ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkanayakanahalli News: ಪದವೀಧರರ ಧ್ವನಿಯಾಗಿ ಮೇಲ್ಮನೆಯಲ್ಲಿರುವೆ: ಬಿಜೆಪಿ ಮುಖಂಡ ವಸಂತಕುಮಾರ್

Karnataka Politics: ಕಳೆದ 20 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಏಳಿಗೆಗಾಗಿ ದುಡಿದಿರುವ ನನ್ನ ನಿಷ್ಠೆಯನ್ನು ಪರಿಗಣಿಸಿ, ಆಗ್ನೇಯ ಪದವೀಧರ ಕ್ಷೇತ್ರದ ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆಯಲ್ಲಿ ತೋಡಗಿಕೊಳ್ಳುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಂದ ಸೂಚನೆ ಬಂದಿದೆ ಎಂದು ಹಿರಿಯ ವಕೀಲ ಹಾಗೂ ಬಿಜೆಪಿ ಮುಖಂಡ ವಸಂತಕುಮಾರ್ ತಿಳಿಸಿದ್ದಾರೆ.

ಪದವೀಧರರ ಧ್ವನಿಯಾಗಿ ಮೇಲ್ಮನೆಯಲ್ಲಿರುವೆ: ಬಿಜೆಪಿ ಮುಖಂಡ ವಸಂತಕುಮಾರ್

-

Prabhakara R Prabhakara R Nov 2, 2025 9:06 PM

ಚಿಕ್ಕನಾಯಕನಹಳ್ಳಿ, ನ.2: ವಿಧಾನ ಪರಿಷತ್‌ನ ಪ್ರವೇಶವು ಕೇವಲ ರಾಜಕೀಯ ಉದ್ದೇಶಕ್ಕಲ್ಲ, ಬದಲಾಗಿ ಪದವೀಧರರು ಮತ್ತು ಶಿಕ್ಷಕರ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಣಾಮಕಾರಿಯಾಗಿ ಪರಿಹಾರ ಒದಗಿಸುವ ಧ್ವನಿಯಾಗಿ ಮೇಲ್ಮನೆಯಲ್ಲಿ ಕೆಲಸ ಮಾಡಲು ಬಯಸುತ್ತೇನೆ ಎಂದು ಹಿರಿಯ ವಕೀಲ ಹಾಗೂ ಬಿಜೆಪಿ ಮುಖಂಡ ವಸಂತಕುಮಾರ್ ಭರವಸೆ ನೀಡಿದರು. ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದ್ದು, ಕಳೆದ 20 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಏಳಿಗೆಗಾಗಿ ದುಡಿದಿರುವ ನನ್ನ ನಿಷ್ಠೆಯನ್ನು ಪರಿಗಣಿಸಿ, ಆಗ್ನೇಯ ಪದವೀಧರ ಕ್ಷೇತ್ರದ ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆಯಲ್ಲಿ ತೋಡಗಿಕೊಳ್ಳುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಂದ ಸೂಚನೆ ಬಂದಿದೆ. ಅಲ್ಲದೆ ಮುಂಬರುವ ಚುನಾವಣೆಗೆ ಅಭ್ಯರ್ಥಿಯಾಗಲು ಪಕ್ಷದ ವಲಯಗಳಿಂದ ಭರವಸೆ ಸಿಕ್ಕಿದೆ ಎಂದು ಪ್ರತಿಕ್ರಿಯಿಸಿದರು.

ನಿರುದ್ಯೋಗ ಭತ್ಯೆ ಹಿನ್ನಡೆ ಇಲ್ಲ

ಕಾಂಗ್ರೆಸ್ ಸರಕಾರದ ನಿರುದ್ಯೋಗ ಭತ್ಯೆ ಯೋಜನೆಯು ಯುವ ಜನತೆಗೆ ತಾತ್ಕಾಲಿಕ ಆರ್ಥಿಕ ನೆರವು ನೀಡುವ ಹುಸಿ ಭರವಸೆಯಾಗಿದೆ. ಈ ಯೋಜನೆಯು ಮುಂಬರುವ ಚುನಾವಣೆಯಲ್ಲಿ ನಮಗೆ ಯಾವುದೇ ಕಾರಣಕ್ಕೂ ಹಿನ್ನಡೆಯನ್ನು ಉಂಟುಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಯುವಕರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಉದ್ಯೋಗ ಸಿಗುವವರಿಗೂ ಪದವೀಧರರಿಗೆ ಕೌಶಲ್ಯ ತರಬೇತಿ ಮತ್ತು ಮಾರ್ಗದರ್ಶನ ನೀಡಲು ನಾವು ದೂರದೃಷ್ಟಿ ಹೊಂದಿದ್ದೇವೆ ಎಂದರು.

ಮುದ್ರಾ ಯೋಜನೆಯ ಯಶಸ್ಸು ಸಾಲ ನೀಡುವ ಬ್ಯಾಂಕ್‌ಗಳ ಪ್ರಬಂಧಕರ ಮತ್ತು ಸಿಬ್ಬಂದಿಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. 10 ಲಕ್ಷದವರೆಗೂ ಜಾಮೀನು ರಹಿತ ಸಾಲ ನೀಡುವುದು ಯೋಜನೆಯ ಮುಖ್ಯ ಉದ್ದೇಶ ಎಂಬುದನ್ನು ಅವರು ಅರಿತುಕೊಳ್ಳಬೇಕು. ಯಾವುದೇ ಭದ್ರತೆ ಕೇಳಬಾರದು ಇದು ಆರ್‌ಬಿಐ ಮಾರ್ಗಸೂಚಿಯ ಸ್ಪಷ್ಟ ಆದೇಶವಾಗಿದೆ. ಈ ಯೋಜನೆಯ ಕುರಿತು ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ವಸಂತಕುಮಾರ್ ಹೇಳಿದರು.

ಪದವೀಧರ ಸಮಸ್ಯೆಗಳ ಬಗ್ಗೆ ಸ್ಪಷ್ಟ ತಿಳಿವಳಿಕೆ

ಬಿಜೆಪಿ ಮುಖಂಡ ಅಣೇಕಟ್ಟೆ ರಾಕೇಶ್ ಅವರು ವಸಂತಕುಮಾರ್‌ಗೆ ಬೆಂಬಲ ಸೂಚಿಸಿ ಮಾತನಾಡಿ, ವಸಂತ್ ಅವರು ಸಂಘ ಪರಿವಾರದ ಮೂಲದವರಾಗಿದ್ದು, ಉತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿದ್ದಾರೆ. ಪದವೀಧರ ಮತ್ತು ಶಿಕ್ಷಣ ಕ್ಷೇತ್ರದ ಮೂಲಭೂತ ಸಮಸ್ಯೆಗಳ ಬಗ್ಗೆ ಅವರಿಗೆ ಸ್ಪಷ್ಟ ತಿಳುವಳಿಕೆ ಇದೆ. ಇಂತಹ ಯುವ ನಾಯಕರು ವಿಧಾನಪರಿಷತ್ ಪ್ರವೇಶಿಸುವುದು ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಮುಖಂಡರುಗಳಾದ ತಿಪಟೂರು ಸದಾಶಿವಯ್ಯ, ವಕೀಲ ಮೋಹನ್, ಮುಖಂಡರುಗಳಾದ ಹೊನ್ನಬಾಗಿ ಬಸವರಾಜ್, ಮಿಲಿಟರಿ ಶಿವಣ್ಣ, ಪ್ರಸನ್ನಕುಮಾರ್ ಇದ್ದರು.