About Us Advertise with us Be a Reporter E-Paper

ಅಂಕಣಗಳು

ಕರುಣಾನಿಧಿ ಸಾವಿನಲ್ಲಿ ಸಾಧನೆಯ ಮುಖಾಮುಖಿ!

ಚಿಂತನೆ: ಶಾರದಾ ವಗರನಾಳ, ಗಂಗಾವತಿ

‘ನಾವು ಹುಟ್ಟಿದಾಗ ಜಗವೆಲ್ಲ ನಗುತಿರಲಿ. ನಾವು ಶಾಶ್ವತ ನಿದ್ರೆಗೆ ಜಾರಿದ ಸಮಯ ನಮ್ಮ ಸಾವಿನಿಂದ ಜಗವೇ ಅಳುತಿರಲಿ ಅದೇ ನಿಜವಾದ ಸಾಧನೆ’ ಅಂತ ಹಿರಿಯರು ಹೇಳುವುದು ನಾವೆಲ್ಲರೂ ಒಂದಲ್ಲಾ ಒಂದು ಸಲ ಕೇಳಿರುತ್ತೇವೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಇತ್ತೀಚೆಗೆ ನಿಧನರಾದ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರ  ಜೀವನ ಎನ್ನಬಹುದು.

ಪ್ರತಿಯೊಬ್ಬರ ತದೇಕಚಿತ್ತದ  ದೃಷ್ಟಿ  ಸದ್ಯಕ್ಕೆ ತಮಿಳುನಾಡಿನತ್ತ ತಿರುಗಿದೆ. ಜನ ‘ಸಾಗರ’ದ ಕಂಬನಿಯಲ್ಲಿ ಮುಳುಗಿದ ಕರುಣಾನಿಽ ಅಂತ್ಯಸಂಸ್ಕಾರ..ಅವರ ಸಾಧನೆ ಎಂತಹುದು ಎಂದು ಹೇಳುತ್ತಿದೆ. ಜನ ತಮ್ಮ ಮನೆಯ ಸದಸ್ಯನನ್ನು ಕಳೆದುಕೊಂಡ ರೀತಿಯಲ್ಲಿ ರೋದಿಸುತ್ತಿರುವುದು ಮನಕಲಕುವ ದೃಶ್ಯ.

ಕರುಣಾನಿಽಯ ಸಾವು ನಮ್ಮನ್ನು  ವಿಷಯ ಯೋಚಿಸುವಂತೆ ಮಾಡುತ್ತದೆ: ಸಾಧನೆಯೆಂದರೆ ಆಸ್ತಿ ಕೊಂಡುಕೊಳ್ಳುವುದು, ಕೀರ್ತಿ ಗಳಿಸುವುದು..ಜಗತ್ತು ಗುರುತಿಸಬೇಕು ಇನ್ನು ಏನೇನೋ.. ಪ್ರತಿಯೊಬ್ಬರ ಹಿನ್ನೆಲೆ, ಅವರ ಅನುಭವ ಆಧಾರದ ಮೇಲೆ ಸಾಧನೆ ವ್ಯಾಖ್ಯೆ ಕೂಡ ಬದಲಾಗುತ್ತ ಹೋಗುತ್ತದೆ. ಆದರೆ ಸರ್ವ ಸತ್ಯವೆಂದರೆ ನಮ್ಮ ಸಾವಿನಿಂದ ನಿಜಕ್ಕೂ ಎಷ್ಟು ಜನಕ್ಕೆ ನಷ್ಟವಾಗುತ್ತದೆ ಎಂಬುದೇ ನಿಜವಾದ ಸಾಧನೆ. ಈ ಹುಟ್ಟು ಸಾವಿನ ಮಧ್ಯೆ ಮನುಷ್ಯ ಸಾವಿರ ಕೆಲಸ ನಿರ್ವಹಿಸುತ್ತಾನೆ. ಅದರಲ್ಲಿ ಕೆಲವರು ಕೆಟ್ಟ ಕೆಲಸ ಮಾಡಿದರೆ, ಕೆಲವರು ಒಳ್ಳೆಯ ಕೆಲಸ ಮಾಡಿ ಜನ ಮನದಲ್ಲಿ ಜಾಗ ಗಿಟ್ಟಿಸಿಕೊಳ್ಳುತ್ತಾರೆ.

