About Us Advertise with us Be a Reporter E-Paper

ವಿ +

ಕರಟಿದ ಭೂಮಿಯಲ್ಲಿ ಕರೀಂ ಸಾಧನೆ

 ವಿವೇಕ ಆದಿತ್ಯ ಕಾಸರಗೋಡು

ಕಾಸರಗೋಡು ಜಿಲ್ಲೆಯಲ್ಲಿ ಈ ಅರಣ್ಯ ಪ್ರೇಮಿ ತನ್ನ ಸ್ವಂತ ಜಮೀನಿನಲ್ಲಿ ಕಾಡನ್ನು ಬೆಳೆಸಿದ ನಂತರ, ಅಲ್ಲಿನ ಬಾವಿಯಲ್ಲಿ ಬೇಸಗೆಯಲ್ಲೂ ನೀರು ತುಂಬಿಬಂತು! ಸುತ್ತಲಿನ ನಿವಾಸಿಗಳಿಗೆ ಉಚಿತ ವಾಗಿ ಆ  ಬಳಸುವ ಸೌಭಾಗ್ಯ. ಬರಡು ಭೂಮಿಯನ್ನು ಹಸಿರು ಮಾಡಿದ ಶ್ರಮ, ಕೀರ್ತಿ ಕರೀಂ ಅವರದ್ದು.

ನಗರೀಕರಣ, ಆಧುನಿಕತೆಯಿಂದ ಹಸಿರು ತುಂಬಿದ್ದ ಭೂಮಿ ಬರಡಾಗುತ್ತಿದೆ. ನಗರಗಳಲ್ಲಿ ಬೇಸಿಗೆ ಕಾಲದ ತಾಪಮಾನ 40-42 ಡಿಗ್ರಿಯವರೆಗೆ ತಲು ಪುತ್ತಿದೆ. ನಿಧಾನವಾಗಿ ಸಮುದ್ರ ಮಟ್ಟ ಹೆಚ್ಚಾಗಿ ಕರಾವಳಿ ಭೂ ಪ್ರದೇಶ ನೀರು ಪಾಲಾಗುತ್ತಿದೆ. ಇಂತಹ ಸ್ಥಿತಿಯ ನಡುವೆ, ಕಾಸರಗೋಡು ಜಿಲ್ಲೆ ವೆಳ್ಳರಿಕುಂಡು ತಾಲೂಕಿನ ಅಬ್ದುಲ್ ಕರೀಮ್ ಮೂರು ದಶಕಗಳ  ಸ್ವ ಆಸಕ್ತಿಯಿಂದ ಆರಂಭಿ ಸಿದ್ದ ಅರಣ್ಯೀಕರಣವು ಬರಡು ಭೂಮಿಯಲ್ಲಿ ಹಸಿರನ್ನು ತುಂಬಿದೆ. ಬತ್ತಿ ಹೋಗಿದ್ದ ಬಾವಿಗಳಲ್ಲಿ ನೀರು ತುಂಬಿದೆ. ಮರ ಗಳಿದ್ದರೆ ಮನುಷ್ಯನ ಜೀವನ ನೆಮ್ಮದಿಯಿಂದ ತುಂಬಿರುತ್ತದೆ ಎಂಬುದಕ್ಕೆ ಕರೀಂ ಅವರ ಅರಣ್ಯ ಪ್ರೀತಿ, ಒಂದು ಪುರಾವೆ ಯನ್ನು ಒದಗಿಸಿದೆ.

