ಸಿನಿಮಾ ಅಂದ್ರೆ ಕಟ್ಟುಕಥೆ!

Posted In : ಸಿನಿಮಾಸ್

-ಜಿ. ಎಸ್.ಕಾರ್ತಿಕ ಸುಧನ್

ಸಿನಿಮಾ ಅಂದಮೇಲೆ ಅಲ್ಲೊಂದು ಕಥೆ ಇರಲೇಬೇಕು. ಕೆಲವರು ಕಾಲ್ಪನಿಕ ಕಥೆಯನ್ನ ಇಟ್ಟುಕೊಂಡು ಸಿನಿಮಾ ಮಾಡಿದರೆ, ಕೆಲವರು ನೈಜ ಘಟನೆ ಗಳನ್ನೆ ಕಥೆಯನ್ನಾಗಿ ಮಾಡಿಕೊಂಡು ಸಿನಿಮಾ ಮಾಡುತ್ತಾರೆ. ಆದರೆ ಇಲ್ಲೊಂದು ತಂಡ ‘ಕಟ್ಟುಕಥೆ’ಯನ್ನೇ ಇಟ್ಟುಕೊಂಡು ಮಾಡಿ ಅದನ್ನು ಈ ವಾರ ತೆರೆಗೆ ತರುತ್ತಿದೆ.  ಅರೆ, ಇದೇನಿದು ಹೊಸ ‘ಕಟ್ಟುಕಥೆ’ ಅಂತ ಕನ್‌ಫ್ಯೂಷನ್ ಆಗ್ಬೇಡಿ. ನಾವು ಹೇಳಲು ಹೊರಟಿರುವುದು ‘ಕಟ್ಟುಕಥೆ’ ಎಂಬ ಹೊಸ ಸಿನಿಮಾದ ಬಗ್ಗೆ. ಅಂದ ಹಾಗೆ, ಈ ‘ಕಟ್ಟುಕಥೆ’ ಟೈಟಲ್‌ಗೆ ‘ರಿಯಲ್ ಸ್ಟೋರಿ’ ಎಂಬ ಟ್ಯಾಗ್ ಲೈನ್ ಕೂಡ ಇದೆ. ಒಂದು ಕಡೆ ‘ಕಟ್ಟುಕಥೆ’ ಮತ್ತೊಂದು ಕಡೆ ‘ರಿಯಲ್ ಸ್ಟೋರಿ’ ಅಂತಿದೆಯಲ್ಲ, ಇದ್ರಲ್ಲಿ ಯಾವುದು ಒರಿಜಿನಲ್ ಎಂಬ ಪ್ರಶ್ನೆಗೆ, ಸಿನಿಮಾದಲ್ಲಿ ಉತ್ತರವಿದೆ ಎನ್ನುತ್ತದೆ.

 ಯುವ ನಿರ್ದೇಶಕ ರಾಜ್ ಪ್ರವೀಣ್, ತಾವು ಕಂಡ ಕೆಲವು ನೈಜ ಘಟನೆಗಳನ್ನು ಆಧರಿಸಿ, ‘ಕಟ್ಟುಕಥೆ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಈ ಚಿತ್ರ ಕ್ರೈಂ, ಥ್ರಿಲ್ಲರ್ ಸ್ವರೂಪದಲ್ಲಿದ್ದು, ಇಂದಿನ ಪ್ರೇಕ್ಷಕರು ಬಯಸುವ ಕಥೆ ನಮ್ಮ ಸಿನಿಮಾ ದಲ್ಲಿದೆ. ಪ್ರೇಕ್ಷಕರು ಖಂಡಿತ ‘ಕಟ್ಟುಕಥೆ’ ಯನ್ನು ಇಷ್ಟಪಡಲಿದ್ದಾರೆ ಎನ್ನುವ ಭರವಸೆಯ ಮಾತುಗಳನ್ನಾಡುತ್ತಿದೆ ಚಿತ್ರ ತಂಡ. ಈಗಾಗಲೇ ಟ್ರೇಲರ್ ಮೂಲಕ ಹೊರಬಂದಿರುವ ‘ಕಟ್ಟುಕಥೆ’ ಪ್ರೇಕ್ಷಕ ರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇನ್ನು ಚಿತ್ರೋದ್ಯಮದ ಮಂದಿ ಕೂಡ ‘ಕಟ್ಟು ಕಥೆ’ಯ ಬಗ್ಗೆ ಭರವಸೆಯ ಮಾತುಗಳನ್ನಾಡುತ್ತಿದ್ದಾರೆ. ಸೂರ್ಯ, ಸ್ವಾತಿ ಕೊಂಡೆ, ರಾಜೇಶ್ ನಟರಂಗ, ಮಿತ್ರ, ಮೋಹನ್ ಜುನೇಜಾ, ಕೆಂಪೇಗೌಡ, ತುಮಕೂರು ಮೋಹನ್, ಮೃಣಾಲಿ ಶೆಟ್ಟಿ, ನಟನ ಪ್ರಶಾಂತ್, ರಜನಿಕಾಂತ್ ಮೊದಲಾದ ಕಲಾವಿದರು ‘ಕಟ್ಟುಕಥೆ’ಯ ಪ್ರಮುಖ ತಾರಾಗಣದಲ್ಲಿ ಅಭಿನಯಿಸಿದ್ದಾರೆ.

ಚಿತ್ರದ ಹಾಡುಗಳಿಗೆ ವಿಕ್ರಂ ಸುಬ್ರಮಣ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರಕ್ಕೆ ಮನು ಬಿ.ಕೆ ಛಾಯಾಗ್ರಹಣ ಹಾಗೂ ಗುರುಮೂರ್ತಿ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ‘ಟಗರು‘ ಚಿತ್ರದ ಖ್ಯಾತಿಯ ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಅನಘ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸ್ವೀಟ್ಸ್ ಮಹದೇವ ಮೈಸೂರು ಈ ಚಿತ್ರಕ್ಕೆ ನಿರ್ಮಾಪಕರಾಗಿ ಬಂಡವಾಳ ಹೂಡುತ್ತಿದ್ದಾರೆ. ಎನ್.ಸವಿತಾ ಸಹ ನಿರ್ಮಾಪಕರಾಗಿದ್ದಾರೆ.

Leave a Reply

Your email address will not be published. Required fields are marked *

11 + 18 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top