ವಿಶ್ವವಾಣಿ

ಭಾರತಕ್ಕೆ ವಾಪಸ್ ಬಗ್ಗೆ ಜಡ್ಜ್ ನಿರ್ಧಾರ: ವಿಜಯ್ ಮಲ್ಯ (ವಿಡಿಯೊ)

ಕೆನ್ನಿಂಗ್ಟನ್ (ಲಂಡನ್)​: ಯಾವಾಗ ಭಾರತಕ್ಕೆ ವಾಪಸ್ ಆಗುತ್ತೀರಾ ಎಂಬ ಪ್ರಶ್ನೆಗೆ ವಿಜಯ್ ಮಲ್ಯ ಹೇಳಿದ್ದು, ನಾನು ಭಾರತಕ್ಕೆ ಹಿಂತಿರುಗಬೇಕಾದ ಬಗ್ಗೆ ನ್ಯಾಯಾಧೀಶರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು.

ಇಂಗ್ಲೆಂಡ್​ ಮತ್ತು ಭಾರತ ನಡುವಿನ ಟೆಸ್ಟ್​ ಕ್ರಿಕೆಟ್​ ವೀಕ್ಷಿಸಲು ದಕ್ಷಿಣ ಲಂಡನ್​ನ ಕೆನ್ನಿಂಗ್ಟನ್​ನ ಓವಲ್ ಮೈದಾನಕ್ಕೆ ಮದ್ಯದ ದೊರೆ ವಿಜಯ್ ಮಲ್ಯ ಆಗಮಿಸಿದ್ದರು. ಪಂದ್ಯದ ನಂತರ ಕ್ರೀಡಾಂಗಣದ ಹೊರಗೆ ಅನಿರೀಕ್ಷಿತವಾಗಿ ಪತ್ರಕರ್ತರಿಗೆ ಎದುರಾದರು.

ಈ ವೇಳೆ ಪತ್ರಕರ್ತರೊಬ್ಬರು, ‘ಭಾರತಕ್ಕೆ ಯಾವಾಗ ಹಿಂದಿರುಗುವಿರಿ’ ಎಂದು ಪ್ರಶ್ನೆ ಕೇಳಿದರು. ಆಗ, ಸ್ವಲ್ಪ ಮುನಿಸಿನಲ್ಲೇ ಮಾತನಾಡಿದ ಮಲ್ಯ, ‘ಅದನ್ನು ನ್ಯಾಯಾಧೀಶರು ನಿರ್ಧಾರ ಮಾಡುತ್ತಾರೆ. ಕ್ರಿಕೆಟ್​ ಪಂದ್ಯ ನಡೆಯುವ ಸ್ಥಳದಲ್ಲಿ ನಾನು ಮಾಧ್ಯಮಗಳಿಗೆ ಯಾವುದೇ ಸಂದರ್ಶನ ನೀಡಲು ಬಯಸುವುದಿಲ್ಲ’ ಎಂದು ಉತ್ತರಿಸಿದ ಅವರು ಬಳಿಕ ತಮ್ಮ ಐಷಾರಾಮಿ ಕಾರಿನಲ್ಲಿ ಬೇರೆಡೆಗೆ ತೆರಳಿದರು.

ಹಲವಾರು ಬ್ಯಾಂಕ್​ಗಳಿಗೆ ಸಾವಿರಾರು ಕೋಟಿ ರೂಪಾಯಿ ಪಂಗನಾಮ ಹಾಕಿ ಲಂಡನ್‍ಗೆ ಪರಾರಿಯಾಗಿದ್ದಾರೆ.