ಜೀವನದಲ್ಲಿ ‘ಪಣಂ’ ಮುಖ್ಯವಲ್ಲ ‘ಗುಣಂ’ ಮುಖ್ಯ ಎಂದು ಕರುಣಾನಿಽ ಹೇಳುತ್ತಿದ್ದರು. ಕುಟುಂಬ ರಾಜಕಾರಣವಿರಬಹುದು, ರಾಜ್ಯ ರಾಜಕೀಯವನ್ನು ಗುತ್ತಿಗೆ ತೆಗೆದುಕೊಂಡಿದ್ದಿರಬಹುದು. ಆದರೆ ಅವರ ಭಾಷಾ ರಾಜಕಾರಣ ನಿಜಕ್ಕೂ ಅವರ ಭಾಷಾಭಿಮಾನಕ್ಕೆ ಹಿಡಿದ ಕೈಗನ್ನಡಿ. ಕಣ್ಣಿರಲ್ಲೇ ಕರುಣಾನಿಽಗೆ ‘ಋಣ’ ಸಂದಾಯ ಮಾಡುತ್ತಿರುವ ತಮಿಳುನಾಡಿನ ಜನರು ಅವರನ್ನು ಇಷ್ಟ ಪಡಲು ಅಷ್ಟು ಸಾಕು. ಗತಿಸಿದ ಮುಖ್ಯಮಂತ್ರಿ ಒಬ್ಬ ಮನುಷ್ಯ ಹೀಗೂ ಬದುಕಬಹುದಾ ಎನ್ನುವ ಅಚ್ಚರಿಯನ್ನೂತಂದಿದ್ದಾರೆ. ಕರುಣಾನಿಽ ಎಲ್ಲ ಕ್ಷೇತ್ರಗಳಲ್ಲೂ ನಿಪುಣರಾಗಿದ್ದು, ತಮಿಳುನಾಡಿಗೆ ಮಹತ್ತರ ಕೊಡುಗೆ ನೀಡಿದ್ದು ಈಗ, ವೈಯಕ್ತಿಕ ಬದುಕಿನಾಚೆ ಬದುಕು ಸವೆಸಿದ ಽರರಾಗಿ ಪಂಚಭೂತಗಳಲ್ಲಿ ಒಂದಾಗಿದ್ದಾರೆ.

ಸಾವು ಮನುಷ್ಯನ ಕೊನೆಯ ಘಟ್ಟ. ಮೃತ್ಯುಪ್ರಜ್ಞೆ ಇರುವುದರಿಂದಲೇ ಮನುಷ್ಯ ಇಂದು ಸ್ವಲ್ಪವಾದರೂ ಹೃದಯವಂತಿಕೆ ಉಳಿಸಿಕೊಂಡಿದ್ದಾನೆ; ಇಲ್ಲದಿದ್ದರೆ ಮೃಗವಾಗುತ್ತಿದ್ದ. ಸಾವು ಎಂಬ ಪದ ಒಂದು ಕಟು ಸತ್ಯ. ಸಾವಿಗೆ ಎಲ್ಲರೂ ಸಮಾನರು. ಅದಕ್ಕೆ ಜಾತಿ ಭೇದ, ಬಡವ ಬಲ್ಲಿದ ಎಂಬ ಭಾವವಿಲ್ಲ. ಮತ್ತೊಬ್ಬ ಐತಿಹಾಸಿಕ ಪುರುಷ, ವಿನ್ಸೆಂಟ್ ಚರ್ಚಿಲ್ ಹೇಳಿದಂಗೆ ‘ಪ್ರತಿ ಕ್ಷಣ ಸಾವು ಬೆನ್ನ ಹಿಂದೆ ಇದೆ ಎಂಬಂತೆ ಬದುಕಬೇಕು. ಆಗಲೇ ನಿಜವಾದ ಸಾಧನೆ ನಮ್ಮಿಂದ ಸಾಧ್ಯ’ ಎನ್ನುವುದು ಪದಪದವೂ ನಿಜ.

