‘ಬಂದ್’ಗೆ ಕನ್ನಡ ಪರ ಸಂಘಟನೆಗಳಲ್ಲೇ ವಿರೋಧ

Posted In : ಬೆಂಗಳೂರು

ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ವಾಟಾಳ್ ನಾಗರಾಜ್ ಇದೇ 25ರಂದು ಕರೆ ಕೊಟ್ಟಿರುವ ‘ಕರ್ನಾಟಕ ಬಂದ್’ಗೆ ಕನ್ನಡ ಪರ ಸಂಘಟನೆಗಳಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ.

ಬಂದ್ ವಿಚಾರದಲ್ಲಿ ವಾಟಾಳ್ ನಾಗರಾಜ್ ಬೆಂಬಲಿಗರು ಹಾಗೂ ಕರ್ನಾಟಕ ಸಂಘ ಟಗಳ ಒಕ್ಕೂಟದ ನಾಗೇಶ್ ನಡುವೆ ನಡೆದ ವಾಗ್ವಾದ ಆಡಿಯೋದಲ್ಲಿ ವೈರಲ್ ಆಗಿದೆ. ಬಂದ್ ವಿಚಾರದಲ್ಲಿ ಕನ್ನಡ ಪರ ಸಂಘಟನೆಗಳಲ್ಲಿ ಭಿನ್ನಮತ ಭುಗಿಲೆದ್ದಿದೆ. ಮಹ ದಾಯಿ ವಿಚಾರದಲ್ಲಿನ ಹೋರಾಟಕ್ಕೆ ಬೆಂಬಲವಿದೆ, ಆದರೆ ಕರ್ನಾಟಕ ಬಂದ್ ಗೆ ಇಲ್ಲ.

ನಮ್ಮ ಸಂಘಟನೆಗಳ ಜತೆ ಚರ್ಚಿಸದೇ ವಾಟಾಳ್ ನಾಗರಾಜ್ ಅವರು ತಮ್ಮ ಪ್ರತಿಷ್ಠೆ ಗಾಗಿ ಬಂದ್ ಕರೆ ಕೊಟ್ಟಿದ್ದಾರೆ. ಇದಕ್ಕೆ ನಮ್ಮ ಬೆಂಬಲ ಇಲ್ಲ ಎಂದು ನಾಗೇಶ್ ತಿಳಿಸಿದ್ದಾರೆ. ಬಂದ್ ಬೆಂಬಲಿಸುವ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.

Leave a Reply

Your email address will not be published. Required fields are marked *

4 × 5 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top