About Us Advertise with us Be a Reporter E-Paper

ಅಂಕಣಗಳು

ಜಾಲಿ ರೈಡಿಗೂ ಬೇಕು ಸ್ಮಾರ್ಟ್ ಆಯ್ಕೆ

ಆದಿತ್ಯ ಹೆಚ್.ಎಸ್ ಹಾಲ್ಮುತ್ತೂರು

ಬೈಕ್‌ಗಳ ಕೊಳ್ಳುವಿಕೆಯಲ್ಲಿ ಆಯ್ಕೆಗಳು ಹಲವಾರು ಇವೆ. ಮಾರುಕಟ್ಟೆಯಲ್ಲಿ ಹೊಸತು ಯಾವುದಿದೆಯೋ ಅವುಗಳಿಗೆ ಬೇಡಿಕೆಯೂ ಜಾಸ್ತಿಯೆ. ಹೀಗಾಗಿ ಶೀಘ್ರದಲ್ಲೆ ಬೈಕ್ ಕೊಳ್ಳುವ ಆಸೆಯಲ್ಲಿರುವವರಿಗೆ ಕಡಿಮೆ ಬೆಲೆಯಲ್ಲೇ ಉತ್ತಮ ಬೈಕ್‌ಗಳು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಅವುಗಳ ಕುರಿತ ಸಂಕ್ಷಿಪ್ತ ಮಾಹಿತಿ

Husqvarna Vitpilen

ಈ ಬೈಕ್ ಯುವಕರಿಗೆ ಹೇಳಿಮಾಡಿಸಿದಂತಿದ್ದು, 373.2  ಸಿಸಿ ಸಾಮರ್ಥ್ಯದ ಎಂಜಿನ್, 6 ಸ್ಪೀಡ್ ಗೇರ್‌ಬಾಕ್‌ಸ್ ಹೊಂದಿದೆ. ಲಿಕ್ವಿಡ್ ಕೂಲಿಂಗ್ ಆಗಿದೆ. ಇದರಲ್ಲಿ ಕೇವಲ ಸೆಲ್‌ಫ್ ಸ್ಟಾರ್‌ಟ್ ಸೌಲಭ್ಯವನ್ನು ಮಾತ್ರವೇ ನೀಡಲಾಗಿದೆ. ಟ್ಯೂಬ್‌ಲೆಸ್ ಟಯರ್, ಸ್ಪೋಕ್ ವ್ಹೀಲ್‌ಸ್ ಹೊಂದಿದ್ದು, ಫ್ರೆಂಟ್ 320 ಎಮ್‌ಎಮ್ ಡಿಸ್‌ಕ್ ಬ್ರೇಕ್, 230 ಎಮ್‌ಎಮ್ ಬ್ಯಾಕ್ ಡಿಸ್‌ಕ್ ಹೊಂದಿದ್ದು, ಡ್ಯುಯಲ್ ಚಾನೆಲ್ ಎಬಿಎಸ್ ಹೊಂದಿದೆ. ಡಿಜಿಟಲ್ ಸ್ಪೀಡೋಮೀಟರ್, ಡಿಜಿಟಲ್ ಓಡೋಮೀಟರ್ ಹೊಂದಿದೆ. ಡಿಜಿಟಲ್  ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಟೈಲ್ ಲ್ಯಾಂಪ್ ಹೊಂದಿದೆ. ಹಾಗೂ ಸ್ಪ್ಲಿಟ್ ಸೀಟ್ ಹೊಂದಿದೆ. ಫ್ರೆಂಟ್ 43ಎಮ್‌ಎಮ್ ಅಪ್‌ಸೈಡ್ ಡೌನ್ ಫಾರ್ಕ್‌ಸ್(ಯುಎಸ್‌ಡಿ) ಸಸ್‌ಪೆನ್ಷನ್ ಆಗಿದ್ದು, ಬ್ಯಾಕ್ ಮೊನೊಶಾಕ್ ಸಸ್‌ಪೆನ್ಷನ್ ಹೊಂದಿದೆ. ಇದರ ಎಕ್‌ಸ್ ಶೂ ರೂಂ ಬೆಲೆ 2.50 ಲಕ್ಷ ಆಗಿರಲಿದ್ದು, ಸೆಪ್ಟೆಂಬರ್ ಅಂತ್ಯದ ವೇಳೆಗೆ ಮಾರುಕಟ್ಟೆಗೆ ಬರಲಿದೆ.

