ವಿಳಂಬವಾದರೂ ತೀರ್ಪು ನ್ಯಾಯಸಮ್ಮತ

Posted In : ಸಂಪಾದಕೀಯ-1

ಪ್ರಾಯಶಃ 1993ರ ಮಾರ್ಚ್ 12ನೇ ತಾರೀಖನ್ನು ಮುಂಬೈನ ಯಾರೂ ಮರೆಯಲಿಕ್ಕಿಲ್ಲ. ಎಂದಿನಂತೆ ಮುಂಬೈ ಗಿಜುಗುಡುತ್ತ ದಿನ ಆರಂಭಿಸಿದ್ದರೆ, ಅದೇ ದಿನ ಕರಾಳವಾಗಿ ಅಂತ್ಯ ಕಂಡಿತ್ತು. ನಗರದ ಬರೋಬ್ಬರಿ 13 ಕಡೆ ಬಾಂಬ್‌ಗಳು ಪಟಾಕಿಗಳಂತೆ ಸಿಡಿದಿದ್ದವು. ಪರಿಣಾಮ 257 ಜನ ಮೃತಪಟ್ಟಿದ್ದರು. 700ಕ್ಕೂ ಅಧಿಕ ಜನ ಗಾಯಗೊಂಡಿದ್ದರು. ಹಾಗಾಗಿ ಈ ದಿನವನ್ನು ಮುಂಬೈನ ಯಾರೂ ಮರೆಯಲಿಕ್ಕಿಲ್ಲ ಹಾಗೂ ದೇಶದ ದುರಂತಗಳ ಪಟ್ಟಿ ಯಲ್ಲಿ ಈ ಘಟನೆ ಎಂದಿಗೂ ತನ್ನ ಕರಾಳತೆ ಉಳಿಸಿ ಕೊಂಡಿರುತ್ತದೆ. ಆದರೆ, ಈಗ ಮುಂಬೈನ ಟಾಡಾ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆ ವಿಧಿಸಿರುವುದು ಸ್ವಾಗತಾರ್ಹವಾಗಿದೆ.

ರಣದ ಪ್ರಮುಖ ಆರೋಪಿಗಳಾದ ಅಬುಸಲೇಂ ಹಾಗೂ ಕರೀಮುಲ್ಲಾ ಖಾನ್‌ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದರೆ, ತಾಹೀರ್ ಮರ್ಚಂಟ್ ಹಾಗೂ ಫಿರೋಜ್ ರಶೀದ್ ಖಾನ್‌ಗೆ ಮರಣದಂಡನೆ ನೀಡಿದೆ. ಮತ್ತೊಬ್ಬ ಆರೋಪಿ ರಿಯಾಜ್ ಸಿದ್ದಿಕಿಯನ್ನು ಸಹ ಅಪರಾಧಿ ಎಂದು ಪರಿಗಣಿಸಿ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಮಗದೊಬ್ಬ ಆರೋಪಿ ಮುಸ್ತಫಾ ದೊಸ್ಸಾ ಮೃತಪಟ್ಟಿದ್ದಾನೆ. ಹೀಗೆ ಇವರೆಲ್ಲರಿಗೂ ನ್ಯಾಯಾಲಯ ಸರಿಯಾದ ಶಿಕ್ಷೆ ನೀಡುವ ಮೂಲಕ ಸ್ಫೋಟದಲ್ಲಿ ಮೃತಪಟ್ಟವರ ಆತ್ಮಗಳಿಗೆ ಶಾಂತಿ ಸಿಕ್ಕಂತಾಗಿದೆ. ಅವರ ಕುಟುಂಬಸ್ಥರ ಬೇಗುದಿ ಒಂದು ಹಂತಕ್ಕೆ ಕಡಿಮೆಯಾದಂತಾಗಿದೆ. ಆದಾಗ್ಯೂ, ಘಟನೆ ನಡೆದು 24 ವರ್ಷಗಳ ವಿಚಾರಣೆ ನಡೆದಿರುವುದು ವಿಳಂಬ ಎನಿಸಿದರೂ, ನ್ಯಾಯಾಲಯದ ಪ್ರಕ್ರಿಯೆ, ವಿಚಾರಣೆಗಳ ಹಂತಗಳು ಹಾಗೂ ಪರಾರಿಯಾಗಿದ್ದ ಆರೋಪಿಗಳನ್ನು ಹಿಡಿದುತರುವ ಪ್ರಕ್ರಿಯೆ ಇಷ್ಟು ಸಮಯ ತೆಗೆದುಕೊಂಡಿದೆ.

