About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಸಿಎಂ ಬಂದು ಹೋದ ಬೆನ್ನಲ್ಲೇ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೂವಯ್ಯ ರಾಜೀನಾಮೆ!

ಮಡಿಕೇರಿ: ಕೊಡಗನ್ನು ಜೆಡಿಎಸ್‍‍ ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಜೆಡಿಎಸ್‍‍ನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಂಕೇತ್‍‍ ಪೂವಯ್ಯ ರಾಜೀನಾಮೆ ನೀಡಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಎಚ್‍‍.ಡಿ.ಕುಮಾರಸ್ವಾಮಿ ಮಡಿಕೇರಿಗೆ ಭೇಟಿ ನೀಡಿ ಹೋದ ಬೆನ್ನಲ್ಲೇ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕಳೆದ ಮೂರು ದಶಕಗಳಿಂದಲೂ ಜಿಲ್ಲೆಯಲ್ಲಿ ಪ್ರಭಾವ ಬೀರಿದ್ದ ಜೆಡಿಎಸ್, ಈ ಬಾರಿ ಜಿಲ್ಲೆಯನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಹಾರಂಗಿಯಲ್ಲಿ ಸಂಕೇತ್ ವಿರುದ್ಧ ಮುಖ್ಯಮಂತ್ರಿ ಎದುರೇ ಧಿಕ್ಕಾರ ಕೂಗಿದ ಬೆಳವಣಿಗೆಯೂ, ಅವರನ್ನು ಹತಾಶರನ್ನಾಗಿಸಿದೆ. ಜೆಡಿಎಸ್ ಜಿಲ್ಲೆಯಲ್ಲಿ ಅಧಿಕಾರದಲ್ಲಿ ಇಲ್ಲದ ಸಂದರ್ಭ, ಜಿಲ್ಲಾಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡು ಜಿಲ್ಲೆಯ ಮುಖಂಡರ ಹಾಗೂ ಕಾರ್ಯಕರ್ತರ ಜತೆಗುಡಿ ಪಕ್ಷಕ್ಕಾಗಿ ಶ್ರಮಿಸಿದ್ದೇನೆ. ರಾಜ್ಯದಲ್ಲಿ ರೈತ ಸ್ನೇಹಿ, ಮುಖ್ಯಮಂತ್ರಿಯಾಗಿ ಎಚ್‍‍ಡಿಕೆ ಆಡಳಿತ ನಡೆಸಬೇಕೆಂಬ ಕನಸು ನನಗಿತ್ತು. ಹಾಗಾಗಿ ಇಂದು ರಾಜ್ಯದ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅಧಿಕಾರ ಮುಂದುವರೆಸುತ್ತಿದ್ದಾರೆ ಎಂದರು.

Tags

Related Articles

Leave a Reply

Your email address will not be published. Required fields are marked *

Language
Close