About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ದೇಶದ ಹಸಿರೀಕರಣ ಪಟ್ಟಿಯಲ್ಲಿ 2 ಸ್ಥಾನಕ್ಕೆ ಕುಸಿದ ಕರ್ನಾಟಕ

ಬೆಂಗಳೂರು: ದೇಶದ ಹಸಿರೀಕರಣ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದ ಕರ್ನಾಟಕ 2 ಸ್ಥಾನಕ್ಕೆ ಕುಸಿದಿದ್ದು, ಹೊಸದಾಗಿ ಉದಯವಾದ ತೆಲಂಗಾಣ ಪ್ರಥಮ ಸ್ಥಾನ ಅಲಂಕರಿಸಿದೆ. ರಾಜ್ಯ ಸರಕಾರ ಕೈಗೊಂಡ ಹಸಿರು ಕರ್ನಾಟಕ ಯೋಜನೆ ಸಂಪೂರ್ಣವಾಗಿ ವಿಫಲವಾಗಿದ್ದು, ಅರಣ್ಯ ಇಲಾಖೆಗೆ ಛೀಮಾರಿ ಹಾಕಿದಂತಾಗಿದೆ.

ಕೇಂದ್ರದ ಕಳೆದ ವರ್ಷದ ಅರಣ್ಯ ವರದಿ ಪ್ರಕಾರ ದೇಶದ ಅರಣ್ಯ ಪ್ರದೇಶ 8021 ಚದರ ಕಿ.ಮೀನಷ್ಟು ಹೆಚ್ಚಳವಾಗುವ ಮೂಲಕ 802,088 ಚ.ಕಿಮೀ ತಲುಪಿದೆ. ಅಂದರೆ ಇದ್ದ ಅರಣ್ಯ ಪ್ರದೇಶದ ಶೇ.1ರಷ್ಟುಏರಿಕೆಯಾಗಿದೆ. ಇದರೊಂದಿಗೆ ದೇಶವು, ತನ್ನ ಒಟ್ಟು ಭೌಗೋಳಿಕ ಪ್ರದೇಶದ ಪೈಕಿ ಶೇ.24.39ರಷ್ಟುಅರಣ್ಯ ಪ್ರದೇಶ ಹೊಂದಿದಂತೆ ಆಗಿದೆ. ಸರಕಾರವು ಒಟ್ಟು ಭೌಗೋಳಿಕ ಪ್ರದೇಶದ ಶೇ.33ರಷ್ಟುಭಾಗವನ್ನು ಅರಣ್ಯದಿಂದ ಆವರಿಸುವಂತೆ ಮಾಡುವ ಗುರಿ ಹೊಂದಿದೆ.

ರಾಜ್ಯದಲ್ಲಿ ಅಪಾರ ಸಂಪನ್ಮೂಗಳಿದ್ದರೂ ಪ್ರಯೋಜನಕ್ಕೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕ ಹಸಿರೀಕರಣ ಕಾರ್ಯಕ್ರಮದಡಿ ಸಸಿ ನೆಡುವ ಅಭಿಯಾನ ಯಶಸ್ವಿಯಾಗಿ ನಡೆಸಲಾಗಿದೆ ಎಂದು ನೀಡುತ್ತಿದ್ದ ರಾಜ್ಯ ಸರಕಾರಕ್ಕೆ ಮುಖಭಂಗವಾಗಿದೆ. ರಾಜ್ಯದಲ್ಲಿ ಶೇ.21.35 ಪ್ರಮಾಣ ಅರಣ್ಯ ಪ್ರದೇಶವಿದ್ದು, ಅದನ್ನು ಶೇ.33ಕ್ಕೆರಿಸುವ ಗುರಿ ಹೊಂದಲಾಗಿದೆ. ವಿಸ್ತೀರ್ಣದಲ್ಲಿ ರಾಜ್ಯಕ್ಕಿಂತ ತೆಲಂಗಾಣ ಚಿಕ್ಕದಾಗಿದ್ದರೂ ಹಸಿರೀಕರಣ ಕಾಪಾಡುವಲ್ಲಿ ಯಶಸ್ವಿಯಾಗಿದೆ.

ಅರಣ್ಯ ಒತ್ತುವರಿ ದೊಡ್ಡ ಸಮಸ್ಯೆಯಾಗಿದ್ದು, ಅಧಿಕಾರಿಗಳಿಂದ ಸಮಗ್ರ ವರದಿ ಪಡೆದು ತೆರವುಗೊಳಿಸಲಾಗುವುದು ಎಂದು ಈ ಹಿಂದೆ ಅರಣ್ಯ ಸಚಿವರಾಗಿದ್ದ ಶಂಕರ್ ಅವರು ಹೇಳಿಕೆ ನೀಡಿದ್ದರು. ಈವರೆಗೂ ಯಾವುದೇ ಕೈಗೊಂಡಿಲ್ಲ. ಇಲಾಖೆಯಲ್ಲಿನ ಹುದ್ದೆಗಳ ಕೊರತೆಯಿಂದಲೂ ನಿರ್ವಹಣೆಗೆ ತೊಡಕಾಗಿರುವುದು ಸರಕಾರದ ಗಮನದಲ್ಲಿದ್ದರೂ ಈ ವರೆಗೂ ನೇಮಕಾತಿ ಪ್ರಕ್ರಿಯೆ ನಡೆಸಿಲ್ಲ. ದಿನೇ ದಿನೇ ಅರಣ್ಯ ಪ್ರದೇಶ ವಿಸ್ತೀರ್ಣ ಕಡಿಮೆಯಾಗುತ್ತಿದ್ದರೂ ಇಲಾಖೆ ಕಣ್ಣಮುಚ್ಚಿ ಕುಳಿತಿದೆ. ಈ ಇಲಾಖೆಯಲ್ಲಿ ನೇಮಕ ಮಾಡಲಾಗುವ ಅಧಿಕಾರಿಗಳು ಒಂದು ವರ್ಷದಲ್ಲಿ ನಿವೃತ್ತಿ ಹೊಂದುತ್ತಿದ್ದಾರೆ. ಸರಿಯಾದ ಆಡಳಿತದ ಕೊರತೆಯೂ ಕಾಣುತ್ತಿದೆ.

ಅರಣ್ಯ ಪ್ರದೇಶ ವಿಸ್ತೀರ್ಣ ಹೆಚ್ಚಿರುವ ರಾಜ್ಯಗಳು

ಆಂಧ್ರಪ್ರದೇಶ  2141ಚ.ಕಿಮೀ
ಕರ್ನಾಟಕ  1101 ಚ.ಕಿಮೀ
ಕೇರಳ  1043 ಚ.ಕಿ.ಮೀ
ಒಡಿಶಾ  885 ಚ.ಕಿಮೀ
ತೆಲಂಗಾಣ 565 ಚ.ಕಿಮೀ

Tags

Related Articles

Leave a Reply

Your email address will not be published. Required fields are marked *

Language
Close