About Us Advertise with us Be a Reporter E-Paper

Breaking Newsದೇಶಪ್ರಚಲಿತ

ಎರಡು ಬಾರಿ ವಜಾಗೊಂಡಿತ್ತು ಕರುಣಾ ಸರಕಾರ!

ಚೆನ್ನೈ:ತಮಿಳುನಾಡಿನ ಇತಿಹಾಸದಲ್ಲಿ ಕರುಣಾನಿಧಿ ನಿಧಿಯೇ ಸರಿ. ಕರುಣಾನಿಧಿ ಅವರ ಸರಕಾರಗಳನ್ನು ಎರಡು ಬಾರಿ ವಜಾ ಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. 1976ರಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮತ್ತು 1991ರಲ್ಲಿ ಎರಡನೆಯ ಭಾರಿ. 1957ರಿಂದ 1984ರವರೆಗೆ 13 ವಿಧಾನಸಭಾ ಗೆಲುವು ಸಾದಿಸುವ ಮೂಲಕವೂ ಅವರು ದಾಖಲೆ ನಿರ್ಮಿಸಿದ್ದಾರೆ.

ಕರುಣಾನಿಧಿ ಒಕ್ಕೂಟ ವ್ಯವಸ್ಥೆಯ ಮಹಾನ್ ಪ್ರತಿಪಾದಕ. ರಾಜ್ಯ ಸರಕಾರಗಳು, ರಾಜ್ಯಗಳ ಸ್ವಾಯತ್ತತೆ, ಸ್ವಾತಂತ್ರ್ಯ ದಿನಾಚರಣೆಯಂದು ಮುಖ್ಯಮಂತ್ರಿಯಾಗಿ ತಿವರ್ಣ ಧ್ವಜ ಹಾರಿಸಲು ಹಕ್ಕು ಪಡೆದುಕೊಂಡಿದ್ದು ಎಲ್ಲವೂ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಕರುಣಾನಿಧಿ ತಮಿಳುನಾಡಿನ ರಾಜಕೀಯ ಮತ್ತು ಸಾಂಸ್ಕೃತಿಕ ಜಗತ್ತನ್ನು ಸರಿ ಸುಮಾರು 7 ದಶಕಗಳ ಕಾಲ ಆಳಿದ ಮಹಾನ್ ಚೇತನ. ಪೆರಿಯಾರ್ ರಾಮಸ್ವಾಮಿ ಅವರ ವೈದಿಕ ವಿರೋಧಿ ಭಾಷಣ ಮತ್ತು ಜಸ್ಟೀಸ್ ಅಳಗಿರಿ ಸ್ವಾಮಿಯ ಹಿಂದೂ ವಿರೋಧಿ ಭಾಷಣಗಳಿಂದ ಪ್ರೇರಣೆಗೊಂಡ 14 ವರ್ಷದ ಬಾಲಕನೊಬ್ಬ 1938ರಲ್ಲಿ ತನ್ನನ್ನು ತಾನು ದ್ರಾವಿಡ ಹೋರಾಟಕ್ಕೆ ಸಮರ್ಪಿಸಿಕೊಳ್ಳುತ್ತಾನೆ. 20ನೆಯ ಶತಮಾನದ ಆರಂಭದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ಸಿಡಿದೇಳುತ್ತಾನೆ.
ರಾಜಕೀಯ ಪ್ರವೇಶಕ್ಕೂ ಮುನ್ನ ಕರುಣಾನಿಧಿ ಚಿತ್ರಕತೆ ಬರೆಯುವುದರಲ್ಲಿ ತೊಡಗಿಸಿಕೊಳ್ಳುತ್ತಾರೆ. ಹತ್ತನೇ ತರಗತಿಯಲ್ಲಿ ನಪಾಸಾದ ಕರುಣಾನಿಧಿ ನಾಟಕ ಕಂಪನಿಗಳಿಗೆ ಕತೆ ಬರೆಯುವ ಉದ್ಯೋಗ ಅರಸಿಕೊಂಡು ಕೊಯಮತ್ತೂರಿಗೆ ಬರುತ್ತಾರೆ. ಇವರ ಭಾಷಣ ಕಲೆಗೆ ಮನಸೋತ ಪೆರಿಯಾರ್ ಇವರನ್ನು ದ್ರಾವಿಡ ಕಳಗಂ ಸಂಪಾದಕರನ್ನಾಗಿ ನೇಮಿಸುತ್ತಾರೆ. ಸ್ವಾತಂತ್ರ್ಯಪೂರ್ವದಲ್ಲಿಯೇ ದ್ರಾವಿಡ ಕಳಗಂ ಇಬ್ಬಾಗಗೊಂಡಾಗ ಕರುಣಾನಿಧಿ, ಸಿ.ಎನ್. ಅಣ್ಣಾದುರೈ ಅವರ ಗುಂಪನ್ನು ಸೇರಿ ಡಿಎಂಕೆ ಸ್ಥಾಪನಗೆ ಕಾರಣರಾಗುತ್ತಾರೆ. 1950ರ ವೇಳೆಗೆ ನಾಟಕಗಳಿಂದ ಸಿನಮಾಗಳತ್ತ ವಾಲುತ್ತಾರೆ.

