ವಿಶ್ವವಾಣಿ

‘ಕನ್ನಡ ಗೊತ್ತಿಲ್ಲ’ ಎನ್ನುವವರಿಗೆ ಟೀಚರ್‌ ಆಗಿ ಬರ್ತಿದ್ದಾರೆ ಹರಿಪ್ರಿಯಾ

 

ಸದ್ಯ ಬೆಂಗಳೂರಲ್ಲಂತೂ ಸಾಕಷ್ಟು ಕನ್ನಡಿಗರು ಕೇಳಿ ಬೇಸರಗೊಂಡಿರುವ ವಾಕ್ಯ ‘ಕನ್ನಡ ಗೊತ್ತಿಲ್ಲ’. ಹೊರದೇಶಿಗರು, ಹೊರನಾಡಿಗರಿಗೆ ಮೋಸ್ಟ್‌ ಕಂಫರ್ಟ್ ಸಿಟಿಯಾಗಿರುವ ಬೆಂಗಳೂರಿನಲ್ಲಿ ‘ಕನ್ನಡ ಗೊತ್ತಿಲ್ಲ’ ಎನ್ನುವವರ ಸಂಖ್ಯೆೆ ದಿನದಿಂದ ದಿನಕ್ಕೆೆ ಹೇರಳವಾಗಿ ಹೆಚ್ಚುತ್ತಿದೆ. ಈಗ ಇದೇ ಹೆಸರಿನಲ್ಲಿ ಸಿನಿಮಾ ಒಂದು ಸೆಟ್ಟೇರಿ ಸದ್ದು ಮಾಡುತ್ತಿದೆ.

‘ನೀರ್‌ದೋಸೆ’ ಸಿನಿಮಾದ ನಂತರ ಹರಿಪ್ರಿಯಾ ಅವರಿಗೆ ಸಿನಿಮಾಗಳ ಸಾಲು ಸಾಲು ಅವಕಾಶ ಒದಗಿ ಬಂದಿವೆ. ಸದ್ಯ ಹರಿಪ್ರಿಯಾ ‘ಕನ್ನಡ ಗೊತ್ತಿಲ್ಲ’ ಚಿತ್ರದಲ್ಲಿ ಬುಸಿಯಾಗಿದ್ದಾರೆ. ಇದೇ ಬುಧವಾರ ಚಿತ್ರ ಸೆಟ್ಟೇರಿದ್ದು, ಈ ಹಿಂದೆ ರಚಿತಾ ರಾಮ್ ನಿರ್ಮಾಣದ ‘ರಿಷಭಪ್ರಿಯಾ’ ಕಿರುಚಿತ್ರದ ನಿರ್ದೇಶನ ಮಾಡಿದ್ದ ಆರ್.ಜೆ.ಮಯೂರ್ ರಾಘವೇಂದ್ರ ಚಿತ್ರಕ್ಕೆೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಇದೊಂದು ಹಾರರ್ ಜಾನರ್ ಸಿನಿಮಾವಾಗಿದ್ದು, ಈಗಿನ ಜವಾನಕ್ಕೆೆ ಸರಿಯಾಗಿ ಹೊಂದುಕೊಳ್ಳಲಿದೆಯಂತೆ. ಸಿನಿಮಾದಲ್ಲಿ ಕನ್ನಡ ಮತ್ತು ಕರ್ನಾಟಕವನ್ನು ಭಾವನಾತ್ಮಕವಾಗಿ ತೋರಿಸಲಾಗಿದೆಯಂತೆ. ಚಿತ್ರಕ್ಕೆೆ ಅಭಯ್ ಶಂಕರ್ ಸಂಗೀತ ಸಂಯೋಜನೆಯಿದ್ದು ಗಿರಿಧರ್ ಕ್ಯಾಮರಾ ವರ್ಕ್ ಮಾಡಿದ್ದಾರೆ.