ಬಾಕ್ಸ್ ಆಫೀಸ್‌ನಲ್ಲಿ ಜುಡ್ವಾ 2ನದ್ದೇ ಹವಾ

Posted In : ಸಿನಿಮಾ ಸಮಾಚಾರ

ದೆಹಲಿ: ಬಾಲಿವುಡ್‌ನಲ್ಲಿ ತನ್ನದೇ ಆದ ಛಾಪನ್ನು ಹೊಂದಿರುವ ವರುಣ್ ಧವನ್‌ಗೆ ಆಕಾಶದಲ್ಲಿ ತೇಲುತ್ತಿದ್ದಾರೆ. ಯುವನಟನ ಜುಡ್ವಾ 2 ಚಿತ್ರ ಬಾಕ್ಸ್ ಆಫೀಸ್‌ನ್ನು ಕೊಳ್ಳೆ ಹೊಡೆಯುತ್ತಿದೆ. 1997ರಲ್ಲಿ ಸಲ್ಮಾನ್‌ ದ್ವಿಪಾತ್ರದಲ್ಲಿ ನಟಿಸಿದ ಜುಡ್ವಾ ಚಿತ್ರದ ಎರಡನೇ ಭಾಗದಲ್ಲಿ ವರುಣ್ ಪ್ರೇಮ್ ಮತ್ತು ರಾಜಾ ಪಾತ್ರದಲ್ಲಿ ನಟಿಸಿದ್ದಾರೆ.

ಸಲ್ಮಾನ್‌ಗೆ ಕರಿಶ್ಮಾ ಕಪೂರ್ ಹಾಗೂ ರಂಭಾ ಜತೆಯಾಗಿದ್ದರೆ, ವರುಣ್‌ಗೆ ಜ್ಯಾಕಲಿನ್ ಫೆರ್ನಾಂಡಿಸ್ ಮತ್ತು ತಾಪ್ಸಿ ಪನ್ನು. ಚಿತ್ರ ನಾಗಾಲೋಟದಲ್ಲಿ ಓಡುತ್ತಿದ್ದು, 100 ಕೋಟಿ ಕ್ಲಬ್ ತಲುಪಲು ಸಜ್ಜಾಗಿದೆ. ಖ್ಯಾತ ಚಲನಚಿತ್ರ ವಿಮರ್ಶಕ ಹಾಗೂ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಕಳೆದ ಶುಕ್ರವಾರ 16.10 ಕೋಟಿ, ಶನಿವಾರ 20.55 ಕೋ, ಭಾನುವಾರ 22.60 ಕೋ. ಸೋಮವಾರ 18 ಕೋ., ಮಂಗಳವಾರ 8.05 ಕೋ., ಬುಧವಾರ 6.72 ಕೋ., ಗುರುವಾರ 6.06 ಕೋ., ಇಂದು ಈ ಮೊತ್ತ ಪ್ರಸಕ್ತ ವರ್ಷದ ಅತೀ ಹೆಚ್ಚು ಗಳಿಕೆ ಮಾಡುವುದೇ ಎಂದು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

4 × four =

 
Back To Top