ಅಬ್ದುಲ್ ಕರೀಮ್ (70 ವರ್ಷ) ಹುಟ್ಟಿ ಬೆಳೆದಿದ್ದು ಕೊಟ್ಟ ಪುರಂ ಎಂಬ ಕಾಸರಗೋಡಿನ ಸಣ್ಣ ಗ್ರಾಮದಲ್ಲಿ. ಚಿಕ್ಕ ವಯಸ್ಸಿ ನಲ್ಲೇ ಮರ ಗಿಡ ಪ್ರಾಣಿ ಪಕ್ಷಿಗಳನ್ನು ಬಹು  ಅಬ್ದುಲ್ ಕರೀಮ್, ಶಾಲೆಗೆ ಹೋಗುತ್ತಿದ್ದ ಸಂದರ್ಭ ಮಧ್ಯಾಹ್ನದ ವೇಳೆ ಬೃಹತ್ ಮರಗಳಿಂದ ಕೂಡಿರುವ ಪವಿತ್ರ ಬನಗಳತ್ತ ಹೆಜ್ಜೆ ಹಾಕುತ್ತಿದ್ದರು. ಪವಿತ್ರ ಬನಗಳು ತನ್ನನ್ನು ಹೆಚ್ಚು ಪ್ರಭಾವಿಸಿದ್ದವು, ಬನಗಳದಟ್ಟ ಕಾಡು ಬದುಕಿನಲ್ಲಿ ಸಾಮರಸ್ಯದ ಪಾಠವನ್ನು ಕಲಿಸಿ, ತನ್ನ ಕನಸನ್ನು ನನಸಾಗುವಂತೆ ಮಾಡಿತು ಎನ್ನುತ್ತಾರೆ ಕರೀಂ.

 1970ರಲ್ಲಿ ಕೊಲ್ಲಿ ರಾಷ್ಟ್ರಕ್ಕೆ ಉದ್ಯೋಗ ಅರಸಿ ತೆರಳಿದ್ದ 20 ವರ್ಷದ ಕರೀಂ, ತಕ್ಕ ಮಟ್ಟಿನ ಹಣವನ್ನು ಸಂಪಾದಿಸಿದ್ದರು. ಟಿಕೆಟ್ ಏಜೆಂಟ್ ಆಗಿಯೂ ಹಲವು ವರ್ಷಗಳ  ದುಡಿ ದರು. ದುಬೈ ನಗರಿಯಲ್ಲಿದ್ದಾಗ, ಕರೀಮರಿಗೆ ಕಾಡು ಬೆಳೆಸುವ ಆಸೆ ಚಿಗುರೊಡೆಯಿತು. ಅಲ್ಲಿನ ಬಿಸಿಲು ಹಾಗೂ ಅಲ್ಲಿನ ವಾತಾವರಣ ಈ ಹೊಸ ಕಾಯಕಕ್ಕೆ ತನ್ನನ್ನು ಪ್ರೇರೇಪಿಸಿತು ಎನ್ನುತ್ತಾರೆ. 1977 ರಲ್ಲಿ ಕೆಲಸವನ್ನುಬಿಟ್ಟು ನಾಡಿಗೆ ಹಿಂತಿರುಗಿದ ಕರೀಂ ಐದು ಎಕರೆ ಸ್ಥಳವನ್ನು ರು.3750ಗೆ ಖರೀದಿಸಿದರು. ಕಲ್ಲು ಪಾರೆಯಂತಹ ಬೋಳು ಗುಡ್ಡೆಯಲ್ಲಿ ಕರೀಂ ಏನು ಮಾಡಿಯಾರೋ ಎಂದಿದ್ದ ಸಮೀಪವರ್ತಿಗಳೂ ಆಶ್ಚರ್ಯ ಪಡುವಂತೆ ಬೋಳು ಗುಡ್ಡೆಯನ್ನು ಸಸ್ಯಶ್ಯಾಮಲೆಯನ್ನಾಗಿಸಿ ದರು. ಕೆಂಪು ಕಲ್ಲು ಆವೃತವಾಗಿರುವ  ಪ್ರದೇಶ ದಲ್ಲಿ ನೆಟ್ಟ ಗಿಡವನ್ನು ಬದುಕಿಸಿಕೊಳ್ಳುವುದು ಮೊದಮೊದಲಿಗೆ ಕಷ್ಟಸಾಧ್ಯವಾಗಿತ್ತು. ಕೇವಲ ಒಂದು ಬರಡು ಬಾವಿಯಿದ್ದ ಈ ಪ್ರದೇಶದಲ್ಲಿ ಗಿಡಗಳನ್ನು ನೆಡಲು ಆರಂಭಿಸಿದ್ದರು. ಮೊದಲು ವರ್ಷ ಕೇವಲ ಒಂದು ಗಿಡ ಮಾತ್ರ ಚಿಗುರೊಡೆದಿತ್ತು. ಪ್ರತಿ ವರ್ಷ ಮಳೆಗಾಲದ ವೇಳೆ ಗಿಡಗಳನ್ನು ನೆಡಲು ಆರಂಭಿಸಿದ ಕರೀಂ ತಮ್ಮ ಹಲವು ವರ್ಷಗಳ ಕನಸನ್ನು ನನಸಾಗಿಸುವತ್ತ ಮುನ್ನಡೆದರು. ಐದು ಆರು ವರ್ಷಗಳ ಅವಧಿಯಲ್ಲಿ ಬೋಳು ಕೆಂಪು ಕಲ್ಲು ಗುಡ್ಡ ಹಸಿರಾಗಿ ಕಾಣಲಾರಂಭಿಸಿತ್ತು. ಸ್ಥಳೀಯ ಕಾರ್ಮಿಕರ  ಈ ಪ್ರದೇಶವನ್ನು ಅಗೆದು ಕಲ್ಲುಗಳನ್ನು ಒಡೆದು ಪ್ರತಿ ವರ್ಷ ಸಸಿಗಳನ್ನು ನೆಡಲಾ ರಂಭಿಸಿದರು ಕರೀಂ.

