About Us Advertise with us Be a Reporter E-Paper

ಅಂಕಣಗಳು

ಲೋಕಸಭಾ ಚುನಾವಣೆಯಲ್ಲಿ ಯುವ ಮಂತ್ರ ಪಠಣ

ಈಶ್ವರ್ ಖಂಡ್ರೆ

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಲು ರಣತಂತ್ರ ರೂಪಿಸಿದೆ. ಪಕ್ಷವನ್ನು ಬಲಗೊಳಿಸಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಯುವಕರಿಗೆ ಹೈಕಮಾಂಡ್  ಹಾಕಿದೆ. ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಈಶ್ವರ್ ಖಂಡ್ರೆ ಮೂರು ಬಾರಿ ಶಾಸಕರಾಗಿ, ಒಮ್ಮೆ ಸಚಿವರಾಗಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇವರ ನಾಯಕತ್ವದಲ್ಲಿ 2019ರ ಲೋಕಸಭಾ ಚುನಾವಣೆಗೆ ರಾಜ್ಯ ಕಾಂಗ್ರೆಸ್ ಸಜ್ಜುಗೊಳ್ಳುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ರೂಪಿಸುವ ತಂತ್ರಗಳು, ಪಕ್ಷ ಸಂಘಟನೆ ಕುರಿತು ವಿಶ್ವವಾಣಿಯೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸಜ್ಜಾಗಿದೆಯೇ?

2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ದೊಡ್ಡ ಪಕ್ಷವಾಗಿ ಹೊರಹೊಮ್ಮುವುದು ಖಚಿತ. ಈ ದಿಸೆಯಲ್ಲಿ ರಾಜ್ಯದಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು  ಪಕ್ಷವನ್ನು ಬೇರುಮಟ್ಟದಿಂದಲೇ ಬಲಗೊಳಿಸಲು ಕಾರ್ಯತಂತ್ರಗಳನ್ನು ರೂಪಿಸಲಾಗಿದೆ. ಯುವಕರು ಹಿರಿಯರು, ಮಹಿಳೆಯರು ಸೇರಿದಂತೆ ಎಲ್ಲ ಸಮುದಾಯಗಳನ್ನುವಿಶ್ವಾಸಕ್ಕೆ ಪಡೆದು ಎಲ್ಲ ೊಂದಿಗೆ ಸಮಾಲೋಚನೆ ಮಾಡಿ ಲೋಕಸಭಾ ಚುನಾವಣೆಗೆ ಯೋಗ್ಯ ಅಭ್ಯರ್ಥಿಗಳಿಗೆ ಮಣೆ ಹಾಕಲಾಗುವುದು. ಇಂದಿನಿಂದಲ್ಲೇ ಕಾರ್ಯ ಪ್ರವೃತ್ತರಾಗಿ ರಾಜ್ಯದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಕಾರ್ಯಸೂಚಿ ರೂಪಿಸಲಾಗುವುದು.

ಕೆಪಿಸಿಸಿ ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷ ಸ್ಥಾನಕ್ಕೆ ಯುವಕರಿಗೆ ಮಣೆ ಹಾಕಲಾಗಿದೆ. ಇದೇ ತಂತ್ರವನ್ನುಲೋಕಸಭಾ ಚುನಾವಣೆಯಲ್ಲೂ ಪ್ರಯೋಗವಾಗುತ್ತಾ?

ಕಾಂಗ್ರೆಸ್ ಎನ್ನುವುದು ಕಿರಿಯರ-ಹಿರಿಯರ  ಇದ್ದಂತೆ. ಹಿರಿಯರ ಮಾರ್ಗದರ್ಶ, ಸಲಹೆ ಸೂಚನೆ ಜತೆಗೆ ಕಿರಿಯರ ಆಶೋತ್ತರ, ನಿರೀಕ್ಷೆಗಳಿಗೆ ಪಕ್ಷದಲ್ಲಿ ಮನ್ನಣೆ ಸಿಗಲಿದೆ. ಪಕ್ಷ ಯಾರನ್ನೂ ತಿರಸ್ಕಾರ ಮಾಡುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಯುವಕರನ್ನು ಆಕರ್ಷಿಸಲು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುವುದು.ಯುವಕರು ದೇಶದ ಶಕ್ತಿ, ದೇಶದ ಭವಿಷ್ಯ. ಯುವ ಕಾಂಗ್ರೆಸ್ ಮತ್ತು ವಿದ್ಯಾರ್ಥಿ ಕಾಂಗ್ರೆಸ್ ಘಟಕಗಳ ಮೂಲಕ ಯುವಕರಲ್ಲಿ ನಾಯಕತ್ವ ಶಕ್ತಿ ತುಂಬುತ್ತೇವೆ. 2019ರ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವಂತ ಯೋಗ್ಯ ಅಭ್ಯರ್ಥಿಗಳಿಗೆ ಮಣೆ ಹಾಕಲಾಗುವುದು. ಹಿರಿಯರ ಜತೆ  ಸದಾವಕಾಶ ಕಲ್ಪಿಸುವ ನಿರ್ಧಾರವನ್ನು ಹೈಕಮಾಂಡ್ ಕೈಗೊಳ್ಳುವ ವಿಶ್ವಾಸವಿದೆ.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವೇನು?

