ವಿಶ್ವವಾಣಿ

ಒಂದೇ ಒವರ್‌ನಲ್ಲಿ ಕುಕ್‌, ಜೋ ರೂಟ್‌ಗೆ ಪೆವಿಲಿಯನ್‌ ಹಾದಿ ತೋರಿಸಿದ ಬೂಮ್ರಾ

ಲಂಡನ್: ಆಲೆಸ್ಟೈರ್ ಕುಕ್ (71) ಅವರ ಅರ್ಧಶತಕದ ಬಲದಿಂದ ಇಂಗ್ಲೆಂಡ್ ತಂಡ ಭಾರತ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯ ಆರಂಭಿಕ ದಿನ ಉತ್ತಮ ಪ್ರದರ್ಶನ ತೋರಿತು. ಆದರೆ, ಕುಕ್‌ ಔಟಾಗುತ್ತಿದ್ದಂತ್ತೆಯೇ ಜೋ ರೂಟ್‌ ಮತ್ತು ಜಾನಿ ಬೈರ‍್ಟೋ ಶೂನ್ಯ ಸುತ್ತಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

ಇಲ್ಲಿನ ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್  65 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 134 ರನ್ ಗಳಿಸಿದೆ.

ವಿಶ್ವಾಸದಿಂದಲೇ ಮೈದಾನಕ್ಕೆ ಆಗಮಿಸಿದ ಭಾರತ ಬೌಲರ್‌ಗಳು ಆತಿಥೇಯ ದಾಂಡಿಗರನ್ನು ಶೀಘ್ರ ಕಳುಹಿಸುವಲ್ಲಿ ವಿಫಲವಾದರು. ಇಂಗ್ಲೆಂಡ್‌ನ ಆರಂಭಿಕರಾದ ಕುಕ್ ತ್ಯುತ್ತಮ ಆಟವಾಡುವಲ್ಲಿ ಸಫಲರಾಗಿ ಬೌಲರ್‌ಗಳ ಬೆವರಿಳಿಸಿದರು. ಅವರು ಎಂಟು ಬೌಂಡರಿಗಳನ್ನು ಬಾರಿಸುವ ಮೂಲಕ 71 ರನ್ ಗಳಿಸಿ ಇಂಗ್ಲೆಂಡ್ ತಂಡಕ್ಕೆ ಉತ್ತಮ ಆರಂಭವನ್ನು ಒದಗಿಸಿದರು.

ಮತ್ತೊಬ್ಬ ಆರಂಭಿಕ ಕೆಂಟನ್ ಜೆನ್ನಿಂಗ್‌ಸ್ ಅವರು ಕುಕ್‌ಗೆ ಸಾಥ್ ನೀಡುವಲ್ಲಿ ವಿಫಲರಾದರು. ಅವರು 75 ಎಸೆತಗಳಲ್ಲಿ ಎರಡು ಬೌಂಡರಿಗಳನ್ನು ಬಾರಿಸಿ 23 ರನ್ ಗಳಿಸಿದರು. ಈವೇಳೆ ಅವರು ರವೀಂದ್ರ ಜಡೇಜಾ ಎಸೆತಕ್ಕೆ ರಾಹುಲ್ ಅವರಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಬಳಿಕ ಕ್ರೀಸ್‌ಗೆ ಆಗಮಿಸಿದ ಮೊಯಿನ್ ಆಲಿ 29 ರನ್‌ ಗಳಿಸಿ ವಿಕೆಟ್ ಉಳಿಸಿಕೊಂಡು ಉತ್ತಮ ಆಟವಾಡಿತ್ತಿದ್ದಾರೆ. ಕುಕ್‌ ಔಟಾಗುತ್ತಿದ್ದಂತ್ತೆಯೇ ಜೋ ರೂಟ್‌ ಮತ್ತು ಜಾನಿ ಬೈರ‍್ಟೋ ಶೂನ್ಯ ಸುತ್ತಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

ಬೌಲಿಂಗ್‌ನಲ್ಲಿ ಭಾರತದ ಜಸ್ಪ್ರೀತ್ ಬುಮ್ರಾ 2 ವಿಕೆಟ್‌ ಪಡೆದು ಮಿಂಚಿದರೆ, ರವೀಂದ್ರ ಜಡೇಜಾ, ಇಶಾಂತ್ ಶರ್ಮಾ ತಲಾ  ಒಂದು ವಿಕೆಟ್ ಪಡೆದರು. ಹನುಮಾ ವಿಹಾರಿ, ಮೊಹಮ್ಮದ್ ಶಮಿ ಅವರು ವಿಕೆಟ್ ಉರುಳಿಸುವಲ್ಲಿ ವಿಫಲರಾಗಿದ್ದಾರೆ.