Hero XPulse 200

ಹೀರೋ ಕಂಪನಿ ಯುವಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ಬೈಕನ್ನು ಪರಿಚಯಿಸುತ್ತಿದ್ದು, ನೋಡಲು ಆಕರ್ಷಕವಾಗಿದೆ. 220 ಸಿಸಿ ಎಂಜಿನ್  ಇದು 6 ಸ್ಪೀಡ್ ಗೇರ್‌ಬಾಕ್‌ಸ್ ಹೊಂದಿದೆ. ಮತ್ತು ಏರ್ ಕೂಲ್‌ಡ್ ಎಂಜಿನ್ ಆಗಿದೆ. ಇದರಲ್ಲಿ ಸೆಲ್‌ಫ್ ಸ್ಟಾರ್‌ಟ್ ಮಾತ್ರವೇ ಇದೆ. ಡಿಜಿಟಲ್ ಸ್ಪೀಡೋಮೀಟರ್ ಹೊಂದಿದೆ. ಮತ್ತು ಕ್ಲಾಕ್, ನ್ಯಾವಿಗೇಷನ್ ಸಿಸ್ಟಂ ಕೂಡ ಇದರಲ್ಲಿರಲಿದೆ. ರೌಂಡ್ ಹೆಡ್‌ಲೈಟ್ ಇದ್ದು ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಟೈಲ್‌ಲ್ಯಾಂಪ್, ಎಲ್‌ಇಡಿ ಸಿಗ್ನಲ್ ಲ್ಯಾಂಪ್ ಹೊಂದಿದೆ. ಟ್ಯೂಬ್‌ಲೆಸ್ ಟಯರ್ ಹೊಂದಿದ್ದು ಫ್ರಂಟ್ ಮತ್ತು ಬ್ಯಾಕ್ ಡಿಸ್‌ಕ್ ಬ್ರೇಕ್ ಹೊಂದಿದೆ. ಮತ್ತು ಡ್ಯುಯಲ್ ಚಾನೆಲ್ ಎಬಿಎಸ್ ಹೊಂದಿದೆ.  ಟೆಲೆಸ್ಕಾಪಿಕ್ ಫಾರ್ಕ್ ಸಸ್‌ಪೆನ್ಷನ್ ಹೊಂದಿದ್ದು, ಹಿಂದೆ ಮೊನೊ ಶಾಕ್ ಸಸ್‌ಪೆನ್ಷನ್ ಹೊಂದಿದೆ. ಮತ್ತು ಇದರಲ್ಲಿ ಹೊಂದಾಣಿಕೆ ಮಾಡುವ ಅವಕಾಶವನ್ನು ನೀಡಲಾಗಿದೆ. ಮತ್ತು ಸ್ಪೋಕ್ ವ್ಹೀಲ್ ಹೊಂದಿದೆ. ಚೂಪಾದ ಮತ್ತು ಉದ್ದನೆಯ ಮಡ್‌ಗಾರ್ಡ್ ಹೊಂದಿದ್ದು ಬೈಕನ್ನು ಆಕರ್ಷಕಗೊಳಿಸಿದೆ. ಮತ್ತು  ಇದರಲ್ಲಿ ಬಳಸಿರುವ ಗ್ರಾಪಿಕ್‌ಸ್ ತುಂಬಾ ಆಕರ್ಷಕವಾಗಿದ್ದು ಬೈಕ್ ಪ್ರಿಯರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ಅಕ್ಟೋಬರ್ ಅಂತ್ಯದ ವೇಳೆಗೆ ಮಾರುಕಟ್ಟೆಗೆ ಬರುವ ಸಾಧ್ಯತೆ ಇದ್ದು ಇದರ ಎಕ್‌ಸ್ ಶೋ ರೂಮ್  1.10 ಲಕ್ಷ ರು ಇರಲಿದೆ. ಹಾಗೂ ಇದು ಹಲವು ಬೈಕ್‌ಗಳಿಗೆ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

TVS Apache RTR 200 Fi Ethanol

ಟಿವಿಎಸ್ ಕಂಪನಿ ಅಪಚೆ ಮಾಡೆಲ್ ಮೂಲಕ ಬೈಕ್ ಪ್ರಿಯರನ್ನು ಜಾದೂ ಮಾಡಿ ಆಕರ್ಷಿಸಿದ್ದು ಇದೀಗ ಅದೇ ಮಾಡೆಲ್‌ನಲ್ಲಿ ಕೆಲವು ಬದಲಾವಣೆಗಳೊಂದಿಗೆ ಮತ್ತೊಂದು ಆಯ್ಕೆ ನೀಡಲು ಸಿದ್ದವಾಗಿದೆ. ಈ ಮೂಲಕ ಟಿವಿಎಸ್ ಕಂಪನಿ ಅಪಚೆ ಮಾಡೆಲ್‌ಗೆ ಮತ್ತೊಂದು ಬೈಕ್ ಅನ್ನು ಸೇರಿಸುತ್ತಿದೆ.

