About Us Advertise with us Be a Reporter E-Paper

Breaking Newsರಾಜ್ಯ

ಕಲಬುರಗಿ ಪಾಲಿಕೆ ಕಚೇರಿಗೆ ರಾತ್ರೋರಾತ್ರಿ ಉರ್ದು ನಾಮಫಲಕ ಅಳವಡಿಕೆ: ವ್ಯಾಪಕ ಆಕ್ರೋಶ

ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಮತ್ತೆ ಉರ್ದು ನಾಮಫಲಕ ವಿವಾದ ಭುಗಿಲೆದ್ದಿದೆ. ರಾತ್ರೋರಾತ್ರಿ ಕಲಬುರಗಿ ಮಹಾನಗರ ಪಾಲಿಕೆ ಕಚೇರಿಗೆ ಉರ್ದು ನಾಮಫಲಕ ಹಾಕಿರುವುದು ಬೆಳಕಿಗೆ ಬಂದಿದೆ.

ಮಹಾನಗರ ಪಾಲಿಕೆ ಮೆಯರ್ ಮಲ್ಲಮ್ಮ ವಳಕೇರಿ ಅವರ ಪುತ್ರ, ಪಾಲಿಕೆ ಸದಸ್ಯರಾಗಿರುವ ಗಣೇಶ್‌ ವಳಕೇರಿ ಹಾಗೂ ಇನ್ನಿತರರು ಸೇರಿ ನಿನ್ನೆ ರಾತ್ರಿ ಉರ್ದು ನಾಮಫಲಕ ಹಾಕಿ, ದರ್ಪ ಮೆರೆದಿದ್ದಾರೆ ಎಂದು ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ನಾಮಫಲಕ ತೆರವಿಗೆ ಆಗ್ರಹಿಸಿ‌ ಪಾಲಿಕೆ ಕಚೇರಿ ಎದುರು ಇಂದು ನವನಿರ್ಮಾಣ ಸೇನೆ ಪ್ರತಿಭಟನೆ ನಡೆಸಿತು.

Tags

Related Articles

Leave a Reply

Your email address will not be published. Required fields are marked *

Language
Close