1950ರ ದಶಕದಲ್ಲಿ ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷ ಚುನಾವಣಾ ರಾಜಕೀಯದಲ್ಲಿ ಮುಂಚೂಣಿಯಲ್ಲಿರುತ್ತದೆ. ಹಿಂದಿ ಹೇಳಿಕೆಯ ವಿರುದ್ಧ ನಡೆದ ಹೋರಾಟಗಳ ಕಾರಣದಿಂದಾಗಿ ಡಿಎಂಕೆ ಪ್ರಜ್ವಲಿಸತೊಡಗಿದರೆ ಕಾಂಗ್ರೆಸ್ ಮುಸುಕಾಗುತ್ತಾ ಹೋಗುತ್ತದೆ. 1967ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಪಕ್ಷವೊಂದು ತಮಿಳುನಾಡಿನಲ್ಲಿ ಅಧಿಕಾರದ ಗದ್ದುಗೆ ಏರುತ್ತದೆ. ಅಲ್ಲಿಂದೀಚೆಗೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಇದುವರೆಗೂ ಸಾಧ್ಯವಾಗಿಲ್ಲ! ಆಗ ಅಣ್ಣಾದುರೈ ಮುಖ್ಯಮಂತ್ರಿಯಾದರೆ ಕರುಣಾನಿಧಿ ಲೋಕೋಪಯೋಗಿ ಸಚಿರಾಗುತ್ತಾರೆ. 1069ರಲ್ಲಿ ಅಣ್ಣಾದುರೈ ನಿಧನ ಹೊಂದಿದಾಗ ಎಲ್ಲರನ್ನು ಬದಿಗೊತ್ತಿದ ಕರುಣಾನಿಧಿ ಮುಖ್ಯಮಂತ್ರಿ ಗದ್ದುಗೆ ಏರುತ್ತಾರೆ. ಮತ್ತೆ ನಾಲ್ಕು ಬಾರಿ ಮುಖ್ಯಮಂತ್ರಿಯಾದ ಕರುಣಾನಿಧಿ ಸುಮಾರು 20 ವರ್ಷಗಳ ಕಾಲ ಆಳ್ವಿಕೆ ನಡೆಸುತ್ತಾರೆ.

1970ರ ದಶಕದಲ್ಲಿ ಡಿಎಂಕೆ ಮತ್ತೆ ಹೋಳಾಗುತ್ತದೆ. ಖ್ಯಾತ ನಟ ಎಂ.ಜಿ. ರಾಮಚಂದ್ರನ್ ಪಕ್ಷದಿಂದ ಹೊರ ಹೋಗಿ ಎಐಎಡಿಎಂಕೆ ಸ್ಥಾಪಿಸುತ್ತಾರೆ. ಮೊದಲ ಯತ್ನದಲ್ಲೇ ಕಂಡ ಎಂಜಿಆರ್ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗುತ್ತಾರೆ. ಎಂಜಿಆರ್ ನಂತರ ಜಯಲಲಿತಾ ಎಐಎಡಿಎಂಕೆ ನಾಯಕತ್ವ ವಹಿಸುತ್ತಾರೆ.

ಪ್ರಾದೇಶಿಕ ಪಕ್ಷವಾಗಿ ಬಲಗೊಳ್ಳುತ್ತಿರುವಂತೆಯೇ ರಾಷ್ಟ್ರ ರಾಜಕಾರಣದಲ್ಲೂ ಡಿಎಂಕೆ ಮಾತಿಗೆ ಮನ್ನಣೆ ಲಭ್ಯವಾಗುತ್ತಾ ಹೋಗುತ್ತದೆ. 1996ರಲ್ಲಿ ಎಚ್.ಡಿ. ದೇವೇಗೌಡ ನೇತೃತ್ವದ ಸಂಯುಕ್ತ ರಂಗವನ್ನು ಕರುಣಾನಿಧಿ ಸೇರುತ್ತಾರೆ. ನಂತರ ಐ.ಕೆ. ಗುಜ್ರಾಲ್ ಅವರನ್ನು ಬೆಂಬಲಿಸುತ್ತಾರೆ.

1999ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡ ಡಿಎಂಕೆ ಅಭೂತಪೂರ್ವ ಯಶಸ್ಸು ಕಾಣೂತ್ತದೆ. ವಾಜಪೇಯಿ ಅವರ ಸರಕಾರದಲ್ಲಿ ಪೆಟ್ರೋಲಿಯಂ, ರಸ್ತೆ, ಮತ್ತು ವಾಣಿಜ್ಯದಂತಹ ಪ್ರಮುಖ ಖಾತೆಗಳನ್ನು ಪಡೆಯುತ್ತಾರೆ.

2004 ಮತ್ತು 2009 ರ ಚುನಾವಣೆಗಳನ್ನು ಕಾಂಗ್ರೆಸ್ ಮೈತ್ರಿಯೊಂದಿಗೆ ಎದುರಿಸುತ್ತಾರೆ. 2013ರಲ್ಲಿ ಸ್ವತಂತ್ರವಾಗಿ ಚುನಾವಣೆ ಎದುರಿಸುವ ಮೂಲಕ ಹಿನ್ನೆಡೆ ಅನುಭವಿಸುತ್ತಾರೆ.

Tags

Related Articles

Leave a Reply

Your email address will not be published. Required fields are marked *

Language
Close