ಕಠಿಣ ನಿರ್ಧಾರದಿಂದ ತಾತ್ಕಾಲಿಕ ತೊಂದರೆ ಸಹಜ: ಜೇಟ್ಲಿ

Posted In : ದೇಶ

ಗಾಂಧಿನಗರ: ನೋಟಿನ ಅಪಮೌಲ್ಯೀಕರಣವನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ ‘ಕಠಿಣ ನಿರ್ಧಾರಗಳನ್ನು ಕಠಿಣ ರೀತಿಯಲ್ಲಿಯೇ ತೆಗೆದುಕೊಳ್ಳಬೇಕಾಗಿದ್ದು, ಅದರಿಂದಾಗಿ ತಾತ್ಕಾಲಿಕ ತೊಂದರೆ ಸಹಜ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಗುಜರಾತ್‌ನ ಗಾಂಧಿನಗರದಲ್ಲಿ ನಡೆದ ವೈಬ್ರೆಂಟ್ ಗುಜರಾತ್ ಸಮ್ಮೇಳನದಲ್ಲಿ ಬುಧವಾರ ಮಾತನಾಡಿದ ಅವರು ‘ಐನೂರು, ಸಾವಿರ ನೋಟಿನ ಅಪಮೌಲ್ಯೀಕರಣವು ಈಗಿನ ಮತ್ತು ಮುಂದಿನ ತಲೆಮಾರಿನ ಮೇಲೆ ಒಳ್ಳೆಯ ಪರಿಣಾಮ ಬೀರಲಿದೆ. ಭಾರತಕ್ಕೆ ದಿಟ್ಟ ನಿರ್ಧಾರಗಳ ಅಗತ್ಯವಿದ್ದು, ಆರ್ಥಿಕತೆಯನ್ನು ಸ್ವಚ್ಛಗೊಳಿಸಲು ಇದು ಸೂಕ್ತ ಸಮಯ’ ಎಂದು ಹೇಳಿದ್ದಾರೆ. ‘ಅಪಮೌಲ್ಯೀಕಣದಿಂದ ಜಿಡಿಪಿ ದೀರ್ಘಕಾಲದಲ್ಲಿ ಹೆಚ್ಚಾಗಲಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮತ್ತು ಅಪಮೌಲ್ಯೀಕರಣದಿಂದ ಆಗುವ ಲಾಭಗಳನ್ನು ಈ ವರ್ಷ ಅನುಭವಿಸಬಹುದು. ನಗದು ವ್ಯವಹಾರವನ್ನು ಹೆಚ್ಚಾಗಿ ಬಳಸುವುದು ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರಲಿದ್ದು, ಡಿಜಿಟಲ್ ವ್ಯವಹಾರವನ್ನು ಉತ್ತೇಜಿಸುವುದು ಇಂದಿನ ಅವಶ್ಯವಾಗಿದೆ’ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ. ಎಂಟನೇ ವೈಬ್ರೆಂಟ್ ಗುಜರಾತ್ ಸಮ್ಮೇಳನವು ಜ. 10ರಂದು ಆರಂಭವಾಗಿದ್ದು ಜ. 13ಕ್ಕೆ ಅಂತ್ಯವಾಗಲಿದೆ.

Leave a Reply

Your email address will not be published. Required fields are marked *

4 × two =

Wednesday, 24.01.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಸಪ್ತಮಿ, ಬುಧವಾರ, ನಿತ್ಯ ನಕ್ಷತ್ರ-ರೇವತಿ, ಯೋಗ-ಸಿದ್ಧಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

 

Wednesday, 24.01.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಸಪ್ತಮಿ, ಬುಧವಾರ, ನಿತ್ಯ ನಕ್ಷತ್ರ-ರೇವತಿ, ಯೋಗ-ಸಿದ್ಧಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

Back To Top