Breaking Newsಪ್ರಚಲಿತರಾಜ್ಯ
ಕರ್ನಾಟಕ:102 ನಗರ ಸ್ಥಳೀಯ ಸಂಸ್ಥೆಗಳಿಗೆ ಇಂದು ಮತದಾನ

ಕರ್ನಾಟಕ: ರಾಜ್ಯದಾದ್ಯಂತ 102 ನಗರ ಸ್ಥಳೀಯ ಸಂಸ್ಥೆಗಳಿಗೆ ಮತದಾನ ಬೆಳ್ಳಿಗೆಯಿಂದಲೇ ಆರಂಭವಾಗಿದ್ದು, ಸಾಧಾರಣ ಸಂಖ್ಯೆಯಲ್ಲಿ ಮತದಾರರು ಆಗಮಿಸುತ್ತಿದ್ದು ಎಂದು ಮೂಲಗಳು ತಿಳಿಸಿವೆ .
ಬೆಳ್ಳಿಗೆ 7 ಗಂಟೆಯಿಂದ ಮತದಾನ ಆರಣಭವಾಗಿದ್ದು, ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಈ ಹಿನ್ನಲೆಯಲ್ಲಿ ನಗರ ಹಾಗೂ ಪಟ್ಟಣಗಳಲ್ಲಿ ಸುಮಾರು 40,000 ಭದ್ರತ ಸಿಬ್ಬಂದಿಯನ್ನು ರಾಜ್ಯದ ಎಲ್ಲಾ ಮತಗಟ್ಟೆಗಳಲ್ಲಿ ಬಿಗಿ ಭದ್ರತೆಯನ್ನು ಒದಗಿಸಲು ನಿಯೋಜಿಸಲಾಗಿದೆ.
29 ನಗರಸಭೆಗಳ, 53 ಪಟ್ಟಣ ಪುರಸಭೆ, 23 ಪಟ್ಟಣ ಪಂಚಾಯಿತಿಗಳಿಗೆ 2,529 ವಾರ್ಡ್ಗಳಿಲ್ಲಿ ಹಾಗೂ ಮೂರು ನಗರ ಪಾಲಿಕೆಗಳ 135 ವಾರ್ಡ್ಗಳಲ್ಲಿ ಇಂದು ಮತದಾನ ನಡೆಯುತ್ತಿದೆ.