 ಕಾಂಗ್ರೆಸ್ ವಿರುದ್ಧ ಬಿಜೆಪಿ ಮಾಡಿದ ಅಪಪ್ರಚಾರದಿಂದ ಕಾಂಗ್ರೆಸ್‌ಗೆ ವಿಧಾನಸಭೆ ಚುನಾವಣೆಯಲ್ಲಿ  ಹಿನ್ನಡೆಯಾಯಿತು. ಸಾಮಾಜಿಕ ಜಾಲತಾಣಗಳಿಂದ ಜನರನ್ನು ಬಿಜೆಪಿ ದಾರಿ ತಪ್ಪಿಸಿದೆ. ಸಾಮಾಜಿಕ ನ್ಯಾಯ ಪರಿಕಲ್ಪನೆಯ ವಿರೋಧಿಗಳು ಷಡ್ಯಂತ್ರದಿಂದ ಮತಗಳ ದ್ರುವೀಕರಣ ಮಾಡಿದರು. ವಿಧಾನಸಭಾ ಚುನಾವಣೆಯಲ್ಲಿ ಮಾಡಿರುವ ತಪ್ಪಿನ ಅರಿವು ಮತದಾರರಿಗೆ ಈಗಾಗಲೇ  ಮನದಟ್ಟಾಗಿದೆ. ಲೋಕಸಭೆ ಚುನಾವಣೆಯಲ್ಲಿ  ಕಾಂಗ್ರೆಸ್‌ಗೆ ಜನ ಬೆಂಬಲಿಸಲಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್  ಬರಲಿದೆ ಎನ್ನುವ ಸಂಪೂರ್ಣ ವಿಶ್ವಾಸ ನಮ್ಮಲ್ಲಿದೆ. ದೇಶದಲ್ಲಿ ಉತ್ತಮ ಅಡಳಿತಕ್ಕಾಗಿ, ದೇಶದ ಭವಿಷ್ಯಕ್ಕಾಗಿ ಕಾಂಗ್ರೆಸ್ ಅನಿವಾರ್ಯ. ಮುಂದಿನ ಅವಧಿಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಲೆ ಇದೆಯಾ?

 ಕಳೆದ ನಾಲ್ಕು ವರ್ಷಗಳ ಬಿಜೆಪಿ ಆಡಳಿತದಿಂದ ಜನರು ಬೇಸತ್ತಿದ್ದಾರೆ. ದೇಶದಲ್ಲಿ ಪ್ರಧಾನಿ ಮೋದಿಯವರ ವಿರುದ್ಧ ಅಲೆ ಎದ್ದಿದೆ. ಬಿಜೆಪಿ ವಿರುದ್ಧದ ಅಲೆಗೆ ಎನ್‌ಡಿಎ ಸರಕಾರದ ವೈಫಲ್ಯತೆ ಒಂದು ಕಾರಣವಾದರೆ,  ಸಮಾಜದಲ್ಲಿ ಶಾಂತಿ,  ನಿರ್ಮಾಣ, ಕೋಮು ಗಲಭೆಗೆ, ಅಮಾಯಕರ ಕಗ್ಗೊಲೆ, ದುರ್ಬಲರ, ಶೋಷಿತರ ಮೇಲಿನ ಹಲ್ಲೆಗಳು, ಅಮಾನವೀಯ ಕೃತ್ಯಗಳಿಗೆ ಕೊಟ್ಟ ಕುಮ್ಮಕ್ಕು ಬಿಜೆಪಿಗೆ ಮುಳ್ಳಾಗಲಿದೆೆ. ಇಡೀ ದೇಶದಲ್ಲೇ  ಒಂದು ರೀತಿಯ ಭಯಾನಕ ವಾತಾ ವರಣ ಸೃಷ್ಟಿಯಾಗಿದೆ. ಬಿಜೆಪಿ ಸ್ವಾರ್ಥಕ್ಕಾಗಿ ಕೆಟ್ಟ ರಾಜಕಾರಣ ನಡೆಸುತ್ತಿದೆ.ಇವೆಲ್ಲವು ರಾಜ್ಯದ ಜನರ ಗಮನಕ್ಕೂ ಬಂದಿದೆ. ಪಕ್ಷದ ತತ್ವ ಸಿದ್ಧಾಂತಗಳು, ತ್ಯಾಗ ಬಲಿದಾನಗಳು ಮತ್ತು ದೇಶಾಭಿಮಾನವು ಮತದಾರರನ್ನು ಕೈಹಿಡಿಯುವಂತೆ ಮಾಡಲಿವೆ.