ನಿಧಾನಗತಿಯಲ್ಲಿ ಹಸಿರು ಅರಳಿತು, ಕುಸುಮ ಬಿರಿಯಿತು. ಅವರ ಪ್ರಯತ್ನದಿಂದ ಅವರ ಹಳ್ಳಿಗೆ ರಸ್ತೆ ಸಂಪರ್ಕ ಏರ್ಪಟ್ಟಿತು. ಹಿಂದುಳಿದ ಮಕ್ಕಳ ವಿದ್ಯಾಭ್ಯಾಸಕ್ಕೂ ಕರೀಂ ಶ್ರಮಿಸಿದರು.

ಕಾಡಿಗೆ ಆಕಸ್ಮಿಕ ಬೆಂಕಿ

ಮೊದಮೊದಲಿಗೆ ನೆಟ್ಟ ಸಸಿಗಳನ್ನು ಬದುಕುಳಿಯುವಂತೆ ಮಾಡ ಲು ದೂರ ಪ್ರದೇಶಗಳಿಂದ ನೀರನ್ನು ತರಬೇಕಿತ್ತು.ಗಿಡಗಳು ಎತ್ತರಕ್ಕೆ ಬೆಳೆಯಲಾರಂಭಿಸಿದಂತೆ ಸಮೀಪದ ಬಾವಿಯಲ್ಲಿ ನೀರಿನ ಜರಿ ಕಾಣಿಸಿತ್ತು. ಆದರೆ  ಬೆಳೆಸಿದ್ದ ಕಾಡಿಗೆ ಒಂದು ದಿನ ಬೆಂಕಿ ಬಿದ್ದು ಗಿಡಗಳು ಭಸ್ಮವಾದವು. ಕುಗ್ಗದ ಕರೀಂ ಮುಂದಿನ ವರ್ಷ ಹೆಚ್ಚಿನ ಮುತುವರ್ಜಿ ವಹಿಸಿ ಗಿಡಗಳನ್ನು ನೆಟ್ಟು ಸಲಹಿದರು. ಸಮೀಪದ ಸ್ಥಳಗಳನ್ನು ಕೊಂಡು ಅಲ್ಲಿಯೂ ವಿವಿಧ ತಳಿ ವೃಕ್ಷಗಳನ್ನು ನೆಟ್ಟು ಪ್ರಸ್ತುತ ಒಟ್ಟು 30ಎಕರೆ ಖಾಸಗಿ ಕಾಡಿನ ಮಾಲಕರಾಗಿದ್ದಾರೆ ಕರೀಂ. ಇಲ್ಲಿ ಅಪರೂಪದ ಗಿಡಮರಗಳು ಬೆಳೆದು ನಿಂತ ನಂತರ, ಹಲವು ಪ್ರಾಣಿ ಪಕ್ಷಿಗಳು ಬಂದು ನೆಲಸಿವೆ. ಸಮೀಪದ ವಾಸಿಗಳು ಬೇಸಿಗೆ ಅವಧಿಯಲ್ಲಿ ಇವರ  ನೀರೆಳೆದು ಕೊಂಡೊಯ್ಯುತ್ತಾರೆ. ಆ ನೀರಿಗೆ ಕರೀಂ ಹಣವನ್ನು ವಸೂಲು ಮಾಡುವುದಿಲ್ಲ. ಬರಡು ಗುಡ್ಡದಲ್ಲಿ ಹಸಿರು ಚಿಗುರಿಸಿದ ಅಬ್ದುಲ್ ಕರೀಂ ಅವರ ಖಾಸಗಿ ವನದ ಯಶೋಗಾಥೆ ಪಠ್ಯ ಪುಸ್ತಕದ ಭಾಗವಾಗಿದೆ. 2005ರಲ್ಲಿ ಕೇರಳ ಸರಕಾರ 6ನೇ ತರಗತಿ ಪಠ್ಯದಲ್ಲಿ ಕರೀಂ ಅವರ ವನ ನಿರ್ಮಾಣದ ಕಥೆಯನ್ನು ಪಾಠವಾಗಿ ಸೇರಿಸಿದೆ.