ಆದರೂ, ಅಬುಸಲೇಂಗೆ ಮರಣದಂಡನೆ ವಿಧಿಸಬೇಕು ಎಂಬುದು ಎಲ್ಲರ ಒತ್ತಾಸೆಯಾಗಿದ್ದರೂ, ಆತನನ್ನು ಪೋರ್ಚುಗಲ್‌ನಿಂದ ಒಪ್ಪಂದದ ಮೇರೆಗೆ ಕರೆತಂದಿರುವುದರಿಂದ, ಹಾಗೂ ಆತನಿಗೆ ಗಲ್ಲು ಶಿಕ್ಷೆ ವಿಧಿಸುವುದಿಲ್ಲ ಎಂದು ಒಪ್ಪಂದದಲ್ಲಿ ಉಲ್ಲೇಖಿಸಿರುವುದರಿಂದ ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇನ್ನು ಪ್ರಮುಖ ರೂವಾರಿ ದಾವೂದ್ ಇಬ್ರಾಹಿಂ ತಲೆಮರೆಸಿ ಕೊಂಡು ತಿರುಗಾಡುತ್ತಿದ್ದು ಕೂಡಲೇ ಅವನನ್ನು ಸಹ ಎಳೆತಂದು ಗಲ್ಲಿಗೇರಿಸಿದಾಗ ಮಾತ್ರ ಪ್ರಕರಣ ಅಂತ್ಯ ಕಂಡಂತೆ.

ಸುಪ್ರೀಂನಿಂದ ದಿಟ್ಟ ನಿರ್ಧಾರ

ಭಾರತದಂಥ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ರಾಜಕಾರಣಿ, ಒಬ್ಬ ಜನಸೇವಕ, ನಿಷ್ಠಾವಂತ, ಜನೋದ್ಧಾರಕ ಎಂದು ಬಿಂಬಿತವಾಗುವ ಬದಲು ಒಬ್ಬ ಶ್ರೀಮಂತನಂತೆ ಕಾಣುವುದು ದುರಂತ. ಆತ ರಾಜಕಾರಣಿಯಾದ ಮೇಲೆಯೇ ಶ್ರೀಮಂತ ನಾಗುತ್ತಾನೆ ಎಂಬುದು ರಾಜಕಾರಣದ ಹಿಂದಿನ ಹಣಕಾರಣದ ಮಸಲತ್ತು ಏನು ಎಂಬುದು ಗೊತ್ತಾಗುತ್ತದೆ. ಆದರೆ ಇಂಥಾ ರಾಜಕಾರಣಿಗಳಿಗೆ ಮೂಗು ದಾರ ಹಾಕಲು ಹೊರಟಿರುವ ಸುಪ್ರೀಂ ಕೋರ್ಟ್, ದೇಶದ ನೂರಾರು ಶಾಸಕರು ಹಾಗೂ ಸಂಸದರು, ಅಧಿಕಾರ ಸ್ವೀಕರಿಸಿದ ಬಳಿಕಅಲ್ಲದೆ ಈ ಕುರಿತು ಕೇಂದ್ರ ಸರಕಾರ ಯಾವ ಕ್ರಮ ಕೈಗೊಂಡಿದೆ, ಶಾಸಕರು, ಸಂಸದರು ಹಾಗೂ ಹಿರಿಯ ನಾಯಕರ ಹಣ ಸುಮಾರು 500ಪಟ್ಟು ಹೆಚ್ಚಾಗುವುದಕ್ಕೆ ಕಾರಣಗಳೇನು ಸೇರಿ ಹಲವು ಪ್ರಶ್ನೆಗಳ ಮೂಲಕ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವುದು ಸ್ವಾಗತಾರ್ಹವಾಗಿದೆ. ಈ ಕುರಿತು ಕೇಂದ್ರ ಸರಕಾರ ಸಹ ಅಪಾರ ಆಸ್ತೆ ವಹಿಸಿ, ವರದಿ ತಯಾರಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕು. ಆಸ್ತಿವಾನ ರಾಜಕಾರಣಿಗಳಿಗೆ ಕೇಂದ್ರ ಹಾಗೂ ನ್ಯಾಯಾಂಗ ಕ್ರಮ ಕೈಗೊಳ್ಳ ಬೇಕು.

One thought on “ವಿಳಂಬವಾದರೂ ತೀರ್ಪು ನ್ಯಾಯಸಮ್ಮತ

  1. RAJAKARANIGALADDU VYAPARI NADEYADDARINDA HEEGAGUTTIDE!!
    SARKARADA KELASAGALA JOTEGE VAYYAKTIKA KELAS A MATTU TA DA HAGADARE.. YELLI HOGABEKU RAJKAKARANIYA HANA!! KHARCHELLA SARAKARTADINDA.. VYAKTIGATA KELASADALLU PALUGARIKE. MELE SAMSADARA FUND MELE HECHCHUVARI GAMANA!!!
    2. PARIVARTANADA DARI DURA ULIDIDE.. SWATHATANA MAIMADIDE YENISUTTE!!
    NIMMA SAMPADAKIYAKKE ABHINANDANEGALU>

Leave a Reply

Your email address will not be published. Required fields are marked *

twenty − sixteen =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top