About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಪ್ರವಾದಿ ವಿರುದ್ಧ ಅವಹೇಳನ: ಸಂತೋಷ್ ತಮ್ಮಯ್ಯಗೆ ಜಾಮೀನು ಮಂಜೂರು

ಕೊಡಗು: ಅಂಕಣಕಾರ, ಅಸೀಮ ಪತ್ರಿಕೆಯ ಸಂಪಾದಕ ಸಂತೋಷ್ ತಮ್ಮಯ್ಯಗೆ ಕೊಡಗಿನ ಪೊನ್ನಂಪೇಟೆಯ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರು ಮಾಡಿದೆ. ಸಂತೋಷ್ ತಮ್ಮಯ್ಯ ಪರ ಮಡಿಕೇರಿಯ ವಕೀಲ ಕೃಷ್ಣಮೂರ್ತಿ, ಬಿ.ಎಂ.ಅಯ್ಯಪ್ಪ ವಾದ ಪುರಸ್ಕರಿಸಿದ ನ್ಯಾಯಾಲಯ ಸಂತೋಷ್ ತಮ್ಮಯ್ಯಗೆ ಜಾಮೀನು ಮಂಜೂರು ಮಾಡಿತು.

ಪ್ರವಾದಿ ವಿರುದ್ಧ ಅವಹೇಳನಕಾರಿಯಾಗಿ ಭಾಷಣ ಮಾಡಿ ಧರ್ಮನಿಂದನೆ ಮಾಡಿದ್ದಾರೆ ಎಂಬ ಆರೋಪದಡಿ ಸಂತೋಷ್ ತಮ್ಮಯ್ಯರನ್ನು ಗೋಣಿಕೊಪ್ಪಲು ಪೊಲೀಸರು ಮಧುಗಿರಿಯಲ್ಲಿ ಬಂಧಿಸಿ ಹಾಜರುಪಡಿಸಿದರು. ತಮ್ಮಯ್ಯ ಬಂಧನಕ್ಕೆ ರಾಜ್ಯವ್ಯಾಪಿ ವ್ಯಾಪಕ ಟೀಕೆ ವ್ಯಕ್ತವಾಯಿತು. ಪ್ರವಾದಿಯನ್ನು ನಿಂದಿಸಿರುವ ವರದಿ ಸ್ಥಳೀಯ ದೈನಿಕದಲ್ಲಿ ಪ್ರಕಟವಾದ ಹಿನ್ನೆಲೆ ಸಿದ್ದಾಪುರದ ಅಸ್ಕರ್, ಪತ್ರಕರ್ತ ಸಂತೋಷ್ ತಮ್ಮಯ್ಯ ವಿರುದ್ಧ ಗೋಣಿಕೊಪ್ಪಲುವಿನಲ್ಲಿ ನೀಡಿದ್ದ ದೂರಿನ ಮೇಲೆ ಪ್ರಕರಣ ದಾಖಲಿಸಲಾಗಿತ್ತು.

ಈ ಹಿನ್ನೆಲೆ ಸೋಮವಾರ ತುಮಕೂರಿನ ಮಧುಗರಿಯಲ್ಲಿರುವ ಪತ್ನಿ ಶಾಂತಾ ತಮ್ಮಯ್ಯ ಮನೆಗೆ ರಾತ್ರಿ 11.15ಕ್ಕೆ ತೆರಳಿದ ಪೋಲಿಸರು, ಅಲ್ಲಿದ್ದ ಸಂತೋಷ್ ತಮ್ಮಯ್ಯರನ್ನು ಬಂಧಿಸಿ ಬೆಳಗಿನ ಜಾವ 6.40ಕ್ಕೆ ಗೋಣಿಕೊಪ್ಪಲು ಪೊಲೀಸ್ ಠಾಣೆಗೆ ವಿಚಾರಣೆ ನಡೆಸಿ, ಪೊನ್ನಂಪೇಟೆ ನ್ಯಾಯಾಲಕ್ಕೆ ಹಾಜರು ಪಡಿಸಿದರು.

ಪ್ರಜ್ಞಾ ಕಾವೇರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾನೂ ಕೂಡ ಪಾಲ್ಗೊಂಡಿದ್ದೆ. ಆದರೆ, ಕಾರ್ಯಕ್ರಮದಲ್ಲಿ ಸಂತೋಷ್ ತಮ್ಮಯ್ಯ ಪ್ರವಾದಿಗಳನ್ನು ನಿಂದಿಸುವ ಹೇಳಿಕೆ ನೀಡಲಿಲ್ಲ. ಎಂದು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಸ್ಪಷ್ಪಪಡಿಸಿದ್ದಾರೆ. ಪತ್ರಿಕೆಯೊಂದರಲ್ಲಿ ಸಂತೋಷ್ ಹೇಳಿದ್ದರು ಎಂದು ಪ್ರಕಟವಾಗಿದ್ದಕ್ಕೆ ಅವರನ್ನು ಬಂಧಿಸುವುದು ಸೂಕ್ತವಲ್ಲ. ರಾಜ್ಯದಲ್ಲಿ ಪೊಲೀಸರ ದುಂಡಾವರ್ತನೆಗೆ ಈ ಪ್ರಕರಣ ಮತ್ತೊಂದು ಸೇರ್ಪಡೆಯಾಗಿದೆ ಎಂದು ಕೆ.ಜಿ.ಬೋಪಯ್ಯ ಆಕ್ರೋಶ ವ್ಯಕ್ತಪಡಿಸಿದರು.

Tags

Related Articles

Leave a Reply

Your email address will not be published. Required fields are marked *

Language
Close