ಈ ಬೈಕ್  ಸಿಸಿ ಎಂಜಿನ್ ಹೊಂದಿರಲಿದ್ದು, 5 ಸ್ಪೀಡ್ ಗೇರ್‌ಬಾಕ್‌ಸ್ ಹೊಂದಿರಲಿದ್ದು ಆಯಿಲ್ ಕೂಲ್‌ಡ್ ಕೂಲಿಂಗ್ ಸಿಸ್ಟಂ ಆಗಿದೆ. ಹಾಗೂ ಇದರಲ್ಲಿ ಸೆಲ್‌ಫ್ ಸ್ಟಾರ್‌ಟ್ ಮಾತ್ರವೇ ಇರಲಿದೆ. 12 ಲೀಟರ್ ಪೆಟ್ರೋಲ್ ಟ್ಯಾಂಕ್ ಹೊಂದಿದ್ದು, 129 ಕಿ.ಮೀ ಟಾಪ್ ಸ್ಪೀಡ್ ಆಗಿದೆ. ಟ್ಯೂಬ್‌ಲೆಸ್ ಟಯರ್ ಹೊಂದಿದ್ದು, ಫ್ರೆಂಟ್ 270 ಎಮ್‌ಎಮ್ ಡಿಸ್‌ಕ್ ಮತ್ತು ಬ್ಯಾಕ್ 240 ಎಮ್‌ಎಮ್ ಡಿಸ್‌ಕ್ ಬ್ರೇಕ್ ಹೊಂದಿದೆ. ಆದರೆ ಇದರಲ್ಲಿ ಎಬಿಎಸ್ ಇಲ್ಲ. ಡಿಜಿಟಲ್ ಸ್ಪೀಡೋಮೀಟರ್, ಡಿಜಿಟಲ್  ಡಿಜಿಟಲ್ ಓಡೋ ಮೀಟರ್, ಡಿಜಿಟಲ್ ಟ್ರಿಪ್ ಮಿಟರ್ ಹೊಂದಿದ್ದು, ಕ್ಲಾಕ್ ಹೊಂದಿದೆ. ಫ್ರಂಟ್ ಟೆಲಿಸ್ಕಾಪಿಕ್ ಫಾರ್ಕ್, ಮತ್ತು ಬ್ಯಾಕ್ ಮೊನೊ ಟ್ಯೂಬ್ ಮೊನೊಶೋಕ್ ಸಸ್‌ಪೆನ್ಷನ್ ಹೊಂದಿದೆ. ಎಲ್‌ಇಡಿ ಪಿಲಟ್ ಲ್ಯಾಂಪ್‌ಸ್ ಹೊಂದಿದ್ದು, ಎಲ್‌ಇಡಿ ಟೈಲ್ ಲೈಟ್ ಹೊಂದಿರಲಿದೆ. ಸ್ಟೆಪ್ ಅಪ್ ಸೀಟ್ ಹೊಂದಿದ್ದು ಅಪಚೆ ಪ್ರಿಯರಿಗೆ ಮತ್ತಷ್ಟು ಹಿಡಿಸಲಿದೆ. ಮತ್ತು 200 ಸಿಸಿ, 220 ಸಿಸಿ ಎಂಜಿನ್ ಸಾಮರ್ಥ್ಯದ ಬೈಕ್‌ಗಳಿಗೆ ಪೈಪೋಟಿ ನೀಡಲಿದೆ. ಮತ್ತು ಇದರ ಎಕ್‌ಸ್ ಶೋ  ಬೆಲೆ 1.10 ಲಕ್ಷ ಇರಲಿದ್ದು ಅಕ್ಟೋಬರ್‌ನಲ್ಲಿ ಮಾರುಕಟ್ಟೆಗೆ ಬರಲಿದೆ.

Tags

Related Articles

Leave a Reply

Your email address will not be published. Required fields are marked *

Language
Close