ಪ್ರಧಾನಿ ಮೋದಿಯವರನ್ನು ಮಣಿಸಲು ಹಾಕಿಕೊಂಡಿರುವ ಕಾರ್ಯತಂತ್ರಗಳೇನು?

 ಪ್ರಧಾನಿ ಮೋದಿಯವರನ್ನು  ವೈಯಕ್ತಿಕ ಕಾರ್ಯತಂತ್ರಗಳು ಬೇಕಿಲ್ಲ. ಪ್ರಧಾನಿ ಮೋದಿ ಒಬ್ಬ ರೈತ ವಿರೋಧಿ, ಮಹಾನ್ ಸುಳ್ಳುಗಾರ. ನಾಲ್ಕು ವರ್ಷದಲ್ಲಿ ಅಧಿಕಾರದಲ್ಲಿದ್ದರೂ ಜನರಿಗಾಗಿ ಏನೂ ಮಾಡಿಲ್ಲ. ದೇಶದ ಅಭಿವೃದ್ಧಿ ವರ್ಷದಿಂದ ವರ್ಷಕ್ಕೆ ಕುಂಠಿತವಾಗಿದೆ. ನಾಲ್ಕು ವರ್ಷಗಳಲ್ಲಿ ರೈತರಿಗೆ ಯಾವುದೇ ಕಾರ್ಯಕ್ರಮ ಕೊಟ್ಟಿಲ್ಲ. ಮಾರುಕಟ್ಟೆಯಲ್ಲಿ ರೈತರ ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಹಿಂದಿನ ಸರಕಾರ ಜಾರಿಗೆ ತಂದಿದ್ದ ಕೃಷಿ ಕಾರ್ಯಕ್ರಮಗಳ ಅನುದಾನ ಕಡಿತ ಮಾಡಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಕೇಂದ್ರ ಸರಕಾರ  ಕಾರ್ಪೊರೇಟ್ ವಲಯಕ್ಕೆ ಮಾತ್ರ ಸೀಮಿತವಾಗಿಬಿಟ್ಟಿದೆ. ಇವೇ ಕಾರಣಗಳಿಂದ ಎನ್‌ಡಿಎ ಸರಕಾರ ಜನರು ಸಂಪೂರ್ಣವಾಗಿ ನಂಬಿಕೆ ಕಳೆದುಕೊಂಡಿದೆ. ಇದರ ಜತೆಗೆ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಸರಕಾರ ಹಾಗೂ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಿರ ಸರಕಾರದ ಆಡಳಿತವು ಕಾಂಗ್ರೆಸ್‌ಗೆ ಲಾಭ ತಂದುಕೊಡಲಿವೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನದ ನಿರೀಕ್ಷೆ ಮೊದಲೇ ಇತ್ತಾ?

 ನಾನು ಕೆಪಿಸಿಸಿ ಕಾರ್ಯಾಧ್ಯಕ್ಷ  ಆಕಾಂಕ್ಷಿಯಾಗಿರಲಿಲ್ಲ. ಈ ಕುರಿತು ಹೈಕಮಾಂಡ್ ಬಳಿಯೂ ಹೇಳರಲಿಲ್ಲ. ನಾನು ಕಾಂಗ್ರೆಸ್‌ನ  ನಿಷ್ಠಾವಂತ ಕಾರ್ಯಕರ್ತ. ಮಾಜಿ ಸಿಎಂ ಸಿದ್ದರಾಮಯ್ಯ ಸರಕಾರದಲ್ಲಿ 21 ತಿಂಗಳ ಕಾಲ ಪೌರಾಡಳಿತ ಸಚಿವನಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಪೌರಾಡಳಿತ ಇಲಾಖೆಯಲ್ಲಿ ನೂತನ  ತಂತ್ರಾಂಶಗಳನ್ನು ಪರಿಚಯಿಸಿದರಿಂದ ಇಲಾಖೆಗೆ ಹೊಸ ಆಯಾಮ ಸಿಕ್ಕಿದೆ. ನಗರೋತ್ತಾನ-3 ಯೋಜನೆ ತಂದು ನಗರಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದೇನೆ.ಬೀದರ್‌ನಲ್ಲಿ ಕಾಂಗ್ರೆಸ್‌ಗೆ ಮರು ಅಸ್ತಿತ್ವ ತಂದುಕೊಟ್ಟಿದ್ದೇನೆ. ಬೀದರ್ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಇಂದು 4ರಲ್ಲಿ ಕಾಂಗ್ರೆಸ್ ಗೆದ್ದಿದೆ. ನಾನು ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ನಾನು  ಸಾಧನೆ, ನನ್ನಲ್ಲಿನ ಅನುಭವ ಗುರುತಿಸಿ ಪಕ್ಷ ಅಧಿಕಾರ ಕೊಟ್ಟಿದೆ.

