lakshmi-electricals

ಕರಡಿ ದಾಳಿ: ರೈತನಿಗೆ ಗಂಭೀರ ಗಾಯ

Posted In : ರಾಜ್ಯ, ರಾಮನಗರ

ರಾಮನಗರ: ಚನ್ನಪಟ್ಟಣ ತಾಲೂಕಿನ ಮೆಣಸಿಗನಹಳ್ಳಿ ಬಳಿಯ ಲಂಬಾಣಿ ತಾಂಡಾದಲ್ಲಿ ಸೋಮವಾರ ಬೆಳಗ್ಗೆ ಕರಡಿಯೊಂದು ರೈತನ ಮೇಲೆ ದಾಳಿ ಮಾಡಿದೆ. ಗಾಯಗೊಂಡವರನ್ನು ಶಿವನಾಯಕ್ ಎಂದು ಗುರುತಿಸಲಾಗಿದೆ.

ಆತ ಬೆಳಗ್ಗೆ ಹಿಪ್ಪುನೇರಳೆ ತೋಟಕ್ಕೆ ನೀರು ಹಾಯಿಸುವ ವೇಳೆ ಕರಡಿ ದಾಳಿ ನಡೆಸಿದ್ದು, ತಲೆ ಮತ್ತು ಮೈ ಕೈಗೆ ಗಂಭೀರವಾಗಿ ಗಾಯಗಳಾಗಿವೆ. ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

6 + 13 =

 
Back To Top