Chikkaballapur News: ಸಾಮಾಜಿಕ ಸಂಬಂಧಗಳಿಂದಲೇ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ : ಡಾ.ಲೋಕನಾಥ್
ಯಶಸ್ವಿ ವ್ಯಕ್ತಿಗಳು ಕೋಪ, ದುಃಖ ಹಾಗೂ ಸಂತೋಷದ ಕ್ಷಣಗಳಲ್ಲಿ ಮಾನಸಿಕ ಸಮತೋಲನ ಕಾಯ್ದುಕೊಂಡಿರುತ್ತಾರೆ. ಇಂದು ಪದವಿ ಪ್ರಧಾನ ಸಮಾರಂಭದಲ್ಲಿ ಭಾಗಿಯಾಗಿರುವ ವಿದ್ಯಾರ್ಥಿ ಗಳು ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಈ ಮೂರು ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.
ಪೂರ್ವಗ್ರಹವಿಲ್ಲದ ಸಾಮಾಜಿಕ ಸಂಬಂಧಗಳು ಬಲಗೊಂಡಾಗ ಮಾತ್ರವೇ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನಿವೃತ್ತ ಮೌಲ್ಯಮಾಪನ ಕುಲಸಚಿವ ಡಾ. ಲೋಕನಾಥ್ ಅಭಿಪ್ರಾಯಪಟ್ಟರು -
ಚಿಕ್ಕಬಳ್ಳಾಪುರ: ಪೂರ್ವಗ್ರಹವಿಲ್ಲದ ಸಾಮಾಜಿಕ ಸಂಬಂಧಗಳು ಬಲಗೊಂಡಾಗ ಮಾತ್ರವೇ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ( Bangalore North University)ದ ನಿವೃತ್ತ ಮೌಲ್ಯಮಾಪನ ಕುಲಸಚಿವ ಡಾ.ಲೋಕನಾಥ್ ಅಭಿಪ್ರಾಯ ಪಟ್ಟರು.
ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಗೋಲ್ಡನ್ ಗ್ಲೀಮ್ಸ್ ಕಾಲೇಜು ವತಿಯಿಂದ ಆಯೋಜಿಸಿದ್ದ ‘ಹಾರೈಕೆ–2026’ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಸಂಬಂಧಗಳನ್ನು ಗಟ್ಟಿಗೊಳಿಸಿಕೊಂಡಾಗ ಮಾತ್ರ ಉತ್ತಮ ಪ್ರಜೆಗಳಾಗಿ ರೂಪು ಗೊಳ್ಳಲು ಸಾಧ್ಯ. ತಂತ್ರಜ್ಞಾನವು ಮಾನವೀಯ ಸಂಬಂಧಗಳನ್ನು ಬೆಸೆಯುವ ಸಾಧನವಾಗಬೇಕು. ಇಲ್ಲದಿದ್ದರೆ ಅದು ವಿನಾಶದ ದಾರಿಯನ್ನು ತೆರೆದಿಡುವ ಅಪಾಯವಿದೆ ಎಂದು ಎಚ್ಚರಿಸಿದರು.
ವಿಶ್ವದ ನಾಯಕರು ‘ನಾನು’ ಎಂಬ ಅಹಂಕಾರವನ್ನು ತೊರೆಯಬೇಕು. ಇಂತಹ ಮನೋಭಾವವೇ ಜಾಗತಿಕ ಸಂಘರ್ಷಗಳಿಗೆ ಕಾರಣವಾಗುತ್ತಿದ್ದು, ಇರಾನ್–ಇಸ್ರೇಲ್ ನಡುವಿನ ಯುದ್ಧದಂತಹ ಬೆಳವಣಿಗೆಗಳು ಇತರ ರಾಷ್ಟ್ರಗಳ ಮೇಲೂ ದುಷ್ಪರಿಣಾಮ ಬೀರುತ್ತಿವೆ ಎಂದು ಹೇಳಿದರು.
ಇದನ್ನೂ ಓದಿ: Chinthamani News: ನಾಯಂದ್ರಹಳ್ಳಿಯಲ್ಲಿ ಎಂ.ಎಸ್.ಡಬ್ಲ್ಯೂ ಗ್ರಾಮೀಣ ಕಲಿಕಾ ಶಿಬಿರಕ್ಕೆ ಚಾಲನೆ
ಯಶಸ್ವಿ ವ್ಯಕ್ತಿಗಳು ಕೋಪ, ದುಃಖ ಹಾಗೂ ಸಂತೋಷದ ಕ್ಷಣಗಳಲ್ಲಿ ಮಾನಸಿಕ ಸಮತೋಲನ ಕಾಯ್ದುಕೊಂಡಿರುತ್ತಾರೆ. ಇಂದು ಪದವಿ ಪ್ರಧಾನ ಸಮಾರಂಭದಲ್ಲಿ ಭಾಗಿಯಾಗಿರುವ ವಿದ್ಯಾರ್ಥಿ ಗಳು ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಈ ಮೂರು ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.