ಕರೀಂ ಫಾರೆಸ್‌ಟ್ ಕಳೆದ ಹತ್ತು ವರ್ಷಗಳಿಂದ ಪ್ರವಾಸಿ ಆಕರ್ಷಣೆಯೂ ಆಗಿದೆ. ರಾಣಿಪುರಂ ಗಿರಿಧಾಮ ವೀಕ್ಷಣೆಗೆ ಬರುವ ಹಲವು ಮಂದಿ ಕರೀಂ  ಖಾಸಗಿ ಅರಣ್ಯ ಪ್ರದೇಶವನ್ನು ವೀಕ್ಷಿಸಲು ಆಗಮಿಸುತ್ತಾರೆ. ಕಾನ್ಹಂಗಾಡ್‌ನಿಂದ ಇಲ್ಲಿಗೆ ಸುಮಾರು 23 ಕಿಮೀ. ಮಾನವ ನಿರ್ಮಿತ ಕಾಡನ್ನು ಬಹು ಹತ್ತಿರದಿಂದ ಆಸ್ವಾದಿಸುವ ಅವಕಾಶ ಕರೀಂ ಫಾರೆಸ್‌ಟ್ನಲ್ಲಿದೆ. ಸ್ವಚ್ಛಂದವಾಗಿ ಹಾರಾಡುವ ಹಕ್ಕಿಗಳು, ವಿವಿಧ ನಮೂನೆ ಚಿಟ್ಟೆಗಳು, ಔಷಧೀಯ ಗಿಡಗಳು ಮತ್ತು ವಿವಿಧ ತಳಿಯ ಮರಗಳನ್ನು ಇಲ್ಲಿ ನೋಡಬಹುದು. ಅದಕ್ಕಿಂತ ಮಿಗಿಲಾಗಿ, ಕಲ್ಲಿನಿಂದ ತುಂಬಿದ ಬೆಟ್ಟ ಪ್ರದೇಶವನ್ನು ಕಾಡನ್ನಾಗಿ ಪರಿವರ್ತಿಸಬಹುದು ಎಂಬ ಅಪರೂಪದ ಪುರಾವೆಯನ್ನು ನೋಡುವ ವಿನೂತನ ಅನುಭವ ಇಲ್ಲಿ ದೊರೆಯುತ್ತದೆ.  ಕರೀಂ ಪ್ರಸ್ತುತ ತಾವೇ ಬೆಳೆಸಿದ 30 ಎಕರೆ ಕಾಡಿನ ಮಧ್ಯೆ ವಾಸಿಸುತ್ತಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close