About Us Advertise with us Be a Reporter E-Paper

Breaking Newsಕ್ರೀಡೆ

ಕಿರಿಯರ ಏಷ್ಯಾ ಚಾಂಪಿಯನ್‌ಶಿಪ್‌: ಚೊಚ್ಚಲ ಅಂತಾರಾಷ್ಟ್ರೀಯ ಚಿನ್ನ ಗೆದ್ದ ಸಾಜನ್‌

ಆರಂಭಿಕ ದಿನವೇ ಭಾರತದ ಮುಡಿಗೆ ೧ಚಿನ್ನ, ೨ಬೆಳ್ಳಿ ಮತ್ತು ೧ಕಂಚಿನ ಪದಕ

ದೆಹಲಿ: ಭಾರತದ ಗ್ರೀಕೋ ರೋಮನ್‌ ಕುಸ್ತಿಪಟು ಸಾಜನ್‌ ಅವರು ಮಂಗಳವಾದ ಆರಂಭವಾದ ಕಿರಿಯರ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದು, ಆತಿಥೇಯ ಭಾರತ ಮೊದಲ ದಿನದಂದೇ ಒಂದು ಚಿನ್ನ, ಎರಡು ಬೆಳ್ಳಿ ಹಾಗು ಒಂದು ಕಂಚಿನ ಪದಕದೊಂದಿಗೆ ಒಟ್ಟು ನಾಲ್ಕು ಪದಕಗಳನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇಲ್ಲಿ ನಡೆದ ಚಾಂಪಿಯನ್‌ಶಿಪ್‌ನ ಸಾಜನ್‌ ಅವರು ಪುರುಷರ ೭೭ಕೆಜಿ ವಿಭಾಗದಲ್ಲಿ ಇರಾನ್‌ನ ಶಯಾನ್‌ ಹೋಸಿನ್ ಆಫಿಫಿ ಅವರನ್ನು ೩-೦ ಅಂಕಗಳಿಂದ ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಕಳೆದ ಬಾರಿ ಚೀನಾದ ತೈಪೆನಲ್ಲಿ ನಡೆದ ಚಾಂಪಿಯನ್‌ಶಿಪ್‌ ಕಂಚಿನ ಪದಕ ಗೆದ್ದಿದ್ದ ಸಾಜನ್, ಈ ಬಾರಿ ಅತ್ಯುತ್ತಮ ಪ್ರದರ್ಶನ ತೋರಿ ಮೊದಲ ಅಂತಾರಾಷ್ಟ್ರೀಯ ಚಿನ್ನದ ಪದಕ ಪಡೆದಿದ್ದಾರೆ. ಕಳೆದ ಬಾರಿ ಕಿರಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿಯೂ ಕಂಚಿನ ಪದಕ ಪಡೆದಿದ್ದರು.

ಚಾಂಪಿಯನ್‌ಶಿಪ್‌ನಲ್ಲಿ ಮಂಗಳವಾರ ಸ್ಪರ್ಧಿಸಿದ್ದ ಐದು ಭಾರತೀಯ ಕುಸ್ತಿಪಟುಗಳಲ್ಲಿ ನಾಲ್ಕು ಕುಸ್ತಿಪಟುಗಳು ಪದಕ ಗೆದ್ದಿದ್ದಾರೆ. ಐದನೇ ಕುಸ್ತಿಪಟು ಮನ್‌ಜೀತ್‌ ೬೩ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದು, ಗಾಯದಿಂದಾಗಿ ಟೂರ್ನಿಯಿಂದ ಹೊರನಡೆದಿದ್ದಾರೆ.

“ಚಿನ್ನದ ಪದಕ ಗೆದ್ದಿರುವುದು ಖುಷಿ ತಂದಿದೆ. ಕಳೆದ ಬಾರಿ ಕಿರಿಯರ ಏಷ್ಯಾ ಚಾಂಪಿಯನ್‌ಶಿಪ್‌ ಹಾಗೂ ಕಿರಿಯರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದೆ. ಇದು ನನ್ನ ಚೊಚ್ಚಲ ಅಂತಾರಾಷ್ಟ್ರೀಯ ಚಿನ್ನದ ಪದಕವಾಗಿದೆ” ಎಂದು ಸಾಜನ್‌ ತಿಳಿಸಿದರು.

ಇದಕ್ಕೂ ಮೊದಲ ನಡೆದ ಸ್ಪರ್ಧೆಯಲ್ಲಿ ಕುಸ್ತಿಪಟುಗಳಾದ ವಿಜಯ್‌(೫ಕೆಜಿ), ಆರ್ಯನ್‌ ಪವರ್‌(೧೩೦ಕೆಜಿ) ಅವರ ಬೆಳ್ಳಿ ಪದಕ ಪಡೆದರೆ, ಕುಮಾರ್‌ ಸುನೀಲ್ ೮೭ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು.

Tags

Related Articles

Leave a Reply

Your email address will not be published. Required fields are marked *

Language
Close