About Us Advertise with us Be a Reporter E-Paper

Breaking Newsರಾಜ್ಯ
Trending

ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಮಿತಿಮೀರಿದ ಕಾಡಾನೆಗಳ ಹಾವಳಿ

ಬೆಂಗಳೂರು: ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಕರ್ನಾಟಕದ ಗಡಿ ಆನೇಕಲ್‍ಗೆ ಹೊಂದಿಕೊಂಡಿರುವ ತಮಿಳುನಾಡು ಅರಣ್ಯದಂಚಿನಲ್ಲಿ ಇಂದು ಸಹ 2 ಕಾಡಾನೆಗಳು ಗ್ರಾಮದ ತೋಟಕ್ಕೆ ನುಗ್ಗಿ ಬೆಳೆನಾಶ ಮಾಡಿದೆ.

ಅರಣ್ಯದಂಚಿನ ಗ್ರಾಮವಾದ ಪತ್ತಕೋಟ ಗ್ರಾಮದಲ್ಲಿ ಇಂದು ಮುಂಜಾನೆ 2 ಕಾಡಾನೆಗಳು ಗ್ರಾಮದಲ್ಲಿನ ತೋಟಗಳಿಗೆ ನುಗ್ಗಿ ಅಲ್ಲಿ ಬೆಳೆದಿದ್ದ ಬೆಳೆಗಳನ್ನೆಲ್ಲ ನಾಶಪಡಿಸಿವೆ. ಅಲ್ಲದೆ ಸುಮಾರು 40ಕ್ಕೂ ಹೆಚ್ಚು ಕಾಡಾನೆ ಹಿಂಡು ಕಳೆದ ಎರಡು ತಿಂಗಳಿಂದ ಆನೇಕಲ್‍ಗೆ ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರು, ಸುಳಗಿರಿ, ಡೆಂಕನಿಕೋಟೆ ಹಾಗೂ ಜವಳಗಿರಿ ಬಳಿ ಓಡಾಟ ನಡೆಸಿದೆ. ಆನೆ ಹಿಂಡು ಕಂಡ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ಕಳೆದೊಂದು ವಾರದಲ್ಲಿ ಆನೆಗಳ ದಾಳಿಗೆ ಇಬ್ಬರು ವ್ಯಕ್ತಿಗಳು ಮೃತಪಟ್ಟು, ಒಂದು ಹಸು ಕೂಡ ಬಲಿಯಾಗಿದೆ.  ತಮಿಳುನಾಡು ಅರಣ್ಯ ಇಲಾಖೆ ವಿರುದ್ಧ ಗಡಿ ಪ್ರದೇಶದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close