ಪದವಿ ಓದುವ ವಿದ್ಯಾರ್ಥಿ ಜೀವನದಲ್ಲಿ ಪ್ರೀತಿಗೆ ಸ್ಥಾನವಿರಬೇಕು. ಆದರೆ ಅದು ಜೀವನವನ್ನೇ ಹಾಳು ಮಾಡುವಂತಿರಬಾರದು. ಭವಿಷ್ಯದ ಗುರಿಯತ್ತ ಸಾಗುವವರು ಕ್ಷಣಿಕ ಸುಖಗಳ ಹಿಂದೆ ಬೀಳುವುದಿಲ್ಲ, ಬೀಳಬಾರದು ಎಂದು ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಮುನಿಕೃಷ್ಣಪ್ಪ ಮಾತನಾಡಿ, ನಮ್ಮ ಕಾಲೇಜಿನ 107 ವಿದ್ಯಾರ್ಥಿಗಳು ಈ ವರ್ಷ ಪದವಿ ಪಡೆದು ಉನ್ನತ ಶಿಕ್ಷಣದತ್ತ ಹೆಜ್ಜೆ ಇಡುತ್ತಿದ್ದಾರೆ. ಅವರು ಶಿಕ್ಷಣದ ಜತೆಗೆ ಉನ್ನತ ಜೀವನ ಮೌಲ್ಯಗಳನ್ನು ಬದುಕಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು. ಗುರು ಗಳು ಹಾಗೂ ಪೋಷಕರನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ನಮ್ಮ ಕಾಲೇಜಿನ 67ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿರುವುದು ಹೆಮ್ಮೆಯ ಸಂಗತಿ. ಈ ವಿದ್ಯಾರ್ಥಿಗಳೇ ನಮ್ಮ ಕಾಲೇಜಿನ ಆಸ್ತಿ ಎಂದು ತಿಳಿಸಿದರು.
ಗೋಲ್ಡನ್ ಗ್ಲೀಮ್ಸ್ ಕಾಲೇಜು ಸ್ಥಾಪನೆಯಾದ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ನಗರದಲ್ಲಿ ಕೇವಲ ವಾಣಿಜ್ಯ ವಿದ್ಯಾಭ್ಯಾಸಕ್ಕೆ ಪ್ರತ್ಯೇಕ ಕಾಲೇಜಿನ ಕೊರತೆ ಇತ್ತು. ಆ ಕೊರತೆಯನ್ನು ನೀಗಿಸುವ ಉದ್ದೇಶ ದಿಂದ ಸಂಸ್ಥೆ ಆರಂಭಿಸಲಾಯಿತು. ಉದ್ಯೋಗ ಅರಸುವ ಬದಲು ಉದ್ಯೋಗ ಸೃಷ್ಟಿಸುವ ಗುರಿ ಯೊಂದಿಗೆ ಸಂಸ್ಥೆ ಕಟ್ಟಿದ್ದು, ಇಂದು ಅನೇಕ ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿರುವುದು ತೃಪ್ತಿ ತಂದಿದೆ ಎಂದು ಹೇಳಿದರು.
ಇಂದಿನ ಎಐ ತಂತ್ರಜ್ಞಾನ ಜಗತ್ತಿನ ವಿವಿಧ ಕ್ಷೇತ್ರಗಳನ್ನು ಪ್ರಭಾವಿಸುತ್ತಿದೆ. ಆದರೆ ಅದಕ್ಕೆ ಅಗತ್ಯ ವಾದ ಮಾಹಿತಿಯನ್ನು ಒದಗಿಸುವುದು ಮನುಷ್ಯನೇ ಎಂಬುದನ್ನು ಯಾರೂ ಮರೆಯಬಾರದು. ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಈ ಕ್ಷೇತ್ರದಲ್ಲಿ ಜ್ಞಾನ ಮತ್ತು ಕೌಶಲ್ಯ ಬೆಳೆಸಿಕೊಂಡಾಗ ಮಾತ್ರ ತಂತ್ರಜ್ಞಾನದ ದುರುಪಯೋಗವನ್ನು ತಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿನಿಯರಾದ ಅನುಷಾ ಹಾಗೂ ಪೂಜಿತ ಮಾತನಾಡಿ, ಕಾಲೇಜಿನ ಗುಣಮಟ್ಟದ ಬೋಧನೆ, ಪೋಷಕರ ಪ್ರೋತ್ಸಾಹ ಹಾಗೂ ಅಧ್ಯಾಪಕರ ಮಾರ್ಗದರ್ಶನದಿಂದ ಪದವಿ ಶಿಕ್ಷಣವನ್ನು ಯಶಸ್ವಿ ಯಾಗಿ ಪೂರ್ಣಗೊಳಿಸಲು ಸಾಧ್ಯವಾಯಿತು ಎಂದು ಕೃತಜ್ಞತೆ ಸಲ್ಲಿಸಿದರು. ಸಮಾರಂಭದ ನಂತರ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದವರ ಮನಗೆದ್ದವು.
ಕಾರ್ಯಕ್ರಮದಲ್ಲಿ ದೇವನಹಳ್ಳಿ ಕಾಲೇಜಿನ ಪ್ರಾಂಶುಪಾಲ ಮಂಜಯ್ಯ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.