾವದಿಂದ ನೋಡಲಾಗುತ್ತದೆ ಹಾಗೂ ಅವುಗಳನ್ನು ಅತ್ಯುತ್ತಮ ರೀತಿಯಲ್ಲಿ ಪೋಷಿಸಿ ನಂತರ ಅವುಗಳನ್ನು ಜಲ್ಲಿಕಟ್ಟು ಕ್ರೀಡೆಗೆ ಬಳಸಲಾಗುತ್ತದೆ. ಕ್ರೀಡೆಯಲ್ಲೂ ಅವುಗಳ ಮೇಲೆ ಅಸಲಿಗೆ ಯಾವುದೇ ರೀತಿಯ ಕ್ರೂರತೆ ತೋರಲಾಗುವುದಿಲ್ಲ.

ಜಲ್ಲಿಕಟ್ಟು ನಿಷೇಧದಿಂದಾಗಿ ತಮಿಳುನಾಡಿನ ಸಾರ್ವಜನಿಕವಲದಲ್ಲಿ ಅಸಮಧಾನ ಉಂಟಾಗಿದೆ. ಹಾಗಾಗಿ ನಿಷೇಧವನ್ನು ತೆರವುಗೊಳಿಸಲು ಎಲ್ಲಾ ರೀತಿಯ ಪ್ರಯತ್ನ ಪಡಬೇಕೆಂದು ಕೋರುತ್ತೇನೆ” ಎಂದು ಬರೆದಿದ್ದಾರೆ.

Leave a Reply

Your email address will not be published. Required fields are marked *

one × three =

 
Back To Top