About Us Advertise with us Be a Reporter E-Paper

Breaking Newsದೇಶಪ್ರಚಲಿತ

ವಾಟ್ಸ್ಆ್ಯಪ್ ಮೂಲಕ ಕರೆ: ಸುಪ್ರೀಂ ತರಾಟೆ

ದೆಹಲಿ: ನ್ಯಾಯಾಧೀಶರು ವಾಟ್ಸ್ಆ್ಯಪ್ ಕರೆಗಳ ಮೂಲಕವೇ ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆಸಿದ ವಿಚಿತ್ರ ಘಟಣೆ ಜಾರ್ಖಂಡ್ ಹಜಾರಿಬಾಗ್‌ನ ನ್ಯಾಯಾಲಯದಲ್ಲಿ ನಡೆದಿದೆ.

ಇದೊಂದು ವಿಚಿತ್ರ ಪ್ರಶ್ನೆ ಎಂದು ನೀವು ನಗುತ್ತಿರಬಹುದು. ಆದರೆ ಜಾರ್ಖಂಡ್‌ನ ಹಾಜಾರಿಬಾಗ್‌ನ ಈ ರೀತಿ ವಿಚಾರಣೆ ನಡಿಸಿದ್ದು, ಆ ಪ್ರಕರಣವೀಗ ಸುಪ್ರೀಂ ಕೋರ್ಟ್ ಇತಂಹ ಹಾಸ್ಯಕ್ಕೆ ಅವಕಾಶ ನೀಡಿದ್ದಾದರು ಹೇಗೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

2016ರಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಜಾರ್ಖಂಡ್‌ನ ಮಾಜಿ ಸಚಿವ ಯೋಗೇಂದ್ರ ಸಾಹೊ ಹಾಗೂ ಅವರ ಪತ್ನಿ ಶಾಸಕಿ ನಿರ್ಮಾಲಾ ದೇವಿ ಆರೋಪಿಗಳಾಗಿದ್ದಾರೆ. ಕಳೆದ ವರ್ಷ ಅವರಿಬ್ಬರಿಗೂ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿತ್ತು ಆರೋಪಿಗಳು ಭೋಪಾಲ್‌ನಲ್ಲೇ ಇರಬೇಕು ಮತ್ತು ಕೋರ್ಟ್ ವಿಚಾರಣೆ ಪ್ರಕ್ರಿಯೆಗಳಿಗೆ ಮಾತ್ರ ಜಾರ್ಖಂಡ್‌ಗೆ ಹೋಗಬೇಕು ಎಂದು ಷರತ್ತು ವಿಧಿಸಿತ್ತು.

ಆರೋಪಿಗಳ ಆಕ್ಷೇಪದ ಹೊರತಾಗಿಯೂ ವಿಚಾರಣಾ ನ್ಯಾಯಾಧೀಶರು ಏಪ್ರಿಲ್ 19ರಂದು ವಾಟ್ಸ್ಆ್ಯಪ್ ಕರೆ ಮೂಲಕ ಪಟ್ಟಿ ದಾಖಲಿಸಿದ್ದರು. ಇದನ್ನು ಪ್ರಶಿಸಿ ಅವರನ್ನು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

ನ್ಯಾಯಮೂರ್ತಿ ಎಸ್.ಎ ಬೋಬ್ಡೆ ಮತ್ತು ಎಲ್‌ಎನ್ ರಾವ್ ಅವರ ಪೀಠ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ವಾಟ್ಸ್ಆ್ಯಪ್ ಮೂಲಕ ನ್ಯಾಯದ ವಿಚಾರಣೆ ಮಾಡುವ ಹಂತಕ್ಕೆ ಬಂದಿದ್ದಾರೆಯೇ? ಜಾರ್ಖಂಡ್‌ನಲ್ಲಿ ಏನು ನಡೆಯುತ್ತಿದೆ. ನ್ಯಾಯಾಲಯಕ್ಕೆ ಅಗೌರವ ತೋರುವ ನಡೆಯನ್ನು ಒಪ್ಪಲಾಗದು. ಇದೇನು ತಮಾಷೆಯೇ? ಎಂದು ಜಾರ್ಖಂಡ್ ಪರ ವಕೀಲ್‌ರನ್ನು ಪೀಠ ತರಾಟೆಗೆ ತೆಗೆದುಕೊಂಡಿದೆ.

Tags

Related Articles

Leave a Reply

Your email address will not be published. Required fields are marked *

Language
Close