‘ನೋವು ಜೀವನದ ದೊಡ್ಡ ಶಿಕ್ಷಕ’ ಎಂಬ ಉಕ್ತಿ ಸಾವಿನ ನೋವಿಗೆ ಸಂಬಂಽಸಿದುದು. ಜೀವನದಲ್ಲಿ ದಿನ ದಿನವೂ ಒಂದೊಂದು ನೋವು, ಸಂಕಟ ಬರುತ್ತಲೇ ಇರುತ್ತವೆ ಹಾಗೆಯೇ ಮರೆಯಾಗುತ್ತಲೇ ಇರುತ್ತವೆ. ಆದರೆ ಹತ್ತಿರದವರನ್ನು ಕಿತ್ತುಕೊಳ್ಳುವ ಸಾವಿನ ನೋವು ಮಾತ್ರ ನಾವು ಇರುವವರೆಗೂ ನಮಲ್ಲಿ ನೆನಪಾಗಿ ವಿಧ ವಿಧವಾಗಿ ಕಾಡುತ್ತಲೇ ಇರುತ್ತದೆ. ಅದರಲ್ಲೂ ಪ್ರೀತಿ ಪಾತ್ರರ ಸಾವು ಕೆಲವು ಸಲ ನಮ್ಮನ್ನು ಸಾವಿನಂಚಿಗೆ ಕರೆದುಕೊಂಡು ಹೋಗುವಷ್ಟು  ತೀವ್ರ ಆಘಾತ ನೀಡಿರುತ್ತದೆ.

ಮತ್ತೆ ಮತ್ತೆ ಪ್ರಶ್ನೆ ರೂಪದಲ್ಲಿ ಮುಂದೆ ಸುಳಿಯುವುದು, ಸಾವಿನ ನಂತರ ನಾವು ಹೇಗೆ ಬದುಕುಳಿಯಬೇಕು ಎನ್ನುವುದು. ಇದಕ್ಕೆ ಉತ್ತರ, ನಮ್ಮ ಒಳ್ಳೆಯ ಕೆಲಸಗಳಿಂದ. ಆದರೆ ಅಷ್ಟು ಮಾತ್ರದಿಂದ ಸಾವಿನ ನಂತರ ನಾವು ಬದುಕುಳಿಯಲು ಸಾಧ್ಯವೆ? ಖಂಡಿತ ಇಲ್ಲ. ಸಾವಿನ ನಂತರ ಬದುಕಬೇಕೆಂಬ ಆಕಾಂಕ್ಷೆಯುಳ್ಳವರು ಒಂದು ವಿಷಯ ಅಗತ್ಯವಾಗಿ ತಿಳಿಯಬೇಕು. ನಾಡು ನುಡಿಗೆ ನಮ್ಮ ಸಮಸ್ತ ಶಕ್ತಿಯನ್ನು ಅರ್ಪಿಸಿ ಖಾಲಿತನದ ಸುಖ ನಮಗೆ ಯಾವಾಗ ಆಗುತ್ತದೆಯೋ ಆಗ, ಸತ್ತ ನಂತರವೂ ಜನರ ಭಾಷೆ, ಕೃತಿ, ಮೈಮನದಲ್ಲೂ ಬದುಕಿರಲು ಸಾಧ್ಯ.

ಈ ವಿಷಯದಲ್ಲಿ  ನಮ್ಮ ಕರ್ನಾಟಕದ ರಾಜಕಾರಣದಲ್ಲಿ ಉತ್ತಮ ಉದಾಹರಣೆ ವಿರಳವಾಗಿರಬಹುದು. ಆದರೆ ಕನ್ನಡ ನಾಡು ನುಡಿಗೆ ತಮ್ಮ ಸರ್ವಸ್ವವನ್ನು ಸಮರ್ಪಿಸಿದ, ಬದುಕಿನುದ್ದಕ್ಕೂ ‘ಕನ್ನಡ’  ‘ಕನ್ನಡ’ ಎಂದು ಕೊನೆಯುಸಿರೆಳೆದ ಮಹಾನ್ ನಟರಾದ ಶಂಕರ್‌ನಾಗ್ ಮತು ರಾಜಕುಮಾರ್ ಮಾತ್ರ ಬದುಕಿದರೆ ರಾಜಕುಮಾರ್ ಮತ್ತು ಶಂಕರ್  ತರ ಬದುಕಬೇಕು ಅಂತ ಇವತ್ತಿಗೂ ಅಂದುಕೊಳ್ಳುವಂತೆ ಮಾಡಿದರು. ಅವರ ಚಿಂತನೆಗಳು ಸ್ವಾರ್ಥವನ್ನು ಮೀರಿ ಸಮಾಜದ ಒಳಿತಿಗೆ ಕಾರಣವಾಗುತ್ತಿದ್ದುದೇ ಅದಕ್ಕೆ ಕಾರಣ.

Tags

Related Articles

Leave a Reply

Your email address will not be published. Required fields are marked *

Language
Close