About Us Advertise with us Be a Reporter E-Paper

Breaking Newsದೇಶಪ್ರಚಲಿತ

‘ನಿನ್ನ ಹೆಂಡತಿ, ಮಗನಿಗೆ ಗುಂಡಿಕ್ಕಿದ್ದೇನೆ’… ಜಡ್ಜ್​ಗೆ ಕರೆ ಮಾಡಿ ಹೇಳಿದ ಗನ್​ಮ್ಯಾನ್!

ಗುರುಗ್ರಾಮದಲ್ಲಿ ಹೆಚ್ಚುವರಿ ಸೆಷೆನ್ಸ್ ಜಡ್ಜ್ ಕೃಷ್ಣಾ ಕಾಂತ್ ಅವರ ಪತ್ನಿ ರಿತು ಅವರು ಭಾನುವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರ ಮಗ ಧ್ರುವ (17) ಪರಿಸ್ಥತಿ ಚಿಂತ ಜನಕವಾಗಿದೆ.
ಇವರು ತಮ್ಮ ಪುತ್ರ ಧ್ರುವನ ಜೊತೆ ಶುಕ್ರವಾರ ಶಾಪಿಂಗ್​ಗೆಂದು ಹೋಗಿದ್ದರು. ಇವರಿಗೆ ರಕ್ಷಕನಾಗಿ ಜಡ್ಜ್ ಅವರ ಗನ್​ಮ್ಯಾನ್ ಮಹಿಪಾಲ್ ಹೋಗಿದ್ದ. ಈ ವೇಳೆ ರಕ್ಷಕನಾಗಿ ಹೋಗಿದ್ದ ಗನ್​ಮ್ಯಾನೇ ಏಕಾಏಕಿ ಇವರ ಮೇಲೆ ಗುಂಡು ಹಾರಿಸಿದ್ದ. ಪರಿಣಾಮ ಗುಂಡು ತಗುಲಿ ಜಡ್ಜ್ ಪತ್ನಿ ಹಾಗೂ ಪುತ್ರ ತೀವ್ರವಾಗಿ ಗಾಯಗೊಂಡಿದ್ದರು.
ಗುಂಡಿನ ಸದ್ದು ಕೇಳಿದ ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಬಂದು ನೋಡಿದಾಗ ಜಡ್ಜ್ ಪತ್ನಿ ಹಾಗೂ ಪುತ್ರ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣವೇ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗುಂಡಿ ಹಾರಿಸಿದ ಬಳಿಕ ಜಡ್ಜ್​ಗೆ ಕರೆ ಮಾಡಿ, ‘ನಿನ್ನ ಪತ್ನಿ ಮತ್ತು ಪುತ್ರನಿಗೆ ಗುಂಡಿಕ್ಕಿದ್ದೇನೆ’ ಎಂದು ಗನ್​ಮ್ಯಾನ್ ಹೇಳಿ ಪರಾರಿಯಾಗಿದ್ದ. ಬಳಿಕ ಫರೀದಾಬಾದ್​ನಲ್ಲಿ ಆರೋಪಿ ಗನ್​ಮ್ಯಾನ್​ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಘಟನೆಗೆ ಕಾರಣ ತಿಳಿದುಬಂದಿಲ್ಲ.

Tags

Related Articles

Leave a Reply

Your email address will not be published. Required fields are marked *

Language
Close