About Us Advertise with us Be a Reporter E-Paper

Breaking Newsಪ್ರಚಲಿತವಿದೇಶ

ವಿಯೆಟ್ನಾಂ ವಾರ್ ಹೀರೋ ಜಾನ್ ಮ್ಯಾಕ್‍ಕೈನ್ ವಿಧಿವಶ

ನ್ಯೂಯಾರ್ಕ್: ಅಮೆರಿಕದ ಖ್ಯಾತ ರಾಜಕೀಯ ನಾಯಕ, ಸಂಸದ ಹಾಗೂ ವಿಯೆಟ್ನಾಂ ವಾರ್ ಹೀರೋ ಜಾನ್ ಮ್ಯಾಕ್‍ಕೈನ್ ಇಂದು ವಿಧಿವಶರಾಗಿದ್ದರೆ.

ಜಾನ್ ಮ್ಯಾಕ್‍ಕೈನ್ ಅವರು ಮೆದುಳು ಕ್ಯಾನ್ಸರ್‌‌ನಿಂದ ಬಳಲುತ್ತಿದ್ದು, 2017 ರಿಂದಲೂ ವಿಕಿರಣ ಮತ್ತು ಕೆಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಆರಿಜೋನಾ ಪ್ರಾಂತ್ಯದಲ್ಲಿ ಅವರು ಕೊನೆಯುಸಿರೆಳೆದರು. ಅವರು ಒಬ್ಬ ಪುತ್ರ ಹಾಗೂ ಅಮೆರಿಕ ನೌಕಾ ಪಡೆಯ ಅತ್ಯುನ್ನತ ಅಧಿಕಾರಿಯಾಗಿರುವ ಮೊಮ್ಮಗನನ್ನು ಅಗಲಿದ್ದಾರೆ.

ಅಮೆರಿಕದ ಅತ್ಯಂತ ಪ್ರಭಾವಿ ನಾಯಕರಾಗಿದ್ದ ಅವರು, ಎರಡು ಬಾರಿ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದರು. ವಿಯೆಟ್ನಾಂ ಯುದ್ದದ ವೇಳೆ ಅಮೆರಿಕ ನೌಕಾಪಡೆಯ ಅಧಿಕಾರಿಯಾಗಿದ್ದ ಅವರು ಸಮರ ಕೈದಿಯಾಗಿ ಜೈಲು ಶಿಕ್ಷೆ ಮತ್ತು ಚಿತ್ರಹಿಂಸೆ ಅನುಭವಿಸಿದ್ದರು.

ಸೆನೆಟರ್ ಜಾನ್ ನಿಧನಕ್ಕೆ ಅಮೆರಿಕ ಅಧ್ಯಕ್ಷ ಡೊ ನಾಲ್ಡ್ ಟ್ರಂಪ್, ಉಪಾಧ್ಯಕ್ಷ ಮೈಕ್ ಪೆನ್ಸ್, ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಬಿಲ್ ಕ್ಲಿಂಟನ್ ಮೊದಲಾದ ಗಣ್ಯರು ಸಂತಾಪ ಸೂಚಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close