ನೀವಿನ್ನೂ ಕಿರಿಯರು, ನಿಮ್ಮಷ್ಟೇ ಅನುಭವ ವಿರುವ ನಾಯಕರು,  ಹಿರಿಯರು ಪಕ್ಷದಲ್ಲಿದ್ದಾರೆ.  ಅವರನ್ನೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೀರಿ?

ಪಕ್ಷದಲ್ಲಿನ  ಯುವಕರನ್ನು-ಹಿರಿಯರನ್ನು ವಿಶ್ವಾಸಕ್ಕೆ ಪಡೆದುಕೊಳ್ಳುತ್ತೇನೆ. ಪಕ್ಷವನ್ನು ಬಲಗೊಳಿಸಲು ಹಿರಿಯರ  ಮಾರ್ಗದರ್ಶನ, ಸಲಹೆ, ಸೂಚನೆಯನ್ನು  ಪಡೆಯುತ್ತೇನೆ. ಅವರ ಮುಂದೆ ನಮ್ಮ ವಿಚಾರಗಳನ್ನು ತಿಳಿಸಿ ಮನದಟ್ಟು ಮಾಡುವೆ. ಬೂತ್ ಮಟ್ಟದಿಂದ ಯುವಕರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸುವೆ. ಇದರ ಜತೆಯಲ್ಲಿ ಪಕ್ಷದ ಸಿದ್ಧಾಂತ ಸಾಧನೆ. ಸಾಮಾಜಿಕ ನ್ಯಾಯದ  ದೇಶಾಭಿಮಾನ, ಸಮಾನತೆ, ಜಾತ್ಯತೀತ ತತ್ವಗಳು ಕಾಂಗ್ರೆಸ್‌ಗೆ ಬಲ ತುಂಬಲಿವೆ.

 ನಿಗಮ-ಮಂಡಳಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಒತ್ತಡ, ಅಸಮಾಧಾನ ನಿಭಾಯಿಸಲು ಸಿದ್ಧರಿದ್ದೀರಾ?

ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನದ ಆಯ್ಕೆ ವಿಚಾರದಲ್ಲಿ ಶಾಸಕರಲ್ಲಿ  ಅಸಮಾಧಾನ ಉದ್ಭವಿಸುವ ಪ್ರಶ್ನೆಯಿಲ್ಲ.  ಆಯ್ಕೆ ವಿಚಾರದಲ್ಲಿ ಪಕ್ಷದೊಳಗೆ ಭಿನ್ನಾಭಿಪ್ರಾಯಗಳು ಉದ್ಭವಿಸಬಹುದು. ಈ ಭಿನ್ನಾಭಿಪ್ರಾಯಗಳನ್ನು ಪಕ್ಷದೊಳಗೆ ಬಗೆಹರಿಸಲಾಗುವುದು. ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕವನ್ನು ಪಕ್ಷದ ವರಿಷ್ಠರು ಶಾಸಕರೊಂದಿಗೆ ಚರ್ಚಿಸಿ ಆದಷ್ಟು ಬೇಗ ತೀರ್ಮಾನ ಕೈಗೊಳ್ಳಲಿದ್ದಾರೆ.

ಸಚಿವ ಸ್ಥಾನ  ಬೇಸರವಿದೆಯಾ?

ಸಚಿವ ಸ್ಥಾನ ತಪ್ಪಿದಕ್ಕೆ ಯಾವುದೇ ಬೇಸರವಿಲ್ಲ. ಸಚಿವ ಸ್ಥಾನ ನೀಡಿದ್ದರೆ ನಿಭಾಯಿಸುತ್ತಿದೆ. ವರಿಷ್ಠರು ಏನೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುವ ಶಕ್ತಿ ನನ್ನಲ್ಲಿದೆ. ನಾನು ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತ ನಾಗಿಯೇ ಕೆಲಸ ಮಾಡಿದ್ದೇನೆ, ಇಂದು ಮಾಡುತ್ತಿದ್ದೇನೆ. ಮುಂದೆ ಕೂಡ ಮಾಡುತ್ತೇನೆ.

Tags

Related Articles

Leave a Reply

Your email address will not be published. Required fields are marked *

Language
Close